Author: Nammur Express Admin

ಮಲೆನಾಡು ಮಿತ್ರ ವೃಂದದಿಂದ ಕಾರ್ಯಕ್ರಮ – ಮಲೆನಾಡಿಗರ ಕ್ರೀಡಾಕೂಟ 2025: ಸರ್ವರಿಗೂ ಸ್ವಾಗತ – ಕ್ರೀಡಾಕೂಟದಲ್ಲಿ ಸಾವಿರಾರು ಮಲೆನಾಡಿಗರಿಗೆ ಅವಕಾಶ NAMMUR EXPRESS NEWS ಬೆಂಗಳೂರು: ಮಲೆನಾಡಿಗರ ಹೆಮ್ಮೆಯ ಸಂಘಟನೆ ಮಲೆನಾಡು ಮಿತ್ರ ವೃಂದ (ರಿ.) ಬೆಂಗಳೂರು ಇವರ ಸಹಯೋಗದಲ್ಲಿ ಮಲೆನಾಡಿಗರ ಕ್ರೀಡಾಕೂಟ 2025 ಜನವರಿ 12, 2025 ಭಾನುವಾರದಂದು ಹೆಚ್.ಎಂ.ಟಿ. ಆಟದ ಮೈದಾನ, ಜಾಲಹಳ್ಳಿ, ಬೆಂಗಳೂರು ಇಲ್ಲಿ ನಡೆಯಲಿದೆ. ಸಾವಿರಾರು ಮಲೆನಾಡಿಗರು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನು ಕರೆತನ್ನಿ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 2025ರ ಕ್ಯಾಲೆಂಡರ್ ಅನ್ನು ವಿತರಿಸಲಾಗುವುದು. ಎಲ್ಲರಿಗೂ ಈ ಕ್ರೀಡಾಕೂಟಕ್ಕೆ ಸ್ವಾಗತಿಸಲಾಗಿದೆ. ಮಲೆನಾಡು ಮಿತ್ರ ವೃಂದದ ಅಧ್ಯಕ್ಷರಾದ ಹೆಗ್ಗೋಡು ಪ್ರದೀಪ್ ಹಾಗೂ ಎಲ್ಲಾ ಪದಾಧಿಕಾರಿಗಳು ಮಲೆನಾಡಿನ ಸರ್ವರನ್ನು ಸ್ವಾಗತಿಸಿದ್ದಾರೆ

Read More

ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಹಿರಿಮೆ! * ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ * ‘ಕಾಂತಾರ’ ನಟನೆಗಾಗಿ ಬೆಸ್ಟ್‌ ಆ್ಯಕ್ಟ‌ರ್ ನ್ಯಾಷನಲ್ ಅವಾರ್ಡ್‌ NAMMUR EXPRESS NEWS ಬೆಂಗಳೂರು :ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಬೆಸ್ಟ್‌ ಆ್ಯಕ್ಟ‌ರ್ ನ್ಯಾಷನಲ್ ಅವಾರ್ಡ್‌ ಪಡೆದುಕೊಂಡಿದ್ದಾರೆ. 2022ರಲ್ಲಿ ‘ಹೊಂಬಾಳೆ ಫಿಲ್ಸ್’ ಮೂಲಕ ನಿರ್ಮಾಣಗೊಂಡ ‘ಕಾಂತಾರ’ ಸಿನಿಮಾಕ್ಕೆ ಸ್ವತಃ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಭೂತಕೋಲದ ಕಥೆ ಇರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋ‌ರ್, ಅಚ್ಯುತ್ ಕುಮಾರ್, ಪ್ರಮೋದ್‌ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶಕನಕ್ಕೆ ಯಶಸ್ಸು ಕಂಡಿತ್ತು. ಕನ್ನಡ ಮಾತ್ರವಲ್ಲೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿಯೂ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ರಿಷಬ್ ಶೆಟ್ಟಿ ಅವರು ಪ್ರಶಸ್ತಿ ಪದಾನ…

Read More

ಕರ್ನಾಟಕ ಟಾಪ್ ನ್ಯೂಸ್ ಮಂಗಳೂರು: ಮುಮಾಝ್ ಅಲಿ ಆತ್ಮಹತ್ಯೆ: ಆರೋಪಿಗಳು ಅರೆಸ್ಟ್! ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಗ್ಯದಲ್ಲಿ ಏರುಪೇರು ರೇಪ್: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೇಸ್ NAMMUR EXPRESS NEWS ಸುರತ್ಕಲ್: ಕೃಷ್ಣಾಪುರದ ಉದ್ಯಮಿ, ಮಾಜಿ ಶಾಸಕ ಮೊಯಿದೀನ್ ಬಾವ ಸಹೋದರ ಮುಮಾಝ್ ಅಲಿ ಸಾವು ಕುರಿತಂತೆ ತನಿಖೆ ಚುರುಕುಗೊಳಿಸಿರುವ ಮಂಗಳೂರು ಉತ್ತರ ಉಪವಿಭಾಗದ ಪೊಲೀಸ್ ಉಪ ಆಯುಕ್ತ ಮನೋಜ್ ಕುಮಾ‌ರ್ ನೇತೃತ್ವದ ಪೊಲೀಸರ ತಂಡ ಪ್ರಕರಣದ ಎ1 ಆರೋಪಿ ರಹಮತ್ ಸೇರಿ ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಮುತ್ತಾಝ್ ಅಲಿ ಸಾವು ಪ್ರಕರಣದಕ್ಕೆ ಸಂಬಂಧಿಸಿ A1 ಆರೋಪಿ ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ರೆಹಮತ್ (41) ಆಕೆಯ ಪತಿ A5 ಆರೋಪಿ ಶುಐಬ್ ಹಾಗೂ ಆರೋಪಿ ಸತ್ತಾರ್ ಎಂಬವರ ಕಾರು ಚಾಲಕ ಎ 6 ಆರೋಪಿ ಸಿರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಇನ್ನೂ…

Read More

ರಾಜ್ಯದೆಲ್ಲೆಡೆ ಮಳೆ ಕಂಟಕ!! * ಅಬ್ಬರಿಸುತ್ತಿರುವ ಭಾರಿ ಮಳೆ * ಎಲ್ಲೆಲಿ ಅಲರ್ಟ್ ಘೋಷಣೆ?? NAMMUR EXPRESS NEWS ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯೊಂದಿಗೆ ವ್ಯಾಪಕವಾದ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ…

Read More

200ರೂಪಾಯಿ ನೋಟ್ ಬ್ಯಾನ್? – 2,000 ರೂಪಾಯಿ ಹಿಂಪಡೆದ ರಿಸರ್ವ್ ಬ್ಯಾಂಕ್‌ – ಮಾರುಕಟ್ಟೆಯಿಂದ 200 ರೂ.ಮುಖಬೆಲೆ 137 ಕೋಟಿ ಹಣ ವಾಪಾಸ್ NAMMUR EXPRESS NEWS ಮುಬೈ: ರಿಸರ್ವ್ ಬ್ಯಾಂಕ್‌ ಆಫ್ ಮುಂಬೈ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಂಡಿದೆ. ಎಲ್ಲಾ 2 ಸಾವಿರ ಮುಖಬೆಲೆ ನೋಟು ತಲುಪುವ ಮೊದಲೇ ಈಗ 200 ರೂ. ಮುಖಬೆಲೆ ನೋಟ್ ಹಿಂಪಡೆಯುವ ಕೆಲಸ ಆರ್‌ಬಿಐ ಮಾಡುತ್ತಿದೆ. ಕೆಲಗಳ ಪ್ರಕಾರ, ಆರ್‌ಬಿಐ ವರದಿ ಮಾರುಕಟ್ಟೆಯಿಂದ 200 ರೂ. ಮುಖಬೆಲೆಯ ಅಂದಾಜು 137 ಕೋಟಿ ಮೌಲ್ಯದ ಹಣ ಹಿಂಪಡೆದುಕೊಂಡಿದೆ. ಕಳೆದ ಆರು ತಿಂಗಳಿನಿಂದಲೇ ಆರ್‌ಬಿಐ ಹಣ ಹಿಂಪಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆರ್‌ಬಿಐ ಹಣ ಹಿಂಪಡೆಯುವುದು ಯಾಕೆ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ. ನೋಟುಗಳನ್ನು ಹಿಂಪಡೆಯುವ ಹಿಂದಿನ ಉದ್ದೇಶ ಬೇರೆಯಾಗಿದೆ. ಆರ್‌ಬಿಐ ನೋಟ್ ಬ್ಯಾನ್ ಮಾಡಲು ಹಣ ಹಿಂಪಡೆಯುತ್ತಿಲ್ಲ, ಬದಲಾಗಿ ನೋಟುಗಳ ಕಳಪೆ ಸ್ಥಿತಿಯಿಂದ ವಾಪಸ್‌ ಪಡೆಯುತ್ತಿದೆ. ಆರ್‌ಬಿಐ ತನ್ನ ಅರ್ಧ ವಾರ್ಷಿಕ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ನವರಾತ್ರಿ 7ನೇ ದಿನ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ಕೂಡಿದ ದಿನವಾಗಿರಲಿದೆ. ಕುಟುಂಬದಲ್ಲಿ ಆಸ್ತಿಗಾಗಿ ಜಗಳಗಳು ಹೆಚ್ಚಾಗುತ್ತವೆ, ಇದರಿಂದಾಗಿ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಜವಾಬ್ದಾರಿಯಲ್ಲಿ ವಿಶ್ರಾಂತಿ ಪಡೆಯಬೇಡಿ. ಉದ್ಯೋಗ ಬದಲಾಯಿಸಲು ಯೋಜಿಸುತ್ತಿರುವವರು ಸ್ವಲ್ಪ ಜಾಗರೂಕರಾಗಿರಬೇಕು. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಏರಿಳಿತಗಳಿಂದ ಕೂಡಿದ ದಿನವಾಗಿರಲಿದೆ. ನೀವು ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು. ನಿಮ್ಮ ಬಾಸ್ ನಿಮಗೆ ಜವಾಬ್ದಾರಿಗಳನ್ನು ಹೊರೆಸಬಹುದು, ಆದರೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಭಾವನೆಗಳನ್ನು ಸಹೋದ್ಯೋಗಿಗೆ ವ್ಯಕ್ತಪಡಿಸಬಹುದು. ನಿಮ್ಮ ಹಳೆಯ ಸ್ನೇಹಿತನನ್ನು ನೀವು ಭೇಟಿಯಾಗುತ್ತೀರಿ. ** ಮಿಥುನ…

Read More

ದಿಶಾ ಭರತ್ ಅವರಿಗೆ ಬೆಸ್ಟ್ ವೆಯಿಟ್ ಲಿಫ್ಟರ್ 2024 ಪ್ರಶಸ್ತಿ – ರಾಜ್ಯ ಮಟ್ಟದಲ್ಲಿ 3 ಚಿನ್ನದ ಪದಕಗಳೊಂದಿಗೆ ಉತ್ತಮ ಸಾಧನೆ – ಪ್ರಸಿದ್ಧ ಜಿಮ್ ಟ್ರೈನರ್ ಭರತ್ ಅವರ ಪತ್ನಿ ದಿಶಾ ಸಾಧನೆ NAMMUR EXPRESS NEWS ಬೆಂಗಳೂರು: ಕರ್ನಾಟಕ ಸ್ಟೇಟ್ ಪವರ್ ಲಿಫ್ಟರ್ ಅಸೋಶಿಯೇಶನ್, ಪವರ್ ಲಿಫ್ಟರ್ ಫೆಡರೇಷನ್ ಇಂಡಿಯಾ ಸಹಯೋಗದಲ್ಲಿ ನಡೆದ ಸ್ಟೇಟ್ ಲೆವೆಲ್ ಪವರ್ ಲಿಫ್ಟಿಂಗ್ ಕಾಂಪಿಟೇಶನ್ 2024 ರಲ್ಲಿ ಮಹಿಳೆ ಮತ್ತು ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪಿ.ಕೆ.ಕ್ಲಾಸಿಕ್ 2024 ಮಹಿಳಾ ವಿಭಾಗದಲ್ಲಿ ದಿಶಾ ಭರತ್ ಅವರು ಮೂರು ಚಿನ್ನದ ಪದಕಗಳೊಂದಿಗೆ ಬೆಸ್ಟ್ ವೆಯಿಟ್ ಲಿಫ್ಟರ್ 2024 ಪ್ರಶಸ್ತಿ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಪುಶ್ ಫುಲ್ ಪ್ರೆಸ್ ಅಂಡ್ ಡೆಡ್ಲಿ ಫಸ್ಟ್ ಪ್ಲೇಸ್, ಪುಶ್ ಓನ್ಲಿ ಬೆಂಚ್ ಪ್ರೆಸ್ ಫಸ್ಟ್ ಪ್ಲೇಸ್, ಪುಶ್ ಫುಲ್ ಓನ್ಲಿ ಡೆಡ್ ಲಿಫ್ಟ್ ಫಸ್ಟ್ ಪ್ಲೇಸ್, ಕರ್ನಾಟಕದ ಬೆಸ್ಟ್ ವೇಟ್ ಲಿಫ್ಟರ್ ಪ್ರಶಸ್ತಿಯನ್ನ ವುಮೆನ್ ಮಹಿಳಾ ವಿಭಾಗದಲ್ಲಿ ಪಡೆದುಕೊಂಡಿದ್ದಾರೆ. ಕರ್ನಾಟಕ…

Read More

ಕಾಂಗ್ರೆಸ್ಸಲ್ಲಿ ಕೆಲ ಪ್ರಾಮಾಣಿಕ ಯುವ ಕಾರ್ಯಕರ್ತರಿಗೆ ಅನ್ಯಾಯ? – ತೀರ್ಥಹಳ್ಳಿ ಪಟ್ಟಣದಲ್ಲಿ ಸಕ್ರಿಯರಾಗಿರುವ ಯುವ ಮುಖಂಡರು – ಯುವ ಮುಖಂಡ ಶ್ರೀಕಾಂತ್ ಅವರಿಗೆ ಸಿಗದ ಸ್ಥಾನಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಯುವ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ. ಈಗಾಗಲೇ ಅನೇಕ ಸಮಿತಿಗಳನ್ನು ರಚನೆ ಮಾಡಿದ್ದು, ಕೆಲವರಿಗೆ ಯಾವುದೇ ರೀತಿಯ ಹುದ್ದೆಗಳು ಸಿಕ್ಕಿಲ್ಲ ಇದರಿಂದ ಅನೇಕ ಪ್ರಾಮಾಣಿಕ ಕಾರ್ಯಕರ್ತರಿಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಇದೀಗ ತೀರ್ಥಹಳ್ಳಿಯ ಯುವ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ತೀರ್ಥಹಳ್ಳಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀಕಾಂತ್ ಬೆಟ್ಟಮಕ್ಕಿ ಅವರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಗದೇ ಇರುವುದು ಅವರ ಸ್ನೇಹಿತ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ನಡೆಯುವ ಪಕ್ಷದ ಯಾವುದೇ ಸಭೆ ಪ್ರತಿಭಟನೆ ಕಾರ್ಯಕ್ರಮದಲ್ಲಿ ಶ್ರೀಕಾಂತ ಮುಂಚೂಣಿಯಲ್ಲಿರುತ್ತಾರೆ. ಕಳೆದ ಒಂದು ದಶಕದಿಂದ ಪಕ್ಷದ ಪರವಾಗಿ ಬ್ಯಾನರ್ ಹಿಡಿಯುವ ಪ್ರಮುಖರಾಗಿದ್ದಾರೆ. ಆದರೆ ಅವರಿಗೆ ಪಕ್ಷದಲ್ಲಿ ಯಾವುದೇ ರೀತಿಯ ಹೊಣೆ ನೀಡದೆ ಇರುವುದು…

Read More

ಅಯ್ಯೋ ಕರೆಂಟ್ ಶಾಕ್: 3 ಕರಡಿ ದುರಂತ ಸಾವು! – ಆಹಾರ ಹುಡುಕಿ ಬಂದಿದ್ದ ಮೂಕ ಪ್ರಾಣಿಗಳು ಒದ್ದಾಡಿ… ಒದ್ದಾಡಿ… ಜೀವ ತೆತ್ತವು! – ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸಾದರಹಳ್ಳಿಯಲ್ಲಿ ಘಟನೆ NAMMUR EXPRESS NEWS ಅರಸೀಕೆರೆ: ಧಾರಾಕಾರ ಮಳೆ-ಗಾಳಿಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣವಾಗಿ ಸಾವನ್ನಪ್ಪಿರುವ ದುರಂತ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಲ್ಲು ಸಾದರಹಳ್ಳಿ ಬಳಿ ನಡೆದಿದೆ. ಆಹಾರ ಅರಸಿ ಅಲೆದಾಡುತ್ತಿದ್ದ 7 ವರ್ಷದ ಎರಡು ಜೋರಿ ಕರಡಿ ಹಾಗೂ ಒಂದು ವರ್ಷದ ಮರಿ ಜಾಂಬವಂತ ಹಸಿವು ನೀಗಿಸಿಕೊಳ್ಳುವ ಮುನ್ನವೇ ಜೀವ ಕಳೆದುಕೊಂಡಿವೆ. ಈ ದುರಂತ ನಿಜಕ್ಕೂ ಪ್ರತಿಯೊಬ್ಬರೂ ಮಮ್ಮಲ ಮರುವಂತೆ ಮಾಡಿದೆ. ಕಳೆದ ಹಲವು ದಿನಗಳಿಂದ ಅರಸೀಕೆರೆ ಭಾಗದಲ್ಲಿ ಕರಡಿ ಕಾಟ ತುಸು ಮಿತಿ ಮೀರಿದೆ. ಆಹಾರ-ನೀರು ಅರಸಿ ಜಾಂಬವ ಪಡೆ ಕಾಡಿನಿಂದ ನಾಡಿಗೆ ಬರುವುದು ಸಾಮಾನ್ಯವಾಗಿದೆ. ಹೀಗೆಯೇ ಕಾಡಿನಿಂದ ಬಂದು ಅರಣ್ಯದಂಚಿನಲ್ಲೇ ಇದ್ದ ಕಲ್ಲು ಸಾದರಹಳ್ಳಿಯ ರೈತರೊಬ್ಬರ…

Read More

ಮಾನವೀಯತೆ ಮೆರೆದ ನಿಲುವಾಗಿಲು ಹುಡುಗರು! – ಕಳೆದುಕೊಂಡ ಹಣ ಮತ್ತು ಪರ್ಸ್ ಹಿಂತಿರುಗಿಸಿ ನಿಷ್ಠೆ ಮೆರದ ಯುವಕರು! – ಹರಿಹರಪುರದಲ್ಲಿ ಸಿಕ್ಕ ಪರ್ಸ್ ಹಾಗೂ ಅದರಲ್ಲಿದ್ದ 16,000/- ರೂ.ಹಣ NAMMUR EXPRESS NEWS ಕೊಪ್ಪ: ಕೊಪ್ಪ ತಾಲೂಕು ನಿಲುವಾಗಿಲು ಹುಡುಗರು ಈಗ ಮಾನವೀಯತೆ ಮೂಲಕ ಸುದ್ದಿಯಲ್ಲಿದ್ದಾರೆ. ಹರಿಹರಪುರ ಮುಖ್ಯರಸ್ತೆಯಲ್ಲಿ ಸಿಕ್ಕ ಪರ್ಸ್ ಹಾಗೂ ಅದರಲ್ಲಿದ್ದ 16,000/-ರೂ ಕಳೆದುಕೊಂಡವರಿಗೆ ಹಿಂತಿರುಗಿಸಿ ಯುವಕರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿಲುವಾಗಿಲು ಗ್ರಾಮದ ಶರತ್ ಹಾಗೂ ಮುರಳಿ ಎಂಬುವರಿಗೆ ಹರಿಹರಪುರದಲ್ಲಿ ಪರ್ಸ್ ಹಾಗೂ ಅದರಲ್ಲಿ 16,000/- ರೂ. ಹಣ ಸಿಕ್ಕಿತ್ತು. ಪ್ರಾಮಾಣಿಕತೆ ಮೆರೆದ ಯುವಕರು ಹರಿಹರಪುರ ಪೋಲೀಸ್ ಠಾಣೆಗೆ ಒಪ್ಪಿಸಿ ನಂತರ ಪೋಲೀಸರ ಸಮ್ಮುಖದಲ್ಲಿ ಪರ್ಸ್‌ನ ವಾರಸುದಾರರಾದ ಕಮ್ಮರಡಿ ಮೂಲದ ವ್ಯಕ್ತಿಗೆ ಹಿಂದಿರುಗಿಸಿದ್ದಾರೆ. ಈ ಯುವಕರ ಪ್ರಾಮಾಣಿಕತೆಗೆ ಎಲ್ಲೆಡೆಯಿಂದ ಪ್ರಶಂಸೆ ಲಭಿಸಿದೆ.

Read More