ಸಾವಿನ ಮನೆಗೆ ಹೋದವರ ಮನೆಗೆ ಬೆಂಕಿ!
– ಅಜ್ಜಂಪುರ ತಾಲ್ಲೂಕಿನ ಬಾಣೂರು ಗ್ರಾಮದಲ್ಲಿ ಘಟನೆ
– 2 ಮನೆ, ಒಂದು ದನದ ಕೊಟ್ಟಿಗೆ, ಕೊಬ್ಬರಿ ಶೆಡ್ ನಷ್ಟ
NAMMUR EXPRESS NEWS
ಅಜ್ಜಂಪುರ: ಆಕಸ್ಮಿಕ ಬೆಂಕಿ ತಗುಲಿ ಎರಡು ಮನೆ, ಒಂದು ದನದ ಕೊಟ್ಟಿಗೆ, ಕೊಬ್ಬರಿ ಶೆಡ್ ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ಬಾಣೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಕೊಟ್ಟಿಗೆಯಲ್ಲಿದ್ದ ಎರಡು ಎಮ್ಮೆ, ಒಂದು ಕುರಿ ಸಾವನ್ನಪ್ಪಿವೆ.
ಘಟನೆ ನಡೆದಿದ್ದು ಹೇಗೆ?:
ಬಾಣೂರು ಗ್ರಾಮದ ಹನುಮಂತಪ್ಪ (71) ಸೋಮವಾರ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆ ಮಂದಿ ತೆರಳಿದ್ದ ವೇಳೆ, ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ಜ್ವಾಲೆಯಿಂದ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಗೊಂಡಿದೆ. ಇದರಿಂದ ಬೆಂಕಿ ಮತ್ತಷ್ಟು ಉಲ್ಬಣಿಸಿ, ಹೆಚ್ಚು ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು, ಕೊಟ್ಟಿಗೆ, ಕೊಟ್ಟಿಗೆಯಲ್ಲಿದ್ದ ಎಮ್ಮೆಗಳು, ಕುರಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಹಿಸಿವೆ. ಮನೆ ಕಟ್ಟಲು ಹಣ ಹೊಂದಿಸಿಟ್ಟಿದ್ದೆ. ಮನೆ ನಿರ್ಮಾಣಕ್ಕಾಗಿ ಸಾಗುವಾನಿ, ಬೇವಿನ ಮರ ಸಿದ್ಧಗೊಳಿಸಿ ಇರಿಸಿದ್ದೆ. ಅವೆಲ್ಲವೂ ಸುಟ್ಟು ಹೋಗಿವೆ. ಟಿವಿ, ಕಪಾಟು, ಮಂಚ, ದಿನಸಿ, ಬಟ್ಟೆ ಎಲ್ಲವೂಬೆಂಕಿಗೆ ಆಹುತಿಯಾಗಿದ್ದು, ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023