ಕಾರ್ಗಿಲ್ ಯುದ್ಧ ನಡೆದಿದ್ದು ಹೇಗೆ..?
– ಕಾರ್ಗಿಲ್ ವಿಜಯ್ ಯಾತ್ರೆಯಲ್ಲಿ ಪಾಕ್ ಮಾಡಿದ್ದೇನು?
– ದೇಶಕ್ಕಾಗಿ ಜೀವ ಕೊಟ್ಟ 527 ಸೈನಿಕರು ಹುತಾತ್ಮರಾಗಿದ್ದು ಹೇಗೆ..?
NAMMUR EXPRESS NEWS – ವಿಶೇಷ ವರದಿ: ಮನಿಷಾ
ನವದೆಹಲಿ : ದೇಶದ ಗಡಿ ಭಾಗದಲ್ಲಿ ತಮ್ಮಪ್ರಾಣದ ಹಂಗು ತೊರೆದು ದೇಶಕ್ಕಾಗಿ ತಮ್ಮ ಜೀವ ಬಲಿಕೊಟ್ಟ ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಅಧ್ಯಾಯವಾಗಿ ನಿಂತಿದೆ. ರಾಷ್ಟ್ರದ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಆಪರೇಷನ್ ವಿಜಯ್ ಅನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಪ್ರತಿ ವರ್ಷ, ಜುಲೈ 26 ರಂದು, ಭಾರತವು ಈ ವಿಜಯವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಸ್ಮರಿಸುತ್ತದೆ.
ಏನಿದು ಕಾರ್ಗಿಲ್ ವಿಜಯ್ ದಿವಸ್!
ಭಾರತ ಶಾಂತಿ ಪ್ರಿಯ ದೇಶ. ತಾನಾಗಿ ತಾನು ಯಾರ ಮೇಲು ದಾಳಿ ಮಾಡಿದ ಇತಿಹಾಸ ಇಲ್ಲ. ಆದ್ರೆ ವಿನಾಕಾರಣ ಯುದ್ದ ಮಾಡಲು ಬಂದ್ರೆ ಹಿಡಿಮುಡಿ ಕಟ್ಟಿರುವ ಇತಿಹಾಸವೇ ಹೆಚ್ಚು. ಅದರಲ್ಲಿ ಪಾಕಿಸ್ತಾನ 1999ರಲ್ಲಿ ಕದನ ವಿರಾಮ ಮಾಡಿ ಭಾರತದ ಮೇಲೆ ಮಹಾಮೋಸವನ್ನು ಮಾಡಿದ ದಿನವನ್ನು ಮರೆಯಲು ಸಾದ್ಯವಿಲ್ಲ ಆಗಿನ ಪ್ರಧಾನಿಯಾಗಿದ ಅಟಲ್ ಬಿಹಾರಿ ವಾಜಪೇಯಿಯವರು ಭಾರತದಿಂದ ಪಾಕಿಸ್ತಾನದ ಲಾಹೋರ್ ಗೆ ಮೊದಲ ಬಸ್ ಸಂಚಾರವನ್ನು ಪ್ರಾರಂಭಿಸಿ ಸ್ವತಃ ಅವರೇ ಬಸ್ಸಿನಲ್ಲಿ ಪಾಕಿಸ್ತಾನವನ್ನು ತಲುಪುವ ಮೂಲಕ ಶತ್ರುತ್ವವನ್ನು ಮರೆತು ಮಿತ್ರತ್ವವನ್ನು ಸಾಧಿಸುತ್ತೇವೆ ಎಂಬ ಸಂದೇಶವನ್ನು ಸಾರಿ ಪಾಕಿಸ್ತಾನದಾದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಭಾರತಕ್ಕೆ ಮರಳಿ ಬರುತ್ತಾರೆ.
ಅದರೆ ಈ ಒಪ್ಪಂದ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತೆ ಆಯ್ತು. ಒಪ್ಪಂದ ಮಾಡಿ ಕೊಂಡುಬಂದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಮಾಡಿ ಕಾರ್ಗಿಲ್ 130 ಆಯಕಟ್ಟಿನ ಬಂಕರ್ ಅನ್ನು ಆಕ್ರಮಿಸಿಕೊಡಿತು .
ಈ ಅಕ್ರಮದ ಬಗ್ಗೆ ಭಾರತೀಯ ಸೈನ್ಯಕ್ಕೆ ಯಾವುದೇ ಮಾಹಿತಿ ದೊರೆತಿರುವುದು ಇಲ್ಲ. ಏಕೆಂದರೆ ಕಾರ್ಗಿಲ್ ಆಲ್ಲಿ ಚಳಿಗಾಲದ ಸಮಯದಲ್ಲಿ ಮೈನಸ್ ಡಿಗ್ರೀ ಅಷ್ಟು ಚಳಿಯಿರುವ ಕಾರಣ ಅಲ್ಲಿದ್ದ ಯೋದರು ಹೊರಬಂದಿರುತ್ತಾರೆ . ಇದ್ದರ ಬಗ್ಗೆ ಮಾಹಿತಿ ತಿಳಿದಿದ್ದ ಪಾಕಿಸ್ತಾನ ಈ ಸಮಯವನ್ನು ಸದುಪಯೋಗ ಪಡೆದು ಕೊಂಡು ಕಾರ್ಗಿಲ್ ಅನ್ನ ಆಕ್ರಮಿಸಿಕೊಡಿತ್ತು. ಈ ಆಕ್ರಮದ ಬಗ್ಗೆ ಭಾರತೀಯ ಸೈನ್ಯಕ್ಕೆ ಒಂದೂ ಚಿಕ್ಕ ಸುಳಿಯು ಇರಲಿಲ್ಲ. ಕಾರ್ಗಿಲ್ ಪ್ರದೇಶದಲ್ಲಿ ವಾಸವಿದ್ದ ದನಗಾಹಿಗಳಲ್ಲಿ ಒಬ್ಬರಾದ ತಾಶಿ ಅವರೂ ಬಂಕರ್ ಅಲ್ಲೀ ಕೇಳಿ ಬರುತ್ತಿದ್ದ ಮಾತು ಹಾಗೂ ಕೆಲವು ಚಟವಟಿಕೆಗಳಿಂದ ಅನುಮಾನ ಬಂದ ಕಾರಣ ಈ ವಿಚಾರದ ಬಗ್ಗೆ ಭಾರತೀಯ ಸೈನ್ಯಕ್ಕೆ ತಿಳಿಸುತ್ತಾರೆ.
ಕ್ರೂರ ಮನಸ್ಸಿನ ಪಾಕಿಗಳಿಗೆ ಬುದ್ದಿ ಕಲಿಸಿದ ಆಪರೇಶನ್ ವಿಜಯ್!
ದನಗಾಹಿಗಳ ಮಾತು ಕೇಳಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಸೇನಾಧಿಕಾರಿಗಳು ಯೋಧರನ್ನು ಕಾರ್ಗಿಲ್ ಬಳಿ ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು. ಆಕ್ರಮಣ ಮನಸ್ಥಿತಿಯಲ್ಲಿದ್ದ ಪಾಕ್ನ ಸೈನಿಕರು ಗಸ್ತು ತಿರುಗಲು ಹೋದ ಭಾರತದ 5 ಜನ ಯೋಧರ ಕೊಂದು ದೇಹ ಮೂಟೆ ಕಟ್ಟಿ ಕಳಿಸುತ್ತಾರೆ. ಇಂಥಹ ಕ್ರೂರ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ಪ್ರತ್ಯುತ್ತರ ನೀಡುವ ಸಲುವಾಗಿ ಮೇ 3 1999ರಂದು 20ಸಾವಿರ ಯೋಧರನ್ನು ಒಳಕೊಂಡ ಸೈನ್ಯವನ್ನು ಸಿದ್ಧಗೊಳಿಸಿ ಆಪರೇಶನ್ ವಿಜಯ್ ಕಾರ್ಯಾಚರಣೆಯನ್ನ ಪ್ರಾರಂಬಿಸುತ್ತಾರೆ.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 5000 ಸೈನಿಕರ ಪಡೆಯನ್ನ ಸಿದ್ದ ಮಾಡಿ ಯುದ್ಧಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ಈ ಯುದ್ದ ಸತತ ಎರಡೂ ತಿಂಗಳು ನಡೆಯಿತು ಸಾಕಷ್ಟು ಸವಾಲುಗಳೂ ಇದ್ದರೂ ಯುದ್ದ ಅಸ್ತ್ರ ಹಿಡಿದು ಕೊಂಡು ಪಾಕಿಸ್ತಾನದ ಸೈನಿಕರಿಂದ ಅಕ್ರಮಕ್ಕೆ ಒಳಗಾದ ಬಂಕರ್ ಅನ್ನು ಹಿಂಪಡೆದು ಕೊಂಡಿತು. ಈ ಯುದ್ದದಲ್ಲಿ 527 ಸೈನಿಕರು ಹುತಾತ್ಮರಾದರು. ಅಷ್ಟೇ ಅಲ್ಲದೆ 1140ಜನ ಗಾಯಾಳುಗಳು ಆಗಿದ್ದಾರೆ. ಅದರಲ್ಲಿ ಕರ್ನಾಟಕದ 13 ಜನ ವೀರ ಯೋಧರು ಹುತಾತ್ಮರಾದರು.
ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೈನಿಕರು ಏಷ್ಟು ಜನ ಮರಣ ಹೊಂದಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಪಾಕಿಸ್ತಾನ ಇನ್ನೂ ನೀಡಿಲ್ಲ. ಯುದ್ದದಲ್ಲಿ ಹೋರಾಡಿದ ವೀರಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಭಾರತ ಸರ್ಕಾರ ಆಚರಿಸುತ್ತ ಬಂದಿದೆ. ಈ ದಿನ ಪ್ರತಿ ವರ್ಷ ಸಾಧನೆ ಗೈದ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.ಗಾಳಿ ಬಿಸಿಲು ಮಳೆ ಎದೆಗುಂದದೆ ನಮ್ಮ ರಕ್ಷಣೆಗೆ ಸದಾ ಗಡಿಯಲ್ಲಿ ಪ್ರಾಣ ಒತ್ತೆ ಇಟ್ಟುವ ಯೋಧನಿಗೆ ಒಂದು ಸಲಾಂ..!
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023