Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

– ಉಡುಪಿ: ಮಂಗಳಮುಖಿಯರ ಕಾಟ ಹೆಚ್ಚಾಯ್ತು!
– 30ಕ್ಕೂ ಅಧಿಕ ಪೊಲೀಸರ ರಾತ್ರಿ ಪಾಳಿ ರೌಂಡ್ಸ್
– ಮಂಗಳೂರು: 1995ರ ಕೊಲೆ, 30 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ.!
– ಮಂಗಳೂರು: 1 ಲಕ್ಷ ನೋಟು,2 ಪ್ಲಾಟ್ ತೋರಿಸಿ, ಯುವತಿಗೆ ಲೈಂಗಿಕ ಕಿರುಕುಳ

NAMMUR EXPRESS NEWS
ಉಡುಪಿ: ಮಂಗಳಮುಖಿಯರ ಉಪಟಳ ಕುರಿತು ಸಾರ್ವಜನಿಕರ ದೂರು ನೀಡಿದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ರಾತ್ರೋರಾತ್ರಿ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು. ಮಹಿಳಾ ಸಿಬ್ಬಂದಿ ಸಹಿತ ಉಡುಪಿ ನಗರ ಠಾಣೆಯ 30ಕ್ಕೂ ಅಧಿಕ ಪೊಲೀಸರು ನೈಟ್ ರೌಂಡ್ಸ್ ನಡೆಸಿದರು. ನಗರದ ಬಸ್ ನಿಲ್ದಾಣ ಸುತ್ತಮುತ್ತ, ಕೆಎಸ್ ಆರ್ ಟಿಸಿ, ಸಿಟಿ ಬಸ್, ಸರ್ವೀಸ್ ಬಸ್ ನಿಲ್ದಾಣ ಬಳಿ ಕಾರ್ಯಾಚರಣೆ ನಡೆಸಿದರು. ಪೊಲೀಸರ ಲಾಠಿ, ಬೂಟು ಸದ್ದು ಕೇಳುತ್ತಲೇ ಬಸ್ ನಿಲ್ದಾಣದಲ್ಲಿ ಮಲಗಿದ್ದವರು ದಿಕ್ಕಾಪಾಲಾಗಿ ಓಡಿದರು. ಲಾಠಿ ಹಿಡಿದು ಗಸ್ತು ಆರಂಭಿಸಿದ ಪೊಲೀಸರನ್ನು ಕಂಡು ಸಾರ್ವಜನಿಕರು ಶಾಕ್ ಗೆ ಒಳಗಾದರು.

* ಮಂಗಳೂರು: 1995ರ ಕೊಲೆ, 30 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ.!

ಮಂಗಳೂರು : ಸುಮಾರು 30 ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್ ಪಿಎಲ್ ಬಳಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸತತ ಕಾರ್ಯಾಚರಣೆ ಬಳಿಕ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಕೊಟ್ಟಾರಕ್ಕರ ಕೊಲ್ಲಂ, ಕೈತಕೋಡ್ ನ ಕುರುವ ಮೂಲ ಹೌಸ್ ನಿವಾಸಿ ಜೋಸ್ ಕುಟ್ಟಿ ಪಾಪಚ್ಚನ್(55) ಎಂದು ಗುರುತಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದಲ್ಲಿ ಎಂಆರ್ ಪಿಎಲ್ ಟೌನ್ ಶಿಪ್ ಸೈಟ್ ಪರಿಸರದಲ್ಲಿ 1995ರ ಮಾರ್ಚ್ 12ರಂದು ರಾತ್ರಿ 10:30 ಗಂಟೆ ಸುಮಾರಿಗೆ ಈ ಸೈಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ನಾರಾಯಣ ಅವರ ಜೊತೆ 2 ಮಂದಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ನಾರಾಯಣ ಅವರು ಕೊಲೆಯಾಗಿದ್ದರು.

* ಮಂಗಳೂರು: 1 ಲಕ್ಷ ನೋಟು,2 ಪ್ಲಾಟ್ ತೋರಿಸಿ, ಯುವತಿಗೆ ಲೈಂಗಿಕ ಕಿರುಕುಳ!

ಮಂಗಳೂರು: ರಿಯಲ್ ಎಸ್ಟೆಟ್ ಉದ್ಯಮಿಯೋರ್ವರು ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಆರೋಪಿ ವಿರುದ್ದ ಸಂತ್ರಸ್ಥೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.15 ದಿನಗಳ ಹಿಂದೆ ಸ್ನೇಹಿತರ ಬಳಿ ಯುವತಿಯ ನಂಬರ್ ಪಡೆದುಕೊಂಡಿದ್ದ ರಿಯಲ್ ಎಸ್ಟೆಟ್ ಉದ್ಯಮಿ ರಶೀದ್ ಯುವತಿಗೆ ಕರೆ ಮಾಡಿ ಕುಶಾಲನಗರದ ಸೈಟ್ ಬಗ್ಗೆ ವಿವರಿಸಿ ಖರೀದಿಸಲು ತಿಳಿಸಿದ್ದ. ಯುವತಿ ಅಲ್ಲಿನ ಸ್ಥಳೀಯ ನಿವಾಸಿ ಆದ ಕಾರಣ ಜಾಗ ಖರೀದಿಸಲು ಒಲವು ತೋರಿದ್ದರು. ಉದ್ಯಮಿ ಜಾಗ ನೋಡಲು ನನ್ನ ಕಾರಿನಲ್ಲೇ ಬಾ ನಾನೇ ನಿನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದಾಗ ಯುವತಿ ಒಪ್ಪಿಕೊಂಡಿದ್ದರು. ಕಾರಿನಲ್ಲಿ ಸೈಟ್ ನೋಡಲು ತೆರಳಿದಾಗ ದಾರಿ ಮಧ್ಯೆ ಕಾರು ನಿಲ್ಲಿಸಿ 1 ಲಕ್ಷ ನೋಟಿನ ಕಟ್ಟು ತೋರಿಸಿ ನನಗೆ ನೀನು ಬೇಕು, ನೀನು ನನ್ನ ಜೊತೆ ಸಹಕರಿಸಿದರೆ ಈ ಹಣ ನೀಡುತ್ತೇನೆ ಎಂದಾಗ ಯುವತಿ ವಿರೋಧಿಸಿದ್ದಾಳೆ.

ಬಳಿಕವೂ ನೀನು ಸಹಕರಿಸಿದರೆ ಕುಶಾಲನಗರ ದಲ್ಲಿ ಇರುವ ತನ್ನ 2 ಪ್ಲಾಟ್ ಗಳನ್ನು ನಿನ್ನ ಹೆಸರಿಗೆ ಬರೆಯುತ್ತೆನೆ ಎಂದು ಆಫರ್ ಮೇಲೆ ಆಫರ್ ಕೊಟ್ಟು ಯುವತಿಯ ಎದೆ, ಮೈಮೇಲೆ ಕೈ ಹಾಕಿದ್ದಾನೆ. ಇದಕ್ಕೆ ಆತಂಕಗೊಂಡ ಯುವತಿ ಬೊಬ್ಬೆ ಹಾಕಿ ಕಾರಿನಿಂದ ಇಳಿದು ತಪ್ಪಿಕೊಂಡಿದ್ದಾಳೆ. ಬಳಿಕ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿರುವ ಬಗ್ಗೆ ರಶೀದ್ ವಿರುದ್ಧ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.