ಕ್ರಿಕೆಟ್ ಆಡಲು ಹೋದ ಇಬ್ಬರು ನೀರಿಗೆ ಬಿದ್ದು ಸಾವು!
– ಮಂಗಳೂರಲ್ಲಿ ನಡೆದ ದುರಂತ: ಶವ ಪತ್ತೆ
– ಮಳೆಗಾಲದಲ್ಲಿ ನದಿ, ಹಳ್ಳ, ಕೆರೆ ನೀರು ಹುಷಾರ್!
NAMMUR EXPRESS NEWS
ಮಂಗಳೂರು: ( Mangalore ) ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರು ನಗರದ ಪಡೀಲ್ ಅಳಪೆ ಪಡ್ಡು ರೈಲ್ವೇ ಬ್ರಿಡ್ಜ್ ಸಮೀಪ ಈ ಘಟನೆ ನಡೆದಿದೆ. ಅಳಪೆ ಪಡ್ಡುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತರು. ಭಾನುವಾರ ಸಂಜೆ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದು, ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ ಕುಳಿತಿದ್ದರು. ಉಳಿದವರು ಕ್ರಿಕೆಟ್ ಮೈದಾನಕ್ಕೆ ತೆರಳಿದ್ದರು. ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ನೀರಿಗೆ ಬಿದ್ದಿದ್ದು, ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಅವರನ್ನು ರಕ್ಷಿಸಲು ಧುಮಿಕಿದರು. ಆದರೆ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.
ಮಳೆಗಾಲದಲ್ಲಿ ನದಿ, ಹಳ್ಳ, ಕೆರೆ ನೀರು ಹುಷಾರ್!
ಮಳೆಗಾಲದಲ್ಲಿ ನದಿ, ಹಳ್ಳ ಇತರೆ ನೀರಿನ ಮೂಲಗಳು ತುಂಬಿವೆ. ಈ ಸಂದರ್ಭದಲ್ಲಿ ನೀರಿನ ಜತೆ ಆಟ ಬೇಡ. ಈಗಾಗಲೇ ಅನೇಕರು ಇಂತಹ ಹುಚ್ಚಾಟಕ್ಕೆ ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
HOW TO APPLY : NEET-UG COUNSELLING 2023