Author: Nammur Express Admin

ಆಯುಧ ಪೂಜೆ ದಿನ ರಾಶಿ ಭವಿಷ್ಯ ಹೇಗಿದೆ? – ಇಂದು ನವರಾತ್ರಿ 9ನೇ ದಿನ, ಲಕ್ಷ್ಮಿ ಕೃಪಾಕಟಾಕ್ಷ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಶುಭ ದಿನವಾಗಿರುತ್ತದೆ. ಆದಾಯ ಹೆಚ್ಚಲಿದೆ. ವೃತ್ತಿ ಜೀವನದಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಅಗತ್ಯ ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯ. ವಿದ್ಯಾರ್ಥಿಗಳು ಯಶಸ್ಸಿಗೆ ಶ್ರಮಿಸಬೇಕಾಗುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ** ವೃಷಭ ರಾಶಿ : ಇಂದು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ತರಾತುರಿಯಲ್ಲಿ ಏನನ್ನೂ ಖರೀದಿಸುವ ಯೋಚನೆಗಳನ್ನು ಮಾಡಬೇಡಿ. ಇಂದು ಹೆಚ್ಚು ಹಣ ಖರ್ಚಾಗುತ್ತದೆ. ಹಿರಿಯರು ವ್ಯಾಪಾರ ಪ್ರವಾಸಗಳಿಗೆ ಅವಕಾಶಗಳನ್ನು…

Read More

ಉದ್ಯಮದ ಮಿನುಗುತಾರೆ ರತನ್ ಅಸ್ತಂಗತ: ಸದ್ಗುರು ಪ್ರದೀಪ್ ಕಣ್ಣೀರು – ಹೊಸದುರ್ಗದಲ್ಲಿ ಸದ್ಗುರು ಆಯುರ್ವೇದ ಕಂಪನಿಯಲ್ಲಿ ಸಂತಾಪ ಸಭೆ – ದೇಶದ ಅಪ್ರತಿಮ ಉದ್ಯಮಿಗೆ ಪ್ರದೀಪ್ ನುಡಿ ನಮನ NAMMUR EXPRESS NEWS ಹೊಸದುರ್ಗ: ಭಾರತದ ಬಲಿಷ್ಠ ಉದ್ಯಮ ಕ್ಷೇತ್ರವನ್ನು ಜಗತ್ತಿಗೆ ಪರಿಚಯಿಸಿದ ಧೀಮಂತ ಉದ್ಯಮಿ ರತನ್ ಟಾಟಾ ಅಗಲಿಕೆ ಭಾರತದ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ. ರತನ್ ಟಾಟಾ ಭಾರತದ ಉದ್ಯಮಿಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಜೇಮ್ ಶೆಟ್ ಜಿ ಟಾಟಾ ಕಟ್ಟಿದ ಟಾಟಾ ಉದ್ಯಮವನ್ನು ಬಾನೆತ್ತಕ್ಕೆ ಬೆಳೆಸಿ ತನ್ನ ಬದುಕಿನಲ್ಲಿ ಸರಳತೆಯನ್ನ ಮೈಗೂಡಿಸಿಕೊಂಡು ಬೆಳೆದವರು ಸರಕು ವಾಹನಗಳು ಇಲ್ಲದೆ ಬರದಾಡುತ್ತಿರುವ ಗ್ರಾಮೀಣ ಭಾಗದ ರೈತ ಕುಟುಂಬಗಳಿಗೆ ತಾವು ಬೆಳೆದ ಧಾನ್ಯಗಳನ್ನು ಮಾರುಕಟ್ಟೆಗೆ ತರಲು ಟಾಟಾ ಏಸ್ ಪರಿಚಯಿಸಿದ ಕೀರ್ತಿ ಭಾರತದ ಹೆಸರಾಂತ ಉದ್ದಿಮೆ ಜೆ ಎನ್ ರತನ್ ಟಾಟಾ ರವರಿಗೆ ಸಲ್ಲುತ್ತದೆ ಎಂದು ಯುವ ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದ್ದಾರೆ. ನಗರದ ಸದ್ಗುರು ಆಯುರ್ವೇದ ಕಂಪನಿಯಲ್ಲಿ ನಡೆದ ಜೇಮ್…

Read More

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ? * ಬೆಟ್ಟೆ ಎಷ್ಟು? ರಾಶಿ ಎಷ್ಟು? NAMMUR EXPRESS NEWS ಬೆಟ್ಟೆ 36366- 55419 ಸರಕು 51199- 83500 ಗೊರಬಲು 12009- 32359 ರಾಶಿ 32569- 50509 ನ್ಯೂ ವೆರೈಟಿ 43669- 47051

Read More

ಹುಲಿ ವೇಷಧಾರಿಗಳಿಗೆ ಬಣ್ಣದಲ್ಲಿ ಮೊಟ್ಟೆ ಬಳಕೆ ಸುಳ್ಳು! – ಹುಲಿವೇಷಧಾರಿಗಳು ಈ ಬಗ್ಗೆ ಕಿವಿಗೊಡಬಾರದು -45 ವರ್ಷದಿಂದ ಬಣ್ಣ ಹಚ್ಚುವ ಮೂಲಕ ರಮೇಶ್ ಕಲಾ ಸೇವೆ NAMMUR EXPRESS NEWS ತೀರ್ಥಹಳ್ಳಿ: ಹುಲಿ ವೇಷ ಅತ್ಯುತ್ತಮ ಕಲೆ. ಈಗ ಆ ಕಲೆ ಎಲ್ಲೆಡೆ ಮಾಯವಾಗುತ್ತಿದೆ. ಈ ನಡುವೆ ಕೆಲವು ಕಡೆ ದಸರಾ, ದೀಪಾವಳಿ ವೇಳೆ ಈ ಸ್ಪರ್ಧೆಗಳು ನಡೆಯುತ್ತವೆ. ಆದರೆ ಇತ್ತೀಚಿಗೆ ಈ ಕಲೆ ಬಗ್ಗೆ ಕೆಲವು ಸುಳ್ಳು ವದಂತಿಗಳು ಆ ಕಲೆಗೆ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಹುಲಿ ವೇಷಧಾರಿಗಳಿಗೆ ಕಳೆದ 45 ವರ್ಷದಿಂದ ಬಣ್ಣ ಹಚ್ಚುವ ಮೂಲಕ ಕಲಾ ಕಾಯಕದಲ್ಲಿರುವ ರಮೇಶ್ ಯಡೆಹಳ್ಳಿಕೆರೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾನು ಕಳೆದ 45 ವರ್ಷದಿಂದ ಹುಲಿಗಳಿಗೆ ಬಣ್ಣ ಹಚ್ಚುತ್ತಿದ್ದೇನೆ. ನನ್ನ ತಂದೆ ವಿಠಲ ಅವರು 35 ವರ್ಷ ಬಣ್ಣ ಹಚ್ಚಿದ್ದಾರೆ. ಈವರೆಗೆ ಅಂದಾಜು 5000 ಹುಲಿಗಳಿಗೆ ಬಣ್ಣ ಹಾಕಿದ್ದೇನೆ. ನಾವೆಂದು ಮೊಟ್ಟೆ ಬಳಸುವುದಿಲ್ಲ. ತೀರ್ಥಹಳ್ಳಿ, ಬೆಂಗಳೂರು, ವಿಧಾನ…

Read More

ತೀರ್ಥಹಳ್ಳಿಯಲ್ಲಿ ಆಯುಧ ಪೂಜೆ, ವಿಜಯದಶಮಿ ಸಂಭ್ರಮ – ಪಟ್ಟಣದಲ್ಲಿ ಜನವೋ ಜನ: ಹೂವು, ಹಣ್ಣಿಗೆ ಡಿಮ್ಯಾಂಡ್ – ಆಯುಧ ಪೂಜೆಗೆ ವಾಹನ ಸ್ಟಾಂಡ್, ಅಂಗಡಿಗಳು ಸ್ವಚ್ಛ – ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ಆಚರಣೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ತೀರ್ಥಹಳ್ಳಿ ದಸರಾಕ್ಕೆ ಈ ಬಾರಿ ವಿಶೇಷ ಮೆರುಗು ನೀಡಲಾಗಿದೆ. ರಾಜ್ಯ ಮಟ್ಟದ ಕವಿಗೋಷ್ಠಿ ಗುರುವಾರ ನಡೆದಿದ್ದು, ಸಂಜೆ ಕುಶಾವತಿ ಪಾರ್ಕಲ್ಲಿ ಯುವ ದಸರಾ ನಡೆಯಲಿದೆ. ಆಯುಧ ಪೂಜೆ ಹಾಗೂ ವಿಜಯದಶಮಿಯಂದು ಕುಶಾವತಿ ಪಾರ್ಕಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ದಸರಾ ಹಬ್ಬಕ್ಕೆ ಇಡೀ ತೀರ್ಥಹಳ್ಳಿ ಸಿಂಗಾರಗೊಂಡಿದೆ. ನೀರಿನ ಶುದ್ಧೀಕರಣದ ಘಟಕ ಪಂಪ ಹೌಸ್ನಲ್ಲಿ ಆಯುಧ ಪೂಜೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಬಾಳೆ ಬೈಲಿನಲ್ಲಿರುವ ನೀರಿನ ಶುದ್ಧೀಕರಣದ ಘಟಕ ಪಂಪ ಹೌಸ್ನಲ್ಲಿ ಆಯುಧ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ, ಹಾಗೂ ಪಟ್ಟಣ…

Read More

ತರೀಕೆರೆ: ಸಾಕಾರಗೊಳ್ಳುತ್ತಿದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕನಸು! * 29.35 ಕೋಟಿ ಕಾಮಗಾರಿಗೆ ಲೋಕೋಪಯೋಗಿ ಸಚಿವರಿಂದ ಚಾಲನೆ * ತರೀಕೆರೆ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಯೋಜನೆ NAMMUR EXPRESS NEWS ತರೀಕೆರೆ: ತರೀಕೆರೆ‌ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ – 69 ರ ಸರಪಳಿ 169.88 ರಿಂದ 172.38 ಕಿ.ಮೀ. ವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಹಾಗೂ ತರೀಕೆರೆ ಪುರಸಭೆ ವ್ಯಾಪ್ತಿಯ ಬಿ. ಹೆಚ್ ರಸ್ತೆ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೆರವೇರಿಸಿದರು. ತರೀಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್ ಶ್ರೀನಿವಾಸ್, ಚಿಕ್ಕಮಗಳೂರಿನ ಶಾಸಕರಾದ ಹೆಚ್. ಡಿ. ತಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಮತ್ತು ಕಾಡಾ ಅಧ್ಯಕ್ಷರಾದ ಅಂಶುಮಂತ್ ಗೌಡ ರವರು ಹಾಗೂ ಇತರ ಪ್ರಮುಖ ಮುಖಂಡರುಗಳು‌ ಉಪಸ್ಥಿತರಿದ್ದರು. ತರೀಕೆರೆ ಶಾಸಕರ ನೇತೃತ್ವದಲ್ಲಿ ಯೋಜನೆ ದಶಕಗಳ ಪ್ರಯತ್ನದಿಂದ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸಾಕಾರಗೊಳ್ಳುತ್ತಿದೆ ಎಂದು ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್…

Read More

ಪೂರ್ಣೇಶ್ ಕೆಳಕೆರೆ ಸೇರಿ 6 ಮಂದಿ ತೀರ್ಥಹಳ್ಳಿ ಕೆಡಿಪಿಗೆ ನೇಮಕ * 6 ಮಂದಿ ಆಯ್ಕೆ ಮಾಡಿ ಸರ್ಕಾರದ ಆದೇಶ ಪ್ರಕಟ * ತೀರ್ಥಹಳ್ಳಿಯಲ್ಲಿ ಸ್ನೇಹಿತರಿಂದ ಪೂರ್ಣೇಶ್ ಅವರಿಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ) ಸಮಿತಿಗೆ 6 ಮಂದಿಯನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ. ಮಂಡಗದ್ದೆ ಮಹೇಶ್ ಗೌಡ, ಮೇಳಿಗೆ ಪೂರ್ಣೇಶ್, ಶೇಡ್ಗರ್ ಕರುಣಾಕರ, ಸುರೇಶ್, ಜೀನಾ ವಿಕ್ಟರ್ ಡಿಸೋಜಾ, ಅನ್ನಪೂರ್ಣ ಮೋಹನ್ ಅವರುಗಳು ಕೆಡಿಪಿ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ‘ನೂತನ ಕೆಡಿಪಿ ಸದಸ್ಯರನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡರು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಪೂರ್ಣೇಶ್ ಕೆಳಕೆರೆ ಅವರಿಗೆ ಸ್ನೇಹಿತರ ಸನ್ಮಾನ ತೀರ್ಥಹಳ್ಳಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ)ಸಮಿತಿಗೆ ಸರ್ಕಾರದ ನಾಮಕರಣ ಸದಸ್ಯರಾಗಿ ಆಯ್ಕೆ ಆದ ಕೆಳಕೆರೆ ಪೂರ್ಣೇಶ್ ಅವರಿಗೆ ಅಭಿಮಾನಿ ಬಳಗದಿಂದ ಅಭಿನಂದನಾ ಸನ್ಮಾನ ನಡೆಯಿತು. ತೀರ್ಥಹಳ್ಳಿ ಯುವ…

Read More

ಮಂಗಳೂರು ಬಳ್ಳಾಲ್‌ಬಾಗ್‌ ಅ. 12ಕ್ಕೆ ಪಿಲಿ ನಲಿಕೆ!! * ಎಕ್ಕಾರ್‌ ಪಿಲಿ,ಅಮ್ಮನ ಸೇವೆಯೇ ಗುರಿ! * ಬಂಟ್ವಾಳದಲ್ಲಿ ಯುವತಿಯೇ ಬ್ಲ್ಯಾಕ್‌ ಟೈಗರ್‌ * ಕುಂದಾಪುರ ಹುಲಿ ವೇಷಧಾರಿಗಳಿಗೆ ಕೆಂಪು ಬಟ್ಟೆ ಕಡ್ಡಾಯ! * ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ! NAMMUR EXPRESS NEWS ಮಂಗಳೂರು: ದಸರಾ ಸಡಗರದ ಮಧ್ಯೆ ನಡೆಯಲಿರುವ ಹುಲಿ ವೇಷದ ಅಬ್ಬರಕ್ಕೆ ಈ ಬಾರಿ ತಾರಾ ಮೆರುಗು ಆಕರ್ಷಣೆ ಹುಟ್ಟುಹಾಕಿದೆ. ಅ. 12ರಂದು ಬಳ್ಳಾಲ್‌ಬಾಗ್‌ನಲ್ಲಿ ನಡೆಯಲಿರುವ ಹುಲಿವೇಷದ ಪೂರ್ವಭಾವಿಯಾಗಿ ಹಮ್ಮಿಕೊಳ್ಳುವ “ಊದುಪೂಜೆ’ಗೆ ಖ್ಯಾತ ಬಾಲಿವುಡ್‌ ನಟ ಸಂಜಯ್‌ ದತ್‌ ಆಗಮಿಸಲಿದ್ದಾರೆ ಎನ್ನಲಾಗಿದೆ. ಅ. 12ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ “ಪಿಲಿ ನಲಿಕೆ’ಯಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರ ಶಿವಂ ದುಬೆ ಅವರಲ್ಲದೇ ಬಾಲಿವುಡ್‌ ನಟ ಅಹನ್‌ ಶೆಟ್ಟಿ, ನಟರಾದ ರಿಷಭ್‌ ಶೆಟ್ಟಿ, ರಾಜ್‌ ಬಿ.ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಎಕ್ಕಾರ್‌ ಪಿಲಿ,ಅಮ್ಮನ ಸೇವೆಯೇ ಗುರಿ ಬಜಪೆ: ಎಕ್ಕಾರಿನ ಸಮಸ್ತ ಜನರ ಭಕ್ತಿ ಭಾವದ ಪ್ರತೀಕವಾಗಿ ಕಟೀಲು…

Read More

ದಸರಾ ಸಂಭ್ರಮಕ್ಕೆ ಮಳೆ ಅಡ್ಡಿ! – ರಾಜ್ಯದಲ್ಲಿ ಒಂದು ವಾರ ಮಳೆ ಅಲರ್ಟ್  – ಮಲೆನಾಡಲ್ಲಿ ಭೀಕರ ಮಳೆ  NAMMUR EXPRESS NEWS  ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆ ಶುರುವಾಗಿದ್ದು, ಹಲವೆಡೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ದಸರಾ ಸಂಭ್ರಮಕ್ಕೆ ಮಂಕು ಆವರಿಸಿದೆ. ಮೈಸೂರು ಸೇರಿ ರಾಜ್ಯದಲ್ಲಿ ಎಲ್ಲಾ ಕಡೆ ದಸರಾ ಸಂಭ್ರಮ ಕಳೆಗಟ್ಟಿದೆ. ಗುರುವಾರದಿಂದ ರಜೆ ಕೂಡ ಇದೆ. ಆದರೆ ಮಳೆ ಸಂಭ್ರಮಕ್ಕೆ ಅಡ್ಡಿ ಮಾಡಿದೆ. ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದಲೇ ಮಳೆ ಶುರುವಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಈ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.

Read More

ಇತಿಹಾಸ ಪ್ರಸಿದ್ಧ ಕುಂಭಾಸಿಯಲ್ಲಿ ನವ ರಾತ್ರಿ ಸಂಭ್ರಮ! * ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನಿಗೆ ಉಘೇ ಉಘೇ * ಅ. 10ರಿಂದ ಯಾವ ಯಾವ ಕಾರ್ಯಕ್ರಮ? NAMMUR EXPRESS NEWS ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.12ರ ವರೆಗೆ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಅ.09ರಂದು ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಮುಂಡಹಾ ದುರ್ಗಾ ಪೂಜೆ, ಸರಸ್ವತಿ ಹೋಮ. ಚಂಡಿಕಾ ಹೋಮ ಮೂಲಾ ನಕ್ಷತ್ರ- ದೇವಸ್ಥಾನದ ವತಿಯಿಂದ ಮಹಾಪೂಜೆ ಮತ್ತು ಅನ್ನಸಂತರ್ಪಣೆ,ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ನಡೆಯಿತು. ಅ. 10ರಿಂದ ಯಾವ ಯಾವ ಕಾರ್ಯಕ್ರಮ? ಅ.10ರಂದು ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ನಿಶುಂಭಹಾ ದುರ್ಗಾ ಪೂಜೆ, ದುರ್ಗಾ ಹೋಮ, ಚಂಡಿಕಾ ಹೋಮ…

Read More