ಮೂಡಿಗೆರೆ ಅಪಘಾತ: ಇಬ್ಬರ ದುರ್ಮರಣ!
– ಬಸ್, ಕಾರು ನಡುವೆ ಭೀಕರ ಅಪಘಾತ
– ಸಿಎಂ ಬಗ್ಗೆ ತಿಥಿ ಪೋಸ್ಟ್ ಹಾಕಿದವನ ಮೇಲೆ ಕೇಸ್!
– ವಿದ್ಯುದಾಘಾತಕ್ಕೆ ಒಂದೇ ಕುಟುಂಬದ ಮೂವರ ಬಲಿ
– ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜ-ಅಜ್ಜಿ ಸಾವು
NAMMUR EXPRESS NEWS
ಮೂಡಿಗೆರೆ: ಸರ್ಕಾರಿ ಬಸ್-ಪ್ರವಾಸಿಗರ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿ ಶನಿವಾರ ನಡೆದಿದೆ. ಮೂಲತಃ ಬೆಂಗಳೂರಿನ ಕೋಣನಕುಂಟೆಯ ಪೂಜಾ ಹಿರೇಮಠ, ರಾಜಶೇಖರ್ ಹಿರೇಮರ್ಠ ಮೃತ ದುರ್ದೈವಿಗಳು. ಶಿವಯಾಗಯ್ಯ ಹಿರೇಮಠ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಧರ್ಮಸ್ಥಳದಿಂದ ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹಾಗೆ ಸಕಲೇಶಪುರದಿಂದ ಮೂಡಿಗೆರೆ ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಪರಸ್ಪರ ಡಿಕ್ಕಿಯಾಗಿವೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ತಿಥಿ ಪೋಸ್ಟ್ ಹಾಕಿದವನ ಮೇಲೆ ಕೇಸ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಯುವಕನ ವಿರುದ್ಧ ಇದೀಗ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತನ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆ ಹಾಗೂ ಜಿಲ್ಲಾಸೆನ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ. ಮೂಡಿಗೆರೆ ಪ್ರಜ್ವಲ್ ಎಂಬಾತ ಸಿದ್ದರಾಮಯ್ಯ ಅವರ ಹೆಸರು ಹಾಕಿ ತಿಥಿ ಕಾರ್ಡ್ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟ್ ಗಳನ್ನು ತನ್ನ ಫೇಸ್ಬುಕ್ ಖಾತೆ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದನು. ಅಲ್ಲದೇ ಈ ಅವಹೇಳನಕಾರಿ ಪೋಸ್ಟ್ ಗಳನ್ನು ಹಿಂದೂ ಸಾಮ್ರಾಜ್ಯ ಮೂಡಿಗೆರೆ ಎಂಬ ಫೇಸ್ಬುಕ್ ಖಾತೆಯಲ್ಲೂ ಹಂಚಿಕೊಂಡಿದ್ದ.ಈ ಪೋಸ್ಟ್ ಗಳನ್ನು ಗಮನಿಸಿದ ಕಾಂಗ್ರೆಸ್ ಮುಖಂಡರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜ-ಅಜ್ಜಿ ಸಾವು
ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರು ದಾರುಣವಾಗಿ ಪ್ರಾಣ ಕಳೆದುಕೊಂಡ ಭಯಾನಕ ಘಟನೆ ಬೆಳಗಾವಿಯ ಶಾಹುನಗರದ ಮೊದಲನೇ ಕ್ರಾಸ್ನ ಮನೆಯಲ್ಲಿ ಸಂಭವಿಸಿದೆ. ಶನಿವಾರ ರಾತ್ರಿ ನಿರ್ಮಾಣ ಹಂತದ ಮನೆಯ ಶೆಡ್ನಲ್ಲಿ ಈ ದುರಂತ ಸಂಭವಿಸಿದ್ದು, ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಅವರ ಪತ್ನಿ ಮತ್ತು ಮೊಮ್ಮಗು ಪ್ರಾಣ ಕಳೆದುಕೊಂಡಿದ್ದಾರೆ
ಈರಪ್ಪ ಗಂಗಪ್ಪ ರಾಥೋಡ(55), ಶಾಂತವ್ವ ಈರಪ್ಪ ರಾಥೋಥ (50), ಅನ್ನಪೂರ್ಣ ಹೊನ್ನಪ್ಪ ಲಮಾಣಿ (8) ಮೃತರು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಗಂಚಿ ತಾಂಡಾದ ನಿವಾಸಿಗಳು.ಪಂಪ್ ಸ್ವಿಚ್ ಆಫ್ ಮಾಡಲು ಹೋಗಿದ್ದಮೊಮ್ಮಗಳಿಗೆ ಶಾಕ್ಭಾನುವಾರ ಬೆಳಗ್ಗೆ ಬೋರ್ವೆಲ್ನ ಮೋಟಾರ್ ಬಂದ್ ಮಾಡುವ ವೇಳೆ ಎಂಟು ವರ್ಷದ ಬಾಲಕಿ ಅನ್ನಪೂರ್ಣ ಲಮಾಣಿಗೆ ವಿದ್ಯುತ್ ತಂತಿ ತಾಗಿತ್ತು.
ಈ ವೇಳೆ ಶಾಕ್ಗೆ ಒಳಗಾದ ಬಾಲಕಿ ಜೋರಾಗಿ ಕಿರುಚಿಕೊಂಡಳು. ತಕ್ಷಣವೇ ಓಡಿಬಂದ ಈರಪ್ಪ ರಾಥೋಡ ಹಾಗೂ ಶಾಂತವ್ವ ರಾಥೋಡ ಅವರು ಮಗುವಿನ ರಕ್ಷಣೆಗಾಗಿ ಪ್ರಯತ್ನಿಸಿದರು. ಆಗ ಆ ವಿದ್ಯುತ್ ಈರಪ್ಪ ರಾಥೋಡ ಹಾಗೂ ಗಂಗವ್ವ ರಾಥೋಡ್ ತಾಗಿ ಸ್ಥಳದಲ್ಲೇ ಮೂವರೂ ಮೃತಪಟ್ಟರು.ಶಾಹುನಗರದ ಸರ್ಕಾರಿ ಕನ್ನಡ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ನಪೂರ್ಣಳನ್ನು ರಕ್ಷಿಸಲು ಹೋಗಿ ಅವಳ ಅಜ್ಜ ಮತ್ತು ಅಜ್ಜಿ ಕೂಡಾ ಪ್ರಾಣ ಕಳೆದುಕೊಂಡರು.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023