Author: Nammur Express Admin

ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ಸಜ್ಜು! – ಫೆ. 8 ಹಾಗೂ 9 ಸಿದ್ದಾಪುರ ಉತ್ಸವ: ಉತ್ಸವಕ್ಕೆ ಈಗಾಗಲೇ ಸಿದ್ಧತೆ – ಸ್ಥಳೀಯ ಕಲಾವಿದರಿಗೆ ಅವಕಾಶ: 2 ದಿನಗಳ ಉತ್ಸವಕ್ಕೆ ಸ್ವಾಗತ NAMMUR EXPRESS NEWS ಸಿದ್ದಾಪುರ : ಪ್ರತಿ ವರ್ಷದಂತೆ ಈ ವರ್ಷದ ಸಿದ್ದಾಪುರ ಉತ್ಸವ ಫೆಬ್ರವರಿ 8 ಹಾಗೂ 9 ರಂದು 2 ದಿನಗಳ ಕಾಲ ಜರುಗಲಿದೆ. ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮಳಿಗೆಗಳು ಹಾಗೂ ಕಲಾವಿದರಿಗೆ 2 ದಿನಗಳ ಉತ್ಸವಕ್ಕೆ ಸ್ವಾಗತ ಕೋರಲಾಗಿದೆ. ಸಾವಿರಾರು ಜನ ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ ನಾಯ್ಕ ಹಣಜಿಬೈಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಕಲಾವಿದರಿಗೆ ಕೂಡ ಅವಕಾಶ ಕಲ್ಪಿಸೋ ನಿಟ್ಟಿನಲ್ಲಿ 2 ದಿನಗಳ ಕಾಲ ಈ ವರ್ಷದ ಸಿದ್ದಾಪುರ ಉತ್ಸವ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಜಾತ್ರೆ, ಉತ್ಸವಗಳು ಬರುತ್ತಿರೋ ಹಿನ್ನೆಲೆಯಲ್ಲಿ 3 ದಿನ ಇರೋ ಉತ್ಸವವನ್ನ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪಟ್ಟಣದ…

Read More

ಸುಳ್ಯದಲ್ಲಿ ಆನೆಗಳ ಕಾದಾಟ – ಕಾದಾಟದಲ್ಲಿ ಸಾವು ಶಂಕೆ, ಗಂಡಾನೆಯ ಮೃತದೇಹ ಪತ್ತೆ – ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು NAMMUR EXPRESS NEWS ಸುಳ್ಯ: ಗಂಡಾನೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ನಡೆದಿದೆ. ಮಂಡೆಕೋಲು ರಿಸರ್ವ್ ಫಾರೆಸ್ಟ್‌ನಲ್ಲಿ ಸ್ಥಳೀಯರಿಗೆ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾದಾಟದಲ್ಲಿ ಸಾವು ಶಂಕೆ ಮೃತ ಆನೆ ಹಾಗೂ ಬೇರೆ ಗಂಡು ಕಾಡಾನೆಗಳ ನಡುವೆ ಕಾದಾಟ ನಡೆದು ಇದರಿಂದ ತೀವ್ರ ರಕ್ತಸ್ರಾವಗೊಂಡು ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.  ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು ಕಂಡುಬಂದಿದೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಇಲ್ಲಿ ಬಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್‌. ಸೇರಿದಂತೆ ಅರಣ್ಯ ಇಲಾಖೆ…

Read More

ಮಾದರಿಯಾಯ್ತು ಶ್ರೀ ರಾಮ ವರ್ತಕರ ಸೌಹಾರ್ದ ಸಂಘ! – ಫೆ.2ಕ್ಕೆ ಬಿದರಗೋಡಲ್ಲಿ 1ನೇ ಸರ್ವ ಸದಸ್ಯರ ಮಹಾಸಭೆ – ಟಿ.ಎಸ್.ಕೇಶವಮೂರ್ತಿ ಘನ ಅಧ್ಯಕ್ಷತೆಯಲ್ಲಿ ಆಯೋಜನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾದರಿ ಸಹಕಾರ ಸಂಘದಲ್ಲಿ ಒಂದಾದ ಶ್ರೀ ರಾಮ ವರ್ತಕರ ಸೌಹಾರ್ದ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಫೆ.2ನೇ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಬಿದರಗೋಡು. ಶ್ರೀ ರಾಮಮಂದಿರ ಆವರಣದಲ್ಲಿ ಸಹಕಾರಿಯ 1ನೇ ಸರ್ವ ಸದಸ್ಯರ ಮಹಾಸಭೆ ಸಹಕಾರಿಯ ಅಧ್ಯಕ್ಷರಾದ ಟಿ.ಎಸ್. ಕೇಶವಮೂರ್ತಿ ಇವರ ಘನ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಈ ಸರ್ವಸದಸ್ಯರ ಸಭೆಗೆ ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು ಡಿ. ಸಿ. ಸಿ. ಬ್ಯಾಂಕ್ ಶಿವಮೊಗ್ಗ ಆರ್.ಎಂ. ಮಂಜುನಾಥಗೌಡ, ಮಾಜಿ ಗೃಹ ಸಚಿವರು ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ, ನಿರ್ದೇಶಕರು, ಡಿ. ಸಿ. ಸಿ. ಬ್ಯಾಂಕ್ ಶಿವಮೊಗ್ಗ ವಿಜಯ್‌ದೇವ್, ಉಪಾಧ್ಯಕ್ಷರು, ಕ. ರಾ. ಸೌ. ಸಂ. ಸ. ಸಂಘ…

Read More

ಮ್ಯಾಮ್ಕೋಸ್ ಚುನಾವಣೆ ಅಖಾಡ ಸಜ್ಜು! – ಸಹಕಾರ ಭಾರತಿ ಅಭ್ಯರ್ಥಿಗಳ ಘೋಷಣೆ – ತೀರ್ಥಹಳ್ಳಿಯಿಂದ ಹುಲ್ಕುಳಿ ಮಹೇಶ್, ರತ್ನಾಕರ್ ಬಿಳಿಗಿನಮನೆ ಹಸಿರುಮನೆ ನಂದನ್, ಜಯಶ್ರೀ ಅವರಿಗೆ ಅವಕಾಶ – ಕಾಂಗ್ರೆಸ್ ಬೆಂಬಲಿತ ‘ಸಹಕಾರ ವೇದಿಕೆ’ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ NAMMUR EXPRESS NEWS ತೀರ್ಥಹಳ್ಳಿ: ಶಿವಮೊಗ್ಗ-ಚಿಕ್ಕಮಗಳೂರು ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮಲೆನಾಡು ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ನಿ.. (ಮ್ಯಾಮ್ ಕೋಸ್)ನ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿಗೆ ಫೆಬ್ರವರಿ 4ರಂದು ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮ್ಯಾಮ್ ಕೋಸ್ಒಟ್ಟು 19 ನಿರ್ದೇಶಕ ಸ್ಥಾನಗಳಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ 19ಕ್ಕೆ 19 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಬೆಂಬಲಿತ ‘ಸಹಕಾರ ವೇದಿಕೆ’ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ. ಯಾರು ಯಾರಿಗೆ ಅವಕಾಶ? 2000-2025ನೇ ಅವಧಿಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಹುಲ್ಕುಳಿ ಮಹೇಶ್, ಸಿ.ಬಿ.ಈಶ್ವರ್, ಬಿಳಿಗಿನಮನೆ ರತ್ನಾಕರ್, ಜಯಶ್ರೀ ಗೆಲುವು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾಶಿವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನೀವು ಉತ್ಸಾಹಭರಿತರಾಗಿರುತ್ತೀರಿ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಿ. ಹಣಕಾಸಿನ ವಿಷಯಗಳಲ್ಲಿ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಅಗತ್ಯವಿದ್ದರೆ, ತಜ್ಞರ ಸಲಹೆ ಪಡೆಯಿರಿ. ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಗುರಿಗಳ ಕಡೆಗೆ ನೀವು ಪ್ರೇರೇಪಿತರಾಗಿರುತ್ತೀರಿ. ** ವೃಷಭ ರಾಶಿ : ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ. ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಹೊಸ ನವೀನ ವಿಚಾರಗಳೊಂದಿಗೆ ಎಲ್ಲರೂ ಕೆಲಸ ಮಾಡಿ. ಪ್ರಯಾಣ ಮಾಡುವ ಸಾಧ್ಯತೆ ಇರಬಹುದು. ನಿಮ್ಮ ಕುಟುಂಬದೊಂದಿಗೆ ನೀವು ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಕುಟುಂಬ…

Read More

ಕುಪ್ಪಳಿಯಲ್ಲಿ ವೈಭವದ ಮಂತ್ರಮಾಂಗಲ್ಯ: ಎಲ್ಲೆಡೆ ಜನಾಕ್ರೋಶ! – ಕುವೆಂಪು ಹೇಳಿದ್ದೇನು…ಇಲ್ಲಿ ಆಗ್ತಿರೋದು ಏನು…? – ಶ್ರೀಮಂತ ಕುಟುಂಬಗಳಿಗೆ ಮಾತ್ರ ಮದುವೆ ಅವಕಾಶ?! – ಹೈಟೆಕ್ ಮದುವೆ: ಮಂತ್ರ ಮಾಂಗಲ್ಯ ನಿಯಮ ಲೆಕ್ಕಕ್ಕಿಲ್ಲ NAMMUR EXPRESS NEWS ತೀರ್ಥಹಳ್ಳಿ: ಕುವೆಂಪು ಹುಟ್ಟೂರು ಕುಪ್ಪಳಿಯಲ್ಲಿ ಮಂತ್ರ ಮಾಂಗಲ್ಯ ಆಗಬೇಕು. ಸರಳ ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕು ಎಂಬುದು ಅದೆಷ್ಟೋ ಜನರ ಕನಸು. ಆದರೆ ಇದೀಗ ಕಳೆದ 2 ದಿನಗಳ ಹಿಂದೆ ನಡೆದ ಮದುವೆ ಇದೀಗ ರಾಜ್ಯದ ಕುವೆಂಪು ಅಭಿಮಾನಿಗಳು ಮತ್ತು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ವಿಚಾರಗಳನ್ನು ಪಸರಿಸುತ್ತ ಉತ್ತಮ ಹೆಸರು ಗಳಿಸಿದ್ದ ಕುಪ್ಪಳಿ ಪರಿಸರದಲ್ಲಿ ವೈಭವದ ಮದುವೆ ಆಯೋಜನೆಗೆ ಅವಕಾಶ ನೀಡುವ ಮೂಲಕ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವಿವಾದವನ್ನು ಎಳೆದುಕೊಂಡಿದೆ. ಅಲ್ಲದೆ ಪ್ರತಿಷ್ಠಾನಕ್ಕೆ ಸಂಬಂಧಪಟ್ಟವರ ಮದುವೆ ಆಗಿದ್ದು ಎಲ್ಲಿಯೂ ಮಂತ್ರ ಮಾಂಗಲ್ಯದ ನಿಯಮ ಪಾಲನೆ ಮಾಡದಿರುವುದು ಇದೀಗ ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದೆ. ಆಡಂಬರದ ಅಲಂಕಾರ, ಊಟ, ಹೈಟೆಕ್ ಸೌಲಭ್ಯ ಹೆಸರಿಗೆ ಮಾತ್ರ ಮಂತ್ರ…

Read More

ಆಗುಂಬೆ ಘಾಟಿಯಲ್ಲಿ ಬಸ್ಸಲ್ಲೇ ಹೃದಯಾಘಾತ: ಸಾವು – ಕೊಪ್ಪದ ವ್ಯಕ್ತಿ ಮೃತ: ಆಗುಂಬೆ ಲಯನ್ಸ್ ಸೇವೆ – ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು NAMMUR EXPRESS NEWS ತೀರ್ಥಹಳ್ಳಿ/ಕೊಪ್ಪ: ಆಗುಂಬೆ ಘಾಟಿಯಲ್ಲಿ ಬಿಎಂಎಸ್ ಬಸ್ಸಿನಲ್ಲಿ ಪರ್ಕಳದಿಂದ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ಹೃದಯ ಅಘಾತದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಬಸ್ ಅಲ್ಲೇ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದ್ದು ಡ್ರೈವರ್ ಆದ ಪ್ರಹ್ಲಾದವರು ಆಗುಂಬೆಯ ಯಶಸ್ವಿ ಬಸ್ಸಿನ ಡ್ರೈವರ್ ಆದ ದಿನೇಶ್ ಅವರ ಗಮನಕ್ಕೆ ತಂದು ಪ್ರಾಥಮಿಕ ಕೇಂದ್ರಕ್ಕೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತರೆಂದು ತೀರ್ಮಾನಿಸಿದ ನಂತರ ಆಗುಂಬೆಯ ಲಯನ್ಸ್ ಕ್ಲಬ್ ಆಂಬುಲೆನ್ಸ್ ಗೆ ಬಳ್ಳಾಳ್ ಅವರ ಮೃತದೇಹವನ್ನು ಶಿಫ್ಟ್ ಮಾಡಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ಸನ್ನು ಕಳಿಸಿ ಕೊಟ್ಟಿರುತ್ತಾರೆ. ಕುಟುಂಬದವರಿಗೆ ಮಾಹಿತಿಯನ್ನು ನೀಡಿ ಮುಂದಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

Read More

ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ! – ಮಲೆನಾಡಿನ ಹೆಮ್ಮೆಯ ಶಿಕ್ಷಣ ಸಂಸ್ಥೆ: ಅತ್ಯುತ್ತಮ ಶಿಕ್ಷಣಗೆ ಸೇರಲು ಅವಕಾಶ ಮಲೆನಾಡಿನ ಶಿಕ್ಷಣ ಕ್ರಾಂತಿಗೆ ಕಾರಣವಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸತ್ವಥ ಎಜುಕೇಶನ್ ಟ್ರಸ್ಟ್ ಅಂಗವಾದ ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ಓದಲು ಈಗ ಸುವರ್ಣ ಅವಕಾಶ. ಎಸ್.ಎಸ್ ಎಲ್.ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತಮ ಕಾಲೇಜನ್ನು ಸೇರಿ,ಅದ್ಭುತ ಜೀವನವನ್ನು ಕಟ್ಟಿಕೊಳ್ಳಬೇಕು ಎನ್ನುವುದು ಪ್ರತಿಯೊಂದು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇದನ್ನು ನನಸಾಗಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಕಾರಣದಿಂದ 2025-26ನೆಯ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಿದೆ. ವಿಶೇಷ ಶಿಷ್ಯ ವೇತನ ಶೇಕಡ 97ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಪೂರ್ಣ ಶುಲ್ಕ ವಿನಾಯಿತಿ, ಶೇಕಡ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಶುಲ್ಕ ರಿಯಾಯಿತಿ  ಇರುತ್ತದೆ. ಕಾಲೇಜಿನಲ್ಲಿ ಸಿ.ಇ.ಟಿ, ನೀಟ್, ಜೆಇಇ, ಸಿ.ಎ, ಸಿ.ಪಿ.ಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಅನೇಕ ಯೋಜನೆಗಳ ಜವಾಬ್ದಾರಿಯನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನವಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ವ್ಯಾಪಾರ ಪರಿಸ್ಥಿತಿ ಬಲವಾಗಿರುತ್ತದೆ.…

Read More

ಫೈನಾನ್ಸ್‌ ಕಂಪನಿಗಳ ವಿರುದ್ಧ ಸಿಎಂ ಫುಲ್ ಗರಂ! – ಸಾಲಗಾರರಿಗೆ ಮೇಲಿಂದ ಮೇಲೆ ಸಾಲ? – ಸಭೆಯಲ್ಲಿ ಆರ್ ಬಿ ಐ ಅಧಿಕಾರಿಗಳಿಗೆ ಪ್ರಶ್ನಿಸಿದ ಸಿಎಂ! – ಜನರ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ!- ಮುಖ್ಯಮಂತ್ರಿಯಿಂದ ಕಠಿಣ ಎಚ್ಚರಿಕೆ NAMMUR EXPRESS NEWS ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಫೈನಾನ್ಸ್‌ ಕಂಪನಿಗಳ ಮೇಲೆ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ. ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದಾರೆ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗಿದೆ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಸಭೆಯಲ್ಲಿ ಸಿದ್ದರಾಮಯ್ಯ ವ್ಯಕ್ತಪಡಿಸಿ ಗರಂ ಆಗಿದ್ದಾರೆ. ಆರ್ ಬಿ ಮೈಕ್ರೋ ಐ ನಿಯಮಗಳ ಉಲ್ಲಂಘನೆ ಸಾಲ ನೀಡಿದ ಫೈನಾನ್ಸ್‌ ಕಂಪನಿಗಳ ಪರವಾನಿಗೆಯನ್ನು ರದ್ದುಗೊಳಿಸಲು ಏನು ಕ್ರಮ ಕೈಗೊಳ್ಳಲಾಗಿದೆ? ಎಂದು ಗಂಭೀರವಾಗಿ ಆರ್ ಬಿ ಐ ಅಧಿಕಾರಿಗಳಿಗೆ…

Read More