ಮಳೆ, ಬಿಸಿಲಿನ ಎಫೆಕ್ಟ್: ಭತ್ತಕ್ಕೆ ಈಗ ಸಂಕಟ! – ಭತ್ತಕ್ಕೆ ಕಂದು ಜಿಗಿ ಹುಳದ ಕಾಟ: ಸಾವಿರಾರು ಹೆಕ್ಟರ್ ವ್ಯಾಪಿಸುವ ಸಾಧ್ಯತೆ – ಅಡಿಕೆ, ಕಾಫಿ ಬಳಿಕ ಈಗ ಭತ್ತಕ್ಕೂ ರೋಗ – ಮಲೆನಾಡಲ್ಲಿ ಹೆಚ್ಚಳ: ಹತೋಟಿ ಹೇಗೆ? NAMMUR EXPRESS NEWS ಮಳೆ ಮತ್ತು ಬಿಸಿಲಿನ ಕಾರಣದಿಂದ ಭತ್ತಕ್ಕೆ ಕಂದು ಜಿಗಿ ಹುಳ ಬಾದಿಸುತ್ತಿದೆ. ಒಂದಲ್ಲ ಎರಡಲ್ಲ ಸಾವಿರಾರು ಹೆಕ್ಟರ್ ಪ್ರದೇಶವನ್ನ ಕೀಟ ಆವರಿಸಿದ್ದು ಮಲೆನಾಡಿನ ಅನ್ನದಾತರು ಕಂಗಾಲಾಗಿದ್ದಾರೆ. ಪ್ರಸ್ತುತ ವರ್ಷ 63,670 ಹೆಕ್ಟರ್ ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ತೆನೆ ಗಟ್ಟಲಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಕಂದು ಜಿಗಿ ಹುಳ ತಣ್ಣೀರಚುತ್ತಿದೆ. ಈಗಾಗಲೇ ಸಾವಿರಾರು ಹೆಕ್ಟರ್ ಗೆ ವ್ಯಾಪಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ರೈತರದಾಗಿದೆ. ಸೊರಬ ತಾಲೂಕಿನಲ್ಲಿ ಗರಿಷ್ಟ 18.72 5 ಹೆಕ್ಟರ್, ಭದ್ರಾವತಿ ತಾಲೂಕಿನ ಕನಿಷ್ಠ 5.020 ಹೆಕ್ಟರ್ ನಲ್ಲಿ ಭತ್ತ ಬೆಳೆಯಲಾಗಿದೆ. ಉಳಿದಂತೆ ಸಾಗರ ತಾಲೂಕಿನಲ್ಲಿ…
Author: Nammur Express Admin
ಗೋವಾ ಬಸ್ ಡಿಕ್ಕಿ: ಬೆಜ್ಜವಳ್ಳಿಯಲ್ಲಿ ಬಾಲಕ ಬಲಿ! – ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಮುಂಜಾನೆ ಘಟನೆ – ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವು NAMMUR EXPRESS NEWS ತೀರ್ಥಹಳ್ಳಿ: ಖಾಸಗಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದರುವ ಘಟನೆ ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಪ್ರಥಮ್ ಮೃತ ವಿದ್ಯಾರ್ಥಿ. ತೀರ್ಥಹಳ್ಳಿ ತಾಲೂಕು ತನಿಕಲ್‌ನ ಪಾಂಡ್ಯ ಗ್ರಾಮದವನು. ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋವಾ ನೋಂದಣಿಯ ಬಸ್ಸು ಮಂಗಳೂರಿನಿಂದ ಸಕ್ರೆಬೈಲು ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಬೆಜ್ಜವಳ್ಳಿ ಬಳಿ ಡಿಪ್ಲೋಮಾ ವಿದ್ಯಾರ್ಥಿ ಪ್ರಥಮ್ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪ್ರಥಮ್‌ನನ್ನು ಕೂಡಲೆ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ತೀರ್ಥಹಳ್ಳಿ ಮಾರ್ಗದಲ್ಲಿ ಬಸ್ ಸೇರಿದಂತೆ ವಾಹನಗಳ ಅತಿಯಾದ ವೇಗ ಹಲವರ ಬಲಿ ಪಡೆದಿದೆ.
ಕರಾವಳಿ ನ್ಯೂಸ್ – ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ! – ಉಡುಪಿ:ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ – ಪುತ್ತೂರು:ಅಪರಿಚಿತರ ತಂಡ ಯುವಕನ ಮೇಲೆ ಹಲ್ಲೆ NAMMUR EXPRESS NEWS ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಅತ್ರಾಡಿ ಗ್ರಾಮದ ಬಾಳು (89) ಅವರು ಅ. 15ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆಯವರು ಪರೀಕ ಪರಿಸರದ ಸುವರ್ಣ ನದಿ ಸೇತುವೆಯ ಬಳಿ ಹುಡುಕಾಟ ನಡೆಸಿದಾಗ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಯಾರೋ ವ್ಯಕ್ತಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದರು. ಅ. 16ರಂದು ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಅ. 17ರಂದು ತಿಮ್ಮಣ್ಣಕುದ್ರು ಹ್ಯಾಂಗಿಂಗ್ ಬ್ರಿಡ್ಜ್ ನದಿಯ ಬಳಿ ಬಾಳು ಅವರ ಮೃತದೇಹ ಪತ್ತೆಯಾಗಿದೆ. ಬಾಳು ಅವರು ಮಕ್ಕಳಿಲ್ಲದ ಕೊರಗಿನಿಂದ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲ್ಪೆ ಠಾಣೆಯಲ್ಲಿ ನೀಡಿದ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ** ವೃಷಭ ರಾಶಿ : ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಜೀವನ ಅಸ್ತವ್ಯಸ್ತವಾಗಲು ಬಿಡಬೇಡಿ.…
ನಯನಾ ಜೆ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ! – ದೆಹಲಿಯಲ್ಲಿ ಗ್ಲೋಬಲ್ ವುಮನ್ ಇನ್ಸ್ಪಿರೇಶನ್ ಅವಾರ್ಡ್ ಅಂಡ್ 2024 ಸ್ವೀಕಾರ – ಮಹಿಳಾ ಸಂಘಟನೆ, ಸಮಾಜ ಪರ ಚಟುವಟಿಕೆಗೆ ಸಂದ ಮನ್ನಣೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಮಹಿಳಾ ಮುಖಂಡರು, ಮಾಜಿ ಪಟ್ಟಣ ಪಂಚಾಯತ್ ಸದಸ್ಯರು, ಮಹಿಳಾ ವೇದಿಕೆ ಅಧ್ಯಕ್ಷರು ಆದ ಸಮಾಜ ಮುಖಿ ಚಿಂತನೆಯ ನಯನಾ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಗ್ಲೋಬಲ್ ವುಮನ್ ಇನ್ಸ್ಪಿರೇಶನ್ ಅವಾರ್ಡ್ 2024 ಲಭಿಸಿದೆ. ತೀರ್ಥಹಳ್ಳಿಯ ಪ್ರಸಿದ್ಧ ವಸ್ತ್ರ ಮಳಿಗೆಗಳಲ್ಲಿ ಒಂದಾದ ಸಹನಾ ಫ್ಯಾಶನ್ ಸಿಲ್ಕ್ ಮಾಲಕಿ ಹಾಗೂ ಸಂಘಟಕಿ ನಯನಾ ಜೆ ಶೆಟ್ಟಿ ಅವರು ಅ.17ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ತೀರ್ಥಹಳ್ಳಿ ಮಾತ್ರವಲ್ಲದೆ ಮಲೆನಾಡಿನಲ್ಲಿ ಮಹಿಳೆಯರ ಸಂಘಟನೆ ಮಾಡುವ ಜೊತೆಗೆ ಮಹಿಳೆಯರ ಕಷ್ಟ ಸುಖಗಳಿಗೆ ಸ್ಪಂದಿಸುವ ನಯನ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ನೂರಾರು ಮಹಿಳೆಯರಿಗೆ ವೇದಿಕೆ ನೀಡಿದ್ದಾರೆ.…
ಅಡಿಕೆ ಸುಲಿಯುವ ಯಂತ್ರ ಸೇರಿ ರೈತರ ಕೆಲಸಕ್ಕೆ ಒಡನಾಡಿ ವಿ ಟೆಕ್ – ಯಂತ್ರೋಪಕರಣಗಳಿಗೆ ತೋಟಗಾರಿಕಾ ಇಲಾಖೆ ನೀಡುವ ಸಹಾಯಧನ – ಸಹಾಯಧನದ ಮೊತ್ತವನ್ನು ಯಂತ್ರದ ಮಾರಾಟ ಬೆಲೆಯಲ್ಲಿ ನೇರವಾಗಿ ಕಡಿತ – ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ರೈತರಿಗೆ ಸಿಹಿ ಸುದ್ದಿ! NAMMUR EXPRESS NEWS ವೃತ್ತಿಯಲ್ಲಿ ಕೃಷಿಕರಾಗಿ, ಆರ್ಥಿಕತೆಯಲ್ಲಿ ದೇಶದ ಬೆನ್ನೆಲುಬಾಗಿರುವ ರೈತರಿಗೆ ವಿ-ಟೆಕ್ ಎಂಜಿನಿಯರ್ಸ್ ಸಂಸ್ಥೆ ಇದೀಗ ಜೀವನಾಡಿಯಾಗಿದೆ.ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ರೈತಾಪಿ ವರ್ಗಕ್ಕೆ ನೆಮ್ಮದಿಯಿಂದ ಕೃಷಿ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುವವರ ಪರಿಸ್ಥಿತಿಯಂತೂ ಶೋಚನೀಯ. ವಿಶೇಷವಾಗಿ ಕಳೆದ ವರ್ಷದಿಂದ ಈಚೆಗೆ ಅಡಿಕೆ ಬೆಳೆಗಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಾರಂಭದಲ್ಲಿ ಅಡಿಕೆ ಕ್ಷೇತ್ರದಲ್ಲಿ ಬೆಳೆಗಾರರು ಅನುಭವಿಸುತ್ತಿದ್ದ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಮನಗಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ದೃಷ್ಟಿಯಲ್ಲಿ, ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಮಾರುಕಟ್ಟೆಗೆ ಮೊಟ್ಟ ಮೊದಲು ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ಕಂಡುಹಿಡಿದು-ಮಾರುಕಟ್ಟೆಗೆ ಪರಿಚಯಿಸಿದ ಸಂಸ್ಥೆ ವಿ ಟೆಕ್ ಇಂಜಿನಿಯರ್ಸ್. ಸಂಸ್ಥೆ,…
ತೀರ್ಥಹಳ್ಳಿಯಲ್ಲಿ ನೂತನವಾಗಿ ರಾಯಲ್ ಕನ್ಸಲ್ಟಿಂಗ್ ಆರಂಭ – ಸೆಕೆಂಡ್ ಹ್ಯಾಂಡ್ ಬೈಕ್, ಕಾರು ಖರೀದಿ ಮತ್ತು ಮಾರಾಟ – ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ರಸ್ತೆಯಲ್ಲಿ ಉದ್ಘಾಟನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಾವೀದ್ ಮಾಲೀಕತ್ವದ ರಾಯಲ್ ಕನ್ಸಲ್ಟಿಂಗ್ ಸಂಸ್ಥೆ ಶುರುವಾಗಿದೆ.ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮತ್ತು ಮಾರಾಟದ ಶೋ ರೂಂ ಗುರುವಾರ ಉದ್ಘಾಟನೆಗೊಂಡಿದೆ. ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಹಮ್ಮದ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶಬ್ನಮ್, ರತ್ನಾಕರ್ ಶೆಟ್ಟಿ, ಯುವ ಮುಖಂಡರಾದ ರಾಘವೇಂದ್ರ ಶೆಟ್ಟಿ, ಶ್ರೀಕಾಂತ್ ಬೆಟ್ಟಮಕ್ಕಿ, ಆಸೀಫ್, ಸುದೀಪ್ ಶೆಟ್ಟಿ, ಸುಮಂತ್ ಚಿಂಚಿ, ವಿಶ್ವನಾಥ್ ಶೆಟ್ಟಿ ತಾರಾನಾಥ್ ಶೆಟ್ಟಿ, ಪ್ರಶೋದ್ ಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದು ಶುಭ ಕೋರಿದರು. ರಾಯಲ್ ಕನ್ಸಲ್ಟಿಂಗ್ ಸಂಸ್ಥೆಯ ಜಾವಿದ್ ಅವರು ಕಳೆದ 13 ವರ್ಷಗಳಿಂದ ವಾಹನ ಮಾರಾಟ ಸೇವೆಯಲ್ಲಿ ತಮ್ಮದೇ…
ಚಿತ್ರದುರ್ಗ ಟಾಪ್ ನ್ಯೂಸ್ ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಾಲಕ ಬಲಿ! – ಬೈಕ್,ಸರ್ಕಾರಿ ಬಸ್ ನಡುವೆ ಅಪಘಾತ, ಬೈಕ್ ಸವಾರ ಸಾವು – ಮನೆಯ ಗೋಡೆ ಕುಸಿದು, ವೃದ್ದೆ ದುರ್ಮರಣ NAMMUR EXPRESS NEWS ಚಿತ್ರದುರ್ಗ: ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದ್ದು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಚಿತ್ರದುರ್ಗದಲ್ಲಿ ಓರ್ವ ಬಾಲಕ ನಾಯಿ ಕಡಿತದಿಂದ ಮೃತಪಟ್ಟಿದ್ದಾನೆ. ಐದಾರು ಬೀದಿ ನಾಯಿಗಳು ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಎಳೆಯ ಹುಡುಗನ ಮೇಲೆ ಏಕಾಏಕಿ ಮುಗಿಬಿದ್ದಿದ್ದು, ನಾಯಿ ಕಡಿತದಿಂದ ಪುಟ್ಟ ಕಂದ ಕೊನೆಯುಸಿರೆಳೆದಿದ್ದಾನೆ. ಕೋಚಿಂಗ್ ಸೆಂಟರ್‌ಗೆ ಹೋಗಿ ಸೈಕಲ್‌ನಲ್ಲಿ ಮನೆಗೆ ವಾಪಾಸು ಬರುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ತಕ್ಷಣ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಹೋದರೂ, ಚಿಕಿತ್ಸೆ ಫಲಿಸದೆ ಬಾಲಕ ಮಿಥುನ್ ಕಾಣಿಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ರಾಮ್ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಹೊಸಕೋಟೆ ಭೇಟಿ ನೀಡಿ…
ಭಾಗ್ಯಲಕ್ಷ್ಮೀ ಬಾಂಡ್ ಹಣ ಪಡೆಯೋದು ಸುಲಭ ಅಲ್ಲ! – ಪುನಃ ದಾಖಲೆ ಸಲ್ಲಿಸಬೇಕಿದೆ: ಬಡ ಕುಟುಂಬಗಳಿಗೆ ಪರದಾಟ – ಏನಿದು ಯೋಜನೆ… ಎಷ್ಟು ಹಣ ಸಿಗುತ್ತೆ..? NAMMUR EXPRESS NEWS ಬೆಂಗಳೂರು: ಬಡ ಕುಟುಂಬಗಳ ಹೆಣ್ಣುಮಕ್ಕಳು ವಯಸ್ಕರಾದ ನಂತರ ಅವರಿಗೆ ಆರ್ಥಿಕ ನೆರವು ದೊರಕುವಂತೆ ಮಾಡುವ ಉದ್ದೇಶದಿಂದ ರೂಪಿಸಲಾದ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯ ಹಣ ಪಡೆಯುವುದು ಸಾಹಸದ ಕೆಲಸವಾಗಿದೆ. ಬಾಂಡ್‌ಗೆ ಅರ್ಜಿ ಸಲ್ಲಿಸುವಾಗ ದಾಖಲೆಗಳನ್ನು ನೀಡಿದ್ದರೂ, ಅದರ ಹಣ ಪಡೆಯಲು ಮತ್ತೆ ದಾಖಲೆಗಳನ್ನು ಒದಗಿಸಬೇಕಾಗಿದೆ. ಇದು ಬಡ ಕುಟುಂಬಗಳ ಸಂಕಷ್ಟ ಹೆಚ್ಚಿಸಿದೆ. ಬಡ ಕುಟುಂಬದ ಹೆಣ್ಣು ಮಗು ವಯಸ್ಕಳಾದ ನಂತರ ಸರಕಾರದ ಭಾಗ್ಯಲಕ್ಷ್ಮೀ ಯೋಜನೆಯಡಿ ಆರ್ಥಿಕ ನೆರವು ಪಡೆಯುವುದು ಈಗ ಅಷ್ಟು ಸುಲಭವಲ್ಲ. ಷರತ್ತಿನ ದಾಖಲೆಗಳನ್ನು ಸರಕಾರಕ್ಕೆ ಪೂರ್ಣ ಸಲ್ಲಿಸಿದರೆ ಮಾತ್ರ ನಿಗದಿತ ಬಾಂಡ್ ಮೊತ್ತ ಪಡೆಯಲು ಅವಕಾಶ ಇದೆ. ಬಡ ಕುಟುಂಬದ ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡಿ ವಯಸ್ಕ ಅವಧಿಯಲ್ಲಿ ಸ್ವಾವಲಂಬಿ ಜೀವನ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ…
ಗಾಯತ್ರಿ ಜ್ಯುವೆಲ್ಲರ್ಸ್ ನೂತನ ಚಿನ್ನಾಭರಣಗಳ ಮಳಿಗೆ ಆರಂಭ – ಸಾವಿರಾರು ಜನರಿಂದ ಚಿನ್ನ ಖರೀದಿ: ಇಡೀ ದಿನ ಜನವೋ ಜನ – ಹೊರನಾಡು ಧರ್ಮಕರ್ತ ಭೀಮೇಶ್ವರ ಜೋಶಿ ದಂಪತಿಗಳಿಂದ ಉದ್ಘಾಟನೆ – ಸರ್ವರಿಗೂ ಧನ್ಯವಾದ ಹೇಳಿದ ಮಾಲೀಕ ಅನಂತ ಪದ್ಮನಾಭ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್ ನೂತನ ಚಿನ್ನಾಭರಣ ಮಳಿಗೆಯ ಉದ್ಘಾಟನೆ ಅತ್ಯಂತ ಅದ್ದೂರಿಯಾಗಿ ಗುರುವಾರ ನಡೆಯಿತು. ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕ ದಲ್ಲಿರುವ ಅಲಂಕಾರ್ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಮತ್ತು ಶ್ರೀಮತಿ ರಾಜೇಶ್ವರಿ ಜೋಶಿಯವರ ಅಮೃತ ಹಸ್ತದಿಂದ ನೆರವೇರಿತು. ಮಾಲೀಕ ಅನಂತ ಪದ್ಮನಾಭ ಮಾತನಾಡಿ, ಗ್ರಾಹಕರ ಅಪೇಕ್ಷೆ ಮೇರೆಗೆ ಗುಣಮಟ್ಟದ ಚಿನ್ನವನ್ನು ಗ್ರಾಹಕರಿಗೆ ಕೊಡುವ ಉದ್ದೇಶದಿಂದ ನೂತನ ಚಿನ್ನಾಭರಣ ಮಳಿಗೆ ಶುರುಮಾಡಲಾಗಿದೆ. ಸೇವೆಯೇ ನಮ್ಮ ಧ್ಯೇಯ. ಕಳೆದ 28 ವರ್ಷದಿಂದ ತೀರ್ಥಹಳ್ಳಿಯ ಜನರ ಸಹಕಾರದಿಂದ ಹೊಸ ಮಳಿಗೆ ಶುರುವಾಗಿದೆ ಎಂದರು. ಹೊರನಾಡು ಭೀಮೇಶ್ವರ…