ಶೃಂಗೇರಿಯಲ್ಲಿ ಅಡಿಕೆ ಬಳಿಕ ಕಾಫಿಗೂ ರೋಗ!
– ಶೃಂಗೇರಿ ತಾಲೂಕಲ್ಲಿ ಕಾಫಿಗೆ ಔಷಧಿ ಸಿಂಪಡಣೆ
– ಕಾಫಿಗೂ ಬಂತು ಹಳದಿ ರೋಗ ಎಚ್ಚರ
NAMMUR EXPRESS NEWS
ಶೃಂಗೇರಿ: ಎಲೆ ಚುಕ್ಕಿ ರೋಗ, ತುಂಡೆ ರೋಗ, ಕೊಳೆ ರೋಗ ಅನೇಕ ರೋಗಗಳಿಗೆ ತುತ್ತಾಗಿದ್ದ ಶೃಂಗೇರಿಯ ವಿವಿಧ ಭಾಗಗಳಲ್ಲಿ ಮಲೆನಾಡಿನ ಮತ್ತೊಂದು ಜೀವನಾಡಿ ಬೆಳೆ ಕಾಫಿಗೂ ಹಲವೆಡೆ ಹಳದಿ ರೋಗ ಬಂದಿದೆ.
ಶೃಂಗೇರಿಯ ಜನತೆ ಕಾಫಿ ಗಿಡಗಳಿಗೆ ಇದೀಗ ಔಷಧಿ ಸಿಂಪಡಣೆಯಲ್ಲಿ ಕಾರ್ಯನಿರತರಾಗಿದ್ದಾರೆ. ಸಮರ್ಪಕವಾಗದೆ ಹೂವಾದ ನಂತರ ಕಾಯಾಗಿ ಕಟ್ಟುವುದು ಸಾಮಾನ್ಯ. ಆದ್ರೆ ಆಗಸ್ಟ್ ತಿಂಗಳಲ್ಲಿ ಮಳೆ ಹಾಗೂ ಬಿಸಿಲಿನ ವಾತಾವರಣ ಇದ್ದುದ್ದರಿಂದ ಕೊಳೆ ರೋಗ ಜಾಸ್ತಿ ಆಗಿದೆ. ಇದು ಶೃಂಗೇರಿ ಭಾಗದ ರೈತರಿಗೆ ತಲೆ ನೋವು ತರಿಸಿದೆ.
ಅಡಿಕೆಯೂ ಹೋಯ್ತು, ಈಗ ಕಾಫಿಗೂ ಕಂಟಕ?
ಶೃಂಗೇರಿ ತಾಲೂಕಲ್ಲಿ ಅಡಿಕೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬೇರು ಹುಳು ರೋಗ, ಹಳದಿ ರೋಗ, ತುಂಡೆ ರೋಗ, ಎಲೆ ಚುಕ್ಕಿ ರೋಗ ಸೇರಿದಂತೆ ಹಲವು ರೋಗಗಳಿಗೆ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ಈ ನಡುವೆ ಕಾಫಿ ಬೆಳೆಗೂ ರೋಗ ಅಂಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣ ಆಗಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023