ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?
– ಯಡೆಹಳ್ಳಿಕೆರೆ ಬಳಿ ಇಬ್ಬರು ಪೊಲೀಸರ ವಶಕ್ಕೆ
– ಗಾಂಜಾ ಅಡ್ಡೆಯಾಗುತ್ತಿದೆಯಾ ಮಲೆನಾಡು?
– ಪೋಲೀಸರ ಖಡಕ್ ಕ್ರಮಕ್ಕೆ ಜನರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರು ಬಳಿ ಇತ್ತೀಚಿಗೆ ತಾನೇ ತೋಟದಲ್ಲೇ ಗಾಂಜಾ ಗಿಡ ಬೆಳೆದ ಇಬ್ಬರನ್ನು ಅರೆಸ್ಟ್ ಮಾಡಿರುವ ಪ್ರಕರಣ ಮಾಸುವ ಮುನ್ನವೇ ತೀರ್ಥಹಳ್ಳಿ ಪಟ್ಟಣದ ಯಡೆಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮತ್ತೆ ಮತ್ತೆ ತೀರ್ಥಹಳ್ಳಿ ತಾಲೂಕಿನ ಹಲವು ಭಾಗಗಳಲ್ಲಿ ಅನೈತಿಕ ಗಾಂಜಾ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಯಡೆಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಕಂಡುಬಂದಿದೆ. ತೀರ್ಥಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಹೆಚ್ಚಿದ ಅಮಲು!:
ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕರು, ಕೆಲವು ವಿದ್ಯಾರ್ಥಿಗಳು ಗಾಂಜಾ ಅಮಲಲ್ಲಿ ತೇಲಾಡುತ್ತಿರುವ ದೃಶ್ಯ ಮಾಮೂಲಾಗಿದೆ. ನದಿ ತೀರ, ಕಾಲೇಜಗಳ ಸಮೀಪ, ಹೋಟೆಲ್ ಬಾರ್ ರೆಸ್ಟೋರೆಂಟ್ ಸೇರಿ ಹಲವು ಅಡ್ಡೆಗಳಲ್ಲಿ ಗಾಂಜಾ ಗಮ್ಮತ್ತು ನಡೆಯುತ್ತಿದೆ. ಇದೀಗ ಪೊಲೀಸರು ಕಾರ್ಯಚರಣೆ ನಡೆಸುತ್ತಿರುವುದು ಜನರ ಮೆಚ್ಚುಗೆ ಗಳಿಸಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಸಿಪಿಐ ಅಶ್ವತ್ ಗೌಡ ನೇತೃತ್ವದಲ್ಲಿ ಪೊಲೀಸರು ಖಡಕ್ ಕ್ರಮ ಜರುಗಿಸುತ್ತಿದ್ದಾರೆ.