ತೀರ್ಥಹಳ್ಳಿಯಲ್ಲಿ ಲಾಡ್ಜಲ್ಲಿ ರೆಕಾರ್ಡ್ ಬುಕ್ ಕಳವು! – ಲಾಡ್ಜ್ ರಿಸೆಪ್ಷನಿಗೆ ನುಗ್ಗಿ ಕಳವು ಮಾಡಿದ ಕಳ್ಳರು – ಅನೈತಿಕ ಚಟುವಟಿಕೆಗೆ ದಾಖಲೆ ಬಳಕೆ ಸಾಧ್ಯತೆ? ಎಚ್ಚರ ಎಚ್ಚರ NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿಯ ಬಾಳೆಬೈಲ್ ಸಮೀಪದ ಲಾಡ್ಜ್ ಒಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಅಲ್ಲಿದ ದಾಖಲೆ ಹಾಗೂ ರೆಕಾರ್ಡ್ ಬುಕ್ ಗಳನ್ನು ಕಳವು ಮಾಡಿರುವಾಗ ಘಟನೆ ನಡೆದಿದೆ. ಕಳವು ಯಾಕಾಗಿದೆ ಇದರಿಂದ ಅವರಿಗೆ ಪ್ರಯೋಜನ ಏನು ಎಂಬುದು ಇದೀಗ ಕುತೂಹಲ ಮೂಡಿದ್ದು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಕೂಡ ಲಾಡ್ಜ್ ಗಳಲ್ಲಿ ದಾಖಲೆ ಬುಕ್ ಜೊತೆಗೆ ಗ್ರಾಹಕರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಉಳ್ಳಂತಹ ಮಾಹಿತಿಯ ರೆಕಾರ್ಡ್ ಬುಕ್ ಗಳನ್ನು ಕಳುವು ಮಾಡಲಾಗಿತ್ತು. ಇದೀಗ ತೀರ್ಥಹಳ್ಳಿಯಲ್ಲೂ ಕೂಡ ಈ ಹಿಂದೆ ಕಳೆದ ಎರಡು ವಾರಗಳಲ್ಲಿ ಅನೇಕ ಕಡೆ ಕಳುವು ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚಿಗೆ ಬಾಳೆ ಬೈಲ್ ಲಾಡ್ಜ್ ಒಂದಕ್ಕೆ ನುಗ್ಗಿ ಇಬ್ಬರು…
Author: Nammur Express Admin
ಅಕ್ರಮ ಗೋಸಾಗಾಟ ಸಮಯ ಪ್ರಜ್ಞೆ ಮೆರೆದ ಕಳಸ ಬಜರಂಗದಳ..!!? * ಮಲೆನಾಡಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗೋಸಾಗಾಟ * ಮಿಂಚಿನ ಕಾರ್ಯಾಚರಣೆ ನಡೆಸಿ 6 ಗೋವುಗಳ ರಕ್ಷಣೆ * ವಾಹನ ಜಪ್ತಿ,ಎಫ್‌ಐಆರ್ ದಾಖಲು NAMMUR EXPRESS NEWS ಕಳಸ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಕೆಲವು ದಿನಗಳ ಹಿಂದಷ್ಟೇ ಸಂಸೆಯಿಂದ ಸಾಗಿಸುತ್ತಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ತಡೆದು ಪೋಲೀಸರಿಗೊಪ್ಪಿಸಿದ್ದರು. ತಡರಾತ್ರಿ ತಾಲೂಕಿನ ಯಡೂರಿನಿಂದ ಗೆಂಡೆಹಳ್ಳಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬಾಳೆಹೊಳೆಯಲ್ಲಿ ಬಜರಂಗದಳ ಕಾರ್ಯಕರ್ತರು ತಡೆದು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೋಲೀಸರು ವಾಹನವನ್ನು ಜಪ್ತಿ ಮಾಡಿದ್ದು 3 ಜನರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿ 6 ಗೋವುಗಳನ್ನು ರಕ್ಷಿಸಲಾಗಿದೆ. ಕಳಸ ಭಾಗದಲ್ಲಿ ಅಕ್ರಮ ಗೋಸಾಗಾಟ ಮಿತಿಮೀರಿ ನಡೆಯುತ್ತಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆ ಕಡಿವಾಣ ಹಾಕಿ ಕಠಿಣಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ಕಳಸ ಬಜರಂಗದಳ ನೀಡಿತ್ತು. ಈ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಕಡಿವಾಣ ಹಾಕಬೇಕೆಂದು ಕಳಸ…
ತೀರ್ಥಹಳ್ಳಿಗೆ ನೂತನ ತಾತ್ಕಾಲಿಕ ತಹಶೀಲ್ದಾರ್! – ಶಿಕಾರಿಪುರದ ಗ್ರೇಡ್ ಒನ್ ತಹಶೀಲ್ದಾರ್ ರಂಜಿತ್ ಕರ್ತವ್ಯ ನಿಯೋಜನೆ – ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ತಹಶೀಲ್ದಾರ್ ಜಕ್ಕಣ್ಣಗೌಡರ್ ವಿಧಿವಶ ಹಿನ್ನೆಲೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಗೆ ನೂತನ ಹಾಗೂ ತಾತ್ಕಾಲಿಕ ತಹಶೀಲ್ದಾರ್ ಆಯ್ಕೆಯಾಗಿದ್ದಾರೆ. ಹಾಲಿ ಶಿಕಾರಿಪುರ ತಹಸೀಲ್ದಾರ್ ರಂಜಿತ್ ಅವರನ್ನು ತಾತ್ಕಾಲಿಕವಾಗಿ ಸರ್ಕಾರ ನೇಮಕ ಮಾಡಿದೆ. ಜಕ್ಕಣಗೌಡರ್ ತಹಶೀಲ್ದಾರ್, ಗ್ರೇಡ್-1 ತೀರ್ಥಹಳ್ಳಿ ತಾಲ್ಲೂಕು ಇವರು ದಿನಾಂಕ: 16.10.2024 ರಂದು ಸೇವೆಯಲ್ಲಿರುವಾಗಲೇ ಅಕಾಲಿಕ ಮರಣ ಹೊಂದಿದ್ದು, ಸದರಿಯವರ ಮರಣದಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಗ್ರೇಡ್-1 ರವರ ಹುದ್ದೆಯು ಖಾಲಿಯಾಗಿರುತ್ತದೆ. ತೀರ್ಥಹಳ್ಳಿ ತಹಶೀಲ್ದಾರ್ ಗ್ರೇಡ್ -1 ಹುದ್ದೆಯು ಅಕಾಲಿಕ ಮರಣದಿಂದ ತೆರವಾದ ಕಾರಣ ತಾಲ್ಲೂಕಿಗೆ ಸರ್ಕಾರದಿಂದ ತಹಶೀಲ್ದಾರ್ ಗ್ರೇಡ್-1 ರವರನ್ನು ನಿಯುಕ್ತಿಗೊಳಿಸುವವರೆಗೂ ಸಾರ್ವಜನಿಕ ಆಡಳಿತದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ಸರ್ಕಾರದ ಘಟನ್ನೋತ್ತರ ಮಂಜೂರಾತಿ ಷರತ್ತಿಗೊಳಪಡಿಸಿ ಶ್ರೀ ರಂಜೀತ್ ಎಸ್. ತಹಶೀಲ್ದಾರ್, ಗ್ರೇಡ್-2 ತಾಲ್ಲೂಕು ಕಛೇರಿ, ಶಿಕಾರಿಪುರ ತಾಲ್ಲೂಕು ಇವರನ್ನು ಮುಂದಿನ ಆದೇಶದವರೆಗೆ ತಹಶೀಲ್ದಾರ್,…
ಕರಾವಳಿ ಟಾಪ್ ನ್ಯೂಸ್ ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡಿದ ವಿದ್ಯಾರ್ಥಿನಿ! * ಬಂಟ್ವಾಳದ ಚಿರಣ್ಯ ಆರ್ ಪೂಜಾರಿ ಅವರ ಮಾನವೀಯ ಸೇವೆ ಉಡುಪಿ: 24ರಿಂದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ! – 2 ಸಾವಿರಕ್ಕೂ ಅಧಿಕ ವಿದ್ವಾಂಸರು ಭಾಗಿ:23 ವಿಚಾರ ಸಂಕಿರಣ NAMMUR EXPRESS NEWS ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಮಾಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಚಿರಣ್ಯ ಆರ್ ಪೂಜಾರಿ ಟೀಂ ಸೇವಾಪಥದ ಮೂಲಕ ಕ್ಯಾನ್ಸರ್ ಪೀಡಿತ ತನ್ನ ಕೇಶ ದಾನಗೈದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಚಿರಣ್ಯ ಆರ್ ಪೂಜಾರಿ ವೀರಕಂಭ ಗ್ರಾಮದ ಗಣೇಶಕೋಡಿಯ ರಾಮಚಂದ್ರ ರೇಖಾ ದಂಪತಿಗಳ ಪುತ್ರಿ ಹಿಡಿದ, ತನ್ನ ಮಗಳನ್ನು ಕೇಶದಾನಗೈಯಲು ಪ್ರೇರಣೆ ನೀಡಿದ ರಾಮಚಂದ್ರರವರು ಆತ್ಮೀಯ ಮಿತ್ರರೆಲ್ಲರ ಸಹಕಾರದೊಂದಿಗೆ ನಮ್ಮ ಶ್ರೀ ಸಾಯಿಗಣೇಶ ಸೇವಾ ಸಂಘದ ಸಾರಥಿಯಾಗಿ ಅಶಕ್ತರಿಗೆ ನೆರವು ನೀಡುತ್ತಾ ಯುವಶಕ್ತಿಪಥ, ಯುವಶಕ್ತಿ ರಕ್ತನಿಧಿಯ ಮೂಲಕ ಸಮಾಜ ಸೇವೆಗೆ ಸದಾ ಕೈ ಜೋಡಿಸುವ ನಿಷ್ಠಾವಂತ…
ತೀರ್ಥಹಳ್ಳಿ ತಾಲೂಕಿಗೂ ಕಾಡಾನೆ ಕಾಟ! – ಆಗುಂಬೆ ಭಾಗ ಆಯ್ತು ಈಗ ಮಂಡಗದ್ದೆ ಭಾಗದಲ್ಲೂ ಆನೆ ಹಾವಳಿ – ಮಂಡಗದ್ದೆ ಸಮೀಪದ ತಳಲೆ ಮೂಡ್ಲಮನೆ ಭಾಗದಲ್ಲಿ ಆನೆ ಕಾಟ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಆನೆಗಳು ಗದ್ದೆ ತೋಟ ಹಾನಿ ಮಾಡುತ್ತಿರುವ ನಡುವೆ ಇದೀಗ ಮಂಡಗದ್ದೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಮಂಡಗದ್ದೆ ಸಮೀಪದ ತಳಲೆ ಮೂಡ್ಲಮನೆ ಮುಂತಾದ ಭಾಗಗಳಲ್ಲಿ ಕಾಡಾನೆ ದಾಳಿ ನಡೆಸಿದ್ದು ಅಡಿಕೆ ತೋಟ ಹಾಗೂ ಭತ್ತದ ಗದ್ದೆಯನ್ನು ನಾಶಪಡಿಸಿದೆ. ಕಳೆದ ವರ್ಷ ಕೂಡ ಇದೇ ರೀತಿ ದಾಳಿ ನಡೆಸಿದ್ದು ರೈತರು ಅರ್ಜಿ ಕೊಟ್ಟರೂ ಯಾವುದೇ ಪರಿಹಾರ ನೀಡಿರಲಿಲ್ಲ.ಈ ವರ್ಷ ಕೂಡ ಕಾಡಾನೆ ಹಾವಳಿ ಪ್ರಾರಂಭವಾಗಿದ್ದು ಕೂಡಲೆ ಗಾಜನೂರು ಮತ್ತು ಮಂಡಗದ್ದೆ ಅರಣ್ಯ ಇಲಾಖೆ ಹಾಗೂ ರಾಜ್ಯಸರ್ಕಾರ ರೈತರಿಗೆ ಸೂಕ್ತ ರಕ್ಷಣೆ ಮತ್ತು ಬೆಳೆ ಪರಿಹಾರ ನೀಡಬೇಕೆಂದು ಮಂಡಗದ್ದೆ ಹೋಬಳಿ ಬಿಜೆಪಿ ಅಧ್ಯಕ್ಷರೂ ರೈತ ಸಹಕಾರ ಸಂಘದ ನಿರ್ದೇಶಕರಾದ ತಳಲೆ ಪ್ರಸಾದ್ ಶೆಟ್ಟಿ…
ಭಾರತದ ಕಾಫಿಗೆ ಈಗ ಅತೀ ಹೆಚ್ಚು ಬೆಲೆ! * ಕಾಫಿ ಪುಡಿ ದರ 100 ರೂ. ಜಾಸ್ತಿ ಆಯ್ತು! * ಹಾಲು ಖರೀದಿ ದರ 5 ರೂ. ಏರಿಕೆ ಸಾಧ್ಯತೆ NAMMUR EXPRESS NEWS ಬೆಂಗಳೂರು: ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೇಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದುತ್ತಿದ್ದ ರೊಬಸ್ಟಾ ಪಾರ್ಚ್‌ಮೆಂಟ್ ಈ ವರ್ಷ 50 ಕೆ.ಜಿ. ಬ್ಯಾಗ್‌ಗೆ 20,000 ರೂ. ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ. ಜಗತ್ತಿನಲ್ಲೇ ಅತಿಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಭಾರತದಲ್ಲೂ ವಾರ್ಷಿಕ ಉತ್ಪಾದನೆಯ ಗುರಿ ತಲುಪಿಲ್ಲ. ಇದರಿಂದ ಲಂಡನ್ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಇದು ಧಾರಣೆ ಏರಿಕೆಗೆ ಕಾರಣವಾಗಿದೆ. ಕಾಫಿ ಧಾರಣೆ 20,000 ರೂ.ಗೆ ತಲುಪಿರುವ ಜತೆಗೆ ಕೊರತೆಯೂ ಉಂಟಾಗಿದೆ. ಇದರಿಂದ ಬೆಂಗಳೂರಿನಲ್ಲಿ ಕಾಫಿ ಪುಡಿ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನೀವು ಆರ್ಥಿಕವಾಗಿ ಪ್ರಗತಿ ಹೊಂದುವಿರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯು ವೃತ್ತಿಪರ ಮುಂಭಾಗದಲ್ಲಿ ನಿಮಗಾಗಿ ಒಂದು ಸ್ಥಾನವನ್ನು ಮಾಡಲು ಸಹಾಯ ಮಾಡುತ್ತದೆ. ಪ್ರೇಮ ಜೀವನದಲ್ಲಿ ವಿಷಯಗಳನ್ನು ರೋಮಾಂಚನಗೊಳಿಸುವುದಕ್ಕಾಗಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಕೆಲವರು ಚಿನ್ನ ಖರೀದಿಸಲು ಯೋಚಿಸಬಹುದು. ** ವೃಷಭ ರಾಶಿ : ಇಂದು ನಿಮಗೆ ವ್ಯಾಪಾರದಲ್ಲಿ ಲಾಭವಾಗಬಹುದು. ಹಣ ಬರುವ ಸಾಧ್ಯತೆಗಳಿವೆ. ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ.. ಮಾನಸಿಕ ಸಂತೋಷವನ್ನು ಪಡೆದುಕೊಳ್ಳುವಿರಿ. ಆರೋಗ್ಯವೂ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಇಂದು,…
ಹೊಸದುರ್ಗದಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ – ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮ – ಶಾಸಕ ಗೋವಿಂದಪ್ಪ, ಎಂಎಲ್ಸಿ ನವೀನ್, ಸದ್ಗುರು ಪ್ರದೀಪ್ ಸೇರಿ ಅನೇಕ ಗಣ್ಯರು ಹಾಜರ್ NAMMUR EXPRESS NEWS ಹೊಸದುರ್ಗ: ಅದಿಕವಿ ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ರಚಿಸದೆ ಹೋಗದಿದ್ದರೆ, ಜಗತ್ತಿಗೆ ಶ್ರೀರಾಮಚಂದ್ರನ ಪರಿಚಯವಾಗುತ್ತಿರಲಿಲ್ಲ, ರಾಮನನ್ನು ನೆನೆಯುವ ಮನ್ನ, ವಾಲ್ಮೀಕಿ ಮಹರ್ಷಿಗಳನ್ನು ನೆನೆಯಬೇಕೆಂದು ಆಹಾರ ನಿಗಮದ ಅಧ್ಯಕ್ಷ, ಶಾಸಕ ಬಿ.ಪಿ. ಗೋವಿಂದಪ್ಪ ಅಭಿಮತ ವ್ಯಕ್ತಪಡಿಸಿದ್ದಾರೆ. ಹೊಸದುರ್ಗ ನಗರದ ಅಶೋಕ ರಂಗಮಂದಿರದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಹೊಸದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಂಎಲ್ಸಿ ನವೀನ್, ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಗಜೇಂದ್ರ, ತಹಸೀಲ್ದಾರ್ ತಿರುಪತಿ ಪಾಟೀಲ್, ಉದ್ಯಮಿ ಸದ್ಗುರು ಪ್ರದೀಪ್, ಮುಖಂಡರು, ರಾಜ್ಯ ನಾಯಕ ವಾಲ್ಮೀಕಿ ಮಹಾ ಸಭಾ ಯುವ ಘಟಕ ರಾಜ್ಯ ಉಪಾಧ್ಯಕ್ಷ ಬಸವರಾಜ್ ತುಂಬಿನಕೆರೆ, ಸಮಾಜ…
ಹೊಸದುರ್ಗದಲ್ಲಿ ಯಶಸ್ವಿಯಾಗಿ ನಡೆದ ವಚನಾಧಾರಿತ ನಿಜಾಚರಣೆ ಕಮ್ಮಟ – ಕರ್ನಾಟಕದ ಬೇರೆ ಬೇರೆ ಭಾಗಗಳಿಂದ 2೦೦ ಜನ ಶಿಬಿರಾರ್ಥಿಗಳು – ಸಾಣೆಹಳ್ಳಿಯ ರಂಗ ಜಂಗಮ ಪಂಡಿತರ ಶಿವಾಚಾರ್ಯ ಶ್ರೀ ಮಾತು NAMMUR EXPRESS NEWS ಹೊಸದುರ್ಗ: ನಮ್ಮ ನಡೆ ನುಡಿ ಹೇಗಿರಬೇಕೆಂಬ ಎಚ್ಚರ ಪ್ರತಿಯೊಬ್ಬ ವ್ಯಕ್ತಿಗೆ ಇರಬೇಕು. ಮಾತು ಮತ್ತು ಕ್ರಿಯೆ ಒಂದಾದಾಗ ವ್ಯಕ್ತಿಯ ವ್ಯಕ್ತಿತ್ವ ಅರಳುವುದು. ಮಾತು ಒಂದು ಕೃತಿ ಮತ್ತೊಂದು ಆದರೆ ಅವನ ಬದುಕು ಕಮರಿಹೋಗುವುದು ಎಂದು ಎಂದು ಸಾಣೆ ಹಳ್ಳಿಯ ರಂಗ ಜಂಗಮ ಪಂಡಿತರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ತಾಲೂಕಿನ ರಂಗಕಾಶಿ ಸಾಣೇಹಳ್ಳಿ ಗುರುಬಸವ ಮಹಾಮನೆಯಲ್ಲಿ ಎರಡು ದಿನಗಳ ಕಾಲ ನಡೆದ `ವಚನಾಧಾರಿತ ನಿಜಾಚರಣೆ ಕಮ್ಮಟ’ದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಲಿಂಗಾವಂತ ಧರ್ಮ ನಮ್ಮನ್ನು ಸದಾ ಎಚ್ಚರವಾಗಿರುವಂತೆ ಮಾಡುತ್ತದೆ. ಜಾಗೃತಗೊಳಿಸುತ್ತದೆ. ಲಿಂಗಾವಂತರನ್ನು ಬಹಳಷ್ಟು ಜನ ಟೀಕೆ ಮಾಡಬಹುದು. ಅದಕ್ಕೆ ಅಂಜಬೇಕಾಗಿಲ್ಲ. ಬಸವನ ಶಕ್ತಿ ನಮ್ಮ ಬೆನ್ನ ಹಿಂದೆ ಇದ್ದರೆ ಯಾರಿಗೂ ಅಂಜದೇ…
ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ!! – ನೇರವಾಗಿ ಕಡಿತಗೊಳಿಸಿ ರೈತರಿಗೆ ಯಂತ್ರ ಮಾರಾಟ, ಸಂಸ್ಥೆಯ ನಿರ್ಧಾರ! – ಹತ್ತಿರದ ವಿ ಟೆಕ್ ಶಾಖಾ ಕಚೇರಿಯನ್ನು ಭೇಟಿ ಮಾಡಿ!! – ಉಪಯೋಗವನ್ನು ಈಗಲೇ ಪಡೆಯಿರಿ! NAMMUR EXPRESS NEWS ವಿ-ಟೆಕ್ ಇಂಜಿನಿಯರ್ಸ್ ಕುಂಟವಳ್ಳಿಯ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಅನೇಕ ಯಂತ್ರೋಪಕರಣಗಳಿಗೆ ತೋಟಗಾರಿಕಾ ಇಲಾಖೆ ನೀಡುವ ಸಹಾಯಧನದ ಮೊತ್ತವನ್ನು ಯಂತ್ರದ ಮಾರಾಟ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನೇರವಾಗಿ ಕಡಿತಗೊಳಿಸಿ ಯಂತ್ರಗಳನ್ನು ರೈತರಿಗೆ ಮಾರಾಟ ಮಾಡಲು ಸಂಸ್ಥೆ ಇಚ್ಛಿಸಿದ್ದು, ಇದರ ಸದುಪಯೋಗವನ್ನು ಎಲ್ಲಾ ಅಡಿಕೆ ಬೆಳೆಗಾರರು ಪಡೆದುಕೊಳ್ಳಬೇಕೆಂದು ಸಂಸ್ಥೆ ಈ ಮೂಲಕ ನಿಮಗೆ ತಿಳಿಸಬಯಸುತ್ತದೆ. ಈ ಉಪಯೋಗವನ್ನು ಈಗಲೇ ಪಡೆಯಬಹುದು.ನಿಮ್ಮ ಹತ್ತಿರದ ವಿ ಟೆಕ್ ಶಾಖಾ ಕಚೇರಿಯನ್ನು ಭೇಟಿ ಮಾಡಿ. ತಕ್ಷಣ 8197692653, 9740537707, 8971312191,9902804602 ಸಂಪರ್ಕಿಸಿ.