Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿಗೂ ಕಾಡಾನೆ ಕಾಟ!

ತೀರ್ಥಹಳ್ಳಿ ತಾಲೂಕಿಗೂ ಕಾಡಾನೆ ಕಾಟ!
– ಆಗುಂಬೆ ಭಾಗ ಆಯ್ತು ಈಗ ಮಂಡಗದ್ದೆ ಭಾಗದಲ್ಲೂ ಆನೆ ಹಾವಳಿ
– ಮಂಡಗದ್ದೆ ಸಮೀಪದ ತಳಲೆ ಮೂಡ್ಲಮನೆ ಭಾಗದಲ್ಲಿ ಆನೆ ಕಾಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಆನೆಗಳು ಗದ್ದೆ ತೋಟ ಹಾನಿ ಮಾಡುತ್ತಿರುವ ನಡುವೆ ಇದೀಗ ಮಂಡಗದ್ದೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಮಂಡಗದ್ದೆ ಸಮೀಪದ ತಳಲೆ ಮೂಡ್ಲಮನೆ ಮುಂತಾದ ಭಾಗಗಳಲ್ಲಿ ಕಾಡಾನೆ ದಾಳಿ ನಡೆಸಿದ್ದು ಅಡಿಕೆ ತೋಟ ಹಾಗೂ ಭತ್ತದ ಗದ್ದೆಯನ್ನು ನಾಶಪಡಿಸಿದೆ.

ಕಳೆದ ವರ್ಷ ಕೂಡ ಇದೇ ರೀತಿ ದಾಳಿ ನಡೆಸಿದ್ದು ರೈತರು ಅರ್ಜಿ ಕೊಟ್ಟರೂ ಯಾವುದೇ ಪರಿಹಾರ ನೀಡಿರಲಿಲ್ಲ.ಈ ವರ್ಷ ಕೂಡ ಕಾಡಾನೆ ಹಾವಳಿ ಪ್ರಾರಂಭವಾಗಿದ್ದು ಕೂಡಲೆ ಗಾಜನೂರು ಮತ್ತು ಮಂಡಗದ್ದೆ ಅರಣ್ಯ ಇಲಾಖೆ ಹಾಗೂ ರಾಜ್ಯಸರ್ಕಾರ ರೈತರಿಗೆ ಸೂಕ್ತ ರಕ್ಷಣೆ ಮತ್ತು ಬೆಳೆ ಪರಿಹಾರ ನೀಡಬೇಕೆಂದು ಮಂಡಗದ್ದೆ ಹೋಬಳಿ ಬಿಜೆಪಿ ಅಧ್ಯಕ್ಷರೂ ರೈತ ಸಹಕಾರ ಸಂಘದ ನಿರ್ದೇಶಕರಾದ ತಳಲೆ ಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.