Author: Nammur Express Admin

ಅಡಿಕೆ ದರ ಎಷ್ಟಿದೆ? – ಬೆಟ್ಟೆ ಎಷ್ಟು? ರಾಶಿ ಎಷ್ಟು? NAMMUR EXPRESS NEWS ಶಿವಮೊಗ್ಗ 13-11-2024 ಇಂದಿನ ಅಡಿಕೆ ಧಾರಣೆ ಬೆಟ್ಟೆ: 43152- 57310 ಸರಕು: 47000- 83163 ಗೊರಬಲು: 17500- 32089 ರಾಶಿ: 33899- 49559

Read More

ಕುಮಾರಸ್ವಾಮಿಗೆ ಕರಿಯ ಸ್ವಾಮಿ ಎಂದ ಜಮೀರ್ ತೀರ್ಥಹಳ್ಳಿಗೆ ಬಂದ್ರೆ ಕಪ್ಪು ಮಸಿ – ಕುಮಾರಸ್ವಾಮಿ ಬಣ್ಣದ ಬಗ್ಗೆ ಹೀಯಾಳಿಸಿ ಒಕ್ಕಲಿಗ ಸಮುದಾಯಕ್ಕೆ ಅವಮಾನ – ಯುವ ಮುಖಂಡ ಸುನಿಲ್ ಆಡಿನಸರ ಆಕ್ರೋಶ NAMMUR EXPRESS NEWS ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಹೀಯಾಳಿಸಿರುವ ಸಚಿವ ಜಮೀರ್ ಅಹಮದ್ ಅವರ ಹೇಳಿಕೆ ಒಕ್ಕಲಿಗ ಸಮುದಾಯವನ್ನು ಅವಮಾನಿಸಿದ್ದು, ಈ ಬಗ್ಗೆ ಅವರು ತೀರ್ಥಹಳ್ಳಿ ಭೇಟಿ ನೀಡಿದರೆ ಕಪ್ಪು ಮಸಿ ಬಳಿಯುವುದಾಗಿ ಯುವ ಮುಖಂಡರು, ತೀರ್ಥಹಳ್ಳಿ ಒಕ್ಕಲಿಗ ಸಂಘದ ನಿರ್ದೇಶಕರು ಆದ ಸುನಿಲ್ ಆಡಿನಸರ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ರಾಜ್ಯ ಕಂಡ ಅಪರೂಪದ ನಾಯಕರು. ಒಕ್ಕಲಿಗ ಸಮುದಾಯದ ನಾಯಕ. ಅವರ ಬಣ್ಣದ ಬಗ್ಗೆ ಮಾತನಾಡಿರುವ ಜಮೀರ್ ಅಹಮದ್ ಸಣ್ಣತನ ಪ್ರದರ್ಶಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆಯೂ ಮಾತನಾಡಿದ್ದು ಜಮೀರ್ ದೇವೇಗೌಡರ ಒಂದು ಕೂದಲಿಗೂ ಸಮ ಇಲ್ಲದ ವ್ಯಕ್ತಿ. ಇಂತಹ ಮಾತನಾಡಬಾರದು ಎಂದು ಸುನಿಲ್…

Read More

ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿ ಅಂತ್ಯ ಸಂಸ್ಕಾರ! – ದೇಶದ ಗಮನ ಸೆಳೆದಿದ್ದ ಪ್ರಕರಣ ಇತ್ಯರ್ಥ – ಅಯ್ಯಂಗೇರಿಯ ಸಫಿಯಾ ಕೊಲೆ ಪ್ರಕರಣ NAMMUR EXPRESS NEWS ಕೊಡಗು: ಅಪರೂಪದ ಘಟನೆಯೊಂದರಲ್ಲಿ ಕೊಲೆಯಾದ ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿಯ ಅಂತ್ಯ ಸಂಸ್ಕಾರ ನ.11ರಂದು ನಡೆದಿದೆ. ಡಿಸೆಂಬರ್ 2006ರಲ್ಲಿ ಸಫಿಯಾ ಎಂಬ ಅಯ್ಯಂಗೇರಿಯ 13 ವರ್ಷದ ಬಾಲಕಿಯ ಕೊಲೆ ನಡೆದಿತ್ತು. ಜೂನ್ 5, 2008 ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆಯ ತುಣುಕುಗಳು ಪತ್ತೆಯಾಗಿತ್ತು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ನ.11ರಂದು ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ್ ಕಾರ್ಯ ನಡೆಸಿದ್ದಾರೆ. ಏನಿದು ಪ್ರಕರಣದ ಹಿನ್ನೆಲೆ? ಕೊಡಗಿನ ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾಳನ್ನು ಕಾರಸಗೋಡಿನ ಮುಲಿಯಾರ್ ಮಸ್ತಿಕುಂದ್‌ನ ಸಿವಿಲ್ ಕಾಂಟ್ರಾಕ್ಟರ್ ಕೆ.ಸಿ ಹಂಝ ಮತ್ತು ಮೈಮೂನ…

Read More

ಟಾಪ್ ನ್ಯೂಸ್ ಚಿಕ್ಕಮಗಳೂರು – ಚಿಕ್ಕಮಗಳೂರು: KSRTC ಬಸ್ ಹರಿದು ವೃದ್ಧೆ ಸಾವು – ಚಿಕ್ಕಮಗಳೂರು: ವಿದ್ಯುತ್‌ ಸ್ಪರ್ಶಿಸಿ ಕಾಡಾನೆ ಸಾವು ಪ್ರಕರಣ, ಮೂವರ ವಿರುದ್ಧ ದೂರು ದಾಖಲು. – ಮೂಡಿಗೆರೆ : ವಾಹನದ ಸಂಚಾರ ದಟ್ಟಣೆ,ಸವಾರರು ತೊಂದರೆ NAMMUR EXPRESS NEWS ಚಿಕ್ಕಮಗಳೂರು: ವೃದ್ಧೆಯೊಬ್ಬರ ಮೇಲೆ KSRTC ಬಸ್ ಹರಿದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ. ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಪುಟ್ಟಮ್ಮ (80) KSRTC ಬಸ್ ಹರಿದು ಸಾವನ್ನಪ್ಪಿರುವ ವೃದ್ಧೆ ಬಸ್ ಟರ್ನ್ ಮಾಡುವಾಗ KSRTC ಬಸ್ ವೃದ್ಧೆಗೆ ಗುದ್ದಿದ್ದು, ಬಸ್ಸಿನ ಮುಂಭಾಗದ ಚಕ್ರಕ್ಕೆ ವೃದ್ಧೆ ಸಿಲುಕಿದ್ದಾರೆ. ವೃದ್ಧೆಯ ಹೊಟ್ಟೆಯ ಮೇಲೆ ಬಸ್ ಚಕ್ರ ಹತ್ತಿದ ಪರಿಣಾಮ ಹೊಟ್ಟೆಯಿಂದ ಕರುಳು ಹೊರಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಕೂಡಲೇ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದರೆ. ಚಿಕಿತ್ಸೆ ಪಡೆಯಲು ಪುಟ್ಟಮ್ಮ ಚಿಕ್ಕಮಗಳೂರಿನ ಆಸ್ಪತ್ರೆಗೆ ಬಂದಿದ್ದರು. ವಾಪಾಸ್ ಗ್ರಾಮಕ್ಕೆ ತೆರಳಲು ಸರ್ಕಾರಿ…

Read More

ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ರಾಘವೇಂದ್ರ ಎಸ್ ಸಾರಥ್ಯ – ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ: 30 ಮಂದಿ ನೂತನ ನಿರ್ದೇಶಕರು ಆಯ್ಕೆ – ಖಜಾಂಚಿಯಾಗಿ ಮಂಜುನಾಥ ಎಂ ಸಿ, ಯಲ್ಲಪ್ಪ ವಡ್ಡರ್ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆ NAMMUR EXPRESS NEWS ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತೀರ್ಥಹಳ್ಳಿ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆ ನಡೆದು ಇದೀಗ ತಾಲೂಕಿನ ಹೆಮ್ಮೆಯ ಅಧಿಕಾರಿ, ತಾಲೂಕು ಪಂಚಾಯತ್ ಮ್ಯಾನೇಜರ್ ಎಸ್ ರಾಘವೇಂದ್ರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರಾಘವೇಂದ್ರ ಅವರಿಗೆ ಎಲ್ಲಾ ಸರ್ಕಾರಿ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ. 34 ಇಲಾಖೆ 1400 ಮಂದಿಯಿಂದ 30 ನಿರ್ದೇಶಕರ ಆಯ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಡೆಯುವ ಚುನಾವಣೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸರಿ ಸುಮಾರು 1400 ಜನ ನೌಕರರು ಕ್ರಮವಾಗಿ ತಮ್ಮ 34 ಇಲಾಖೆಯಲ್ಲಿನ 30 ಜನ ನಿರ್ಧೇಶಕರನ್ನು ಆಯ್ಕೆಯನ್ನು…

Read More

ತೀರ್ಥಹಳ್ಳಿ ಕೆಡಿಪಿ ಸದಸ್ಯರಿಗೆ ಆಡಳಿತದ ಗೌರವ – 6 ಮಂದಿ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ – ಈಗ ಕೆಡಿಪಿ ಸದಸ್ಯರೇ ತಾಲೂಕಿನ ಜನಪ್ರತಿನಿಧಿಗಳು! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಪಂಚಾಯತ್ ಕೆಡಿಪಿ ಸಭೆಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಕಾಂಗ್ರೆಸ್ ಪ್ರಮುಖರಾದ ಪೂರ್ಣೇಶ್ ಕೆಳಕೆರೆ, ಕರುಣಾಕರ್ ಮಾದ್ಲು, ಮಹೇಶ್ ಗೌಡ ಮಂಡಗದ್ದೆ, ಜೀನಾ ವಿಕ್ಟರ್ ಡಿಸೋಜ, ಅನ್ನಪೂರ್ಣ ಮೋಹನ್, ಸುರೇಶ್ ಕಲ್ಲುಕೊಪ್ಪ ಅವರನ್ನು ತಾಲೂಕು ಪಂಚಾಯತ್ ಆಡಳಿತದಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೈಲಾ, ತಾಲೂಕು ಪಂಚಾಯತ್ ಮ್ಯಾನೇಜರ್ ರಾಘವೇಂದ್ರ ಎಸ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ಕೆಡಿಪಿ ಸದಸ್ಯರೇ ಜನಪ್ರತಿನಿಧಿಗಳು! ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಯದ ಕಾರಣ ತಾಲೂಕು ಪಂಚಾಯತ್ ಜನಪ್ರತಿನಿಧಿಗಳು ಇಲ್ಲ. ಹಾಗಾಗಿ ಈಗ ಕೆಡಿಪಿ ಸದಸ್ಯರೇ ಜನ ಪ್ರತಿನಿಧಿಗಳು. ಪೂರ್ಣೇಶ್, ಜಿನಾ ವಿಕ್ಟರ್ ಸೇರಿ ಎಲ್ಲಾ ಸದಸ್ಯರು ರಾಜಕೀಯ ಹಾಗೂ ಜನ ಸಾಮಾನ್ಯರ ಕಷ್ಟ ಗೊತ್ತಿರುವವರು.…

Read More

ಕರಾವಳಿ ಟಾಪ್ ನ್ಯೂಸ್ – ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ- ಎಸ್‌ಐ, ಹೆಡ್ ಕಾನ್ಸ್ಟೇಬಲ್‌ ಅಮಾನತು! – ಮಣಿಪಾಲ : ಶಾಲಾ ರಿಕ್ಷಾ ಪಲ್ಟಿ : ಮೂವರು ವಿದ್ಯಾರ್ಥಿಗಳಿಗೆ ಗಾಯ! – ಪುತ್ತೂರು : ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ ಆಗಂತುಕ: ಕ್ರಮ ಕೈಗೊಳ್ಳದ ಪೊಲೀಸರು! – ಬೆಳ್ತಂಗಡಿ: ಕಬಡ್ಡಿ ಪಟು, ಅನಾರೋಗ್ಯದಿಂದ ಚಿನ್ಮಯಿ ಸಾವು! NAMMUR EXPRESS NEWS ಬ್ರಹ್ಮಾವರ: ಬ್ರಹ್ಮಾವರ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಠಾಣಾಧಿಕಾರಿ ಮಧು ಬಿ.ಇ ಮತ್ತು ಪ್ರಭಾರ ಠಾಣಾಧಿಕಾರಿ ಹೆಡ್‌ಕಾನ್ ಸ್ಟೇಬಲ್ ಸುಜಾತ ಇವರನ್ನು ಉಡುಪಿ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿರುತ್ತಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಠಾಣೆ ಪೊಲೀಸ್ ಉಪನಿರೀಕ್ಷಕ ಮತ್ತು ಹೆಡ್‌ಕಾನ್ ಸ್ಟೇಬಲ್ ಅಮಾನತು ಮಾಡಿ ಆದೇಶಿಸಲಾಗಿದೆ. ಆರೋಪಿಗಳನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾಗುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದೆ ಇರುವ ಕುರಿತು ಈ ಕ್ರಮಕೈಗೊಳ್ಳಲಾಗಿದೆಂದು…

Read More

NAMMUR EXPRESS NEWS ಬೆಂಗಳೂರು: ಆಹಾರ ಕಲಬೆರಕೆ ತಡೆಗೆ, ಹೋಟೆಲ್ ಗಳಲ್ಲಿ ಗುಣಮಟ್ಟ ಆಹಾರ ಲಭ್ಯತೆ ಉದ್ದೇಶದಿಂದ ಆರೋಗ್ಯ ಇಲಾಖೆ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ರಾಜ್ಯದ ಎಲ್ಲ ಬಗೆಯ ಹೋಟೆಲ್‌ಗಳು, ಬೇಕರಿಗಳು, ಆನ್‌ಲೈನ್‌ನಲ್ಲಿ ಪುಡ್ ಡೆಲಿವರಿ ಮಾಡುವ ಕಂಪನಿಗಳು ಹಾಗೂ ಪಿಜ್ಜಾ, ರ್ಬಗರ್ ಮಾರಾಟ ಮಾಡುವ ಹೋಟೆಲ್‌ಗಳು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ (ಪೋಸ್ಟಾಕ್) ಪತ್ರ ಪಡೆಯುವುದು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ 6 ಲಕ್ಕೂ ಅಧಿಕ ಆಹಾರ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. ಅಂದಾಜು 14 ಲಕ್ಷ ಆಹಾರ ಉದ್ದಿಮೆಗಳು ಪ್ರಾಧಿಕಾರದಲ್ಲಿ ನೊಂದಾಣಿ ಮಾಡಿಕೊಂಡಿವೆ. ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯ. ಆದರೆ, ಬಹುತೇಕ ಹೋಟೆಲ್, ರಸ್ತೆಬದಿಯಲ್ಲಿ ಮಾರಾಟ ಮಾಡುವವರು ಆಹಾರ, ಸಿಹಿ, ಖಾರ ತಿನಿಸು, ಕರಿದ ಪದಾರ್ಥಗಳಲ್ಲಿ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶ ಬಳಸಿ ಕಲಬೆರಕೆ ಆಹಾರ ಮಾರಾಟ ಮಾಡುತ್ತಿದ್ದಾರೆ. ಕಲಬೆರಕೆ ಆಹಾರ ಮತ್ತು ಗಂಭೀರ ರೋಗಗಳ ಪ್ರಮಾಣ ತಡೆಯುವ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ವಿಘ್ನ ವಿನಾಯಕನ ಆಶೀರ್ವಾದದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು, ಅವರೊಂದಿಗೆ ತಾಳ್ಮೆಯಿಂದಿರಿ. ** ವೃಷಭ ರಾಶಿ : ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ…

Read More

BREAKING NEWS ಕೊಪ್ಪದ ಜಯಪುರದಲ್ಲಿ ನಕ್ಸಲ್ ಗ್ಯಾಂಗ್ ಪತ್ತೆ!? – ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗನ್, ಮದ್ದುಗುಂಡು ವಶ – ಮುಂಡಗಾರು ಲತಾ, ಜಯಣ್ಣ ತಂಡ ಅಡಗಿರುವ ಶಂಕೆ NAMMUR EXPRESS NEWS ಕೊಪ್ಪ: ನಕ್ಸಲ್ ನಿಗ್ರಹ ದಳದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬಗೌಡ ಎಂಬುವರ ಒಂಟಿಮನೆಯಲ್ಲಿ ನಕ್ಸಲರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರ ಅನುಮಾನಾಸ್ಪದ ಚಲನವಲನ ಕಂಡುಬಂದ ಮೇರೆಗೆ ಪಿರ್ಯಾದುದಾರರು ನೀಡಿದ ದೂರಿನನ್ವಯ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪ ವಿಭಾಗ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ. ಈ ಸಂಬಂಧ ನಕ್ಸಲರು ಪರಾರಿಯಾಗಿ ಹೋಗಿದ್ದ ಸ್ಥಳದಲ್ಲಿ ದೊರೆತ ಮೂರು ಎಸ್ ಬಿ ಎಂ ಎಲ್ ಬಂದೂಕುಗಳು ಹಾಗೂ ಅದಕ್ಕೆ ಸಂಬಂದಿಸಿದ ಮದ್ದು ಗುಂಡುಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನುಪ್ರಕ್ರಿಯೆ ಕೈಗೊಳ್ಳಲಾಗಿದೆ. ದೂರುದಾರರ ಖಚಿತ ಮಾಹಿತಿಯ ಮೇರೆಗೆ ಘಟನೆ ನಡೆದ ಸ್ಥಳವಾದ ಕಡೆಗುಂದಿ ಗ್ರಾಮದ…

Read More