ಕಾರ್ಕಳದಲ್ಲಿ ಪತ್ನಿಯಿಂದಲೇ ಪತಿ ಕೊಲೆ?! – ಗಂಡನಿಗೆ ವಿಷ ಉಣಿಸಿ,ಬೆಡ್‌ಶೀಟ್ ಮುಖಕ್ಕೆ ಒತ್ತಿ ಕೊಲೆ – ಅನೈತಿಕ ಸಂಬಂಧಕ್ಕೆ ಪತಿಯ ಹತ್ಯೆ : ಹೇಗೆ ಘಟನೆ? NAMMUR EXPRESS NEWS ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಕೈ ಹಿಡಿದ ಗಂಡನನ್ನು ಹೆಂಡತಿಯೇ ವಿಷ ಉಣಿಸಿ ಬಳಿಕ ಉಸಿರು ಗಟ್ಟಿಸಿ ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ಮರ್ನೆ ಗ್ರಾಮದಲ್ಲಿ ನಡೆದಿದೆ. ಇದೀಗ ಹೆಂಡತಿ ಮತ್ತು ಆಕೆಯ ಪ್ರಿಯಕರ ಜೈಲು ಪಾಲಾಗಿದ್ದಾರೆ. 44 ವರ್ಷದ ಬಾಲಕೃಷ್ಣ ಕೊಲೆ ಆಗಿದ್ದು ಆತನನ್ನು ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನ ಗ್ರಾಮದ ದಿಲೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಘಟನೆ? ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಬಾಲಕೃಷ್ಣ(44) ರವರಿಗೆ ಕಳೆದ 25 ದಿನಗಳಿಂದ ಜ್ವರ ಮತ್ತು ವಾಂತಿ ಶುರುವಾಗಿದ್ದು ಈ ಬಗ್ಗೆ ಇವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರನ್ನು ಪರಿಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು…
Author: Nammur Express Admin
ಅಡಿಕೆ ದರ ಎಷ್ಟಿದೆ? – ರಾಶಿ ಎಷ್ಟು? ಬೆಟ್ಟೆ ಎಷ್ಟು? NAMMUR EXPRESS NEWS ಸರಕು 54509-90170 ಬೆಟ್ಟೆ 46530-54900-56109 ರಾಶಿ 43009-48900-50189 ಗೊರಬಲು 18069-31300-33090
ಕರಾವಳಿ ಟಾಪ್ ನ್ಯೂಸ್ – ಉಡುಪಿ: ಮಂಗಳಮುಖಿಯರ ಕಾಟ ಹೆಚ್ಚಾಯ್ತು! – 30ಕ್ಕೂ ಅಧಿಕ ಪೊಲೀಸರ ರಾತ್ರಿ ಪಾಳಿ ರೌಂಡ್ಸ್ – ಮಂಗಳೂರು: 1995ರ ಕೊಲೆ, 30 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ.! – ಮಂಗಳೂರು: 1 ಲಕ್ಷ ನೋಟು,2 ಪ್ಲಾಟ್ ತೋರಿಸಿ, ಯುವತಿಗೆ ಲೈಂಗಿಕ ಕಿರುಕುಳ NAMMUR EXPRESS NEWS ಉಡುಪಿ: ಮಂಗಳಮುಖಿಯರ ಉಪಟಳ ಕುರಿತು ಸಾರ್ವಜನಿಕರ ದೂರು ನೀಡಿದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ರಾತ್ರೋರಾತ್ರಿ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು. ಮಹಿಳಾ ಸಿಬ್ಬಂದಿ ಸಹಿತ ಉಡುಪಿ ನಗರ ಠಾಣೆಯ 30ಕ್ಕೂ ಅಧಿಕ ಪೊಲೀಸರು ನೈಟ್ ರೌಂಡ್ಸ್ ನಡೆಸಿದರು. ನಗರದ ಬಸ್ ನಿಲ್ದಾಣ ಸುತ್ತಮುತ್ತ, ಕೆಎಸ್ ಆರ್ ಟಿಸಿ, ಸಿಟಿ ಬಸ್, ಸರ್ವೀಸ್ ಬಸ್ ನಿಲ್ದಾಣ ಬಳಿ ಕಾರ್ಯಾಚರಣೆ ನಡೆಸಿದರು. ಪೊಲೀಸರ ಲಾಠಿ, ಬೂಟು ಸದ್ದು ಕೇಳುತ್ತಲೇ ಬಸ್ ನಿಲ್ದಾಣದಲ್ಲಿ ಮಲಗಿದ್ದವರು ದಿಕ್ಕಾಪಾಲಾಗಿ ಓಡಿದರು. ಲಾಠಿ ಹಿಡಿದು ಗಸ್ತು ಆರಂಭಿಸಿದ ಪೊಲೀಸರನ್ನು ಕಂಡು ಸಾರ್ವಜನಿಕರು ಶಾಕ್ ಗೆ ಒಳಗಾದರು. *…
ಮಲ್ನಾಡ್ ಟಾಪ್ ನ್ಯೂಸ್ – ಕಾರು ಬಾನೆಟ್ ಮೇಲೆ ಪೊಲೀಸ್ ಪೇದೆ ಹೊತ್ತೊಯ್ದವ ಅರೆಸ್ಟ್!! – ಶೃಂಗೇರಿ: ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಆದ ಖಾಸಗಿ ಬಸ್ – ಶಿವಮೊಗ್ಗ: ಆಕಸ್ಮಿಕ ವಿದ್ಯುತ್ ತಗುಲಿ ಕಾರ್ಮಿಕನ ಸಾವು – ಶಿವಮೊಗ್ಗ: ಮೊಬೈಲ್ ಟವರ್ ಕದ್ದ ಕಳ್ಳರು! NAMMUR EXPRESS NEWS ಶಿವಮೊಗ್ಗ: ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯನ್ನು ಬಾನೆಟ್ ಮೇಲೆ ಹೊತ್ತೊಯ್ದ ಪ್ರಕರಣ ಸಂಬಂಧ ಕಾರು ಚಾಲಕನನ್ನು ಬಂಧಿಸಲಾಗಿದೆ. ಭದ್ರಾವತಿ ಹೊಸಮನೆ ಬಡಾವಣೆ ವಾಸಿ ಮಿಥುನ್ ಜಗದಾಳೆ ಬಂಧಿತ. ಸಹ್ಯಾದ್ರಿ ಕಾಲೇಜು ಮುಂಭಾಗ ಅ. 24ರಂದು ಮಧ್ಯಾಹ್ನ ವಾಹನ ತಪಾಸಣೆ ಸಂದರ್ಭ ಪೊಲೀಸ್ ಸಿಬ್ಬಂದಿಯನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ಯಲಾಗಿತ್ತು. ವಿಡಿಯೋ ವೈರಲ್ ಆಗಿ, ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಕಾರು ಬಾನೆಟ್ ಮೇಲೆ ಪೊಲೀಸ್ ಪೇದೆಯನ್ನು ಹೊತ್ತೊಯ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರು ಚಾಲಕನನ್ನು ಭದ್ರಾವತಿಯ ಮಿಥುನ್ ಜಗದಾಳೆ ಎಂದು ಗುರುತಿಸಲಾಗಿದೆ. ಪ್ರಕರಣ…
ಮಂಡ್ಯ: ಅನ್ನದಾತರಿಗಾಗಿ ‘ರೈತರ ಶಾಲೆ’ ಆರಂಭ – ರೈತರಿಗಾಗಿ ಭಾರತದಲ್ಲೇ ಇದೆ ಮೊದಲು! – ಶಿಕ್ಷಣದ ಜೊತೆಗೆ ತರಬೇತಿ ಶಿಬಿರಕ್ಕೆ ವ್ಯವಸ್ಥೆ NAMMUR EXPRESS NEWS ಮಂಡ್ಯ: ಯುವಜನತೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಮತ್ತು ವಿದ್ಯಾವಂತರನ್ನು ವ್ಯವಸಾಯದೆಡೆಗೆ ಆಕರ್ಷಿಸಲು, ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರಿಗಾಗಿ ‘ರೈತರ ಶಾಲೆ’ ತೆರೆಯಲು ಶಿಕ್ಷಕರ ಗುಂಪೊಂದು ಮುಂದಾಗಿದೆ. ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ತೆಗೆದುಕೊಳ್ಳಲು ಉತ್ಸುಕರಾಗಿರುವವರನ್ನು ಸಬಲೀಕರಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ಗುಂಪು, ರೈತ ಕುಟುಂಬದ ಎಲ್ಲ ಶಿಕ್ಷಕರು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಕಳೆದ ವರ್ಷದ ಬರ ಹಾಗೂ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರೈತರ ಸಂಕಷ್ಟಗಳನ್ನು ನೋಡಿ ಮತ್ತು ವಿವಿಧ ಸಮಸ್ಯೆಗಳನ್ನು ಪರಿಗಣಿಸಿ ಶಾಲೆಯನ್ನು ತೆರೆಯಲು ನಿರ್ಧರಿಸಿದರು. ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ರೀತಿಯಲ್ಲಿಯೂ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ತಂಡದ ಪ್ರಮುಖ ಉದ್ದೇಶವಾಗಿದೆ. ಯುವಕರು ಉದ್ಯೋಗ…
ದೀಪಾವಳಿ ಪ್ರಯುಕ್ತ 7000 ವಿಶೇಷ ರೈಲು!! – ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ – ಎರಡು ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೇ ವ್ಯವಸ್ಥೆ NAMMUR EXPRESS NEWS ಬೆಂಗಳೂರು: ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಬಂಪರ್ ದೀಪಾವಳಿ ಆಫರ್ ನೀಡಿದೆ. ಪ್ರತಿದಿನ ಎರಡು ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೇ ಈ ವರ್ಷ ದೀಪಾವಳಿ ಮತ್ತು ಛತ್ ಪೂಜೆಗೆ 7,000 ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ದೀಪಾವಳಿ ಮತ್ತು ಛಾತ್ ಪೂಜೆ ಸಂದರ್ಭದಲ್ಲಿ 4,500 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಈ ಬಾರಿಯೂ ಪ್ರಯಾಣಿಕರು ಹೆಚ್ಚಾಗುವ ನಿಟ್ಟಿನಲ್ಲಿ 7 ಸಾವಿರ ರೈಲುಗಳನ್ನು ಓಡಿಸಲು ಮುಂದಾಗಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರು ಹೆಚ್ಚು ರೈಲಿನಲ್ಲಿ ಓಡಾಡುತ್ತಾರೆ. ಈಗಾಗಲೇ ಉತ್ತರ ರೈಲ್ವೆ (NR) ಗಣನೀಯ ಸಂಖ್ಯೆಯ ರೈಲುಗಳನ್ನು ನಿರ್ವಹಿಸುತ್ತದೆ. ಉತ್ತರ ರೈಲ್ವೆ ಇಲಾಖೆಯ ಇತ್ತೀಚಿನ ಪತ್ರಿಕಾ…
ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರ ಯಾನ” – ಎಸ್ ಎನ್ ಸೇತುರಾಮ್, ಪ್ರಕಾಶ್ ಬೆಳವಾಡಿ, ಪ್ರತಾಪ್ ಸಿಂಹ ರವರು ಭಾಗಿ – ಯುವ ಸಾಹಿತಿಗಳು, ಬರಹಗಾರರಿಗೆ ಪಾಲ್ಗೊಳ್ಳಲು ಅವಕಾಶ NAMMUR EXPRESS NEWS ಕಾರ್ಕಳ: ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ ‘ಅಕ್ಷರಯಾನ – ಬರವಣಿಗೆಯ ಮೆರವಣಿಗೆ’ ಕಾರ್ಯಕ್ರಮವು ಅಕ್ಟೋಬರ್ 30ರ ಮಂಗಳವಾರ ಬೆಳಗ್ಗೆ 9:30ಕ್ಕೆ ಆರಂಭಗೊಳ್ಳಲಿದೆ. ಈ ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ವಿ. ಸುನಿಲ್ ಕುಮಾರ್ ರವರು ಆಗಮಿಸಲಿದ್ದಾರೆ. ಯುವ ಸಾಹಿತ್ಯಾಸಕ್ತರಿಗೆ ಸ್ಪೂರ್ತಿದಾಯಕ ಮಾತುಗಳ ಜೊತೆಯಲ್ಲಿ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಖ್ಯಾತ ರಂಗ ಕಲಾವಿದ, ನಟ, ನಿರ್ದೇಶಕರಾಗಿರುವ ಶ್ರೀ ಎಸ್. ಎನ್. ಸೇತುರಾಮ್ ರವರು. ಲೇಖಕ, ಕನ್ನಡ ಸಿನಿಮಾರಂಗದ ಪ್ರಮುಖ…
ಟೋಕಿಯೋ ತಲುಪಿದ ಪಿಲಿವೇಷ ಸಾಕ್ಷ್ಯಚಿತ್ರ! – ಮಣಿಪಾಲದ ಮಾಹೆ ನಿರ್ಮಿಸಿದ ತುಳುನಾಡಿನ ಶಾರ್ಟ್ ಫಿಲ್ಮ್ – 2024ರ ಟೋಕಿಯೋ ಸಾಕ್ಷ್ಯಚಿತ್ರೋತ್ಸವಕ್ಕೆ ಆಯ್ಕೆ – ಭಾರತದಿಂದ ಆಯ್ಕೆಯಾದ ಎರಡು ಚಲನಚಿತ್ರಗಳಲ್ಲಿ ಇದು ಒಂದು NAMMUR EXPRESS NEWS ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ ಪಿಲಿವೇಷ (ಹುಲಿವೇಷ), ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ (TDFF) 2024 ರಲ್ಲಿ ಅಧಿಕೃತ ಆಯ್ಕೆಯನ್ನು ಗಳಿಸಿದೆ. ಈ ಚಲನಚಿತ್ರವನ್ನು ದೃಶ್ಯ ಮಾನವಶಾಸ್ತ್ರ ಮತ್ತು ಎಥ್ನೋಗ್ರಾಫಿಕ್ ಫಿಲ್ಮ್ ವರ್ಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಪ್ರಪಂಚದಾದ್ಯಂತದ 800 ಕ್ಕೂ ಹೆಚ್ಚು ಆಯ್ಕೆಗಳಲ್ಲಿ, ಭಾರತದಿಂದ ಆಯ್ಕೆಯಾದ ಎರಡು ಚಲನಚಿತ್ರಗಳಲ್ಲಿ ಒಂದಾಗಿದೆ, ಇದು ಮಾಹೆ ಮತ್ತು ಅದು ಪ್ರತಿನಿಧಿಸುವ ಪ್ರದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಸಾಕ್ಷ್ಯಚಿತ್ರವನ್ನು ಡಿಸೆಂಬರ್ 5, 2024 ರಂದು ಉತ್ಸವದ ಭಾಗವಾಗಿ ಪ್ರದರ್ಶಿಸಲು ನಿರ್ಧರಿಸಲಾಗಿದೆ, ಇದು ನವೆಂಬರ್ 30 ರಿಂದ ಡಿಸೆಂಬರ್ 13, 2024 ರವರೆಗೆ ನಡೆಯುವ ಕಾರ್ಯಕ್ರಮವಾಗಿದೆ. ಇಂಟರ್ ಕಲ್ಚರಲ್ ಸ್ಟಡೀಸ್ ಮತ್ತು ಡೈಲಾಗ್…
ವರ್ಷದ ನಂತರ ತೆರೆದ ಹಾಸನಾಂಬೆ ಬಾಗಿಲು! – ಕಳೆದ ವರ್ಷ ಹಚ್ಚಿದ್ದ ಹಣತೆ, ಹೂವು ಹಾಗೆಯೇ ಇತ್ತು! – ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರ ದರ್ಶನ NAMMUR EXPRESS NEWS ಹಾಸನ: ಹಾಸನದ ಅಧಿದೇವತೆ ಹಾಗೂ ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ ೧೨.೧೦ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಿತು. ಮೈಸೂರು ಅರಸು ವಂಶಸ್ಥ ನಂಜರಾಜ/ನಟೇಶ್ ಅರಸ್ ಅವರು ಗೊನೆಕಟ್ಟಿದ್ದ ಬಾಳೆ ಕಂಬ ಕಡಿದ ಕೂಡಲೇ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಯಿತು.ಈ ಅಪರೂಪದ ಸನ್ನಿವೇಶಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಾಸನ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಹಾಗೂ ಜಿಲ್ಲಾಡಳಿತದ ಎಲ್ಲಾ…
ಕರಾವಳಿ ಟಾಪ್ ನ್ಯೂಸ್ – ಕುಂದಾಪುರದಲ್ಲಿ ಹಾಡಹಗಲೇ ಕಳ್ಳತನ! – ಉಡುಪಿ: ಆನ್‌ಲೈನ್‌ನಲ್ಲಿ ವ್ಯವಹಾರ: 86 ಲಕ್ಷ ರೂ. ವಂಚನೆ – ಮಂಗಳೂರು: ಅಪಘಾತ, ಮಾನವೀಯತೆ ಮೆರೆದ ಮಹಿಳಾ ಪೊಲೀಸ್ – ಕಾಸರಗೋಡು: ಡಿವೈಎಫ್‌ಐ ಮಾಜಿ ಸದಸ್ಯೆ ಮೇಲೆ ವಂಚನೆ ದೂರು – ಕಾರ್ಕಳ: ರಬ್ಬರ್ ಎಸ್ಟೇಟ್‌ಗಳಲ್ಲಿ ಶಂಕಿತ ಬಾಂಗ್ಲಾದೇಶಿಗರು?! NAMMUR EXPRESS NEWS ಕುಂದಾಪುರ: ನಗರದ ಹಂಗಳೂರು ಬ್ರಹ್ಮ ದೇವಸ್ಥಾನ ರಸ್ತೆಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಸಹಿತ ಪರಾರಿಯಾದ ಘಟನೆ ಅ. 24 ಮಧ್ಯಾಹ್ನ ನಡೆದಿದೆ. ಇಲ್ಲಿನ ನಿವಾಸಿ ಜಗದೀಶ್ ಚಂದ್ರ ನಾಯರ್ ಎಂಬುವವರ ಮನೆಯಲ್ಲಿ ಕಳವು ನಡೆದಿದೆ. ಜಗದೀಶ್ ರಾವ್ ಅವರು ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಿ ತಮ್ಮ ಕೆಲಸಕ್ಕೆ ತೆರಳಿದ್ದರು. ಸುಮಾರು 4 ಗಂಟೆಗೆ ಜಗದೀಶ್ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಗಲಲ್ಲಿಯೇ ಕಳ್ಳತನ ನಡೆದ ಬಗ್ಗೆ ಸುತ್ತಲಿನ ಜನರು…