ಮಲೆನಾಡಿನ ಸಿಂಪಲ್ ರಾಜಕಾರಣಿ ಟಿಡಿಆರ್!
– ಎರಡನೇ ಬಾರಿ ಶಾರದಾಂಬೆ ಕ್ಷೇತ್ರದಲ್ಲಿ ಗೆಲುವು
– ಸಜ್ಜನ, ಸಹಾಯ ಮನಸಿನ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು
NAMMUR EXPRESS NEWS
ಶೃಂಗೇರಿ: ( Sringeri ) ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅನುಭವಿ ರಾಜಕಾರಣಿ. ಶೃಂಗೇರಿ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಜನಾಶೀರ್ವಾದಿಂದ ಶಾಸಕರಾಗಿ ಆಯ್ಕೆಯಾಗಿರುವ ಜನನಾಯಕ. ಅಲ್ಲದೆ ಕಷ್ಟ ಎಂದು ಬಂದ ಜನರಿಗೆ ಕೈಯಲ್ಲಿ ಆದ ಸಹಾಯ ಮಾಡುವ ದಾನಿ. ಅವರಿಗೆ ಶುಕ್ರವಾರ ಹುಟ್ಟಿದ ಹಬ್ಬದ ಸಂಭ್ರಮ. ಕ್ಷೇತ್ರದ ಜನ, ಪ್ರಮುಖರು, ಹಿತೈಷಿಗಳು ಅವರಿಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಒಮ್ಮೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ!
( Chikkamagaluru ) ಚಿಕ್ಕಮಗಳೂರಿನ ತಳ್ಳಿಹಳ್ಳದಲ್ಲಿ ಜನಿಸಿದ ರಾಜೇಗೌಡರು ರಾಜಕೀಯದಲ್ಲಿ ಸ್ಥಾನ ಬಯಸಿ ಹೋದವರಲ್ಲ. ಅರಸಿ ಬಂದ ಸ್ಥಾನಕ್ಕೆ ನ್ಯಾಯ ಒದಗಿಸುವ ಜನಪರ ಕಾಳಜಿಯುಳ್ಳ ನೇತಾರರು. 1 ಬಾರಿ ಖಾಂಡ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಮತ್ತು 1 ಬಾರಿ ವಸ್ತಾರೆ ಕ್ಷೇತ್ರದಿಂದ ಚುನಾಯಿತರಾಗಿ ಅತಿಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಂದು ಅವಧಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜಿಲ್ಲೆಯ ಅಭಿವೃದ್ಧಿಯ ಹೊಣೆಗಾರಿಕೆಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ನಾಂದಿ ಹಾಡಿದ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಹುದ್ದೆಗೆ ಲಾಬಿ ಮಾಡಿದವರಲ್ಲ!
ಜಾತಿ ಧರ್ಮ ತಾರತಮ್ಯ ಮಾಡದೆ ಸದಾ ಜನನಾಯಕನಾಗಿದ್ದು ಕೊಂಡು ಕಷ್ಟ ಎಂದು ಕೇಳಿಕೊಂಡು ಬಂದವರಿಗೆ ತಕ್ಷಣ ಸ್ಪಂದಿಸುವ ಮಾನವೀಯತೆ ಉಳ್ಳ ಧೀಮಂತ ನಾಯಕ ಟಿ.ಡಿ.ಆರ್. ಪಕ್ಷದ ಅಭಿವೃದ್ಧಿಗಾಗಿ ಕಾಯ ವಾಚ ಮನಸಾ ದುಡಿದ ಇವರು ಯಾವತ್ತು ಹುದ್ದೆಗಾಗಿ ಲಾಭಿ ಮಾಡಿದವರಲ್ಲ, ಪಕ್ಷದ ಏಳಿಗೆಗಾಗಿ ಸದಾ ದುಡಿಯುವ ಇಂತಹ ನಾಯಕನ ಸೇವೆ ಮತ್ತಷ್ಟು ಪಸರಿಸಬೇಕಾಗಿದೆ. ನಿಸ್ವಾರ್ಥ ಬದುಕಿನೊಂದಿಗೆ ಹಲವಾರು ಜನರ ಬದುಕಿಗೆ ದಾರಿ ದೀಪ. ಸುಮಾರು 40 ವರ್ಷದ ರಾಜಕೀಯ ಅನುಭವವಿರುವ ರಾಜೇಗೌಡರಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನೇತ್ರತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾವಾರು ಆದ್ಯತೆಯಾನುಸಾರ ಸಚಿವ ಸ್ಥಾನ ನೀಡಬೇಕಿತ್ತು. ಆದ್ರೂ ಯಾವತ್ತು ಹುದ್ದೆ ಬಯಸಲಿಲ್ಲ. ಮುಂದೆ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ.
201 ಮತಗಳಿಂದ ಗೆಲುವು!
ಶೃಂಗೇರಿ ವಿಧಾನ ಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರನ್ನು ಕೇವಲ 201 ಮತಗಳಿಂದ ಸೋಲಿಸಿ ಇತಿಹಾಸ ಸೃಷ್ಟಿ ಮಾಡಿದರು. 2018ರ ಚುನಾವಣೆಯಲ್ಲಿ 1989 ಮತಗಳಿಂದ ಜೀವರಾಜ್ ಅವರನ್ನು ಸೋಲಿಸಿದ್ದರು. ( Sringeri MLA Rajegowda 2023 )
ಜನರ ಮನ ಗೆದ್ದ ಸಮಾಜ ಸೇವೆ!
( T D Rajegowda ) ರಾಜೇಗೌಡ ಅವರದ್ದು ಮೃದು ಮನಸು. ಯಾರಿಗೂ ಗಟ್ಟಿ ಗದರಿಸಿಯೂ ಗೊತ್ತಿಲ್ಲ. ಅಲ್ಲದೆ ತಮ್ಮ ಬಳಿ ಕಷ್ಟ ಸುಖಕ್ಕಾಗಿ ಬರುವ ಜನರ ಜತೆ ನಿಂತವರು. ಆ ಕಾರಣಕ್ಕೆ ಏನೋ ಕೆಲವೇ ಮತಗಳ ಅಂತರದ ಗೆಲುವು ಸಾಧಿಸಿದರು.
ಸಮಾಜ ಸೇವೆಗೆ ಕುಟುಂಬದ ಸಾಥ್
ರಾಜೇಗೌಡರ ಸಮಾಜ ಸೇವೆಗೆ ಪತ್ನಿ ಪುಷ್ಪಾ, ಮಗ ರಾಜ್ ದೇವ್, ಮಗಳು ಡಾ. ಸಂಜನಾ ರಾಜೇಗೌಡರ ಸೇವೆಗೆ ಸಾಥ್ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ತಮ್ಮ ಮಗಳು ಸೃಜನಾ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಿ ಅನೇಕ ಸಾಮಾಜಿಕ ಕೆಲಸ ಮಾಡಲಾಗುತ್ತಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023