ಪುನೀತ್ ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ! ರಾಜ್ಯ ಸರ್ಕಾರದ ಮಹತ್ವದ ನಿರ್ಧಾರಕರ್ನಾಟಕ ರತ್ನ ಪ್ರಶಸ್ತಿ ನೀಡಿಯೂ ಗೌರವಯುವ ಜನತೆಗೆ ಮಾದರಿಯಾದ ಪುನೀತ್! NAMMUR EXPRESS NEWSಬೆಂಗಳೂರು: ಕನ್ನಡ ಖ್ಯಾತ ನಟ, ಮಾನವೀಯತೆಯ ಇನ್ನೊಂದು ಮುಖ, ಪುನೀತ್ ರಾಜ್‌ಕುಮಾರ್ ನಮ್ಮನಗಲಿ ಒಂದು ವರ್ಷ ಕಳೆಯಲು ಇನ್ನೇನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಅವರ ನೆನಪು ಇನ್ನು ಜನ ಮಾನಸದಲ್ಲಿ ಮಾಸಿಲ್ಲ.ರಾಜ್ಯ ಸರ್ಕಾರ ಈಗಾಗಲೇ ಪುನೀತ್ ರಾಜ್‌ಕುಮಾರ್ ಮರಣೋತ್ತರ ಕರ್ನಾಟಕ ರತ್ನವನ್ನು ನೀಡಿ ಗೌರವಿಸಿದೆ. ಇದರ ಜೊತೆಯಲ್ಲಿ ಇದೀಗ ಪುನೀತ್ ಗೌರವಾರ್ಥ ಮತ್ತೊಂದು ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಿಸುವುದಾಗಿ ಹೇಳಿದ್ದಾರೆ. ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈ…
Author: Nammur Express Admin
ತೀರ್ಥಹಳ್ಳಿಯಲ್ಲಿ ಕಾರು ಆಕ್ಸಿಡೆಂಟ್! ಪ್ರತಿಷ್ಠಿತ ಕಾಲೇಜಿನ ಮೂವರ ಸ್ಥಿತಿ ಗಂಭೀರತೀರ್ಥಹಳ್ಳಿಯಲ್ಲಿ ಮಿತಿ ಮೀರಿದ ವಾಹನಗಳ ವೇಗ NAMMUR EXPRESS NEWSತೀರ್ಥಹಳ್ಳಿ ಪಟ್ಟಣದಲ್ಲಿ ಮತ್ತೊಂದು ದುರಂತ ನಡೆದಿದೆ. ಅತೀ ವೇಗದ ಚಾಲನೆ ಮೂವರು ವಿದ್ಯಾರ್ಥಿಗಳ ಕುಟುಂಬವನ್ನು ಆತಂಕ ತಳ್ಳಿದೆ.ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಬುಧವಾರ ರಾತ್ರಿ 10:30ರ ಸುಮಾರಿಗೆ ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಕಾರಿನಲ್ಲಿ ಹೋಗುತ್ತಿರುವಾಗ ತುಡ್ಕಿಯಲ್ಲಿ ತಮಿಳು ನಾಡಿನ ನೋಂದಣಿ ಸಂಖ್ಯೆಯ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಮಣಿಪಾಲ ಮತ್ತು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗಂಭೀರಗೊಂಡಿದ್ದಾರೆ.ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಾದ ಪ್ರಥಮ್, ಶ್ರೇಯಸ್, ಪ್ರತೀಕ್ ಮೂವರನ್ನು ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಓರ್ವನನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾಗೆ ಅ.3ರಿಂದ 14 ದಿನ ರಜೆ NAMMUR EXPRESS NEWSಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆ ಮತ್ತು ಪ್ರಮುಖ ದಿನಾಂಕಗಳ ಕ್ಯಾಲೆಂಡರ್ ಅನ್ನು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 16-05 2022ರಿಂದಲೇ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಕ್ಯಾಲೆಂಡರ್‌ನ ಅನ್ವಯ 2022-23ನೇ ಸಾಲಿನ ಶಾಲಾ ಕರ್ತವ್ಯದ ಮೊದಲನೇ ಅವಧಿ 16-05-2022ರಿಂದಲೇ ಆರಂಭವಾಗಿದೆ. 02-10-2022ರಂದು ಮೊದಲನೇ ಅವಧಿಯ ಶಾಲಾ ಕರ್ತವ್ಯದ ದಿನಗಳು ಮುಗಿಯಲಿದ್ದು, 03-10-2022ರಿಂದ ದಸರಾ ರಜೆ ಆರಂಭವಾಗಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 03, 2022 ರಿಂದ 16, 2022ರವರೆಗೆ, ಒಟ್ಟು 14 ದಿನಗಳ ಕಾಲ ದಸರಾ ರಜೆ ಇರಲಿದೆ. ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆಗೆ ಅಧ್ಯಯನ ಮಾಡಿಕೊಳ್ಳುವ ದೃಷ್ಟಿಯಿಂದ ಈ ರಜೆಯನ್ನು ಪ್ರತಿವರ್ಷ ನೀಡಲಾಗುತ್ತದೆ. ಅಕ್ಟೋಬರ್ 17ರಿಂದ ನವೆಂಬರ್ 25ರವರೆಗೆ…
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೂರನೇ ಸ್ಥಾನ 2023 ರಲ್ಲಿ ಕೋಟಿ ಕೋಟಿ ಉದ್ಯೋಗ ಸೃಷ್ಟಿ, ಮಹಿಳಾ ಪದವೀಧರರೇ ಹೆಚ್ಚು21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು NAMMUR EXPRESS NEWSಹುಬ್ಬಳ್ಳಿ : ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಭಾಗ್ಯದ ಬಾಗಿಲಾಗಿದೆ. ಅಮೆರಿಕ ದೇಶವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಈಟಿ ಕ್ಷೇತ್ರದ ಬೆಳವಣಿಗೆ ಭಾರತದಲ್ಲೆ ನಡೆಯುತ್ತಿದ್ದು, ಸದ್ಯ ನಮ್ಮ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ.ವಿಶ್ವದಲ್ಲಿಯೇ ಸೂಪರ್ ಐಟಿ ಎಕ್ಸಪರ್ಟಗಳನ್ನು ಹೊಂದಿರುವ ದೇಶ ನಮ್ಮದು, ಭಾರತದ ಬೃಹತ್ ಪ್ರತಿಭೆಗಳು ವಿದೇಶದಲ್ಲಿ ಐಟಿ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಐಐಟಿ, ಐಐಐಟಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳು ಹೆಚ್ಚಿನ ತಂತ್ರಜ್ಞರನ್ನು ತಯಾರಿಸುತ್ತಿದ್ದು, ಡಿಜಿಟಲ್ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಇದು ಭಾರತದ ಪ್ರಗತಿಗೆ ಪೂರಕವಾಗಿದೆ. ಪ್ರತಿ ವರ್ಷ 3.8 ಕೋಟಿ ಪದವೀಧರರು : ಪ್ರಸ್ತುತ ಭಾರತದಲ್ಲಿ 1,100 ವಿಶ್ವವಿದ್ಯಾಲಯ ಹಾಗೂ 54 ಸಾವಿರ ತಾಂತ್ರಿಕ ಕ್ಷೇತ್ರದ ಉನ್ನತ ಶಿಕ್ಷಣ…
ಭಲೇ ಲೋಕಾಯುಕ್ತ..ರಾಜ್ಯವಾಗಲಿ ಭ್ರಷ್ಟಾಚಾರ ಮುಕ್ತ! ಸಣ್ಣ ನೌಕರರ ಹಿಂದೆ ಬೀಳುವ ಜತೆಗೆ ದೊಡ್ಡ ಕುಳಗಳ ದಾಳಿ ನಡೆಯಲಿ: ಕೆ. ಆರ್. ಎಸ್ ಪಕ್ಷದ ಆಗ್ರಹಉನ್ನತ ಅಧಿಕಾರಿಗಳು, ಶಾಸಕರು, ಸಚಿವರ ಮೇಲೂ ಇರಲಿ ಕಣ್ಣು! NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಅವಿರತ ಹೋರಾಟದ ಮೂಲಕ ಹೊಸ ಭರವಸೆ ಮೂಡಿಸಿರುವ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆಆರ್ ಎಸ್ ಪಕ್ಷ ರಾಜ್ಯದಲ್ಲಿ ಅಕ್ರಮ ಅಸ್ತಿ, ಹಣ ಗಳಿಕೆಯಲ್ಲಿ ನಿರತರಾಗಿರುವ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರ ವಿರುದ್ಧವೂ ಲೋಕಾಯುಕ್ತ ದಾಳಿ ನಡೆಸುವಂತೆ ಅಗ್ರಹಿಸಿದೆ.ಕೇವಲ ಕೆಳಹಂತದ ಅಧಿಕಾರಿಗಳ ವಿರುದ್ಧದ ದಾಳಿಗೆ ಸೀಮಿತಗೊಳಿಸದೆ IAS/IPS/IFS/KAS/KSPS ಹಾಗೂ ಭ್ರಷ್ಟಶಾಸಕರು, ಮಂತ್ರಿಗಳ ವಿರುದ್ಧವು ದಾಳಿ ಮಾಡಿ ಲೋಕಾಯುಕ್ತದ ಪಾವಿತ್ರ್ಯತೆಯನ್ನು ಮತ್ತು ಘನತೆಯನ್ನು ಹೆಚ್ಚಿಸಬೇಕೆಂದು ನ್ಯಾಯಮೂರ್ತಿಗಳಾದ ಬಿ. ಎಸ್. ಪಾಟೀಲ್ ರವರನ್ನು ಪಕ್ಷದ ವತಿಯಿಂದ ಆಗ್ರಹಿಸಲಾಗುತ್ತಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.ನ್ಯಾಯಮೂರ್ತಿ ಎನ್.ವೆಂಕಟಾಚಲ ಹಾಗೂ ನ್ಯಾಯಮೂರ್ತಿ ಡಾ.ಸಂತೋಷ ಹೆಗಡೆ ಅವರು ಲೋಕಾಯುಕ್ತ ಸಂಸ್ಥೆಗೆ ಗಳಿಸಿಕೊಟ್ಟ ಗೌರವ ಮತ್ತು…
ತೃತೀಯ ಲಿಂಗಿಗಳಿಗೂ ಉದ್ಯೋಗ ನೀತಿ!? ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಅಂಗವಿಕಲ ಮಹಿಳೆ ಫುಡ್ ಡೆಲಿವರಿ: ವಿಡಿಯೋ ವೈರಲ್ NAMMUR EXPRESS NEWSದೆಹಲಿ: ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 2014ರಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ತೃತೀಯಲಿಂಗಿಯೊಬ್ಬರಿಗೆ ಅಂದಿನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಉದ್ಯೋಗ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಸೂಕ್ತ ನೀತಿ ರೂಪಿಸುವ ಮೂಲಕ ಕಾಯಿದೆಯ ನಿಬಂಧನೆಗಳನ್ನು ಅಕ್ಷರ ದಲ್ಲಿ ಜಾರಿಗೊಳಿಸಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ನೇತೃತ್ವ ವಹಿಸಿ, ರಾಜ್ಯ ಸರ್ಕಾರಗಳು ಮತ್ತು ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಸೇರಿದಂತೆ ಇತರೆ ಎಲ್ಲ ಘಟಕಗಳಿಗೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡಬೇಕು ಎಂದು ಪೀಠ ಹೇಳಿದೆ. ನೆಟ್ಟಿಗರ ಮನಸ್ಸು ಗೆದ್ದ ಸ್ವಿಗ್ಗಿ ವೀಲ್‌ಚೇರ್ ಹುಡುಗಿ ಕೈ-ಕಾಲು ಗಟ್ಟಿಯಿದ್ದರೂ ಭಿಕ್ಷೆ ಬೇಡಿ ತಿನ್ನುವವರು ಅನೇಕರಿದ್ದಾರೆ. ಹಾಗಿರುವಾಗ ಯುವತಿಯೊಬ್ಬರು ನಡೆದಾಡುವ…
ಆಮ್ ಆದ್ಮಿ ಪಕ್ಷಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..! ಉತ್ತರ ಕರ್ನಾಟಕದ ಪ್ರಮುಖ ನಾಯಕರ ಸೇರ್ಪಡೆತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿವಿಧಾನ ಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ! NAMMUR EXPRESS NEWSಬೆಂಗಳೂರು: ದೆಹಲಿ, ಪಂಜಾಬ್ ಅಧಿಕಾರ ಹಿಡಿದ ಜನ ಸಾಮಾನ್ಯರ ಪಕ್ಷ ಆಮ್ ಆದ್ಮಿ ಈಗ ಕರ್ನಾಟಕದಲ್ಲಿ ತನ್ನ ತಂತ್ರಗಾರಿಕೆ ಶುರು ಮಾಡಿದೆ.ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರು, ನಾಯಕರು, ವಕೀಲರು, ತಾರೆಯರು, ಪತ್ರಕರ್ತರು, ಪ್ರಸಿದ್ಧ ಹಾಗೂ ಶುದ್ಧ ಹಸ್ತರನ್ನು ತನ್ನ ಪಾರ್ಟಿಗೆ ಸೇರಿಸಿಕೊಳ್ಳುತ್ತಿದೆ.ಪೊಲೀಸ್ ಅಧಿಕಾರಿ ಭಾಸ್ಕರ ರಾವ್, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಬ್ರಿಜೇಶ್ ಕಾಳಪ್ಪ, ಖ್ಯಾತ ವಕೀಲ ದಿವಾಕರ್, ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖರು ಈಗಾಗಲೇ ಪಕ್ಷ ಸೇರಿ ಸಂಘಟನೆ ಶುರು ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣಾ ಅಖಾಡಕ್ಕೆ..?! ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿ…
ತೀರ್ಥಹಳ್ಳಿ ದಸರಾ ಎಷ್ಟೊಂದು ಸುಂದರ…! ಅ.3 ರಿಂದ 5ರವರೆಗೆ ಅದ್ದೂರಿ ದಸರಾ ಆಚರಣೆಗೆ ನಿರ್ಧಾರ15 ಲಕ್ಷ ವೆಚ್ಚದಲ್ಲಿ ಸಂಭ್ರಮದ ದಸರಾ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅದ್ಧೂರಿಯಾಗಿ ದಸರಾ ಉತ್ಸವ ನಡೆಸಲು ಸಿದ್ಧತೆ ನಡೆದಿದ್ದು ಈ ಬಾರಿ ಮಹಿಳಾ ಮತ್ತು ಮಕ್ಕಳ ದಸರಾ ಕೂಡ ಗಮನ ಸೆಳೆಯಲಿದೆ.ಮಲೆನಾಡಿನಲ್ಲಿ ಸಾಂಸ್ಕೃತಿಕ ವೈಭವ ಇರುವ ತೀರ್ಥಹಳ್ಳಿ ದಸರಾ ಭಾರೀ ಫೇಮಸ್. ಇಲ್ಲಿನ ರಾಮೇಶ್ವರ ದೇವರ ಮೆರವಣಿಗೆ ಜತೆಗೆ ದಸರಾ ಸಂಭ್ರಮ, ವಿವಿಧ ಕಲಾ ತಂಡಗಳ ರಂಗು, ಟ್ಯಾಬ್ಲೋಗಳು ಗಮನ ಸೆಳೆಯುತ್ತವೆ. ಹಬ್ಬದ ಮಾದರಿಯಲ್ಲಿ ದಸರಾ ನಡೆಯಲಿದೆ.ಈ ವರ್ಷ ಅದ್ದೂರಿ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷ 7-8 ಲಕ್ಷ ಬಜೆಟ್ ಅಲ್ಲಿ ದಸರಾ ಮುಗಿದಿದ್ದು ಈ ವರ್ಷಸುಮಾರು 15 ಲಕ್ಷ ವೆಚ್ಚದಲ್ಲಿ ದಸರಾ ಆಚರಣೆ ಮಾಡಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 3 ದಿನ ಅದ್ದೂರಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು. ಟ್ಯಾಬ್ಲೋ,…
ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ನಲ್ಲಿ ಕೂಡ ದ್ವಿತೀಯ ಸ್ಥಾನ NAMMUR EXPRESS NEWSಹೆಬ್ರಿ : ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಸ್ ಆರ್ ಎಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು, ಮುನಿಯಾಲ್ ನಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳನ್ನು ಎಸ್ ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ನಲ್ಲಿ ಕೂಡ ದ್ವಿತೀಯ ಸ್ಥಾನ:ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಛೇರಿ ಉಡುಪಿ, ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಎಸ್ ಆರ್ ಆಂಗ್ಲ ಮಾಧ್ಯಮ ಶಾಲೆ ಹೆಬ್ರಿಯ ಬಾಲಕಿಯರ ತಂಡವು ಅಂಡರ್ -14 ಮತ್ತು ಅಂಡರ್…
ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಮಹಿಳೆಗೆ ವಾಪಾಸ್ NAMMUR EXPRESS NEWSಶಿವಮೊಗ್ಗ: ಮಾನವೀಯತೆ ಎಲ್ಲಡೆ ಪ್ರಶಂಸೆಗೆ ಒಳಗಾಗುತ್ತದೆ. ಯಾವುದೇ ವ್ಯಕ್ತಿ ಮಾನವೀಯತೆ ಕಾರ್ಯ ಮಾಡಿದರೂ ಆತ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಶಿವಮೊಗ್ಗನಗರದಲ್ಲಿ ಆಟೋ ಚಾಲಕ ಮಾನವೀಯತೆ ಮೆರೆದಿದ್ದು, ಇವರ ಕಾರ್ಯಕ್ಕೆ ಜನರು ಪ್ರಶಂಸಿಸುತ್ತಿದ್ದಾರೆ.ಶಿವಮೊಗ್ಗ ನಗರದಲ್ಲಿ ಮಹ್ಮದ್ ಗೌಸ್ ಎಂಬುವರು ಆಟೋ ಚಾಲನೆ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸೆ.10ರಂದು ಅವರ ಆಟೋದಲ್ಲಿ ಮಹಿಳೆ ಶಹತಾಜ್ ಭಾನು ಎಂಬುವರು ನಗರದ ಅಶೋಕ ಸರ್ಕಲ್‌ನಿಂದ ಟಿಪ್ಪುನಗರಕ್ಕೆ ಪ್ರಾಯಾಣಿಸಿದ್ದರು.ಮಹಿಳೆ ಶಹತಾಜ್ ಭಾನು ಆಟೋದಿಂದ ಇಳಿಯುವಾಗ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ಮಹ್ಮದ್ ಗೌಸ್ ಬ್ಯಾಗ್‌ನ್ನು ಮಹಿಳೆಗೆ ವಾಪಾಸ್ ಮಾಡಿ ಮಾನಿವಯತೆ ಮೆರದಿದ್ದಾರೆ. ಬ್ಯಾಗಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಬ್ಯಾಗ್ ನಲ್ಲಿ 40 ಗ್ರಾಂ ಚಿನ್ನಾಭರಣವಿತ್ತು.ಆಟೋ ಚಾಲಕ ಮಹಮ್ಮದ್ ಗೌಸ್ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಅಭಿನಂದನಾ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ.