Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನೂತನವಾಗಿ ರಾಯಲ್ ಕನ್ಸಲ್ಟಿಂಗ್ ಆರಂಭ

ತೀರ್ಥಹಳ್ಳಿಯಲ್ಲಿ ನೂತನವಾಗಿ ರಾಯಲ್ ಕನ್ಸಲ್ಟಿಂಗ್ ಆರಂಭ
– ಸೆಕೆಂಡ್ ಹ್ಯಾಂಡ್ ಬೈಕ್, ಕಾರು ಖರೀದಿ ಮತ್ತು ಮಾರಾಟ
– ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ರಸ್ತೆಯಲ್ಲಿ ಉದ್ಘಾಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಾವೀದ್ ಮಾಲೀಕತ್ವದ ರಾಯಲ್ ಕನ್ಸಲ್ಟಿಂಗ್ ಸಂಸ್ಥೆ ಶುರುವಾಗಿದೆ.ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮತ್ತು ಮಾರಾಟದ ಶೋ ರೂಂ ಗುರುವಾರ ಉದ್ಘಾಟನೆಗೊಂಡಿದೆ. ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಹಮ್ಮದ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶಬ್ನಮ್, ರತ್ನಾಕರ್ ಶೆಟ್ಟಿ, ಯುವ ಮುಖಂಡರಾದ ರಾಘವೇಂದ್ರ ಶೆಟ್ಟಿ, ಶ್ರೀಕಾಂತ್ ಬೆಟ್ಟಮಕ್ಕಿ, ಆಸೀಫ್, ಸುದೀಪ್ ಶೆಟ್ಟಿ, ಸುಮಂತ್ ಚಿಂಚಿ, ವಿಶ್ವನಾಥ್ ಶೆಟ್ಟಿ ತಾರಾನಾಥ್ ಶೆಟ್ಟಿ, ಪ್ರಶೋದ್ ಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದು ಶುಭ ಕೋರಿದರು.

ರಾಯಲ್ ಕನ್ಸಲ್ಟಿಂಗ್ ಸಂಸ್ಥೆಯ ಜಾವಿದ್ ಅವರು ಕಳೆದ 13 ವರ್ಷಗಳಿಂದ ವಾಹನ ಮಾರಾಟ ಸೇವೆಯಲ್ಲಿ ತಮ್ಮದೇ ಗ್ರಾಹಕರನ್ನು ಹೊಂದಿದ್ದು ಉತ್ತಮ ಸೇವೆ ನೀಡುತ್ತಿದ್ದು ಇದೀಗ ಹೊಸ ಉದ್ಯಮ ಶುರು ಮಾಡಿದ್ದು ಅವರಿಗೆ ಸ್ನೇಹಿತರು ಶುಭಾಶಯ ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.