Categories
ತೀರ್ಥಹಳ್ಳಿ

ಕುಮಾರಸ್ವಾಮಿಗೆ ಕರಿಯ ಸ್ವಾಮಿ ಎಂದ ಜಮೀರ್ ತೀರ್ಥಹಳ್ಳಿಗೆ ಬಂದ್ರೆ ಕಪ್ಪು ಮಸಿ

ಕುಮಾರಸ್ವಾಮಿಗೆ ಕರಿಯ ಸ್ವಾಮಿ ಎಂದ ಜಮೀರ್ ತೀರ್ಥಹಳ್ಳಿಗೆ ಬಂದ್ರೆ ಕಪ್ಪು ಮಸಿ
– ಕುಮಾರಸ್ವಾಮಿ ಬಣ್ಣದ ಬಗ್ಗೆ ಹೀಯಾಳಿಸಿ ಒಕ್ಕಲಿಗ ಸಮುದಾಯಕ್ಕೆ ಅವಮಾನ
– ಯುವ ಮುಖಂಡ ಸುನಿಲ್ ಆಡಿನಸರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಹೀಯಾಳಿಸಿರುವ ಸಚಿವ ಜಮೀರ್ ಅಹಮದ್ ಅವರ ಹೇಳಿಕೆ ಒಕ್ಕಲಿಗ ಸಮುದಾಯವನ್ನು ಅವಮಾನಿಸಿದ್ದು, ಈ ಬಗ್ಗೆ ಅವರು ತೀರ್ಥಹಳ್ಳಿ ಭೇಟಿ ನೀಡಿದರೆ ಕಪ್ಪು ಮಸಿ ಬಳಿಯುವುದಾಗಿ ಯುವ ಮುಖಂಡರು, ತೀರ್ಥಹಳ್ಳಿ ಒಕ್ಕಲಿಗ ಸಂಘದ ನಿರ್ದೇಶಕರು ಆದ ಸುನಿಲ್ ಆಡಿನಸರ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ರಾಜ್ಯ ಕಂಡ ಅಪರೂಪದ ನಾಯಕರು. ಒಕ್ಕಲಿಗ ಸಮುದಾಯದ ನಾಯಕ. ಅವರ ಬಣ್ಣದ ಬಗ್ಗೆ ಮಾತನಾಡಿರುವ ಜಮೀರ್ ಅಹಮದ್ ಸಣ್ಣತನ ಪ್ರದರ್ಶಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆಯೂ ಮಾತನಾಡಿದ್ದು ಜಮೀರ್ ದೇವೇಗೌಡರ ಒಂದು ಕೂದಲಿಗೂ ಸಮ ಇಲ್ಲದ ವ್ಯಕ್ತಿ. ಇಂತಹ ಮಾತನಾಡಬಾರದು ಎಂದು ಸುನಿಲ್ ಆಡಿನಸರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.