ಚಿತ್ರದುರ್ಗ ಟಾಪ್ ನ್ಯೂಸ್ – ಮಳೆ ಆರ್ಭಟ,ಚಿತ್ರದುರ್ಗದಲ್ಲಿ ಜನರ ಪರದಾಟ! – ಟ್ರ್ಯಾಕ್ಟರ್ ನೀರಿನ ರಭಸಕ್ಕೆ ಸಿಲುಕಿದ ಅವಾಂತರ!! – ನಾಯಕನಹಟ್ಟಿ ಪೊಲೀಸ್ ಠಾಣೆಗೆ ನುಗ್ಗಿದ ನೀರು! – ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 48 ಮನೆ ಹಾನಿ! NAMMUR EXPRESS NEWS ಚಿತ್ರದುರ್ಗ: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ಜಲಾವೃತವಾಗಿದೆ. ನಾಯಕನಹಟ್ಟಿ ಭಾಗದಲ್ಲಿ ಸಾಕಷ್ಟು ಮಳೆಯಾಗಿದ್ದು, ಗ್ರಾಮದ ಒಳಗಿನಿಂದ ನೀರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಇಲ್ಲಿನ ದೊಡ್ಡ ಹಳ್ಳ ತುಂಬಿ ಹರಿಯುತ್ತಿದೆ. ಮೊಳಕಾಲ್ಕೂರು ತಾಲೂಕಿನಲ್ಲೂ ಸಾಕಷ್ಟು ಮಳೆಯಾಗಿದ್ದು, ಗಜ್ಜುಗಾನಹಳ್ಳಿ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಹಳ್ಳದಂತೆ ಭಾಸವಾಗುತ್ತಿದೆ. ಸೈಜುಗಲ್ಲು ತುಂಬಿದ್ದ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ಸಿಲುಕಿ ಪರದಾಡುವ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಗೆ ಸಮೀಪದ ಕೋಡಿಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ತಿಪ್ಪಯ್ಯನಕೋಟೆ ಗ್ರಾಮದ ಒಳಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. -…
Author: Nammur Express Admin
ಕರಾವಳಿ ನ್ಯೂಸ್ – ಮಂಗಳೂರು: ಹೂಡಿಕೆ ಆಮಿಷ; ಲಕ್ಷಾಂತರ ವರ್ಗಾಯಿಸಿಕೊಂಡು ವಂಚನೆ! – ಸುರತ್ಕಲ್: ಇಲಿ ಜ್ವರ ವ್ಯಕ್ತಿ ಮೃತ್ಯು! – ಮಂಗಳೂರು: ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆ NAMMUR EXPRESS NEWS ಮಂಗಳೂರು: ಜೆ.ಪಿ. ಮಾರ್ಗನ್ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ಭಾರತದಲ್ಲಿ ಹೊಸದಾಗಿ ಕಂಪೆನಿಯನ್ನು ಪ್ರಾರಂಭಿಸುತ್ತಿದ್ದು, ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ ಲಕ್ಷಾಂತರ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀತಾ ಶರ್ಮಾ ಎಂಬಾಕೆ ಜೆ.ಪಿ. ಮಾರ್ಗನ್ ಎಂಬ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ನಂಬರ್‌ಗಳಿಂದ ಕರೆ ಮಾಡಿ ಸಂಪರ್ಕಿಸಿದ್ದಾರೆ. ಕಂಪೆನಿ ಪ್ರಾರಂಭಿಸುವ ಬಗ್ಗೆ ತಿಳಿಸಿ ಲಿಂಕ್ ಕಳುಹಿಸಿ, 20 ಲಕ್ಷ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದಳು. ಅದರಂತೆ ಅ. 14ರಂದು ದೂರುದಾರರು 20 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, 1 ಷೇರಿಗೆ 240 ರೂ.ನಂತೆ 1 ಸಾವಿರ ಷೇರುಗಳನ್ನು ಖರೀದಿಸಿದ್ದಾರೆ.…
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನಕಲಿ ಆಲೂಗಡ್ಡೆ! * ಹಲವು ಮಾರುಕಟ್ಟೆಯಲ್ಲಿ ನಕಲಿ ಆಲೂಗಡ್ಡೆಗಳು ಪತ್ತೆ! * ಏನಿದು ನಕಲಿ, ಅಸಲಿ ಆಲೂಗಡ್ಡೆ! NAMMUR EXPRESS NEWS ನವದೆಹಲಿ: ನಕಲಿ ಬೆಳ್ಳುಳ್ಳಿ, ಅಕ್ಕಿ ಬಳಿಕ ಈಗ ಆಲೂಗಡ್ಡೆ ಸರದಿ. ಹೌದು. ಕಾಳ ಸಂತೆಯಲ್ಲಿ ನಕಲಿ ಆಲೂಗಡ್ಡೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ವ್ಯಾಪಾರಿಗಳು ಗ್ರಾಹಕರ ಆರೋಗ್ಯಕ್ಕಿಂತ ತಾವು ಮಾಡುವ ಹಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಲಬೆರಕೆ ಉಪ್ಪು, ಕಲಬೆರಕೆ ಕಾಳುಗಳು, ಕಲಬೆರಕೆ ಅಡುಗೆ ಎಣ್ಣೆ, ಕಲಬೆರಕೆ ಹಾಲು, ಕಲಬೆರಕೆ ಅಕ್ಕಿ, ಕಲಬೆರಕೆ ಮಾಂಸ, ಕೊನೆಗೆ ಎಳನೀರು ಕುಡಿಯುವುದು ಕೂಡ ಕಲಬೆರಕೆ. ಹೀಗೆ ಎಲ್ಲವೂ ಭ್ರಷ್ಟವಾಗುತ್ತಿದೆ. ಈ ಕ್ರಮದಲ್ಲಿ ಇತ್ತೀಚೆಗೆ ಮತ್ತೊಂದು ವಂಚನೆ ಬೆಳಕಿಗೆ ಬಂದಿದೆ. ಹೊಸ ಆಲೂಗೆಡ್ಡೆಯಲ್ಲೂ ಕಲಬೆರಕೆ ಇರುವುದು ಅಧಿಕಾರಿಗಳ ತಪಾಸಣೆಯಿಂದ ತಿಳಿದುಬಂದಿದೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಆಲೂಗಡ್ಡೆಗಳು ಪತ್ತೆಯಾಗಿವೆ. ವರ್ತಕರು ಕಳೆಗುಂದಿದ ಆಲೂಗಡ್ಡೆಗೆ ರಾಸಾಯನಿಕಗಳನ್ನು ಹಚ್ಚಿ ತಾಜಾವಾಗಿ ಕಾಣುತ್ತಾರೆ.…
ತೀರ್ಥಹಳ್ಳಿಯ ರಸ್ತೆ ಅವ್ಯವಸ್ಥೆ: ಎಲ್ಲೆಲ್ಲೂ ಹೊಂಡ ಸ್ವಾಮಿ! – ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಖ್ಯೆ,ಅಪಘಾತ ಹೆಚ್ಚಳ – ಜನಪ್ರತಿನಿಧಿಗಳು, ಅಧಿಕಾರಿಗಳು ನಿದ್ರೆಯಲ್ಲಿ: ಪಾರ್ಕಿಂಗ್ ಪರದಾಟ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರತಿ ದಿನ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ತಿಂಗಳು ಕನಿಷ್ಟ 300 ಹೊಸ ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತವೆ. ಅದರ ಜೊತೆ ತೀರ್ಥಹಳ್ಳಿ ಮೂಲಕ ಹಾದು ಹೋಗುವ ಲಘು ವಾಹನ ಹಾಗೂ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗುತ್ತಿದೆ. ಈ ನಡುವೆ ತೀರ್ಥಹಳ್ಳಿ ಪಟ್ಟಣದಲ್ಲೇ ರಸ್ತೆ ಹೊಂಡ ಗುಂಡಿ ಇದೀಗ ಜನರ ತೊಂದರೆಗೆ ಕಾರಣವಾಗಿದೆ. ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಮಾರ್ಗ, ಸೊಪ್ಪುಗುಡ್ಡೆ, ಬೆಟ್ಟಮಕ್ಕಿ ಸೇರಿದಂತೆ ಎಲ್ಲೆಡೆ ನೂರಾರು ಗುಂಡಿಗಳು ಬಲಿಗಾಗಿ ಕಾದಿವೆ. ಕೂಡಲೇ ಶಾಸಕರು, ಜನಪ್ರತಿನಿದಿಗಳು, ಇಲಾಖೆ ಅಧಿಕಾರಿಗಳು ಗಮನ ವಹಿಸಬೇಕಿದೆ. ಪ್ರಯಾಣಿಕರ ಪಾರ್ಕಿಂಗ್ ಪರದಾಟ ಹೆದ್ದಾರಿಗಳನ್ನು, ಪಟ್ಟಣದೊಳಗೆ ಹಾದು ಹೋಗುವ ರಸ್ತೆಗಳನ್ನು ಮುಂದಿನ 25-30 ವರ್ಷಗಳ ವಾಹನದಟ್ಟಣೆಗನುಗುಣವಾಗಿ ಮುಂದಾಲೋಚನೆಯೊಂದಿಗೆ ನಿರ್ಮಿಸಬೇಕು. ಆದರೆ ತೀರ್ಥಹಳ್ಳಿ ಪಟ್ಟಣದ…
ತೀರ್ಥಹಳ್ಳಿ ಕ್ರೀಡಾ ಸಾಧಕರು ! – ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಾಳೂರು ಹೈಸ್ಕೂಲ್ ವಿದ್ಯಾರ್ಥಿನಿ ಆತ್ಮಿಕಾ – ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿಸೇವಾಭಾರತಿಯ ನಹುಷ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ – ಬ್ಯಾಡ್ಮಿಂಟನ್: ತುಂಗಾ ಕಾಲೇಜಿನ ಮಹಿಳಾ ಕ್ರೀಡಾಪಟುಗಳ ಸಾಧನೆ NAMMUR EXPRESS NEWS ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಬೆಂಗಳೂರು ವಿಭಾಗದ ಪ್ರೌಢಶಾಲೆ ವಿಭಾಗದ ಬಾಲಕಿಯರ ಕಬ್ಬಡ್ಡಿ ತಂಡದಲ್ಲಿ ತೀರ್ಥಹಳ್ಳಿ ಹುಡುಗಿ ಸ್ಥಾನ ಪಡೆದಿದ್ದಾಳೆ. ರಾಜ್ಯಮಟ್ಟದಲ್ಲಿ ಆಡಿದ ಹೆಮ್ಮೆಯ ವಿದ್ಯಾರ್ಥಿನಿ ಆತ್ಮಿಕ ತೀರ್ಥಹಳ್ಳಿ ತಾಲೂಕು ಮಾಳೂರು ಪ್ರೌಢಶಾಲೆ ವಿದ್ಯಾರ್ಥಿನಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟ ಆತ್ಮಿಕ ಇವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕಾನ್ಹಳ್ಳಿ ಬಿಸಿಲು ಮನೆಯ ಅಶೋಕ್, ಅನುಸೂಯ ದಂಪತಿಗಳ ಪುತ್ರಿ ಆತ್ಮಿಕ 10ನೇ ತರಗತಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಾಳೂರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿಸೇವಾಭಾರತಿಯ ನಹುಷ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ ತೀರ್ಥಹಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಹನುಮನ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ನೀವು ಹೂಡಿಕೆ ಮಾಡಲು ಬಯಸಿದರೆ, ಎಚ್ಚರಿಕೆಯಿಂದ ಯೋಚಿಸಿದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನವಾಗಿದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಕುಟುಂಬದೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ** ವೃಷಭ ರಾಶಿ : ವೃಷಭ ರಾಶಿಯ ಜನರು ಇಂದು ತಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಸುವರ್ಣ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಪ್ರೀತಿಪಾತ್ರರ ಜೊತೆ ಎಲ್ಲೋ ಹೊರಗೆ ಹೋಗಲು ಯೋಜಿಸಲು ಇಂದು ಪರಿಪೂರ್ಣ ದಿನವಾಗಿದೆ.…
ಆವಾಸ್ ಮನೆ ಹಂಚಿಕೆ: ಶಾಸಕರ ವಿರುದ್ಧ ಉಪವಾಸ ಸತ್ಯಾಗ್ರಹ – ಅ. 23ರಂದು ಜನಸಾಮಾನ್ಯರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ – ಕಾಂಗ್ರೆಸ್ ನಾಯಕ ವಿನಾಯಕ ತುಪ್ಪದಮನೆ ಉಪವಾಸ ಸತ್ಯಾಗ್ರಹ NAMMUR EXPRESS NEWS ತೀರ್ಥಹಳ್ಳಿ: ವಸತಿ ವಂಚಿತರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರಿಂದ ಅದ ಅನ್ಯಾಯದ ವಿರುದ್ಧ 23-10-2024 ರಂದು ಹೊದಲ ಅರಳಾಪುರ ಗ್ರಾಮ ಪಂಚಾಯತ್ ಕಛೇರಿಯ ಎದುರು ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ತುಪ್ಪದ ಮನೆ ಇವರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ.ತೀರ್ಥಹಳ್ಳಿ ತಾಲ್ಲೂಕು, ಶಾಸಕರ ಕಛೇರಿಯಿಂದ ಪತ್ರಿಕೆಗಳಲ್ಲಿ ಮನೆ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿ ಸದಸ್ಯರಾದ ವಿನಾಯಕರವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆ ಹಂಚಿಕೆ ನಿಯಮವನ್ನು ಅರಿಯಲಿ ಎಂದು ಇದೊಂದು ಕಪೋಕಲ್ಪಿತ ಹೇಳಿಕೆ ಎಂದು ಪ್ರಕಟಣೆ ಮಾಡಿರುತ್ತಾರೆ. ಇವರ ಕಛೇರಿಯ ಹೇಳಿಕೆಯು ಬಲಿಪಶುವಾಗಿತ್ತು. ವಸತಿ ಸಮಿತಿಯ ತಾಲ್ಲೂಕು ಅಧ್ಯಕ್ಷರು ಸ್ಥಳೀಯ ಶಾಸಕರೇ ಆಗಿರುತ್ತಾರೆ ಎನ್ನುವುದು ಕೂಡ ನನ್ನ ಅರಿವಿನಲ್ಲಿದೆ. ಇಲ್ಲೆಲ್ಲೂ ನನ್ನ ಸ್ವಹಿತಾಸಕ್ತಿ ಇರುವುದಿಲ್ಲ. ಈ…
ಟೆಕ್ ನ್ಯೂಸ್ – ಇನ್ಮುಂದೆ ಸಿಮ್ ನೆಟ್ವರ್ಕ್ ಇಲ್ಲದೆ ಕಾಲ್ ಹೋಗುತ್ತೆ! – ಟೆಲಿಕಾಂ ಕ್ಷೇತ್ರದಲ್ಲಿ ಬಿ.ಎಸ್.ಎನ್.ಎಲ್ ಕ್ರಾಂತಿ – ವಾಟ್ಸ್‌ಆ್ಯಪ್ 80 ಲಕ್ಷಕ್ಕೂ ಅಧಿಕ ಬ್ಯಾನ್ ಕಾರಣ ಏನು? NAMMUR EXPRESS NEWS ಬೆಂಗಳೂರು: ಬಿಎಸ್‌ಎನ್‌ಎಲ್ ಇದೀಗ ಡೈರೆಕ್ಟ್ 2 ಡಿವೈಸ್(D2D)ತಂತ್ರಜ್ಞಾನದ ಮೂಲಕ ಯಾವುದೇ ನೆಟ್ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ ಮಾಡುತ್ತಿದೆ. ವಯಾಸ್ಯಾಟ್ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಈಗಾಗಲೇ ಡಿ2ಡಿ ಪ್ರಯೋಗ ಯಶಸ್ವಿಯಾಗಿ ಮಾಡಿದೆ. ಇದೀಗ ಹಂತ ಹಂತವಾಗಿ ಡಿ2ಡಿ ಸ್ಯಾಟಲೈಟ್ ಕಮ್ಯೂನಿಕೇಶನ್ ಜಾರಿಯಾಗಲಿದೆ. ಈ ಮೂಲಕ ಭಾರತದಲ್ಲಿ ರಿಮೂಟ್ ಏರಿಯಾದಲ್ಲೂ ಕರೆ, ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ. ಟುವೇ ಮೇಸೇಜಿಂಗ್, ಎಸ್‌ಒಎಸ್ ಮೇಸೇಜಿಂಗ್ ಸೇರಿದಂತೆ ಎರಡು ಮಾದಿರಯಲ್ಲಿ ಪ್ರಯೋಗ ನಡೆಸಲಾಗಿದೆ. ಸರಿಸುಮಾರು 36,000 ಕಿಲೋಮೀಟರ್ ದೂರದಲ್ಲಿರುವ ಭೂಸ್ಥಿರ ಎಲ್ ಬ್ಯಾಂಡ್ ಉಪಗ್ರಹಗಳಿಗೆ ಸಂದೇಶ ಕಳುಹಿಸಿದ ಪ್ರಯೋಗ ಯಶಸ್ವಿಯಾಗಿದೆ. ಜಿಯೋ, ಏರ್‌ಟೆಲ್, ವಿಐ ಸೇರಿದಂತೆ…
ಕರಾವಳಿ ಟಾಪ್ ನ್ಯೂಸ್ ಪುತ್ತೂರು: ಮನೆಗೆ ಸಿಡಿಲು ಬಡಿದು ಅಪಾರ ಹಾನಿ! ಸುರತ್ಕಲ್: ವಿದ್ಯಾರ್ಥಿಯೋರ್ವ ಸಮುದ್ರ ಪಾಲು! ಕುಂದಾಪುರ: ವಿಪರೀತ ತಲೆನೋವು ಮಹಿಳೆ ಸಾವು! NAMMUR EXPRESS NEWS ಪುತ್ತೂರು: ಸುರಿದ ಮಳೆಯ ಸಂದರ್ಭ ಸಿಡಿಲು ಬಡಿದು ಮನೆಯೊಂದಕ್ಕೆ ಅ. 20ಕ್ಕೆ ಹಾನಿ ಉಂಟಾದ ಘಟನೆ ಅರಿಯಡ್ಕ ಗ್ರಾಮದ ಪಾಪೆಮಜಲು ಸಮೀಪದ ಪಾದಲಾಡಿಯಲ್ಲಿ ಸಂಭವಿಸಿದೆ. ಪಾದಲಾಡಿಯ ಶೇಖರ ಪೂಜಾರಿ ಅವರ ಮನೆಗೆ ಸಿಡಿಲು ಬಡಿದ ಕಾರಣ ಗೋಡೆ ಬಿರುಕು ಬಿಟ್ಟಿದ್ದು ಟಿವಿ, ಫ್ರಿಜ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ವಿದ್ಯುತ್ ಲೈನ್‌ಗೂ ಹಾನಿಯಾಗಿದೆ. ಅಂಗಳದಲ್ಲಿದ್ದ ಸಾಕು ನಾಯಿ ಸಿಡಿಲಾಘಾತದಲ್ಲಿ ಮೃತಪಟ್ಟಿದೆ. ಸುಮಾರು 50,000 ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಸುರತ್ಕಲ್: ವಿದ್ಯಾರ್ಥಿಯೋರ್ವ ಸಮುದ್ರ ಪಾಲು! ಸುರತ್ಕಲ್: ಮುಕ್ಕದ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾದ ಘಟನೆ ಅ. 20ಕ್ಕೆ ಸಂಜೆ ನಡೆದಿದೆ. ಶಿವಮೊಗ್ಗದ ತಿಲಕ್ (21) ಸಮುದ್ರ ಪಾಲಾದ ವಿದ್ಯಾರ್ಥಿ. ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅವರು ಸಂಜೆ…
ಆರ್.ಎಸ್.ಬಿ ಸಭಾ ಭವನ ಲೋಕಾರ್ಪಣೆಗೆ ಸಜ್ಜು! * ಅ.23ಕ್ಕೆ ತೀರ್ಥಹಳ್ಳಿ ಪುತ್ತಿಗೆ ಮಠದ ಸಮೀಪ ನೂತನ ಕಟ್ಟಡ ಉದ್ಘಾಟನೆ * ಗೋವಾ ಕೈವಲ್ಯ ಮಠಾಧೀಶರಿಂದ ಲೋಕಾರ್ಪಣೆ: ಹಣ ಸಂಗ್ರಹದಲ್ಲಿ ಸುರಭಿ ಅಶೋಕ್ ನಾಯಕ್ ವಿಶೇಷ ಸೇವೆ * ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವ್ಯವಸ್ಥಿತ ಮಂದಿರ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಲ್ಲಿ ಆರ್.ಎಸ್.ಬಿ. ಸಮುದಾಯ ರಂಜದಕಟ್ಟೆ ವಿಶ್ವೇಶ್ವರ ಕಾಮತ್ ಸ್ಮರಣಾರ್ಥ ನಿರ್ಮಿಸಿರುವ ಆರ್.ಎಸ್.ಬಿ. ಸಭಾಭವನ ಉದ್ಘಾಟನೆಗೆ ಸಜ್ಜಾಗಿದೆ. ತೀರ್ಥಹಳ್ಳಿಯ ಇತರೆ ಸಮುದಾಯಭವನಗಳಿಗೆ ಹೋಲಿಸಿದರೆ ಅತ್ಯಂತ ವಿಶಾಲ ಹಾಗೂ ಆಧುನಿಕ ಸೌಲಭ್ಯ ಹೊಂದಿರುವ ಸಮುದಾಯ ಭವನ ಎಂಬ ಖ್ಯಾತಿ ದೊರಕಲಿದೆ. ಅಲ್ಲದೆ ಈ ಸಮುದಾಯ ಭವನದ ಗಾತ್ರಕ್ಕೆ ತಕ್ಕ ಹಾಗೆ ವಿಶಾಲವಾದ ಪಾರ್ಕಿಂಗ್ ಆವರಣ ಕೂಡ ದೊರಕಲಿರುವುದರಿಂದ ಮುಂದೆ ಸಮುದಾಯ ಭವನ ಜನಪ್ರಿಯಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಅಂತಿಮ ಸಿದ್ಧತೆಗಳು ಶುರುವಾಗಿದೆ. ಆರ್.ಎಸ್.ಬಿ ಸಭಾ ಭವನದ ಲೋಕಾರ್ಪಣೆಗೆ ಸಜ್ಜು ಅ.23ಕ್ಕೆ ತೀರ್ಥಹಳ್ಳಿ ಪುತ್ತಿಗೆ ಮಠದ ಸಮೀಪ ನೂತನ…