ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ! ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ10ನೇ ವರ್ಷದ ಸೈಮಾ ಅವಾರ್ಡ್ ಕಾರ್ಯಕ್ರಮ ರಂಗು NAMMUR EXPRESS NEWSಬೆಂಗಳೂರು: ನಟ ಪುನೀತ್ ರಾಜಕುಮಾರ್ ನಮ್ಮನ್ನು ಆಗಲಿ ಈಗ ಒಂದು ವರ್ಷವಾಗುತ್ತಾ ಬಂದಿದೆ. ಆದರೂ ಅವರ ನೆನಪು ಮಾಸಿಲ್ಲ. ಅವರ ಹೆಸರಲ್ಲಿ ಪ್ರತಿ ದಿನ ಒಂದಲ್ಲ ಒಂದು ಮಾನವೀಯ ಕೆಲಸ ನಡೆಯುತ್ತಿದೆ.ಪುನೀತ್ ರಾಜ್ ಕುಮಾರ್ ಅವರಿಗೆ ಸೈಮಾ ಅತ್ಯುತ್ತಮ ನಾಯಕನಟ ಪ್ರಶಸ್ತಿ ದೊರೆತಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಶಿವರಾಜ್ ಕುಮಾರ್ ಹಾಡು ಹೇಳಿ ತಮ್ಮನಿಗೆ ನಮನ ಅರ್ಪಿಸಿದ್ದಾರೆ. ಸೈಮಾ 2022 ಪ್ರಶಸ್ತಿ ಪ್ರಧಾನ ಅದ್ಧೂರಿ ಕಾರ್ಯಕ್ರಮವು ಬೆಂಗಳೂರಿನ ಯಶ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್’ 2012ರಿಂದ ಆರಂಭವಾಗಿದೆ. ಹೀಗಾಗಿ, ಸೈಮಾ ಈ ಬಾರಿ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಇದಕ್ಕಾಗಿಯೇ ಈ ವರ್ಷದ ಸೈಮಾ ಕಾರ್ಯಕ್ರಮವು ಬಹಳ ವಿಶೇಷವಾಗಿದೆ. ಸೈಮಾ ಪ್ರಶಸ್ತಿ…
Author: Nammur Express Admin
ರಾಜ್ಯದ ಜನತೆಗೆ ಮತ್ತೊಂದು ಶಾಕ್ ಇಂದಿನಿಂದ ಹಾಲಿನ ದರ 3 ರೂ ಹೆಚ್ಚಳ? NAMMUR EXPRESS NEWSಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ರಾಜ್ಯ ಸರ್ಕಾರದ ಮೀನಾಮೇಷದ ಮಧ್ಯೆಯೇ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಸರ್ಕಾರದ ಒಪ್ಪಿಗೆ ಕೇಳದೆ ಕರ್ನಾಟಕ ಹಾಲು ಮಹಾಮಂಡಳಿ ದರ ಏರಿಸೇ ಬಿಡುತ್ತಾ ಎಂಬ ಮಾತುಗಳು ಕೇಳಿಬರುತ್ತಿದೆ. ಪ್ರತಿ ಲೀಟರ್‌ಗೆ ಹಾಲಿನ ದರವನ್ನು 3 ರೂ. ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಸಹಕರಿಸುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆಗೆ ಸರ್ಕಾರಕ್ಕೆ ಕೆಎಂಎಫ್ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ 8 ತಿಂಗಳ ಹಿಂದೆಯೇ ಹಾಲಿನ ದರವನ್ನು 5 ರೂ. ಏರಿಸುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಇಡಲಾಗಿತ್ತು. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಗದ ಹಿನ್ನೆಲೆ ಹಾಲು ಮಹಾಮಂಡಳಿಯ 14 ಒಕ್ಕೂಟಗಳಿಂದ ಹಾಲಿನ ದರವನ್ನು 3 ರೂ.…
ಆನ್ ಲೈನ್ ಗೂ ಸಾಮಾನ್ಯ ಶಿಕ್ಷಣದಷ್ಟೇ ಮಾನ್ಯತೆ NAMMUR EXPRESS NEWSನವದೆಹಲಿ: ಆನ್‌ಲೈನ್ ಮತ್ತು ದೂರ ಶಿಕ್ಷಣ ಮುಖಾಂತರ ಪಡೆದುಕೊಳ್ಳುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿಗಳನ್ನು ಸಾಮಾನ್ಯ ವಿಧಾನದ ಪದವಿಗಳಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಯುಜಿಸಿ ಹೇಳಿದೆ.ಉನ್ನತ ಪದವಿ ನೀಡುವ ಶಿಕ್ಷಣ ಸಂಸ್ಥೆಗಳು ಆಯೋಗದ ನಿಯಮಗಳಿಗೆ ಒಳಪಟ್ಟಿದ್ದರೆ ಅವು ನೀಡುವ ಎಲ್ಲಾ ಪದವಿಗಳನ್ನು ಸಮಾನವಾಗಿ ಪರಿಗಣಿಸ ಬೇಕು ಎಂದು ಇತ್ತೀಚಿನ ಅಧಿಸೂಚನೆ ಯಲ್ಲಿ ಯುಜಿಸಿ ಸ್ಪಷ್ಟಪಡಿಸಿದೆ. ದೂರ ಶಿಕ್ಷಣ ಅಥವಾ ಆನ್ ಲೈನ್ ಮುಖಾಂತರ ಪಡೆದುಕೊಳ್ಳುವ ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮುಂತಾದ ಎಲ್ಲಾ ಪದವಿಗಳು ಸಾಂಪ್ರದಾಯಿಕ ಶಿಕ್ಷಣದಷ್ಟೇ ಮಹತ್ವ ಹೊಂದಿವೆ ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿ ನಿಲ್ಲದ ಮಳೆ ಆರ್ಭಟ!- 2 ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ- ಬೆಂಗಳೂರಲ್ಲಿ 3 ತಿಂಗಳು ಮಳೆ ನಿಲ್ಲಲ್ಲ- ರಾಜ್ಯದಲ್ಲಿ ಮಳೆಗೆ ಮತ್ತೆ ಮೂವರ ಬಲಿ NAMMUR EXPRESS NEWSಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಮಳೆ ಮುಂದುವರೆದಿದ್ದು ರಾಜ್ಯದಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ.ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು,ಸಾಮಾನ್ಯವಾಗಿ ಚೌತಿ ಕಳೆದ ಬಳಿಕ ಕ್ರಮೇಣವಾಗಿ ಮಳೆಕಡಿಮೆಯಾಗುತ್ತಿತ್ತು, ಆದರೆ ಈ ಬಾರಿ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಮಳೆಗಾಲ ಆರಂಭದಲ್ಲಿ ಗುಡುಗು, ಸಿಡಿಲು ಮಳೆಯನ್ನು ನಾವು ನೋಡುತ್ತೇವೆ, ಆದರೆ ಈ ಬಾರಿ ಮಳೆಗಾದಲ್ಲೂ ಗುಡುಗು, ಸಿಡಿಲಿನ ಆರ್ಭಟದ ಜತೆಗೆ ಮಳೆಯಾಗಿದೆ.ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಸೆ.13ರವರೆಗೆ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರಲ್ಲಿ ಮಳೆ ನಿಲ್ಲಲ್ಲ!: ಬೆಂಗಳೂರಿನಲ್ಲಿ ಮಳೆ ನಿಲ್ಲುವ ಸೂಚನೆ ಕಾಣುತ್ತಿಲ್ಲ.…
ಕ್ಷೇತ್ರಕ್ಕೆ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರ, ರಾಜ್ಯ ಸರಕಾರಕ್ಕೆ ಪತ್ರಜನರ ನೋವಿಗೆ ದನಿಯಾದ ಸಿಂಪಲ್ ಶಾಸಕ ಟಿಡಿ ರಾಜೇಗೌಡ NAMMUR EXPRESS NEWSಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿನೀಡಲು ಆಗಮಿಸಿದ ಕೇಂದ್ರ ತಂಡದ ಸದಸ್ಯರನ್ನುಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಭೇಟಿ ಮಾಡಿ ಹೆಚ್ಚಿನ ಅನುದಾನ ನೀಡಲು ಶಿಫಾರಸು ಮಾಡುವಂತೆ ಮನವಿ ಮಾಡಿದರು.ಮುಖ್ಯಸ್ಥರಾದ ಆಶೀಶ್ ಕುಮಾರ್, ಐ.ಎ.ಎಸ್, ಸರ್ಕಾರದ ಜಂಟಿ ಕಾರ್ಯದರ್ಶಿಗಳು ಶೃಂಗೇರಿ ಕ್ಷೇತ್ರದ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು, ರಾಜ್ಯ ಮುಖ್ಯ ರಸ್ತೆಗಳು, ಕೆರೆಗಳು, ಕಟ್ಟಡಗಳನ್ನು ದುರಸ್ತಿ, ಪುನರ್ ನಿರ್ಮಾಣ ಮಾಡಲು ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಅಗತ್ಯ ಇದೆ.ಕ್ಷೇತ್ರದಲ್ಲಿ ಈ ಭಾರೀ ಸುರಿದ ಮಳೆಯಿಂದ ಮನೆಹಾನಿ, ಪ್ರಾಣ ಹಾನಿ, ಹಾಗೂ ಬೆಳೆ ಹಾನಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ, ಕಾಳು ಮೆಣಸು ಹಾಗೂ ಭತ್ತದ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು…
ಶಿವಮೊಗ್ಗದಲ್ಲಿ ಭಾರೀ ಸಜ್ಜು: ದಿನವಿಡೀ ಗಣಪತಿ ಮೆರವಣಿಗೆಭಾರೀ ಪೊಲೀಸ್ ಬಂದೋಬಸ್ತ್: ಹಬ್ಬದ ಸಂಭ್ರಮಸಾವರ್ಕರ್, ಶಿವಾಜಿ ಜತೆ ಐತಿಹಾಸಿಕ ನಾಯಕರ ಫೋಟೋಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡ ನಾಯಕರು..! NAMMUR EXPRESS NEWSತೀರ್ಥಹಳ್ಳಿ: ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ರಂಗು ಮನೆ ಮಾಡಿದೆ. ಶಿವಮೊಗ್ಗದಲ್ಲಿ ಭಾರೀ ಸಜ್ಜು ಮಾಡಲಾಗಿದ್ದು ದಿನವಿಡೀ ಗಣಪತಿ ಮೆರವಣಿಗೆ ನಡೆಯಲಿದೆ.ಶಿವಮೊಗ್ಗ ನಗರದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಿದ್ದು ಹಬ್ಬದ ಸಂಭ್ರಮ ಎಲ್ಲಾ ಕಡೆ ಕಂಡು ಬರುತ್ತಿದೆ. ಎಲ್ಲಾ ಕಡೆ ಕೇಸರಿ ಧ್ವಜ ಕಾಣುತ್ತಿದ್ದೂ ಬೀದಿ ಬೀದಿಯನ್ನು ಸಿಂಗರಿಸಲಾಗಿದೆ.ಸಾವರ್ಕರ್, ಶಿವಾಜಿ ಜತೆ ಐತಿಹಾಸಿಕ ನಾಯಕರ ಫೋಟೋ, ಫ್ಲೆಕ್ಸ್ ಹಾಕಲಾಗಿದೆ. ಗಣಪತಿ ಮೆರವಣಿಗೆಯಲ್ಲಿ ಈಶ್ವರಪ್ಪ, ಕಾಂತೇಶ್, ಅರುಣ್ ಸೇರಿ ಶಿವಮೊಗ್ಗದ ಬಹುತೇಕ ನಾಯಕರು ಭಾಗಿಯಾಗಿದ್ದಾರೆ. ಪಕ್ಷಬೇಧ ಮರೆತು ಗಣೇಶ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ ಶಿವಮೊಗ್ಗ ನಗರದಲ್ಲಿ ಶುಕ್ರವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಲಿದೆ. ಹೀಗಾಗಿ ನಗರದ್ಯಾಂತ ಗಣಪತಿ ಮರೆವಣಿಗೆ ನಡೆಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್…
ಡೈಮಂಡ್ ಲೀಗ್ ಟ್ರೋಫಿ ಗೆದ್ದ ಚೋಪ್ರಾ! – ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಪಾತ್ರ – ಭಾರತದ ಕೀರ್ತಿ ಪತಾಕೆ ಹಾರಿಸಿದ ಆಟಗಾರ NAMMUR EXPRESS NEWS ಜ್ಯೂರಿಚ್: ಭಾರತದ ಸ್ಟಾರ್ ಜಾವೆಲಿನ್ ಥ್ರೋ ಅಥ್ಲೆಟ್ ನೀರಜ್ ಚೋಪ್ರಾ ಗುರುವಾರ ಇತಿಹಾಸ ನಿರ್ಮಿಸಿದ್ದಾರೆ. ಅಗ್ರ-ಶ್ರೇಣಿಯ ಅಥ್ಲೆಟಿಕ್ಸ್ ಸ್ಪರ್ಧೆಯಾದ ಪ್ರತಿಷ್ಠಿತ ಡೈಮಂಡ್ ಲೀಗ್ ಟ್ರೋಫಿಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪರ್ಧೆಯಲ್ಲಿ 88.44 ಮೀ.ಗಳ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಡೈಮಂಡ್ ಲೀಗ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಅವರು ಈ ಬಾರಿ ನಡೆದ ಒಲಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದು, ದೇಶಕ್ಕೆ ಕೀರ್ತಿ ತಂದಿದ್ದರು. ಅಂದಿನಿಂದ ಇಲ್ಲಿಯವರೆಗೆ ನೀರಜ್ ತಮ್ಮ ಗುರಿ ಮುಟ್ಟುವ ಮೂಲಕ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಸಚಿವ ಸೋಮಶೇಖರ್, ವಿಜಯೇಂದ್ರ ಸೇರಿ ಹಲವರಿಗೆ ಸಂಕಷ್ಟಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ NAMMUR EXPRESS NEWSಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆ ಅನುಷ್ಠಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಾಹಂ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳು ಬುಧವಾರ ಮುಕ್ತ ಕಲಾಪದಲ್ಲಿ ಪ್ರಕಟಿಸಿದರು. ಇದರಿಂದಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ತಡೆ ಕಾಯ್ದೆ- 1988ರ ಕಲಂ 7,8,9,10 ಮತ್ತು 13, ಭಾರತೀಯ ದಂಡ ಸಂಹಿತೆ -1860 ಕಲಂ 383, 384, 415, 418, 420 ಹಾಗೂ…
ಬ್ರಿಟಿಷ್ ನಾಡನ್ನು ಸುದೀರ್ಘ ಕಾಲ ಆಳಿದ್ದ ರಾಣಿ ಇನ್ನಿಲ್ಲ – ಭಾರತದ ಜೊತೆ ರಾಣಿ ಎಲಿಜಬೆತ್ ಅವಿನಾಭಾವ ಸಂಬಂಧ – ಪ್ರಧಾನಿ ಮೋದಿ ಸೇರಿ ಎಲ್ಲಾ ದೇಶಗಳ ಸಂತಾಪ – ಪುತ್ರ ಚಾರ್ಲ್ಸ್ ಇನ್ಮುಂದೆ ಬ್ರಿಟನ್ ರಾಜ..! NAMMUR EXPRESS NEWS ಬ್ರಿಟಿಷರ ನಾಡನ್ನು ಸುದೀರ್ಘ ಅವಧಿಗೆ ಆಳಿದ ರಾಣಿ. 96 ವರ್ಷ ವಯಸ್ಸಿನ 2ನೇ ಎಲಿಜಬೆತ್, ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲಿದ್ದ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಜಗತ್ತಿನ ಎಲ್ಲಾ ದೇಶಗಳು ಸಂತಾಪ ಸೂಚಿಸಿವೆ. ಅನಾರೋಗ್ಯದಿಂದ ಬ್ರಿಟನ್ ರಾಣಿ ಎಲಿಜಬೆತ್-2 ಕೊನೆಯುಸಿರು: 1926ರಲ್ಲಿ ಲಂಡನ್‌ನ ಮೇಫೇರ್‌ನಲ್ಲಿ ಜನಿಸಿದ್ದ ರಾಣಿ ಎಲಿಜಬೆತ್ ಪೂರ್ಣ ಹೆಸರು ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ. 1952ರಿಂದ ಬ್ರಿಟನ್ ರಾಣಿಯಾಗಿ ಎಲಿಜಬೆತ್ ಆಯ್ಕೆಯಾಗೋ ಮೂಲಕ ತಮ್ಮ 25 ವಯಸ್ಸಿನಲ್ಲಿ ಇಂಗ್ಲೆಂಡ್ ರಾಣಿಯಾಗಿ ಪಟ್ಟಕ್ಕೇರಿದ್ದರು. ಹೀಗೆ ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟನ್ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇನ್ನು…
NAMMUR EXPRESS NEWSಧಾರವಾಡ : ಚೆಕ್ ನಲ್ಲಿದ್ದ ಕನ್ನಡ ಅಂಕಿಯನ್ನು ತಪ್ಪಾಗಿ ಅರ್ಥೈಸಿಕೊಂಡ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬ್ಯಾಂಕಿಗೆ ₹85,177 ದಂಡಪಾವತಿಸುವಂತೆ ಬುಧವಾರ ಆದೇಶಿಸಿದೆ.ಇಲ್ಲಿನ ಕಲ್ಯಾಣ ನಗರ ನಿವಾಸಿ ವಾದಿರಾಜಚಾರ್ಯ ಇನಂದಾರ ಅವರು ವಿದ್ಯುತ್ ಶುಲ್ಕ ಪಾವತಿಸಲು ಹೆಸ್ಕಾಂಗೆ ₹ 6 ಸಾವಿರ ಮೊತ್ತದ ಚೆಕ್ ನೀಡಿದ್ದರು. ಚೆಕ್ ಅನ್ನು 2020 ರ ಸೆ.3 ರಂದು ನೀಡಲಾಗಿತ್ತು. ಹೆಸ್ಕಾಂನ ಖಾತೆ ಕೆನರಾ ಬ್ಯಾಂಕ್ ನಲ್ಲಿದ್ದುದ್ದರಿಂದ ಅಲ್ಲಿಂದ ಚೆಕ್ ನಗದೀಕರಣಕ್ಕೆ ಎಸ್‌ಬಿಐಗೆ ಕಳಿಸಲಾಗಿತ್ತು. ದಿನಾಂಕ ನಮೂದಿಸುವಾಗ ಸೆಪ್ಟೆಂಬರ್ ತಿಂಗಳನ್ನು ಕನ್ನಡದ ಅಂಕಿ 9 ಎಂಬುದಾಗಿ ಬರೆದಿದ್ದನ್ನು ತಪ್ಪಾಗಿ 6 ಎಂದು ಬ್ಯಾಂಕ್ ಅಧಿಕಾರಿ ಅರ್ಥೈಸಿಕೊಂಡಿದ್ದರು.