- ತಮ್ಮ ಮನೆಯ ಕಾರ್ಯಕ್ರಮದಲ್ಲಿ ಗಿಡ ಕೊಟ್ಟು ಮಾದರಿಯಾದ ಶಂಕರಮನೆ ಅರುಣ್!
- ತೀರ್ಥಹಳ್ಳಿಯ ಈ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ
NAMMUR EXPRESS NEWS
ತೀರ್ಥಹಳ್ಳಿ: ನಾವು ಅನೇಕ ಕಡೆ ಕಾರ್ಯಕ್ರಮಗಳನ್ನು ನೋಡಿದ್ದೇವೆ, ಕಾರ್ಯಕ್ರಮದಲ್ಲಿ ಮನೆಗೆ ಬಂದ ಅತಿಥಿಗಳಿಗೆ ಅನೇಕ ಗಿಫ್ಟ್, ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ತೀರ್ಥಹಳ್ಳಿಯ ಯುವ ಸಂಘಟಕರು ಹಾಗೂ ಕ್ರಿಯಾಶೀಲ ಯುವಕರಾದ ಶಂಕರ ಮನೆ ಅರುಣ್ ಅವರು ಕೈಮರ ಬಳಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಅತಿಥಿಗೂ ಒಂದು ತೆಂಗಿನ ಗಿಡವನ್ನುನೀಡುವ ಮೂಲಕ ಮಾದರಿಯಾದರು. ಈ ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ತೆಂಗಿನಗಿಡಗಳನ್ನು ಕೊಟ್ಟು ಮನೆಯಲ್ಲಿ ನೆಡುವಂತೆ ಅವರು ಮನವಿ ಮಾಡಿದರು. ಸ್ಥಳೀಯ ಊರಿನ ಹಾಗೂ ಬಂದಂತಹ ಅತಿಥಿಗಳು ತೆಂಗಿನ ಗಿಡವನ್ನು ಖುಷಿಯಿಂದ ತೆಗೆದುಕೊಂಡು ಹೋದರು.
ಮಾದರಿ ಕೆಲಸ: ಕಾರ್ಯಕ್ರಮಗಳಲ್ಲಿ ಸೀರೆ ಲ್, ಬಟ್ಟೆ, ತಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ಗಿಫ್ಟ್ ಕೊಡುವ ಬದಲು ಇಂತಹ ಹೀಗೆ ಗಿಡಗಳನ್ನು ನೀಡುವಂತಹ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಯಿತು.
ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತದೆ, ಪ್ರತಿಯೊಬ್ಬರೂ ಒಂದು ಅಮೂಲ್ಯವಾದ ಗಿಡಗಳನ್ನು ಬರುವ ಅತಿಥಿಗಳಿಗೆ ಕೊಟ್ಟು ಅದನ್ನು ತಮ್ಮ ಮನೆಯಲ್ಲಿ ನೆಡುವುದಕ್ಕೆ ಪ್ರೇರಣೆ ನೀಡಿದಲ್ಲಿ ಹಸಿರು ನಾಡು ಆಗುತ್ತದೆ.
ಗಿಡಮರಗಳು ಬೆಳೆಯುತ್ತದೆ, ಇದೊಂದು ಮಾದರಿ ಕೆಲಸ ಎಂದು ಪತ್ರಕರ್ತ ಮೋಹನ್ ಶೆಟ್ಟಿ ಬಣ್ಣಿಸಿದ್ದಾರೆ.