Author: Nammur Express Admin

ಪತ್ನಿ, ಪತ್ನಿ ಪ್ರಿಯಕರನ ದೊಣ್ಣೆಯಿಂದ ಹೊಡೆದು ಕೊಲೆ, ನಂತರ ತಾನೂ ಆತ್ಮಹತ್ಯೆ! – ಚಿತ್ರದುರ್ಗ: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ! – ಮೈಸೂರು: ಮುಡಾ ಕಚೇರಿ ಮೇಲೆ ಐಟಿ ರೇಡ್: ಸಿಎಂಗೆ ಸಂಕಷ್ಟ NAMMUR EXPRESS NEWS ಚಿತ್ರದುರ್ಗ/ ಬೆಂಗಳೂರು: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಟ್ಟಡ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಪ್ರಥಮ ಬಿಎಸ್ಸಿ ಓದುತ್ತಿದ್ದರು. ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಆಗಿದ್ದ ಚಿತ್ರಾ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆ ಪಿಎಸ್‌ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೇಮಾಳಿಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತರುಣ್‌ ಎಂಬಾತ ಪ್ರೀತಿ‌ ಮಾಡುವಂತೆ ಪ್ರೇಮಾಳಿಗೆ ಪೀಡುಸುತ್ತಿದ್ದ ಎನ್ನಲಾಗಿದೆ.…

Read More

ಮಾರ್ಚ್ ವೇಳೆಗೆ ಬೆಂಗಳೂರು ಕಂಬಳ?! * ಹಲವು ಸವಾಲು, ಜೊತೆಗೆ ಕೋಟ್ಯಾಂತರ ಖರ್ಚು * ಮೊದಲ ವರ್ಷದ ಉತ್ಸಾಹ ಈಗಿಲ್ಲ!? NAMMUR EXPRESS NEWS ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವರ್ಷ ಅದ್ದೂರಿಯಾಗಿ ನಡೆದಿದ್ದ ಕಂಬಳಕ್ಕೆ ಇನ್ನು ಯಾವುದೇ ರೀತಿಯ ಸಿದ್ಧತೆ ನಡೆದಿಲ್ಲ.ಹೀಗಾಗಿ ಮಾರ್ಚ್ ವೇಳೆಗೆ ಕಂಬಳ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕಂಬಳ ನಡೆಸುವುದು ಬಹಳ ಕಷ್ಟದ ಕೆಲಸ. ಪ್ಯಾಲೇಸ್‌ ಗ್ರೌಂಡ್‌ ಅನುಮತಿ ದೊರೆಯಬೇಕಾದರೆ 3 ತಿಂಗಳ ಮುನ್ನ ಪ್ರಕ್ರಿಯೆ ಆರಂಭಿಸಬೇಕು. ಮೈಸೂರು ಅರಮನೆ ಮತ್ತು ಸರ್ಕಾರದಿಂದ ಅನುಮತಿ ಪಡೆಯಬೇಕು. ಕರೆ ನಿರ್ಮಾಣ ಸಹಿತ ಮೂಲ ವ್ಯವಸ್ಥೆ ಕಲ್ಪಿಸಿಡಬೇಕು ಹಾಗೂ ಕೋಣಗಳನ್ನು ತುಳುನಾಡಿನಿಂದ ಬೆಂಗಳೂರಿಗೆ ಕೊಂಡೊಯ್ಯಬೇಕು. ಇಂತಹ ಹತ್ತು ಹಲವು ಸವಾಲು ಎದುರಿಸುವ ಜೊತೆಗೆ ಕೋಟ್ಯಂತರ ರೂ. ಖರ್ಚು ಮಾಡಬೇಕು. ಕಳೆದ ವರ್ಷ ಮೊದಲ ವರ್ಷದ ಕಂಬಳವೆಂಬ ನೆಲೆಗಟ್ಟಿನಲ್ಲಿ ಯಶಸ್ವಿಯಾಗಿತ್ತು., ಕಂಬಳ ಋತುವಿನ ಆರಂಭದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಯುವುದಿಲ್ಲ. ಆದರೆ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಂಬಳ ಸಮಿತಿ ಹಾಗೂ…

Read More

ರಸ್ತೆ ಪರಿಹಾರ ಹಣ ಕೊಡಿಸುವುದಾಗಿ ನಂಬಿಸಿ ನಾಪತ್ತೆ! * ನಾವಿದ್ದೇವೆ ನೀವು ಹೆದರಬೇಡಿ ಎಂದು ಇಂಜಿನಿಯರುಗಳು ನಾಪತ್ತೆ * ರೈತರಿಗೆ, ಸುಪ್ರಿಂ ಕೋರ್ಟ್ ನದೇಶದಂತೆ 4 ಪಟ್ಟು ಪರಿಹಾರ ಸಿಗಬೇಕು! * ಅರ್ಜಿಯ ಮೂಲಕ ಮುಖ್ಯ ನ್ಯಾಯಾಧೀಶರಿಗೆ ಮನವಿ * ತೀರ್ಥಹಳ್ಳಿಯಿಂದ ನೆಲ್ಲಿಸರ ಕ್ಯಾಂಪ್ ವರೆಗೂ ಚತುಷ್ಪತ ಹೈವೇ NAMMUR EXPRESS NEWS ತೀರ್ಥಹಳ್ಳಿ:ತೀರ್ಥಹಳ್ಳಿ ತಾಲ್ಲೂಕಿನ, ಭಾರತಿಪುರದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ಭೂ ಪರಿಹಾರ ಬಂದಿರುವುದಿಲ್ಲ. ಇಲ್ಲಿ ಸ್ಥಳಿಯ ಇಂಜಿನಿಯರುಗಳು ಕಂಟ್ರಾಕ್ಟರ್ ನೊಂದಿಗೆ ಶಾಮೀಲಾಗಿ, ರೈತರಿಗೆ 40% ಹಣ ನಾವು ಕಂಟ್ರಾಕ್ಟರ್ ನವರಿಂದ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿ, ರಸ್ತೆ ಅಗಲೀಕರಣ ಕೆಲಸ ಮುಗಿಸಿಯಾದ ಮೇಲೆ ಇಂಜಿನಿಯರುಗಳು ಕೈ ಎತ್ತಿದ್ದಾರೆ. ಇಂಜಿನಿಯರುಗಳು ನಾವಿದ್ದೇವೆ ನೀವು ಹೆದರಬೇಡಿ ಎಂದು ಹೇಳಿ ಈಗ ನಾಪತ್ತೆಯಾಗಿದ್ದಾರೆ. ಈಗ ಇಂಜಿನಿಯರುಗಳೊಂದಿಗೆ ಪರಿಹಾರದ ವಿಷಯ ಕೇಳಿದರೆ , ನಮಗೆ ಸಂಬಂಧ ಇಲ್ಲಾ, ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.ಈ ರೀತಿ ಸುಳ್ಳು ಹೇಳಿ ಮೋಸ ಮಾಡಿದ ಇಂಜಿನಿಯರುಗಳನ್ನು ಸರ್ಕಾರ…

Read More

ಬೆಜ್ಜವಳ್ಳಿ ಸರ್ಕಲ್ ಅವ್ಯವಸ್ಥೆ : ಇನ್ನೆಷ್ಟು ಬಲಿ ಬೇಕು..? – ಬಸ್ ಬೈಕ್ ಅಪಘಾತ: ಬಾಲಕ ಸಾವು, ಪದೇ ಪದೇ ಅಪಘಾತ – ರಸ್ತೆ ಉಬ್ಬು ನಿರ್ಮಿಸಿ ಬ್ಯಾರಿಕೇಡ್ ಅಳವಡಿಸಲು ಪಟ್ಟು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ತೀರ್ಥಹಳ್ಳಿಯ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಪ್ರಥಮ್ ಕೆ.ಯು (16) ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಇದೀಗ ಬೆಜ್ಜವಳ್ಳಿ ಸರ್ಕಲ್ ಅಲ್ಲಿ ಉಬ್ಬುಗಳನ್ನು ಹಾಕಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಪ್ರಥಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿದ್ದು ತನಿಕಲ್ ಗ್ರಾಮದ ಕೌಟುಮನೆ ಗ್ರಾಮದವರು. ಪ್ರಥಮ್ ತಂದೆ 3 ವರ್ಷಗಳ ಹಿಂದೆ ಮೃತಪಟ್ಟಿದ್ದು ತಾಯಿ ತನಿಕಲ್ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ 20 ದಿನಗಳ ಹಿಂದೆ ಬೆಂಗಳೂರಿನಿಂದ ಬೈಕ್ ಖರೀದಿಸಲಾಗಿತ್ತು. ಮಾಳೂರು ಪೊಲೀಸ್…

Read More

ತೀರ್ಥಹಳ್ಳಿ ತಹಸೀಲ್ದಾರ್ ಸಾವಿನ ಬಗ್ಗೆ ತನಿಖೆ! – ಸಂಶಯಾಸ್ಪದ ಸಾವಿನ ತನಿಖೆ ಚುರುಕು – ಮರಣೋತ್ತರ ಪರೀಕ್ಷೆ ಪೂರ್ಣ, ವರದಿ ಬಾಕಿ NAMMUR EXPRESS NEWS ಬೆಂಗಳೂರು: ತೀರ್ಥಹಳ್ಳಿ ತಹಸೀಲ್ದಾರ್‌ ಜಿ.ಬಿ. ಜಕ್ಕನಗೌಡರ್‌ (54) ಸಾವಿನ ಸಂಬಂಧ ಗುರುವಾರ ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಬಹುತೇಕ ವರದಿ ಪ್ರಕಾರ ಹೃದಯಘಾತ ಎಂದಾದರೂ ಪೊಲೀಸ್ ತನಿಖೆ ನಡೆಯುತ್ತಿದೆ. ಗಾಂಧಿನಗರದ ವೈಭವ್‌ ಲಾಡ್ಜ್‌ನ ಮೊದಲ ಮಹಡಿ ಕೊಠಡಿಯಲ್ಲಿ ಜಕ್ಕನಗೌಡರ್‌ ಮೃತದೇಹ ಬುಧವಾರ ರಾತ್ರಿ ಪತ್ತೆಯಾಗಿತ್ತು. ಮೃತ ಜಕ್ಕನಗೌಡರ್‌ ಅವರ ಪುತ್ರಿ ರಂಜಿತಾ ಅವರು ನೀಡಿರುವ ದೂರು ಆಧರಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ಹೃದಯಾಘಾತದಿಂದ ಜಕ್ಕನಗೌಡರ್‌ ಮೃತಪಟ್ಟಿರುವ ಶಂಕೆಯಿದೆ. ಜಕ್ಕನಗೌಡರ್‌ ಅವರ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಜಕ್ಕನಗೌಡರ್‌ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೂರ್ಣಗೊಳಿಸಲಾಗಿದೆ. ಜಕ್ಕನಗೌಡರ್‌ ಮೊಬೈಲ್‌ ತನಿಖೆ ಸಲುವಾಗಿ ವಶಕ್ಕೆ ಪಡೆಯಲಾಗಿದೆ. ಹಲವು ಆಯಾಮಗಳಲ್ಲಿತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷಾ…

Read More

ಶೃಂಗೇರಿ ಶ್ರೀಶಾರದೆಗೆ ತೆಪ್ಪೋತ್ಸವ ಶಾರದಾ ಶರನ್ನವರಾತ್ರಿಗೆ ತೆರೆ..!! * ಹುಣ್ಣಿಮೆಯಂದು ಶ್ರೀಶಾರದೆಗೆ ಅಭಿಷೇಕ * ಏಕನಾರೀಕಿಳ ಗಣಹೋಮ ಪೂರ್ಣಾಹುತಿ,ತೆಪ್ಪೋತ್ಸವ * ಜಗದ್ಗುರು ವಿದುಶೇಖರ ಭಾರತೀತೀರ್ಥ ಮಹಾಸ್ವಾಮಿಗಳು ಭಾಗಿ NAMMUR EXPRESS NEWS ಶೃಂಗೇರಿ: ದಸರಾ ಹುಣ್ಣಿಮೆಯಂದು ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಬೆಳಿಗ್ಗೆ ತಾಯಿ ಶಾರದೆಗೆ ಅಭೀಷೇಕ ನೆರವೇರಿದ್ದು,ನಂತರ ಮಠದ ಆವರಣದಲ್ಲಿ ನಡೆಯುತ್ತಿದ್ದ ಏಕನಾರೀಕಿಳ ಗಣಹೋಮದ ಪೂರ್ಣಾಹುತಿ ನೆರವೇರಿತು. ರಾತ್ರಿ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಸುಂರ ತೆಪ್ಪದಲ್ಲಿ ತುಂಗಾನದಿಯಲ್ಲಿ ಶಾರದೆಗೆ ತೆಪ್ಪೋತ್ಸವ ನೆರವೇರಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಶ್ರೀವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಪಾಲ್ಗೊಂಡರು. ಈ ಮೂಲಕ ಶೃಂಗೇರಿ ಶ್ರೀಶಾರದಾಶರನ್ನವರಾತ್ರಿ ತೆರೆ ಕಂಡಿತು.ನೂರಾರು ಜನ ಭಕ್ತಾಧಿಗಳು ಪಾಲ್ಗೊಂಡು ಕಣ್ತುಂಬಿಕೊಂಡರು.

Read More

ಕರಾವಳಿ ಟಾಪ್ ನ್ಯೂಸ್ – 1 ಲಕ್ಷಕ್ಕೂ ಹೆಚ್ಚು ವೇಶ್ಯೆ ಇದ್ದಾರೆ! – ಅರಣ್ಯಾಧಿಕಾರಿ ವಿವಾದಾತ್ಮಕ ಹೇಳಿಕೆಗೆ ಭಾರೀ ಖಂಡನೆ – ಬೋಟ್‌ ಮುಳುಗಿ ನಾಪತ್ತೆ, ಮೃತದೇಹ ಸಮುದ್ರದಲ್ಲಿ ಪತ್ತೆ – ಬೆಳ್ತಂಗಡಿ: ನಿಯಂತ್ರಣ ತಪ್ಪಿ ಕಾರ್ ಚರಂಡಿಗೆ ಬಿದ್ದಿತು! NAMMUR EXPRESS NEWS ಮಂಗಳೂರು : ಹಿಂದೂ ಧರ್ಮದ ಒಂದು ಸಮುದಾಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಹೆಣ್ಣು ಮಕ್ಕಳು ವೇಶ್ಯೆಯರಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತ ಸುರೇಶ್ ಎಂಬುವರ ಜೊತೆ ಅವರು ದೂರವಾಣಿ ಮುಖಾಂತರ ಮಾತನಾಡುವಾಗ ಈ ಒಂದು ಹೇಳಿಕೆ ನೀಡಿದ್ದು ಅಧಿಕಾರಿಯ ಈ ಹೇಳಿಕೆಗೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. * ಬೋಟ್‌ ಮುಳುಗಿ ನಾಪತ್ತೆ, ಮೃತದೇಹ ಸಮುದ್ರದಲ್ಲಿ ಪತ್ತೆ! ಕಾಸರಗೋಡು: ನೀಲೇಶ್ವರ ಅಳಿತಲದಲ್ಲಿ ಮೀನುಗಾರಿಕೆಯ ಬೋಟ್‌ ಮುಳುಗಿ ನಾಪತ್ತೆಯಾಗಿದ್ದ ಮುಜೀಬ್‌ ಅವರ ಮೃತದೇಹ ಪೂಂಜಾವಿ ಸಮುದ್ರದಲ್ಲಿ ಪತ್ತೆಯಾಗಿದೆ. ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌…

Read More

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು! * ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಚುನಾವಣೆ? * ಪುನಃ ಮತದಾರರ ಪಟ್ಟಿ ತಯಾರಿಸಲು ಒತ್ತಾಯ! NAMMUR EXPRESS NEWS ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು ಬಂದಿದೆ. ಹಾಲಿ ಅಧ್ಯಕ್ಷ ಷಡಾಕ್ಷರಿ ಗುಂಪಿನ ವಿರುದ್ಧ ಇದೀಗ ಮತ್ತೊಂದು ತಂಡ ಸಜ್ಜಾಗಿದೆ. ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಹೆಸರಿನಲ್ಲಿ ಸ್ಪರ್ಧೆಗೆ ಇಳಿಯಲಿದೆ. ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಸಂಘದ ಮಾಜಿ ಗೌರವಾಧ್ಯಕ್ಷ ಆರ್. ಶಿವರುದ್ರಯ್ಯ,ಪ್ರಾಥಮಿಕ ಶಿಕ್ಷಕರ ಸಂಘದ ನಾಗೇಶ್, ಚಂದ್ರಶೇಖ‌ರ್ ನುಗ್ಗಲಿ, ಪಿಯು ಶಿಕ್ಷಕರ ಸಂಘದ ನಿಂಗೇಗೌಡ, ಹೈಸ್ಕೂಲ್ ಶಿಕ್ಷಕರ ಸಂಘದ ಮಂಜುನಾಥ್ ಸೇರಿ ಹತ್ತಕ್ಕೂ ಹೆಚ್ಚು ಇಲಾಖೆಗಳ ನೌಕರರ ಸಂಘಗಳ ಪದಾಧಿಕಾರಿಗಳು ಒಂದಾಗಿದ್ದಾರೆ. ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಚುನಾವಣೆಗೆ ಮುಂದಾದ ಬಗ್ಗೆ ಗುಲ್ಬರ್ಗಾ ಹೈಕೋರ್ಟ್ ಪೀಠದಲ್ಲಿ ಹೊರ ಬಂದಿರುವ ತೀರ್ಪು ಇದೀಗ ಮಹತ್ವ ಪಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಅರ್ಹರು ಸಹ…

Read More

ಶಾರದಾ ಪೀಠದ ಜಗದ್ಗುರುಗಳ ಪ್ರವಾಸ – 40 ದಿನಗಳ ವಿಜಯ ಯಾತ್ರೆಗಾಗಿ ಶೃಂಗೇರಿಯಿಂದ ತೆರಳಿದರು – ಎಲ್ಲಾ ಕಡೆ ಪ್ರವಾಸ ಮಾಡಿ ನ. 27 ರಂದು ಶೃಂಗೇರಿಗೆ ಮರಳಲಿದ್ದಾರೆ NAMMUR EXPRESS NEWS ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ 40 ದಿನಗಳ ವಿಜಯ ಯಾತ್ರೆಗಾಗಿ ಗುರುವಾರ ಶೃಂಗೇರಿಯಿಂದ ತೆರಳಿದರು. ಜಗದ್ಗುರುಗಳು ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ವಾಸ್ತವ್ಯವಿರಲಿದ್ದಾರೆ. ಅ.18 ರಂದ ಮಧುಗಿರಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ತಮ್ಮ ಪ್ರವಾಸದಲ್ಲಿ ತಮಿಳುನಾಡು ರಾಜ್ಯ, ಮತ್ತು ಆಂಧ್ರಪ್ರದೇಶದಲ್ಲಿ ಸಂಚಾರ ನೆಡಸಿ ನ.27 ರಂದು ಶೃಂಗೇರಿಗೆ ಮರಳಲಿದ್ದಾರೆ.

Read More

ಗಗನಕ್ಕೇರುತ್ತಿದೆ ಈರುಳ್ಳಿ ದರ! – ಟೊಮೆಟೊ, ಬೆಳ್ಳುಳ್ಳಿ ಬಳಿಕ ಈಗ ಈರುಳ್ಳಿ ಏರಿಕೆ – ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರದಿಂದ ಪ್ಲಾನ್ NAMMUR EXPRESS NEWS ನವ ದೆಹಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೇರಿದಂತೆ ಹಲವು ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 85 ರೂ. ದಾಟಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಕೆಲವು ದಿನಗಳ ಹಿಂದೆ ಕೆ.ಜಿಗೆ 35 ರೂ. ದರದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದ್ದ ಕೇಂದ್ರವು, ಈಗ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ಮಹಾರಾಷ್ಟ್ರದಿಂದ 1,600 ಟನ್‌ ಈರುಳ್ಳಿ ತರಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಈರುಳ್ಳಿಯನ್ನು ತುಂಬಿಕೊಂಡು ‘ಕಾಂದಾ ಎಕ್ಸ್‌ಪ್ರೆಸ್‌’ ರೈಲು ಮಹಾರಾಷ್ಟ್ರದ ಲಾಸನ್‌ಗಾಂವ್‌ನಿಂದ ಗುರುವಾರ ಹೊರಟಿದೆ. ಈ ರೈಲು ದಿಲ್ಲಿಯ ಕಿಶನ್‌ಗಂಜ್‌ಗೆ ಅಕ್ಟೋಬರ್‌ 20ರಂದು ತಲುಪಲಿದೆ. ಮಾರುಕಟ್ಟೆಗೆ ಈರುಳ್ಳಿಯ ಹೆಚ್ಚಿನ ಹರಿವು ಬೆಲೆ ಇಳಿಕೆಗೆ ನೆರವಾಗಲಿದೆ,” ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. ಈರುಳ್ಳಿ ಬೆಳೆಯುವ ಪ್ರದೇಶಗಳಿಂದ ಮುಂದಿನ ದಿನಗಳಲ್ಲಿ ಲಖನೌ,…

Read More