ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾಲಕ್ಷ್ಮಿ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರ ಜೀವನದಲ್ಲಿ ಸಂತಸದ ವಾತಾವರಣವಿರುತ್ತದೆ. ಆದರೂ, ಇಂದು ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕಠಿಣ ಪರಿಶ್ರಮವು ಉದ್ಯೋಗ ಮತ್ತು ವ್ಯವಹಾರದಲ್ಲಿ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಿಗಳ ಬಡ್ತಿ ಅಥವಾ ಮೌಲ್ಯಮಾಪನದ ಸಾಧ್ಯತೆಗಳು ಹೆಚ್ಚಾಗುತ್ತವೆ. ನಿಮ್ಮ ಕೆಲಸ ಮತ್ತು ಸ್ವಭಾವದಿಂದ ಜನರು ಸಂತೋಷವಾಗಿರುತ್ತಾರೆ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಶುಭ ಫಲಗಳು ಲಭ್ಯವಾಗಲಿದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ದೀರ್ಘಕಾಲ ಬಾಕಿ ಇರುವ ಕೆಲಸದಲ್ಲಿ ನೀವು ಬಯಸಿದ ಯಶಸ್ಸನ್ನು…
Author: Nammur Express Admin
ಅಡಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? NAMMUR EXPRESS NEWS * ಗೊರಬಲು ಎಷ್ಟು? ಬೆಟ್ಟೆ, ಸರಕು ರೇಟಿನ ಕಥೆ ಏನಾಗಿದೆ? ಬೆಟ್ಟೆ 41199 51400 ಸರಕು 54109 79100 ಗೊರಬಲು 17460 31619 ರಾಶಿ 31169 50109 ಹೊಸ ವೆರೈಟಿ 32409 49799
ಟಾಪ್ ನ್ಯೂಸ್ ಮಲ್ನಾಡ್ – ಅಸ್ವಸ್ಥರಾದ ಅಧಿಕಾರಿಗೆ ಸಭೆಯಲ್ಲೇ ಡಾ.ಸರ್ಜಿ ಚಿಕಿತ್ಸೆ! – ಶಿವಮೊಗ್ಗ: ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಅಧಿಕಾರಿ: ತಕ್ಷಣ ಆರೈಕೆ ಮಾಡಿದ ಡಾ.ಸರ್ಜಿ – ಶಿವಮೊಗ್ಗ: ಹಾಡಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿ ಹತ್ಯೆ – ಶೃಂಗೇರಿ: ಮಲ್ನಾಡಲ್ಲಿ ತೀವ್ರಗೊಂಡ ನಕ್ಸಲ್ ಕೂಂಬಿಂಗ್ ಕಾರ್ಯಚರಣೆ! NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ದಿಢೀರ್ ಅಸ್ವಸ್ಥರಾಗಿದ್ದಾರೆ. ತಕ್ಷಣ ನೆರವಿಗೆ ಧಾವಿಸಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಆರೈಕೆ ಮಾಡಿದರು. ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಸಭೆ ಮಧ್ಯೆ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅಸ್ವಸ್ಥರಾದರು. ವೇದಿಕೆ ಮೇಲಿದ್ದ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಅಧಿಕಾರಿಗಳು ಕಾವೇರಿ ಅವರ…
ವಾಗ್ದೇವಿ ಶಿಕ್ಷಣ ಸಂಸ್ಥೆಯ ಸಾಧಕರಿಗೆ ಸನ್ಮಾನದ ಗೌರವ – ಸತ್ಪಥ ಎಜುಕೇಷನ್ ಟ್ರಸ್ಟ್ ಬೆಳ್ಳಿಹಬ್ಬ: ಸಾಧಕ ವಿದ್ಯಾರ್ಥಿಗಳು, ನೌಕರರಿಗೆ ಪ್ರತಿಭಾ ಪುರಸ್ಕಾರ – ಗಮನ ಸೆಳೆದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ 25ನೇ ವರ್ಷದ ಸಂಭ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿ ಸಾಧಕರಿಗೆಮತ್ತು ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನದ ಗೌರವ ನೀಡಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಉದ್ಘಾಟಿಸಿ ಮಾತನಾಡಿ, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಾ ನಮ್ಮ ತೀರ್ಥಹಳ್ಳಿಯ ಹೆಸರನ್ನು ನಾಡಿನಾದ್ಯಂತ ಬೆಳಗಿಸುತ್ತ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಅಂತ ಸಾಧಕರನ್ನು ವಾಗ್ದೇವಿ ಶಾಲೆ ನೀಡುತ್ತಿದೆ ಎಂದರು. ಒಂದು ಕಾಲದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪೋಷಕರು ಅವರನ್ನು ಕರಾವಳಿ ಅಥವಾ ಬೆಂಗಳೂರು ನಗರಗಳಿಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುವ ಸನ್ನಿವೇಶವಿತ್ತು. ಆದರೆ ಇಲ್ಲಿ ವಾಗ್ಗೇವಿ ಶಿಕ್ಷಣ ಸಂಸ್ಥೆ ಆರಂಭವಾದ ನಂತರ ಆ ಕೊರತೆ ನೀಗಿದೆ…
ತೀರ್ಥಹಳ್ಳಿಯಲ್ಲಿ ಸತೀಶ್ ಶೆಟ್ಟಿ ಪಟ್ಲ ಯಕ್ಷಗಾನಕ್ಕೆ ಮನ ಸೋತ ಜನ! – ಕೊಡಚಾದ್ರಿ ಟ್ರಸ್ಟ್ ವತಿಯಿಂದ ಅತ್ಯುತ್ತಮ ಆಯೋಜನೆ – ಯಕ್ಷಗಾನ ಸೇವಕರಿಗೆ ಸನ್ಮಾನ: ಮಂಜುನಾಥ ಗೌಡರ ಪ್ರೇರಣಾ ಮಾತು – 3000ಕ್ಕೂ ಹೆಚ್ಚು ಯಕ್ಷಗಾನ ಪ್ರಿಯರಿಂದ ವೀಕ್ಷಣೆ NAMMUR EXPRESS NEWS ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ( ರಿ) ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗ ವೃಜ ಕ್ಷೇತ್ರ ಪಾವಂಜೆ, ಇವರಿಂದ ಶುಕ್ರವಾರ ಸಂಜೆ ತೀರ್ಥಹಳ್ಳಿಯ ಸಂಸ್ಕೃತಿ ಮಂದಿರ ಆವರಣದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಹರಿ ಲೀಲಾಮೃತ ಯಕ್ಷಗಾನ ಸಾವಿರಾರು ಪ್ರೇಕ್ಷಕರ ಗಮನ ಸೆಳೆಯಿತು. ರಾಜ್ಯದಲ್ಲಿ ಅಪರೂಪದ ಕಾರ್ಯಕ್ರಮ ಇದಾಗಿದ್ದು ಯಕ್ಷಗಾನದ ವೇಳೆ ಜತೆ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಮಾಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಸಂಜೆ 6 ಗಂಟೆಗೆ ಪ್ರಾರಂಭವಾಗಿ ಮಧ್ಯ ರಾತ್ರಿವರೆಗೆ ನಡೆಯಿತು. ಪಾತ್ರಧಾರಿಗಳ ಅತ್ಯುತ್ತಮ ನಟನೆ, ಭಾಗವತಿಕೆ ಮೂಲಕ ಗಮನ ಸೆಳೆಯಿತು. ಯಕ್ಷಗಾನದ ವೇಳೆ…
ಕೊಪ್ಪ: ಕೃಷಿಕ ಕಾಡಾನೆ ದಾಳಿಗೆ ಬಲಿ! – ಆನೆ ತುಳಿತದಿಂದ ಮೃತಪಟ್ಟ ಕೃಷಿಕ: ಕುಟುಂಬದ ಆಕ್ರಂದನ – ಪರಿಹಾರಕ್ಕೆ ಗ್ರಾಮಸ್ಥರ ಪಟ್ಟು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ NAMMUR EXPRESS NEWS ಕೊಪ್ಪ: ತಾಲೂಕಿನ ಕುದುರೇಗುಂಡಿ ಸಮೀಪದ ಸೀತೂರು ಎಂಬಲ್ಲಿ ಶನಿವಾರ ಉಮೇಶ್ ಎಂಬ ರೈತ ಕಾಡು ಆನೆ ದಾಳಿಗೆ ಸಿಲುಕಿ ಮೃತ ಪಟ್ಟಿದ್ದಾರೆ. ರೈತರು, ಕೆರೆಗದ್ದೆ ಭಜರಂಗ ದಳದ ಸಂಚಾಲಕರಾಗಿ, ರೈತ ಹೋರಾಟಗಾರ ಆಗಿ ಕೃಷಿಕರು ಆದ ಉಮೇಶ್ ಅವರು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಬೇಜವಾಬ್ದಾರಿ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತೀಚಿಗೆ ಕೊಪ್ಪ ಪಟ್ಟಣ ಸಮೀಪ ಕಂಡಿದ್ದ ಕಾಡಾನೆಗಳು ಇದೀಗ ಮೊದಲ ಬಲಿ ಪಡೆದಿವೆ. ಜನಪ್ರತಿನಿಧಿ, ಅಧಿಕಾರಗಳ ವಿರುದ್ಧ ಜನರ ಆಕ್ರೋಶ..!! ಸೀತೂರಿನಲ್ಲಿ ಉಮೇಶ ಎಂಬುವ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ಇದೀಗ ನಡೆದಿದೆ. ಕೆಲವು ದಿನಗಳ ಹಿಂದೆ ಇದೇ ಸೀತೂರಿನಲ್ಲಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡಿದ…
ಎನ್. ಆರ್. ಪುರ: ಕೃಷಿಕ ಕಾಡಾನೆ ದಾಳಿಗೆ ಬಲಿ! – ಆನೆ ತುಳಿತದಿಂದ ಮೃತಪಟ್ಟ ಕೃಷಿಕ: ಕುಟುಂಬದ ಆಕ್ರಂದನ – ಪರಿಹಾರಕ್ಕೆ ಗ್ರಾಮಸ್ಥರ ಪಟ್ಟು: ಅರಣ್ಯ ಇಲಾಖೆ ವಿರುದ್ಧ ಸಆಕ್ರೋಶ NAMMUR EXPRESS NEWS ಎನ್. ಆರ್ ಪುರ: ಎನ್. ಆರ್ ಪುರ ತಾಲೂಕಿನ ಸೀತೂರು ಎಂಬಲ್ಲಿ ಶನಿವಾರ ಉಮೇಶ್ ಎಂಬ ರೈತ ಕಾಡು ಆನೆ ದಾಳಿಗೆ ಸಿಲುಕಿ ಮೃತ ಪಟ್ಟಿದ್ದಾರೆ. ರೈತರು, ಕೆರೆಗದ್ದೆ ಭಜರಂಗ ದಳದ ಸಂಚಾಲಕರಾಗಿ, ರೈತ ಹೋರಾಟಗಾರ ಆಗಿ ಕೃಷಿಕರು ಆದ ಉಮೇಶ್ ಅವರು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಬೇಜವಾಬ್ದಾರಿ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತೀಚಿಗೆ ಕೊಪ್ಪ ಪಟ್ಟಣ ಸಮೀಪ ಕಂಡಿದ್ದ ಕಾಡಾನೆಗಳು ಇದೀಗ ಮೊದಲ ಬಲಿ ಪಡೆದಿವೆ. ಜನಪ್ರತಿನಿಧಿ, ಅಧಿಕಾರಗಳ ವಿರುದ್ಧ ಜನರ ಆಕ್ರೋಶ..!! ಸೀತೂರಿನಲ್ಲಿ ಉಮೇಶ ಎಂಬುವ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ಇದೀಗ ನಡೆದಿದೆ. ಕೆಲವು ದಿನಗಳ ಹಿಂದೆ ಇದೇ ಸೀತೂರಿನಲ್ಲಿ ಆನೆ ದಾಳಿ ಮಾಡಿ…
ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನಕ್ಕೆ ಸಿದ್ಧತೆ – ಚಿಕ್ಕಮಗಳೂರು ನಗರ, ಪಟ್ಟಣಗಳಲ್ಲಿ ಕೇಸರಿ ಭಾವುಟ ಮತ್ತು ಬಂಟಿಂಗ್ಸ್ ಕಟ್ಟಿ ಅಲಂಕಾರ: ಡಿ.14 ರಂದು ದತ್ತ ಪಾದುಕೆ ದರ್ಶನ – ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಭಜರಂಗದಳ ಮತ್ತು ವಿಹೆಚ್ಪಿ ನೇತೃತ್ವದಲ್ಲಿ 25ನೇ ವರ್ಷದ ದತ್ತಜಯಂತಿ ಆಚರಣೆಗೆ ಚಾಲನೆ ದೊರೆತಿದೆ. ಚಿಕ್ಕಮಗಳೂರು ನಗರ, ಪಟ್ಟಣಗಳಲ್ಲಿ ಕೇಸರಿ ಭಾವುಟ ಮತ್ತು ಬಂಟಿಂಗ್ಸ್ ಕಟ್ಟಿ ಅಲಂಕಾರ ಮಾಡಲಾಗುತ್ತದೆ. ಭಜರಂಗದಳ, ವಿಹೆಚ್ಪಿ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಡಿಸೆಂಬರ್ 6 ರಂದು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡುತ್ತಾರೆ. ಡಿಸೆಂಬರ್ 12 ರಂದು ಅನಸೂಯಾ ಜಯಂತಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ಡಿಸೆಂಬರ್ 13 ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನೆರವೇರುತ್ತದೆ. ನಂತರ ಡಿಸೆಂಬರ್ 14 ರಂದು ದತ್ತಮಾಲಾ…
ಮತ್ತೆ ರಾಜ್ಯದಲ್ಲಿ ಸಣ್ಣ ಮಳೆ!? – ಶನಿವಾರ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ – 5 ಜಿಲ್ಲೆಗಳಿಗೆ ಮಳೆ ಅಲರ್ಟ್: ಎಂತಾ ಕಥೆ ಮಾರಾಯ್ರೆ NAMMUR EXPRESS NEWS ಬೆಂಗಳೂರು: ತಮಿಳುನಾಡಿನ ಕರಾವಳಿ ತೀರದ ಚಂಡಮಾರುತದ ಪರಿಣಾಮವಾಗಿ ರಾಜ್ಯ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳ ಕರ್ನಾಟಕದ ಕೋಲಾರ, ಚಿಕ್ಕಮಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ನಾಳೆಯ ಹವಾಮಾನ-ಭಾರೀ ಮಳೆ ಅಲರ್ಟ್ ಕರಾವಳಿ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ…
ಟಾಪ್ 4 ನ್ಯೂಸ್ ಮಲ್ನಾಡ್ – ಶೃಂಗೇರಿ: ತುಂಗಾ ನದಿಯಲ್ಲಿ ತೇಲಿ ಹೋದ ಬಾಲಕಿ..! – ಸೊರಬ : ಸೊರಬದಲ್ಲಿ ಬೈಕಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು! – ಶಿವಮೊಗ್ಗ : ಮಧು ಬಂಗಾರಪ್ಪ ವಿರುದ್ಧ ಪೋಸ್ಟ್ : ಕೇಸ್ – ಹೊಸನಗರ: ಕೋರ್ಟ್ ಎಪಿಪಿ ಲೋಕಾಯುಕ್ತ ಬಲೆಗೆ NAMMUR EXPRESS NEWS ಸೊರಬ : ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಬೋವಿ ಕಾಲೋನಿಯಲ್ಲಿ ನಡೆದಿದೆ. ಬೋವಿ ಕಾಲೋನಿ ನಿವಾಸಿ ದುರ್ಗಪ್ಪ ಬೋವಿ ಎಂಬುವವರಿಗೆ ಸೇರಿದ ಬೈಕ್ ಗೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನೆರೆ ಮನೆಯ ನಿವಾಸಿಗಳು ಬೆಂಕಿಯ ತೀವ್ರತೆ ಗಮನಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಭಾಗಶಃ ಬೈಕ್ ಸುಟ್ಟು ಹೋಗಿದೆ. ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು…