Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಪುತ್ತೂರು: ಮನೆಗೆ ಸಿಡಿಲು ಬಡಿದು ಅಪಾರ ಹಾನಿ!
ಸುರತ್ಕಲ್‌: ವಿದ್ಯಾರ್ಥಿಯೋರ್ವ ಸಮುದ್ರ ಪಾಲು!
ಕುಂದಾಪುರ: ವಿಪರೀತ ತಲೆನೋವು ಮಹಿಳೆ ಸಾವು!

NAMMUR EXPRESS NEWS
ಪುತ್ತೂರು: ಸುರಿದ ಮಳೆಯ ಸಂದರ್ಭ ಸಿಡಿಲು ಬಡಿದು ಮನೆಯೊಂದಕ್ಕೆ ಅ. 20ಕ್ಕೆ ಹಾನಿ ಉಂಟಾದ ಘಟನೆ ಅರಿಯಡ್ಕ ಗ್ರಾಮದ ಪಾಪೆಮಜಲು ಸಮೀಪದ ಪಾದಲಾಡಿಯಲ್ಲಿ ಸಂಭವಿಸಿದೆ.
ಪಾದಲಾಡಿಯ ಶೇಖರ ಪೂಜಾರಿ ಅವರ ಮನೆಗೆ ಸಿಡಿಲು ಬಡಿದ ಕಾರಣ ಗೋಡೆ ಬಿರುಕು ಬಿಟ್ಟಿದ್ದು ಟಿವಿ, ಫ್ರಿಜ್‌ ಮತ್ತಿತರ ಎಲೆಕ್ಟ್ರಾನಿಕ್‌ ವಸ್ತುಗಳು ಸುಟ್ಟು ಹೋಗಿವೆ. ವಿದ್ಯುತ್‌ ಲೈನ್‌ಗೂ ಹಾನಿಯಾಗಿದೆ. ಅಂಗಳದಲ್ಲಿದ್ದ ಸಾಕು ನಾಯಿ ಸಿಡಿಲಾಘಾತದಲ್ಲಿ ಮೃತಪಟ್ಟಿದೆ. ಸುಮಾರು 50,000 ರೂ.ಗೂ ಅಧಿಕ ನಷ್ಟ ಸಂಭವಿಸಿದೆ.

ಸುರತ್ಕಲ್‌: ವಿದ್ಯಾರ್ಥಿಯೋರ್ವ ಸಮುದ್ರ ಪಾಲು!

ಸುರತ್ಕಲ್‌: ಮುಕ್ಕದ ಖಾಸಗಿ ಕಾಲೇಜಿನ ಇಂಜಿನಿಯರಿಂಗ್‌ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾದ ಘಟನೆ ಅ. 20ಕ್ಕೆ ಸಂಜೆ ನಡೆದಿದೆ. ಶಿವಮೊಗ್ಗದ ತಿಲಕ್‌ (21) ಸಮುದ್ರ ಪಾಲಾದ ವಿದ್ಯಾರ್ಥಿ. ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅವರು ಸಂಜೆ ವಿಹಾರಕ್ಕೆಂದು ತೆರಳಿದ್ದರು. ಇತರ ವಿದ್ಯಾರ್ಥಿಗಳ ಜತೆ ಸಮುದ್ರದಲ್ಲಿ ಈಜಾಟ ನಡೆಸುತ್ತಿದ್ದಾಗ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದು, ಸ್ಥಳೀಯರ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು.

ಕುಂದಾಪುರ: ವಿಪರೀತ ತಲೆನೋವು ಮಹಿಳೆ ಸಾವು!

ಕುಂದಾಪುರ: ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ಕಾಳಾವರ ಗ್ರಾಮದ ನಾಗರತ್ನಾ (40) ಅವರು ಸಾವನ್ನಪ್ಪಿದ ಘಟನೆ ಅ. 19ರ ತಡರಾತ್ರಿ 3 ಗಂಟೆ ಸುಮಾರಿಗೆ ಸಂಭವಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ವಾಂತಿ ಮಾಡಿಕೊಂಡಿದ್ದು, ರಾತ್ರಿ 12.30ರ ವೇಳೆಗೆ ತಲೆನೋವು ಉಲ್ಬಣಗೊಂಡಿದ್ದು, ಕೂಡಲೇ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.