30 ಮಂದಿ ಮರಣ ಹೊಂದಿದ್ರೂ ವಿಸಿ ನಾಲೆಗಿಲ್ಲ ತಡೆಗೋಡೆ!
– ನಾಲೆಗೆ ಬಿದ್ದ ಕಾರು: 4 ಮಂದಿ ಮಹಿಳೆಯರ ದುರ್ಮರಣ
– ರಾಜ್ಯದಲ್ಲಿ ದಿನವೂ ಹೆಚ್ಚಿದ ಅಪಘಾತದ ಮರಣ ಮೃದಂಗ
NAMMUR EXPRESS NEWS
ಮಂಡ್ಯ: ( Mandya ) ಮಂಡ್ಯದ ವಿಸಿ ನಾಲೆಗೆ ಕಾರು ಬಿದ್ದು 4 ಮಂದಿ ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ನಡೆದಿದ್ದು, ದೇವರ ಕಾರ್ಯಕ್ಕೆ ಆಹ್ವಾನ ನೀಡಲು ಹೋದವರು ದೇವರ ಪಾದ ಸೇರಿದ್ದಾರೆ. ಇದೀಗ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ ಮೃತರ ಕುಟುಂಬಕ್ಕೆ ತಲಾ 2.5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಇದೇ ವಿಸಿ ನಾಲೆಗೆ ಬಸ್ ಬಿದ್ದು ಕೆಲ ವರ್ಷಗಳ ಹಿಂದೆ 30 ಮಂದಿ ಮೃತಪಟ್ಟಿದ್ದರು. ಅಲ್ಲದೆ ಪ್ರತಿ ವರ್ಷವೂ ಅನೇಕ ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ನಾಲ್ವರು ಮಹಿಳೆಯರ ಸಾವು.!
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ಕಾಲೊಂದು ವಿಸಿ ನಾಲಿಗೆ ಬಿದ್ದು ನಾಲ್ವರು ಮಹಿಳೆಯರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೃತರು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿಯ ಸಂಜನಾ (17), ಮಮತಾ (45), ಮಹಾದೇವಿ (55), ರೇಖಾ (36) ಎಂದು ತಿಳಿದುಬಂದಿದೆ. ಇನ್ನೂ ಕಾರಿನಲ್ಲಿದ್ದ ಚಾಲಕ ಮನೋಜ್ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ
ಆದಿಚುಂಚನಗಿರಿಯಲ್ಲಿ ಏರ್ಪಡಿಸಿದ್ದ ದೇವತಾ ಕಾರ್ಯಕ್ಕೆ ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡ ಮುಲಗೂಡು ಗ್ರಾಮಕ್ಕೆ ಇವರು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.ರಾತ್ರಿ 8ರ ಸುಮಾರಿಗೆ ಗಾಮನಹಳ್ಳಿ ಗ್ರಾಮದ ನಾಳೆ ಏರಿಯ ತಿರುವಿನಲ್ಲಿ ಕಬ್ಬಿಣದ ತಾತ್ಕಾಲಿಕ ತಡೆಗೋಡೆಗೆ ಗುದ್ದಿ ಕಾರು ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮಸ್ಥರು ಅದರಲ್ಲಿದ್ದವರನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ನಾಲ್ವರು ಮೃತಪಟ್ಟಿದ್ದು ಚಾಲಕನನ್ನು ರಕ್ಷಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದರು.
ತಡೆಗೋಡೆ ನಿರ್ಮಾಣ, ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರವನ್ನು ಸಚಿವ ಚಲುವರಾಯಸ್ವಾಮಿ ಘೋಷಿಸಿದ್ದಾರೆ. ಮಿಮ್ಸ್ ಅಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023