ಮಂಗಳೂರು ಬಳ್ಳಾಲ್‌ಬಾಗ್ ಅ. 12ಕ್ಕೆ ಪಿಲಿ ನಲಿಕೆ!! * ಎಕ್ಕಾರ್ ಪಿಲಿ,ಅಮ್ಮನ ಸೇವೆಯೇ ಗುರಿ! * ಬಂಟ್ವಾಳದಲ್ಲಿ ಯುವತಿಯೇ ಬ್ಲ್ಯಾಕ್ ಟೈಗರ್ * ಕುಂದಾಪುರ ಹುಲಿ ವೇಷಧಾರಿಗಳಿಗೆ ಕೆಂಪು ಬಟ್ಟೆ ಕಡ್ಡಾಯ! * ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ! NAMMUR EXPRESS NEWS ಮಂಗಳೂರು: ದಸರಾ ಸಡಗರದ ಮಧ್ಯೆ ನಡೆಯಲಿರುವ ಹುಲಿ ವೇಷದ ಅಬ್ಬರಕ್ಕೆ ಈ ಬಾರಿ ತಾರಾ ಮೆರುಗು ಆಕರ್ಷಣೆ ಹುಟ್ಟುಹಾಕಿದೆ. ಅ. 12ರಂದು ಬಳ್ಳಾಲ್‌ಬಾಗ್‌ನಲ್ಲಿ ನಡೆಯಲಿರುವ ಹುಲಿವೇಷದ ಪೂರ್ವಭಾವಿಯಾಗಿ ಹಮ್ಮಿಕೊಳ್ಳುವ “ಊದುಪೂಜೆ’ಗೆ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಆಗಮಿಸಲಿದ್ದಾರೆ ಎನ್ನಲಾಗಿದೆ. ಅ. 12ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ “ಪಿಲಿ ನಲಿಕೆ’ಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ ಅವರಲ್ಲದೇ ಬಾಲಿವುಡ್ ನಟ ಅಹನ್ ಶೆಟ್ಟಿ, ನಟರಾದ ರಿಷಭ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಎಕ್ಕಾರ್ ಪಿಲಿ,ಅಮ್ಮನ ಸೇವೆಯೇ ಗುರಿ ಬಜಪೆ: ಎಕ್ಕಾರಿನ ಸಮಸ್ತ ಜನರ ಭಕ್ತಿ ಭಾವದ ಪ್ರತೀಕವಾಗಿ ಕಟೀಲು…
Author: Nammur Express Admin
ದಸರಾ ಸಂಭ್ರಮಕ್ಕೆ ಮಳೆ ಅಡ್ಡಿ! – ರಾಜ್ಯದಲ್ಲಿ ಒಂದು ವಾರ ಮಳೆ ಅಲರ್ಟ್ – ಮಲೆನಾಡಲ್ಲಿ ಭೀಕರ ಮಳೆ NAMMUR EXPRESS NEWS ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆ ಶುರುವಾಗಿದ್ದು, ಹಲವೆಡೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ದಸರಾ ಸಂಭ್ರಮಕ್ಕೆ ಮಂಕು ಆವರಿಸಿದೆ. ಮೈಸೂರು ಸೇರಿ ರಾಜ್ಯದಲ್ಲಿ ಎಲ್ಲಾ ಕಡೆ ದಸರಾ ಸಂಭ್ರಮ ಕಳೆಗಟ್ಟಿದೆ. ಗುರುವಾರದಿಂದ ರಜೆ ಕೂಡ ಇದೆ. ಆದರೆ ಮಳೆ ಸಂಭ್ರಮಕ್ಕೆ ಅಡ್ಡಿ ಮಾಡಿದೆ. ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದಲೇ ಮಳೆ ಶುರುವಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಈ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.
ಇತಿಹಾಸ ಪ್ರಸಿದ್ಧ ಕುಂಭಾಸಿಯಲ್ಲಿ ನವ ರಾತ್ರಿ ಸಂಭ್ರಮ! * ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನಿಗೆ ಉಘೇ ಉಘೇ * ಅ. 10ರಿಂದ ಯಾವ ಯಾವ ಕಾರ್ಯಕ್ರಮ? NAMMUR EXPRESS NEWS ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.12ರ ವರೆಗೆ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಅ.09ರಂದು ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಮುಂಡಹಾ ದುರ್ಗಾ ಪೂಜೆ, ಸರಸ್ವತಿ ಹೋಮ. ಚಂಡಿಕಾ ಹೋಮ ಮೂಲಾ ನಕ್ಷತ್ರ- ದೇವಸ್ಥಾನದ ವತಿಯಿಂದ ಮಹಾಪೂಜೆ ಮತ್ತು ಅನ್ನಸಂತರ್ಪಣೆ,ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ನಡೆಯಿತು. ಅ. 10ರಿಂದ ಯಾವ ಯಾವ ಕಾರ್ಯಕ್ರಮ? ಅ.10ರಂದು ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ನಿಶುಂಭಹಾ ದುರ್ಗಾ ಪೂಜೆ, ದುರ್ಗಾ ಹೋಮ, ಚಂಡಿಕಾ ಹೋಮ…
ಇನ್ನು ಕಾಫಿ ಪುಡಿ ದುಬಾರಿ! – ಕಾಫಿ ಬೆಲೆ ಹೆಚ್ಚಳ ಸಾಧ್ಯತೆ: ಏಕೆ ಬೆಲೆ ಏರಿಕೆ? – ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ! NAMMUR EXPRESS NEWS ಬೆಂಗಳೂರು: ಹಾಲಿನ ಬೆಲೆ ಏರಿಕೆ ಜೊತೆಗೆ ಕಾಫಿ ಪುಡಿಬೆಲೆಯೂ ಹೆಚ್ಚಾಗುತ್ತಿದ್ದು, ಕಾಫಿ ಪ್ರಿಯರಿಗೆ ಕಹಿ ಅನುಭವವಾಗತೊಡಗಿದೆ. ಅ. 15ರಿಂದ ಪ್ರತೀ ಕೆಜಿ ಕಾಫಿ ಪುಡಿ ಮೇಲೆ 100 ರೂ. ದುಬಾರಿಯಾಗಲಿದೆ. ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಶನ್ (ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಕಾಫಿ ಪುಡಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಗಳು ಹಾಗೂ ಕೆಫೆಗಳಲ್ಲಿಯೂ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಕಾಫಿ ಬೆಲೆ ಏರಿಕೆ ಏಕೆ? ಹವಾಮಾನ ವೈಪರೀತ್ಯದಿಂದಾದಿ ಬೆಳೆ ಇಳಿಕೆಯಾಗಿದೆ. ಈಗಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ. ಜಾಗತಿಕವಾಗಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ವಿವಿಧ ಅಂಶಗಳಿಂದ ಅದರ ಉತ್ಪಾದನೆಯು…
ದೇವತಾ ಮನುಷ್ಯ ರತನ್ ಟಾಟಾ ಇನ್ನಿಲ್ಲ! – ದುಡಿದ ಹಣವನ್ನು ಸಮಾಜಕ್ಕಾಗಿ ದಾನ ಮಾಡಿದ್ದ ಉದ್ಯಮಿ – ಲಕ್ಷ ಲಕ್ಷ ಕುಟುಂಬಗಳಿಗೆ ಅನ್ನ ನೀಡಿದ ಸಿಂಪಲ್ ವ್ಯಕ್ತಿ – ವಯೋ ಸಹಜ ಅನಾರೋಗ್ಯದಿಂದ ಸಾವು: ದೇಶದ ಕಣ್ಣೀರು NAMMUR EXPRRSS NEWS ದೇಶದ ಮುಂಚೂಣಿ ಉದ್ಯಮಿ, ಮಾನವೀಯತೆಯ ಇನ್ನೊಂದು ಮುಖವಾಗಿದ್ದ ರತನ್ ಟಾಟಾ ಮುಂಬೈನಲ್ಲಿ 86 ನೇ ವಯಸ್ಸಿನಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಇಡೀ ದೇಶ ಅವರ ಸಾವಿಗೆ ಕಂಬನಿ ಮಿಡಿದಿದೆ. ಟಾಟಾ ಅವರಿಗೆ ಭಾರತ ಸರ್ಕಾರವು 2008ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು. ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿ ಎಲ್ಲಾ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವಿವಾಹಿತರಾಗಿದ್ದ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಬುಧವಾರ ಆರೋಗ್ಯ…
ತೀರ್ಥಹಳ್ಳಿ ತಾಲೂಕಲ್ಲಿ ವರುಣನ ಆರ್ಭಟ: ಜನರ ಸಂಕಟ! – ಮಲೆನಾಡಲ್ಲಿ ಅಡಿಕೆ ಕೃಷಿ ಸೇರಿ ಅನೇಕರಿಗೆ ತೊಂದರೆ – ತೀರ್ಥಹಳ್ಳಿ ಗಡಿ ಅಲಸೆ ಬಳಿ ಕೊಚ್ಚಿ ಹೋದ ರಸ್ತೆ, ಸೇತುವೆ – ತೀರ್ಥಹಳ್ಳಿ – ಕುಂದಾಪುರ ಹೈವೇಯಲ್ಲಿ ಹೊಂಡ ಗುಂಡಿ..! NAMMUR EXPRESS NEWS ತೀರ್ಥಹಳ್ಳಿ: ಮಳೆಗಾಲ ಮುಗಿದರೂ ಇನ್ನು ಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೃಷಿ ಚಟುವಟಿಕೆಗಳನ್ನು ಸರಿಯಾದ ಸಮಯಕ್ಕೆ ನಡೆಸಲು ಸಾಧ್ಯವಾಗುತ್ತಿಲ್ಲ ಜೊತೆಗೆ ಮಲೆನಾಡಲ್ಲಿ ಅಡಿಕೆ ಕೊಯ್ಲಿಗೆ ಬಂದಿರುವುದರಿಂದ ಅಡಿಕೆ ಕೊಯ್ಲು ಮಾಡಲು ಜನ ಸಂಕಷ್ಟಪಡುತ್ತಿದ್ದಾರೆ. ಅಡಿಕೆ ಕೊಳೆ ರೋಗಕ್ಕೆ ತುತ್ತಾಗಿದೆ. ಬಿಸಿಲು ಕಾಣದೆ ಜನ ಕೃಷಿ ಚಟುವಟಿಕೆಯನ್ನು ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಲಸೆ ಬಳಿ ಕೊಚ್ಚಿ ಹೋದ ರಸ್ತೆ, ಸೇತುವೆ! ತೀರ್ಥಹಳ್ಳಿ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಗಡಿ ಪ್ರದೇಶ ಅಲಸೆ ಹಾಗು ದೋಬೈಲು(ಬುಕ್ಕಿವರೆ) ಮಾರ್ಗವಾಗಿ ಸಂಚರಿಸುವ ರಸ್ತೆ ,ಸೇತುವೆ ಕೊಚ್ಚಿ…
ಅನಿವಾಸಿ ಭಾರತೀಯರಿಗೆ ಡಾ.ಆರತಿ ಕೃಷ್ಣ ಆಸರೆ! * ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ * ಎನ್ ಆರ್ ಕೆ ಹೆಸರಿನಲ್ಲಿ ವಿದೇಶದಲ್ಲಿರುವ ಕನ್ನಡಿಗರಿಗೆ ಗುರುತಿನ ಚೀಟಿ * ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ವಿದೇಶದಲ್ಲಿನ ಕನ್ನಡಿಗರಿಗೆ ಸಹಕಾರ,ಸಮಸ್ಯೆಗೆ ಪರಿಹಾರ NAMMUR EXPRESS NEWS ಕೊಪ್ಪ: ಸುಮಾರು 18 ಕೋಟಿಯಷ್ಟು ಭಾರತೀಯ ಜನರು ವಿದೇಶದಲ್ಲಿದ್ದು ನಮ್ಮ ಸಮಿತಿಯಿಂದ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಸಚಿವಾಲಯ ಆರಂಭಗೊಂಡಲ್ಲಿ ಹೊರ ದೇಶದ ಕನ್ನಡಿಗರಿಗೆ ಭದ್ರತೆ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಕೇರಳ ಸಚಿವಾಲಯ ತೆರೆದಿದ್ದು ತಮಿಳನಾಡು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಪಂಜಾಬ್ ಸರ್ಕಾರ ಇಲಾಖೆ ಹೊಂದಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದ್ದಾರೆ. 2016ರಲ್ಲಿ ಸಿದ್ದರಾಯಯ್ಯ ಅವರ ಸರ್ಕಾರದಲ್ಲಿ ಸಚಿವಾಲಯ ಆರಂಭಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಚುನಾವಣೆ ಕಾರಣ ಹಾಗೇ ಸ್ಥಗಿತವಾಗಿತ್ತು. ಈಗ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ಸಿ ಎಂ ಆಗಿದ್ದಾರೆ,ಈ ಪ್ರಕ್ರಿಯೆಗೆ ವೇಗ ದೊರಕಿದೆ ಎಂದರು. ಜಿಲ್ಲಾ…
ಹಾಸನಾಂಬೆ ದರ್ಶನದಲ್ಲಿ ಎಲ್ಲರಿಗೂ ಸಿಗಲು ಆಗಲಿ ಬದಲಿ ವ್ಯವಸ್ಥೆ – ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಮನವಿ – ವಿ.ಐ.ಪಿ ವ್ಯವಸ್ಥೆಯಿಂದ ಜನ ಸಾಮಾನ್ಯರಿಗೆ ಸಿಗದ ದೇವಿ ದರ್ಶನ NAMMUR EXPRESS NEWS ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲು ಅಕ್ಟೋಬರ್ ೨೪ರಂದು ಬಾಗಿಲು ತೆಗೆಯಲಿದ್ದು, ವರ್ಷಕ್ಕೆ ಒಮ್ಮೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಶ್ರೀ ಹಾಸನಾಂಬೆ ದೇವಿ ದರ್ಶನದಿಂದ ಲಕ್ಷಾಂತರ ಭಕ್ತರು ತಮ್ಮ ಜೀವನವು ಪಾವನವಾಯಿತು ಎಂದು ಬಯಸುವ ಎಲ್ಲ ಭಕ್ತರಿಗೂ ಸುಗಮವಾಗಿ ಹಾಗೂ ಶೀಘ್ರವಾಗಿ ಶ್ರೀ ಹಾಸನಾಂಬೆ ದೇವಿಯ ದರ್ಶನ ಸಿಗಲೆಂಬ ಉದ್ದೇಶದೊಂದಿಗೆ, ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ಕೆಲ ಬದಲಾವಣೆಗಳನ್ನು ಪ್ರಸ್ತುತ ವರ್ಷದಿಂದಲೇ ಅಳವಡಿಸಬೇಕು ಹಾಗೂ ದರ್ಶನ, ಹಾಗೂ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾದಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಗಿದೆ. ಡಾ. ಎನ್. ರಮೇಶ್ ಮಾತನಾಡಿ, ಶ್ರೀ…
ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್? * ಸಚಿವ ಸ್ಥಾನ ಪಡೆದಿದ್ದ ಮುನಿರತ್ನ: ಸಂತ್ರಸ್ತೆಯಿಂದ ಬಾಂಬ್! * ಎಸಿಪಿ, ಸಿಪಿಐ ಅಧಿಕಾರಿಗಳನ್ನೂ ಕೂಡ ಹನಿಟ್ರ್ಯಾಪ್? NAMMUR EXPRESS NEWS ಬೆಂಗಳೂರು: ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ನನಗೆ ಸರ್ಕಾದಿಂದ ಭದ್ರತೆ ಕೊಟ್ಟರೆ ಆ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹಾಗೂ ಸಂಬಂಧಿತ ವಿಡಿಯೋವನ್ನು ಕೊಡುತ್ತೇನೆ ಎಂದು ಮುನಿರತ್ನ ಅವರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸತ್ರ ಮಹಿಳೆ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿ ಟಾರ್ಚರ್ ನೀಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುನಿರತ್ನ ಅವರ ಬಳಿ ಯಾವುದೇ ಮಾಧ್ಯಮಗಳ ಬಳಿಯೂ ಇಲ್ಲದಂತಹ ಕ್ಯಾಮೆರಾಗಳಿವೆ. ನಮ್ಮಂಥವರ ಅಸಹಾಯಕತೆ ಬಳಸಿಕೊಂಡು ಮಾಜಿ ಸಿಎಂ, ಸಚಿವರು, ಶಾಸಕರು ಹನಿಟ್ರ್ಯಾಪ್ ವೀಡಿಯೋ ಮಾಡಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಎಸಿಪಿ, ಸಿಪಿಐ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಹಾಗೂ ಮುನಿರತ್ನ ಬ್ರೈನ್ ಮ್ಯಾಪಿಂಗ್…
ಶಿವಮೊಗ್ಗ ಜಿಲ್ಲೆ ಟಾಪ್ ನ್ಯೂಸ್ ಎಲ್ಲೆಡೆ ಹೆಚ್ಚಿದೆ ಶಾರ್ಟ್ ಸರ್ಕ್ಯೂಟ್ ಹುಷಾರ್! – ಆಯನೂರಲ್ಲಿ ಹಾರ್ಡ್ ವೇರ್ ಅಲ್ಲಿ ಶಾರ್ಟ್: ಲಕ್ಷ ಲಕ್ಷ ಹಾನಿ – ಶಿವಮೊಗ್ಗ : ಮೆಗ್ಗಾನ್ ಪಾರ್ಕಿಂಗ್ ಬಳಿ ಲಾಂಗ್ ಹಿಡಿದವರು ಅರೆಸ್ಟ್ – ಶಿವಮೊಗ್ಗ: ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿದ ವ್ಯಕ್ತಿ! NAMMUR EXPRESS NEWS ಆಯನೂರು : ಶಾರ್ಟ್ ಸರ್ಕ್ಯೂಟ್‌ನಿಂದ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ ತಗುಲಿ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಆಹುತಿಯಾದ ಘಟನೆ ಆಯನೂರಿನಲ್ಲಿ ನಡೆದಿದೆ. ಆರ್.ವಿ.ಟ್ರೇಡರ್ಸ್ ಕಬ್ಬಿಣ ಹಾಗೂ ಸಿಮೆಂಟ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕಿಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಹೊತ್ತಿದ ಕೆಲವೇ ನಿಮಿಷದಲ್ಲಿ ವ್ಯಾಪಕವಾಗಿ ಹರಡಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಮೆಸ್ಕಾಂ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. – ಶಿವಮೊಗ್ಗ : ಮೆಗ್ಗಾನ್ ಪಾರ್ಕಿಂಗ್…