Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ಶಿವಮೊಗ್ಗ ಟಾಪ್ ನ್ಯೂಸ್

– ತೀರ್ಥಹಳ್ಳಿ ತುಂಗಾ ನದಿಯಲ್ಲಿ ವೃದ್ದೆ ಮೃತದೇಹ ಪತ್ತೆ!
– ತೀರ್ಥಹಳ್ಳಿ: ಮುಖ್ಯ ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ!!
– ಶಿವಮೊಗ್ಗ: ಈಜಲು ಹೋಗಿ ಸಮುದ್ರಪಾಲಾದ ವಿದ್ಯಾರ್ಥಿ!

NAMMUR EXPRESS NEWS
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ವೃದ್ದೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಅ. 21ರಂದು ಕುರುವಳ್ಳಿಯಲ್ಲಿ ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುರುವಳ್ಳಿಯ ಸರಸ್ವತಮ್ಮ (86 ವರ್ಷ) ಸಾವನ್ನಪ್ಪಿದ್ದ ವೃದ್ದೆ. ಕುರುವಳ್ಳಿ ಬಳಿ ಸಣ್ಣದಾದ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆದರೆ ಯಾವ ಕಾರಣಕ್ಕೆ ನದಿಗೆ ಹಾರಿದ್ದಾರೆ ಎಂಬ ಸರಿಯಾದ ಮಾಹಿತಿ ದೊರಕಿಲ್ಲ.ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯ ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ!!

ತೀರ್ಥಹಳ್ಳಿ : ಮುಖ್ಯ ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಬಸ್‌ ನಿಲ್ದಾಣದ ಆವರಣದಲ್ಲಿ ಮಲಗಿದ್ದು ಅಲ್ಲೇ ಸಾವನ್ನಪ್ಪಿದ್ದಾನೆ. ಮೃತಪಟ್ಟ ವ್ಯಕ್ತಿ ತಾಲೂಕಿನ ಹೆಗ್ಗೋಡು ನಿವಾಸಿ ಲಿಂಗಪ್ಪ ಎಂದು ತಿಳಿದು ಬಂದಿದೆ. ಮನೆಯವರಿಂದ ದೂರ ಇದ್ದ ಈತ ಬಸ್‌ ನಿಲ್ದಾಣದಲ್ಲಿ ಮಲಗಿರುವಾಗ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಈಜಲು ಹೋಗಿ ಸಮುದ್ರಪಾಲಾದ ವಿದ್ಯಾರ್ಥಿ!

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಯೊಬ್ಬರ ಸಮುದ್ರಪಾಲಾದ ಬಗ್ಗೆ ವರದಿಯಾಗಿದೆ. ಸುರತ್ಕಲ್ ಸಮೀಪ ಈ ಘಟನೆ ಸಂಭವಿಸಿದೆ. ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾದ ಘಟನೆ ನಡೆದಿದೆ.ಸ್ಥಳೀಯ ಪ್ರಕಾರ, ವಿದ್ಯಾರ್ಥಿಯನ್ನು ಸಾಗರ ತಾಲೂಕಿನ ತಿಲಕ್ ಎಂದು ಗುರುತಿಸಲಾಗಿದೆ. ಆತನಿಗೆ 21 ವರ್ಷ.  ಸುರತ್ಕಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿದ್ಯಾರ್ಥಿ ಸಹಪಾಠಿಗಳ ಜೊತೆ ಸಮುದ್ರಕ್ಕೆ ತೆರಳಿದ್ದ. ಅಲ್ಲಿ ಈಜಾಡಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.