ಆರ್.ಎಸ್.ಬಿ ಸಭಾ ಭವನ ಲೋಕಾರ್ಪಣೆಗೆ ಸಜ್ಜು! * ಅ.23ಕ್ಕೆ ತೀರ್ಥಹಳ್ಳಿ ಪುತ್ತಿಗೆ ಮಠದ ಸಮೀಪ ನೂತನ ಕಟ್ಟಡ ಉದ್ಘಾಟನೆ * ಗೋವಾ ಕೈವಲ್ಯ ಮಠಾಧೀಶರಿಂದ ಲೋಕಾರ್ಪಣೆ: ಹಣ ಸಂಗ್ರಹದಲ್ಲಿ ಸುರಭಿ ಅಶೋಕ್ ನಾಯಕ್ ವಿಶೇಷ ಸೇವೆ * ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವ್ಯವಸ್ಥಿತ ಮಂದಿರ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಲ್ಲಿ ಆರ್.ಎಸ್.ಬಿ. ಸಮುದಾಯ ರಂಜದಕಟ್ಟೆ ವಿಶ್ವೇಶ್ವರ ಕಾಮತ್ ಸ್ಮರಣಾರ್ಥ ನಿರ್ಮಿಸಿರುವ ಆರ್.ಎಸ್.ಬಿ. ಸಭಾಭವನ ಉದ್ಘಾಟನೆಗೆ ಸಜ್ಜಾಗಿದೆ. ತೀರ್ಥಹಳ್ಳಿಯ ಇತರೆ ಸಮುದಾಯಭವನಗಳಿಗೆ ಹೋಲಿಸಿದರೆ ಅತ್ಯಂತ ವಿಶಾಲ ಹಾಗೂ ಆಧುನಿಕ ಸೌಲಭ್ಯ ಹೊಂದಿರುವ ಸಮುದಾಯ ಭವನ ಎಂಬ ಖ್ಯಾತಿ ದೊರಕಲಿದೆ. ಅಲ್ಲದೆ ಈ ಸಮುದಾಯ ಭವನದ ಗಾತ್ರಕ್ಕೆ ತಕ್ಕ ಹಾಗೆ ವಿಶಾಲವಾದ ಪಾರ್ಕಿಂಗ್ ಆವರಣ ಕೂಡ ದೊರಕಲಿರುವುದರಿಂದ ಮುಂದೆ ಸಮುದಾಯ ಭವನ ಜನಪ್ರಿಯಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಅಂತಿಮ ಸಿದ್ಧತೆಗಳು ಶುರುವಾಗಿದೆ. ಆರ್.ಎಸ್.ಬಿ ಸಭಾ ಭವನದ ಲೋಕಾರ್ಪಣೆಗೆ ಸಜ್ಜು ಅ.23ಕ್ಕೆ ತೀರ್ಥಹಳ್ಳಿ ಪುತ್ತಿಗೆ ಮಠದ ಸಮೀಪ ನೂತನ…
Author: Nammur Express Admin
ಶಿವಮೊಗ್ಗ ಟಾಪ್ ನ್ಯೂಸ್ – ತೀರ್ಥಹಳ್ಳಿ ತುಂಗಾ ನದಿಯಲ್ಲಿ ವೃದ್ದೆ ಮೃತದೇಹ ಪತ್ತೆ! – ತೀರ್ಥಹಳ್ಳಿ: ಮುಖ್ಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ!! – ಶಿವಮೊಗ್ಗ: ಈಜಲು ಹೋಗಿ ಸಮುದ್ರಪಾಲಾದ ವಿದ್ಯಾರ್ಥಿ! NAMMUR EXPRESS NEWS ತೀರ್ಥಹಳ್ಳಿ : ತುಂಗಾ ನದಿಯಲ್ಲಿ ವೃದ್ದೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಅ. 21ರಂದು ಕುರುವಳ್ಳಿಯಲ್ಲಿ ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುರುವಳ್ಳಿಯ ಸರಸ್ವತಮ್ಮ (86 ವರ್ಷ) ಸಾವನ್ನಪ್ಪಿದ್ದ ವೃದ್ದೆ. ಕುರುವಳ್ಳಿ ಬಳಿ ಸಣ್ಣದಾದ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆದರೆ ಯಾವ ಕಾರಣಕ್ಕೆ ನದಿಗೆ ಹಾರಿದ್ದಾರೆ ಎಂಬ ಸರಿಯಾದ ಮಾಹಿತಿ ದೊರಕಿಲ್ಲ.ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ!! ತೀರ್ಥಹಳ್ಳಿ : ಮುಖ್ಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಮಲಗಿದ್ದು ಅಲ್ಲೇ ಸಾವನ್ನಪ್ಪಿದ್ದಾನೆ. ಮೃತಪಟ್ಟ ವ್ಯಕ್ತಿ ತಾಲೂಕಿನ ಹೆಗ್ಗೋಡು ನಿವಾಸಿ ಲಿಂಗಪ್ಪ ಎಂದು ತಿಳಿದು ಬಂದಿದೆ. ಮನೆಯವರಿಂದ ದೂರ ಇದ್ದ ಈತ ಬಸ್ ನಿಲ್ದಾಣದಲ್ಲಿ ಮಲಗಿರುವಾಗ…
ಅಡಿಕೆ ದರ ಎಷ್ಟಿದೆ? – ಅಡಿಕೆ ದರ ಏರಿಕೆಯೋ? ಇಳಿಕೆಯೋ? NAMMUR EXPRESS NEWS ಸರಕು:- 56019-81063 ಬೆಟ್ಟೆ:- 46109-53000-55119 ರಾಶಿ :- 42099-48300-50021 ಹೊಸ ರಾಶಿ:- 46509-46709-47259 ಗೊರಬಲು:- 18009-37099
ಶಿವಮೊಗ್ಗ ಕೃಷಿ ಮೇಳ ಸೂಪರ್: ಮಳೆ ಅಡ್ಡಿ! – ಕೃಷಿ, ಕೃಷಿ ಸಲಕರಣೆಗಳ ಅನಾವರಣ: ಸಂಗೀತದ ಝಲಕ್ – ಮಳೆ ಅಡ್ಡಿ: ಗಮನ ಸೆಳೆದ ಅಚ್ಚು ಕಟ್ಟಿನ ಆಯೋಜನೆ NAMMUR EXPRESS NEWS ಶಿವಮೊಗ್ಗ: ನವುಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಅಚ್ಚು ಕಟ್ಟಿನ ಆಯೋಜನೆ ಮಾಡಿದ್ದು ಮಳೆ ಅಡ್ಡಿ ಜನರ ಆಸಕ್ತಿಗೆ ತಣ್ಣೀರು ಎರಚಿತು. ಅ.18ರಿಂದ 21ರವರೆಗೆ ನಡೆದ ಕೃಷಿ ಮೇಳ ಮಳೆ ಅಡ್ಡಿ ನಡುವೆ ಕೃಷಿ ಶಿವಮೊಗ್ಗ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ರೈತರು, ಕೃಷಿ ಆಸಕ್ತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು ಅನಾವರಣಗೊಂಡ ಕೃಷಿ ಮಾದರಿ! ಕೃಷಿ ಕಾಲೇಜು ಆವರಣದಲ್ಲಿ ಸ್ಟಾಲ್‌ಗಳನ್ನು ನಿರ್ಮಿಸಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕೃಷಿ ಮೇಳದಲ್ಲಿ 300ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ವಿವಿಧ ಕೃಷಿ ವಿಶ್ವವಿದ್ಯಾಲಯದ ವಿಭಾಗಗಳು, ಕೃಷಿ, ತೋಟಗಾರಿಕೆ ಇಲಾಖೆಗಳ…
ರಾಜ್ಯ ರಾಜಕೀಯ ಮತ್ತೆ ಚುರುಕು! – ಬಿಜೆಪಿ ಎಂಎಲ್‌ಸಿ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ: ಸ್ವತಂತ್ರ ಸ್ಪರ್ಧೆ? – ಕರಾವಳಿಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಜೋರು – ಮಾಜಿ ಸಿಎಂ ಬೊಮ್ಮಾಯಿ ಮಗನ ವಿರುದ್ಧ ಬಿಗ್ ಬಾಸ್ ಜಗದೀಶ್? – ಕಾಂಗ್ರೆಸ್ ಪಕ್ಷದಿಂದ ನಿಲ್ತಾರಾ ಮಾಜಿ ಸಚಿವ ಯೋಗೇಶ್ವರ್? – ಮೂರು ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ಕಸರತ್ತು! NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಮೂರು ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಬಿಜೆಪಿ ಸಂಡೂರು ಹನುಮಂತು ಹಾಗೂ ಶಿಗ್ಗಾವಿ ಯಿಂದ ಭರತ್ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ಎಂಎಲ್‌ಸಿ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಫೈಟ್ ನಡುವೆ ಸಿಪಿ ಯೋಗೇಶ್ವರ್ ಬಿಜೆಪಿ ಎಂಎಲ್‌ಸಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಅದರೊಂದಿಗೆ ಚನ್ನಪಟ್ಟಣ ಅಖಾಡದಲ್ಲಿ ಅತಿದೊಡ್ಡ ಬೆಳವಣಿಗೆ ನಡೆದಿದೆ. ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ…
ಕರಾವಳಿಯಲ್ಲಿ ಇಂದು ಪರಿಷತ್ ಫೈಟ್! – ಕೋಟಾ ಶ್ರೀನಿವಾಸ್ ಪೂಜಾರಿ ಅವರಿಂದ ತೆರವಾದ ಸ್ಥಾನ – ಬಿ.ಜೆ.ಪಿ ಕಿಶೋರ್ ಬಿ.ಆರ್, ಕಾಂಗ್ರೆಸ್ ಇಂದ ರಾಜು ಪೂಜಾರಿ ಸ್ಪರ್ಧೆ NAMMUR EXPRESS NEWS ಮಂಗಳೂರು / ಉಡುಪಿ: ಕರಾವಳಿಯಲ್ಲಿ ಇಂದು ಪರಿಷತ್ ಫೈಟ್ ನಡೆಯುತ್ತಿದೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಂದ ತೆರವಾದ ಸ್ಥಾನಕ್ಕೆ ಬಿ.ಜೆ.ಪಿ ಕಿಶೋರ್ ಬಿ.ಆರ್, ಕಾಂಗ್ರೆಸ್ ಇಂದ ರಾಜು ಪೂಜಾರಿ ಸ್ಪರ್ಧೆ ಮಾಡಿದ್ದಾರೆ. ಇನ್ನು ಹಲವರು ಕಣದಲ್ಲಿದ್ದಾರೆ. ಎಲ್ಲೆಲ್ಲಿ ಎಷ್ಟು ಮತ? ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ ಅಂದರೆ 49 ಮತಗಟ್ಟೆಗಳಿವೆ. ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ ಅಂದರೆ 793 ಮತದಾರರಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ 9 ಮತಗಟ್ಟೆಗಳು ಹಾಗೂ 122 ಮತದಾರರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಡಪ್ಪಾಡಿ ಪಂಚಾಯತ್ ಹಾಗೂ ಕೊಣಾಜೆ ಪ೦ಚಾಯತ್ ಮತಗಟ್ಟೆಗಳಲ್ಲಿ ಅತಿ ಕಡಿಮೆ ಮತದಾರರು ಅಂದರೆ ತಲಾ 5 ಮತದಾರರು ಇದ್ದಾರೆ ಹಾಗೂ ಉಡುಪಿ ಜಿಲ್ಲೆಯ…
ಟಾಪ್ ನ್ಯೂಸ್ ಶಿವಮೊಗ್ಗ ತೀರ್ಥಹಳ್ಳಿ: ನದಿಗೆ ಹಾರಿ ಅಜ್ಜಿ ಆತ್ಮಹತ್ಯೆ! – ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಭಾರೀ ಬೆಂಕಿ – ಶಿವಮೊಗ್ಗ: ರಸ್ತೆಗೆ ಬಡಿದ ಸಿಡಲು: ರಸ್ತೆ ಹೊಂಡ! – ಭದ್ರಾವತಿ: ಲಾಭದ ಆಸೆಗೆ ಬಿದ್ದು 21 ಲಕ್ಷ ಕಳೆದುಕೊಂಡ ಕೃಷಿಕ – ಶಿವಮೊಗ್ಗ : ಸಕೆಂಡ್ ಹ್ಯಾಂಡ್ ಕಾರು ಶೋ ರೂಂನಿಂದ ಕಾರು ಕಳವು NAMMUR EXPRESS NEWS ತೀರ್ಥಹಳ್ಳಿ: ಮಹಿಳೆಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕು ಕಲ್ಮನೆ ಬಳಿ ನಡೆದಿದೆ. ರಾಧಮ್ಮ ಮೇಲಿನ ಕಲ್ಮನೆ (84) ಮೃತರು. ಇವರಿಗೆ ಸಾಲ ಇತ್ತು ಎನ್ನಲಾಗಿದೆ. ಮಾಗರವಳ್ಳಿ ಸೊಸೈಟಿಯಲ್ಲಿ ಸಾಲ ಹಾಗೂ ಮನೆ ದಾಖಲಾತಿ ಸಮಸ್ಯೆ ಇಂದ ಮನನೊಂದು ಅ. 16ರಂದು ಮನೆಯಿಂದ ಕಾಣೆಯಾಗಿದ್ದರು. ಅ. 20ರಂದು ಹೊಸಹಳ್ಳಿ ಗ್ರಾಮ ನಾಗಲಾಪುರ ಬಳಿ ಶವ ಪತ್ತೆಯಾಗಿದ್ದು, ನೋಡಿದವರು ಹೇಳಿದ್ದಾರೆ. ಆಗುಂಬೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಓರ್ವ ಮಗ ಇದ್ದಾರೆ. ಶಿವಮೊಗ್ಗ : ಬೈಕ್…
ವರ್ಷಕ್ಕೊಮ್ಮೆ ಹತ್ತುವ ದೇವೀರಮ್ಮ ಬೆಟ್ಟ ಹತ್ತಲು ಸಜ್ಜು! * ಕಾಫಿನಾಡಲ್ಲಿ ದೀಪಾವಳಿ ಸಂಭ್ರಮದಲ್ಲಿ ವಿಶಿಷ್ಟ ಆಚರಣೆ * ವರ್ಷಕ್ಕೊಮ್ಮೆ ಬೆಟ್ಟಹತ್ತಿ ದರ್ಶನ ಪಡೆಯೋ ಸಾವಿರಾರು ಜನ ವಿಶೇಷ ವರದಿ: ಸಚಿನ್ ಶೃಂಗೇರಿ NAMMUR EXPRESS NEWS ಚಿಕ್ಕಮಗಳೂರು: ದೀಪಾವಳಿ ಬಂತೆಂದರೆ ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಬೆಟ್ಟ ಹತ್ತಿ ದೇವಿರಮ್ಮ ದರ್ಶನ ಮಾಡೋ ತವಕ. ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ನಡೆಯುವ ಈ ಸಂಭ್ರಮದ ಧಾರ್ಮಿಕ ಕಾರ್ಯಕ್ರಮ. ಸಾವಿರಾರು ಪುರುಷ,ಮಹಿಳಾ ಭಕ್ತರು ಬೆಟ್ಟ ಹತ್ತಿ ತಾಯಿ ದೇವೀರಮ್ಮ ದರ್ಶನ ಮಾಡಿ ತಮ್ಮ ಹರಕೆ ತೀರಿಸುತ್ತಾರೆ. ಈ ಸಾಲಿನ ದಿನಾಂಕ ಘೋಷಿಸಿದ ದೇವಸ್ಥಾನ ಆಡಳಿತ ಸಮಿತಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬೆಟ್ಟದಲ್ಲಿ ನಡೆಯುವ ಧಾರ್ಮಿಕ ಪೂಜೆಗಳು,ಬೆಟ್ಟ ಹತ್ತಲು, ದೀಪೋತ್ಸವಕ್ಕೆ ಸಮಯವನ್ನು ದೇವಸ್ಥಾನದ ಆಡಳಿತ ಸಮಿತಿ ಘೋಷಿಸಿದೆ. ಬೆಟ್ಟ ಹತ್ತಿ ಬರುವ ಭಕ್ತಾಧಿಗಳಿಗೆ ಕೆಲವು ಅಗತ್ಯ ಸೂಚನೆಗಳನ್ನು ತಿಳಿಸಿದೆ. ಇದರಂತೆ ದಿನಾಂಕ 31:10:2024 ರ ಬೆಳಿಗ್ಗಿನ ಜಾವ 4 ಗಂಟೆಯಿಂದ ಮದ್ಯಾಹ್ನ 2…
ಕೊಪ್ಪ: ಮಳೆಯನ್ನು ಲೆಕ್ಕಿಸದೇ ಆರ್‌ಎಸ್‌ಎಸ್ ಪಥಸಂಚಲನ * ಆರ್‌ಎಸ್ಎಸ್‌ಗೆ 100 ವರ್ಷ ತುಂಬುತ್ತಿರುವ ಹಿನ್ನೆಲೆ ಪಥಸಂಚಲನ * ಮಳೆಯನ್ನು ಲೆಕ್ಕಿಸದೇ ಪಾಲ್ಗೊಂಡ 400ಕ್ಕೂ ಅಧಿಕ ಸ್ವಯಂಸೇವಕರು NAMMUR EXPRESS NEWS ಕೊಪ್ಪ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ಕೊಪ್ಪ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಸಲಾಯಿತು. ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನ ವಾಹಿನೀ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡ ಪಥಸಂಚಲನ ಎಸ್‌ಟಿ ರಸ್ತೆ ಮೂಲಕ ಸಾಗಿ ಮುಖ್ಯ ಬಸ್ ನಿಲ್ದಾಣ ತಲುಪಿ, ದ್ಯಾವೇಗೌಡ ವೃತ್ತದ ಮೂಲಕ ಸಾಗಿತು. ಈ ವೇಳೆ ಭಾರಿ ಮಳೆಯಾಗಿದ್ದು, ಮಳೆಯನ್ನೂ ಲೆಕ್ಕಿಸದೇ ಸ್ವಯಂಸೇವಕರು ಪಥಸಂಚಲನ ನಡೆಸಿದರು. ಪಟ್ಟಣ, ಜಯಪುರ, ಹರಿಹರಪುರ, ಕಸಬಾ ಹೋಬಳಿಯಿಂದ 400ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು. ಪಥಸಂಚಲನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಅನಿಲ್ ಶೆಣೈ, ತಾಲೂಕು ಕಾರ್ಯವಾಹ ಸಂದೇಶ್, ಪ್ರಮುಖರಾದ ಟಿ.ಕೆ ನಾರಾಯಣ್, ಅಜಿತ್ ಶೆಣೈ, ಅಸ್ತಿಕ್ ಹೆಬ್ಬಾರ್ ಸೇರಿದಂತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
ಕಾರು, ಟ್ರ್ಯಾಕ್ಟರ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು? – ಸರ್ಕಾರದ ಮಾನದಂಡ ವಿರುದ್ಧವಾಗಿ ಪಡಿತರ ಚೀಟಿ ಹೊಂದಿದ್ದರೆ ಕಠಿಣ ಕ್ರಮ – ಬಿಪಿಎಲ್ ಕಾರ್ಡ್ : ಯಾರು ಅರ್ಹರು? ಯಾರು ಅನರ್ಹರು? NAMMUR EXPRESS NEWS ಬೆಂಗಳೂರು : ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿ ಪಿ ಎಲ್ ಪಡಿತರ ಚೀಟಿ ಹೊಂದಿದ್ದಿದ್ದರೇ, ಅವುಗಳನ್ನು ಕೂಡಲೆ ತಾಲೂಕು ಕಚೇರಿಯ ಆಹಾರ ಶಾಖೆಗೆ ಹಿಂದುರುಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ವಾಪಸ್ ನೀಡದೆ ಇದ್ದರೆ ಕಾನೂನು ಕ್ರಮದ, ಜೊತೆಗೆ ದಂಡ ಸಹ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ರಾಜ್ಯ ಸರ್ಕಾರ ಅಂತ್ಯೋದಯ, ಬಿಪಿಎಲ್ ಕಾರ್ಡ್ ಪರಿಷ್ಕರಣಿಗೆ ಮುಂದಾಗಿದೆ. ಇದರ ಭಾಗವಾಗಿ ಅಕ್ರಮವಾಗಿ ಪಡಿತರ ಚೀಟಿ ಪಡೆದವರ ಅಥವಾ ಸರ್ಕಾರದ ಮಾನದಂಡಗಳ ವಿರುದ್ಧವಾಗಿ ಪಡಿತರ ಚೀಟಿ ಹೊಂದಿದವರಿಗೆ ಆಯಾ ತಾಲೂಕುಗಳಲ್ಲಿ ತಹಶಿಲ್ದಾರರು ನೋಟಿಸ್ ಜಾರಿ ಮಾಡಿದ್ದಾರೆ. ಸರ್ಕಾರ ಕಳೆದ ತಿಂಗಳು ಅನರ್ಹ ಪಡಿತರದಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. -…