Author: Nammur Express Admin

ತೀರ್ಥಹಳ್ಳಿಯಲ್ಲಿ ಇಂದು – ನಾಳೆ ವೈವಿಧ್ಯಮಯ ದಸರಾ! – ಇಂದು ಕುಶಾವತಿ ಪಾರ್ಕಲ್ಲಿ ಕಾರ್ಯಕ್ರಮ: ಎಲ್ಲೆಡೆ ವಿದ್ಯುತ್ ಅಲಂಕಾರ – ಸಾಧನೆಗೈದ ಗಣ್ಯರಿಗೆ ದಸರಾದಲ್ಲಿ ಗೌರವ ಸಮರ್ಪಣೆ – ನಾಳೆ ಜಾನಪದ ತಂಡಗಳ ಜತೆ ವಿಶೇಷ ಮೆರವಣಿಗೆ: ಸಂಜೆ ಕೊಡುವ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಉತ್ಸವ ಸಮಿತಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಈಗಾಗಲೇ 7 ದಿನ ದಸರಾ ನಡೆದಿದೆ. ತೀರ್ಥಹಳ್ಳಿ ಪಟ್ಟಣ ದಸರಾಕ್ಕೆ ಸಿಂಗಾರಗೊಂಡಿದೆ. ಕುಶಾವತಿ ಪಾರ್ಕಿನಲ್ಲಿ ಇಂದು ಮತ್ತು ನಾಳೆ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗುರುವಾರ ಯುವ ದಸರಾದಲ್ಲಿ ತೀರ್ಥಹಳ್ಳಿ ಕಲಾವಿದರು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಇಂದು ಹಾಗೂ ನಾಳೆ ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ರಾಮೇಶ್ವರ ದೇವಸ್ಥಾನದ ಧಾರ್ಮಿಕ ಪೂಜೆಗಳಲ್ಲಿ ಹಾಗೂ ದಸರಾ ಮೆರವಣಿಗೆಯಲ್ಲಿ ತಾಲ್ಲೂಕಿನ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿಕೊಡುವಂತೆ ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ ವಿನಂತಿಸಿದ್ದಾರೆ. -…

Read More

ಕರಾವಳಿಯಲ್ಲಿ ವಿಶೇಷ ದಸರಾ ಆಚರಣೆ ರಂಗು! * ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವ ಸಂಭ್ರಮ * ಉಚ್ಚಿಲ ದಸರಾ 2024, ಸಾಂಸ್ಕೃತಿಕ ವೈವಿಧ್ಯ * ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಜನವೋ ಜನ NAMMUR EXPRESS NEWS ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ.1991ರಿಂದ ಆರಂಭಗೊಂಡ ‘ಮಂಗಳೂರು ದಸರಾ ವೈಭವ’ ಕುದ್ರೋಳಿ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ದಸರಾಕ್ಕೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು,ಹುಲಿ ಕುಣಿತ, ಶಾರ್ದುಲ ಕುಣಿತ ಕರಡಿ, ಹೀಗೆ ಹತ್ತು ಹಲವು ವೇಷಭೂಷಣದ ವೈಭವವು ಭರ್ಜರಿಯಾಗಿದೆ. ಉಚ್ಚಿಲ ದಸರಾ 2024, ಸಾಂಸ್ಕೃತಿಕ ವೈವಿಧ್ಯ! ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ 2024ರ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಟಾಪ್ 3 ನ್ಯೂಸ್ ಕರ್ನಾಟಕ – ಓಣಂ ಬಂಪರ್‌, 25 ಕೋಟಿ ಗೆದ್ದ ಕನ್ನಡಿಗ! – ಅದೃಷ್ಟ ಖುಲಾಯಿಸಿ ರಾತ್ರೋರಾತ್ರಿ ಕೋಟ್ಯಧಿಪತಿ ಆದ ಮೆಕಾನಿಕ್! – ಇತಿಹಾಸದಲ್ಲೇ 400 ರೂ.ಗಡಿ ದಾಟಿದ ಗುಲಾಬಿ! – ರಾಜವಂಶಸ್ಥ ಯದುವೀರ್ ಒಡೆಯರ್ ದಂಪತಿಗೆ ಗಂಡು ಮಗು ಜನ್ಮ NAMMUR EXPRESS NEWS ಮಂಡ್ಯ: ಲಕ್ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಮಂಡ್ಯದ ಮೆಕ್ಯಾನಿಕ್‌ ಒಬ್ಬರಿಗೆ ಇದೀಗ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ. ಮಂಡ್ಯದ ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದೀಗ ಅಲ್ತಾಫ್ ಪಾಷಾ 25 ಕೋಟಿ ರೂ. ‌ಗೆದ್ದಿದ್ದಾರೆ. ತಾನು ಖರೀದಿ ಮಾಡಿದ…

Read More

ಮಲೆನಾಡಿನ ಶೃಂಗೇರಿಯ ಮಡಿಲಿನಲ್ಲಿ ತಯಾರಾಗುತ್ತಿರುವ ಸ್ವಧಾಯು ಕಷಾಯ ಟೀ. ಇತ್ತೀಚಿನ ದಿನಗಳಲ್ಲಿ 1)ಗ್ಯಾಸ್ಟ್ರಿಕ್, 2) ಆಮ್ಲ ಪಿತ್ತ, 3) ಪ್ರಮೇಹ, 4) ಬೊಜ್ಜು , ಕೊಲೆಸ್ಟ್ರಾಲ್ 5) ಕೀಲು ಮತ್ತು ಮಂಡಿ ಸಮಸ್ಯೆಗಳು ಇಂತಹ ಆರೋಗ್ಯ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುತ್ತದೆ. ಒಂದು ವೇಳೆ ನಿಮಗೂ ಕೂಡ, ಇಂತಹ ಆರೋಗ್ಯ ಸಮಸ್ಯೆಗಳು, ಆಗಾಗ ಕಾಡುತ್ತಲೇ ಇದ್ದರೆ, ಈ ಕಷಾಯ ಟೀಯ ಪ್ರಯೋಜನ ಪಡೆಯಬಹುದಾಗಿದೆ. ಇದರಲ್ಲಿ ಯಾವುದೇ ತರಹದ ಟೀ ಪುಡಿಯನ್ನು ಯಾವುದೇ ಕೇಪಿನ್ ಯುಕ್ತ ಟೀ ಪುಡಿ ಬಳಸಿಲ್ಲ. ಆಯುರ್ವೇದದಲ್ಲಿ ಉಲ್ಲೇಖಿಸಲಾದ ಗಿಡಮೂಲಿಕೆಗಳನ್ನು ಚೂರ್ಣ ರೂಪದಲ್ಲಿ ಮಾರ್ಪಾಡು ಮಾಡಿ ಡಿಪ್ ಬಾಗ್ ರೂಪದಲ್ಲಿ ಮಾಡಲಾಗಿದೆ. ಇದರಲ್ಲಿ ವಿಶೇಷವಾಗಿ ಆರು ರೀತಿಯ ವಿವಿಧ ಕಷಾಯ ಟೀ ಗಳು ಲಭ್ಯವಿದ್ದು ಪ್ರತಿಯೊಂದು ಸಮಸ್ಯೆಗೂ ತಕ್ಕಂತಹ ಆಯುರ್ವೇದ ಔಷಧಿಗಳಿಂದ ತಯಾರಿಸಲಾಗಿದೆ. ವಿಶೇಷವಾಗಿ ನವರಾತ್ರಿಗೆ ಆಫರ್ ಕೂಡ ಲಭ್ಯವಿದೆ. ಇದನ್ನು ಬಳಸುವ ವಿಧಾನ = ಒಂದು ಕಷಾಯ ಟೀ ಬಾಕ್ಸ ನಲ್ಲಿ ಹನ್ನೆರಡು ಡಿಪ್ ಬ್ಯಾಗ್ ಗಳಿದ್ದು,…

Read More

ಭದ್ರಾ ವ್ಯಾಪ್ತಿಯಲ್ಲಿ ಆನೆ ಬಿಡಾರಕ್ಕೆ ವಿರೋಧ! * ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆ * ಅ.17 ರೊಳಗೆ ಭರವಸೆ ಈಡೇರದಿದ್ದಲ್ಲಿ ಪ್ರತಿಭಟನೆ * ರೈತ ಸಂಘಟನೆಗಳ ವಿರುದ್ಧದ ತಮ್ಮ ಹೇಳಿಕೆಗೆ ಶಾಸಕರು ಕ್ಷಮೆಯಾಚಿಸಲು ಪಟ್ಟು NAMMUR EXPRESS NEWS ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಸಭೆಯನ್ನು ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಭದ್ರಾ ವ್ಯಾಪ್ತಿಯಲ್ಲಿ ಆನೆ ಬಿಡಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಅ.17ರೊಳಗೆ ಭರವಸೆ ಈಡೇರದಿದ್ದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಯಿತು. ರೈತ ಸಂಘಟನೆಗಳ ವಿರುದ್ಧದ ತಮ್ಮ ಹೇಳಿಕೆಗೆ ಶಾಸಕರು ಕ್ಷಮೆಯಾಚಿಸಲು ಸಭೆ ಹೇಳಿತು. ಬಾಳೆಹೊನ್ನೂರು ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿಸಭೆಯಲ್ಲಿ ನರಸಿಂಹರಾಜಪುರ, ಶೃಂಗೇರಿ, ಕೊಪ್ಪ ತಾಲ್ಲೂಕಿನ ಹಾಗೂ ಖಾಂಡ್ಯ ಹೋಬಳಿಯ ರೈತರು, ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳೇನು..??! * ತಿಂಗಳೊಳಗೆ ನಿಯೋಗ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದ ಶಾಸಕರು ಹಾಗೂ ಸಂಸದರು ಇದುವರೆಗೂ ಕರೆದುಕೊಂಡು ಹೋಗಿಲ್ಲ,…

Read More

ಗ್ರಾಪಂ ನೌಕರರ ಮುಷ್ಕರ ಸುಖಾಂತ್ಯ: ಇನ್ನು ಸೇವೆ ಅಡ್ಡಿ ಇಲ್ಲ!? * ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ: ಮುಷ್ಕರ ವಾಪಾಸ್ ಘೋಷಣೆ * ಒಂದು ವಾರದಿಂದ ನಿಂತಿದ್ದ ಗ್ರಾಮ ಪಂಚಾಯತ್ ಕೆಲಸ NAMMUR EXPRESS NEWS ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳ ನೌಕಕರು ಹೂಡಿದ್ದ ಮುಷ್ಕರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ತೆಗೆದುಕೊಂಡ ನಿರ್ಧಾರಗಳಿಂದ ಸುಖಾಂತ್ಯವಾಗಿದೆ. ಸೋಮವಾರದಿಂದ ಎಂದಿನಂತೆ ಕಚೇರಿ ಕಾರ್ಯಗಳಲ್ಲಿ ನಿರತರಾಗುವುದಾಗಿ ನೌಕರ ಸಂಘದ ಪ್ರತಿನಿಧಿಗಳು ಘೋಷಿಸಿದರು. ನೌಕರರ ಮಹಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆಗಳನ್ನು ಸಚಿವರ ಮುಂದಿರಿಸಿದರು, ಸುಮಾರು 75ಕ್ಕೂ ಹೆಚ್ಚು ಬೇಡಿಕೆಗಳನ್ನು ಮೂರು ಗಂಟೆಗಳ ಕಾಲ ಆಲಿಸಿದ ಸಚಿವರು ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗಬುದಾದ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇಲೆ ಈಡೇರಿಸುವುದಾಗಿ ತಿಳಿಸಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ…

Read More

ನ.4ರಿಂದ 10ರವರೆಗೆ ದತ್ತಮಾಲಾ ಅಭಿಯಾನ! * ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲೆ * ನ.10ಕ್ಕೆ ಧರ್ಮ ಸಭೆ,ಶೋಭಾಯಾತ್ರೆ,ಧಾರ್ಮಿಕ ಕಾರ್ಯಕ್ರಮ * ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೀಪೋತ್ಸವ NAMMUR EXPRESS NEWS ಚಿಕ್ಕಮಗಳೂರು: ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲಾ ಅಭಿಯಾನ ನ.4ರಿಂದ 10ರವರೆಗೆ ನಡೆಯಲಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ನ.4ರಂದು ನಗರದ ಶಂಕರ ಮಠದಲ್ಲಿ ದತ್ತಮಾಲೆ ಧಾರಣೆ ನಡೆಯಲಿದ್ದು, ನ.7ರಂದು ಶಂಕರ ಮಠದಲ್ಲಿ ಸಂಜೆ 7 ಗಂಟೆಗೆ ದತ್ತ ದೀಪೋತ್ಸವ ನಡೆಯಲಿದ್ದು ಜೊತೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೀಪೋತ್ಸವ ನಡೆಯಲಿದೆ. ನ.9ರಂದು ನಗರದಲ್ಲಿ ಪಡಿ ಸಂಗ್ರಹ ಹಾಗೂ 10ರಂದು ಶಂಕರ ಮಠದ ಮುಂಭಾಗದಲ್ಲಿ ಧರ್ಮಸಭೆ ನಡೆಯಲಿದ್ದು ನಂತರ ಆಜಾದ್ ಪಾರ್ಕ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಸಾವಿರಾರು ದತ್ತಭಕ್ತರು ಪಾಲ್ಗೊಳ್ಳಲಿದ್ದಾರೆ. ಬಳಿಕ ಶ್ರೀರಾಮಸೇನೆ ಕಾರ್ಯಕರ್ತರು ಸೇರಿದಂತೆ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡುವರು. ಹೋಮ ಹವನಗಳು ಜರುಗಲಿವೆ. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್…

Read More

ಆಗುಂಬೆ ಬಳಿ ಬಂದ ಆನೆಗಳು! * ಜಮೀನಿಗೆ ನುಗ್ಗಿ ಆನೆಗಳ ದಾಂಧಲೆ: ರೈತ ಕಂಗಾಲು! * ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ * ನಾಟಿಯಾದ ಗದ್ದೆ,ತೋಟದ ಫಸಲು ನಾಶ: ಅಪಾರ ನಷ್ಟ * ಕೃಷಿ ಸಂಕಷ್ಟ: ಮಲೆನಾಡಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ! NAMMUR EXPRESS NEWS ಆಗುಂಬೆ: ತೀರ್ಥಹಳ್ಳಿ ತಾಲೂಕು ಆಗುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಗರವಳ್ಳಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ ಘಟನೆ ನಡೆದಿದೆ. ಗ್ರಾಮದ ಕಾರೇಕುಂಬ್ರಿ ಎಂಬಲ್ಲಿ ರೈತ ಗಣೇಶ್ ಬಿ.ಕೆ ಇವರ ಭತ್ತದ ಗದ್ದೆಗೆ ಸತತ ಎರಡು ದಿನಗಳಿಂದ ಆನೆಗಳು ಬರುತ್ತಿದ್ದು, ಆನೆ ಕಾಟಕ್ಕೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ನಾಟಿ ಮಾಡಿದ್ದ ಬೆಳೆ ಸಂಪೂರ್ಣ ನಾಶಗೊಂಡ ಪರಿಣಾಮ ರೈತ ಕಂಗಾಲಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಆನೆ,ಕಾಡುಕೋಣ ಸೇರಿದಂತೆ ಇತರ ಕಾಡು ಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ…

Read More

ರಾಜ್ಯದಲ್ಲಿಡೆ ಇಂದು ಆಯುಧ ಪೂಜೆ ಸಡಗರ! * ಅಂಗಡಿ, ವಾಹನಗಳಿಗೆ, ಆಯುಧಗಳಿಗೆ ವಿಶೇಷ ಪೂಜೆ * ಎಲ್ಲೆಡೆ ಹಬ್ಬದ ವಾತಾವರಣ: ಸಿಹಿ ವಿತರಣೆ NAMMUR EXPRESS NEWS ಬೆಂಗಳೂರು/ ಮೈಸೂರು: ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದ್ದು, ದಸರಾ ಹಬ್ಬದ ಕೊನೆಯ ದಿನ ಶಸಾಸ್ತ್ರ ಹಾಗೂ ಸಾಧನಗಳನ್ನು ಪೂಜೆಸಲಾಗುತ್ತದೆ. ಮನೆ ಹಾಗೂ ಕಚೇರಿಯನ್ನು ಹೂಗಳಿಂದ ಅಲಂಕರಿಸಿ, ಶಸಾಸ್ತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕಾರು, ಆಟೋ ವಾಹನ ನಿಲ್ದಾಣಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ದೇವಿಯನ್ನು ಪೂಜೆಸಲಾಗುತ್ತಿದೆ. ಯಂತ್ರಗಳು, ವಾಹನಗಳು ಮತ್ತಿತರ ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಮೈಸೂರಿನ ಅರಮನೆ ಮೈದಾನದೊಳದೆ ರಾಜಮನೆತನದಿಂದ ಆಯಧ ಪೂಜೆಯನ್ನು ಆಚರಿಸಲಾಗುತ್ತಿದೆ. ಯುಧ ಪೂಜೆಗೆ ದಂತಕಥೆಯಿದೆ. ದುರ್ಗಾ ಐತಿಹಾಸಿಕ ದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು…

Read More

ರಾಜ್ಯದಲ್ಲಿ ಮತ್ತೆ ಮಳೆ ಅಲರ್ಟ್! – ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಸೂಚನೆ – ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ NAMMUR EXPRESS NEWS ಬೆಂಗಳೂರು: ಕಳೆದೊಂದು ವಾರದಿಂದ ಮಳೆ ಇಡೀ ರಾಜ್ಯದಲ್ಲಿ ಆತಂಕ ಸೃಷ್ಟಿ ಮಾಡಿದೆ. ಏಕಾಏಕಿ ಸುರಿಯುವ ಮಳೆಯಿಂದ ಅನೇಕ ಕಡೆ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಸಮನೆ ಸುರಿದ ಮಳೆ ಹೆಬ್ರಿ, ಚಾರ್ಮಾಡಿ ಘಾಟಿಯಲ್ಲಿ ಮೇಘ ಸ್ಫೋಟ ಉಂಟು ಮಾಡಿದೆ. ದಕ್ಷಿಣ ಮತ್ತು ಉತ್ತರ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಗುಡುಗು ಜತೆಗೆ ಸಾಧಾರಣ ಮಳೆಯೊಂದಿಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಮೈಸೂರು ಸೇರಿದಂತೆ ವಿಜಯನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ…

Read More