Author: Nammur Express Admin

ಜೂನ್ ನಿಂದ ಸೆ.6 ವರೆಗೆ 103 ಸೆಂ. ಮೀ. ಮಳೆ, 1998ರ ಈ ಅವಧಿಯ ದಾಖಲೆ ನಿರುಪಾಲುಮಳೆಗಾಲ ಮುಗಿಯಲು ಇನ್ನೂ ಎರಡು ತಿಂಗಳು NAMMUR EXPRESS NEWSಬೆಂಗಳೂರು : ದೇಶದ ಐಟಿ ಕಾರಿಡಾರ್ ಎಂದು ಖ್ಯಾತಿವೆತ್ತ ಪ್ರದೇಶಗಳನ್ನು ಮುಳುಗಿಸಿ ಬಾರಿ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರಿನ ಮುಂಗಾರು ಮಳೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಸಾಗಿದೆ. ಜೂನ್ ನಿಂದ ಸೆಪ್ಟೆಂಬರ್ 7 ರವರೆಗೆ ಬೆಂಗಳೂರಿನಲ್ಲಿ 103 ಸೆಂ. ಮೀ. ಮಳೆಯಾಗಿದ್ದು ಇದು ಈ ಅವಧಿಯಲ್ಲಿ ರಾಜ್ಯ ರಾಜಧಾನಿಯ ಇತಿಹಾಸದಲ್ಲೇ ಗರಿಷ್ಠ ಅಲ್ಲದೆ, ಇಡೀ ಮುಂಗಾರು ಹಂಗಾಮಿನ ಸಾರ್ವಕಾಲಿಕ ದಾಖಲೆಯಾದ 144.93 ಸೆಂ. ಮೀ. ಕೂಡ ಈ ಬಾರಿ ಮುರಿದು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.1998ರಲ್ಲಿ ಜೂನ್ ನಿಂದ ಆಗಸ್ಟ್ವರೆಗೂ 91ಸೆಂ. ಮೀ ಮಳೆ ಆಗಿದ್ದು ಈವರೆಗಿನ ದಾಖಲೆ. ಈ ವರ್ಷ ಇದೆ ಅವಧಿಯಲ್ಲಿ 88 ಸೆಂ. ಮೀ ಮಳೆ ಆಗಿದೆ ಆದರೆ ನಂತರದ ಒಂದು ವಾರದಲ್ಲಿ ಈ ವರ್ಷದ…

Read More

ಗೋಮಾಂಸ ವಶ: ಪೊಲೀಸ್ ಕೇಸ್ಕೊಪ್ಪದ ಹೇರೂರು ಬಳಿ ಪ್ರಕರಣಎನ್. ಆರ್. ಪುರ: ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನ : ವೃದ್ಧನ ಬಂಧನಕೊಪ್ಪದ ಜಯಪುರದಲ್ಲಿ ಬಸ್ ಒಳಗೆ ಕಾಳಿಂಗ! NAMMUR EXPRESS NEWSಕೊಪ್ಪ: ಕೊಪ್ಪ ತಾಲ್ಲೂಕಿನಲ್ಲಿ ಗೋ ಮಾಂಸ ದಂಧೆ ಪ್ರಕರಣ ಹೆಚ್ಚಿದೆ. ಈ ನಡುವೆ ಅಕ್ರಮವಾಗಿ ಗೋಮಾಂಸವನ್ನು ಶೇಖರಣೆ ಮಾಡಲಾಗಿದ್ದ ಮನೆಗೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.ಏನಿದು ಘಟನೆ?: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಪುರ ಷರೀಫ್ ಎಂಬುವರ ಮನೆಗೆ ದಾಳಿ ನಡೆಸಿದ ಪೊಲೀಸರು, ಮನೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ಸುಮಾರು 76 ಕೆ.ಜಿ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಜಯಪುರ ಪೊಲೀಸ್ ಠಾಣೆಯ ಪಿಎಸ್ ಐ ಜ್ಯೋತಿ ಹಾಗೂ ಎಎಸ್ ಐ ನಿಂಗೇಗೌಡ ಅವರ ತಂಡ ನಡೆಸಿದ್ದು ಪೊಲೀಸರು ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.ಆರೋಪಿಯನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು, ಜಯಪುರ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು…

Read More

ನೀಟ್ ಫಲಿತಾಂಶ: ಕ್ರಿಯೇಟಿವ್‌ ಕಾಲೇಜು ಸಾಧನೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕ್ರಿಯೇಟಿವ್ ಕಾಲೇಜು ಬೆಸ್ಟ್ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ NAMMUR EXPRESS NEWS ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳು ನೀಟ್‌ ಫಲಿತಾಂಶದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ NEET ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ 646, ಸಾತ್ವಿಕ್‌ ಶ್ರೀಕಾಂತ್‌ ಹೆಗಡೆ 641, ಸೋಹನ್‌ ಎಸ್‌ ನೀಲಕರಿ 598, ಸುದೀಪ್‌ ಅಸಂಗಿಹಾಲ್‌ 552, ಹಾಸನದ ವಿಕಾಸ್‌ ಗೌಡ ಎಂ 608 ಅಂಕಗಳನ್ನು ಗಳಿಸಿದ್ದಾರೆ. ಈಗಾಗಲೇ ಬೋರ್ಡ್ ಪರೀಕ್ಷೆ, ಸಿಇಟಿ, ಜೆಇಇ ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕಾಲೇಜು ಕರಾವಳಿಯಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ನಿರ್ಮಿಸಿರುವ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನಡೆಯುತ್ತಿದೆ. ಕಾಲೇಜಿನ ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ಪರೀಕ್ಷೆಗೆ ಕುಳಿತ 88 ವಿದ್ಯಾರ್ಥಿಗಳಲ್ಲಿ…

Read More

ಕನ್ನಡದ ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನ ಬಹು ಮುಖ ವ್ಯಕ್ತಿತ್ವದ ಸಾಹಿತಿ ಎಲ್ಲರಿಗೂ ಮಾದರಿ ಕೃಷಿ ಜತೆಗೆ ಸಾಹಿತ್ಯ.. ಛಾಯಾಗ್ರಾಹಕ.. ಹೋರಾಟಗಾರ NAMMUR EXPRESS NEWSಕನ್ನಡದ ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನ ಸೆ.8. ಅವರ ಜನ್ಮ ದಿನ ವಿಶೇಷ ದಿನ. ಕನ್ನಡ ಸಾಹಿತ್ಯ ಲೋಕಕ್ಕೆ ತೇಜಸ್ವಿ ದೊಡ್ಡ ಆಸ್ತಿ.ಪೂರ್ಣಚಂದ್ರ ತೇಜಸ್ವಿ ಸೆಪ್ಟೆಂಬರ್ 8, 1938ರಲ್ಲಿ ಜನಿಸಿ ಏಪ್ರಿಲ್ 5, 2007ರಲ್ಲಿ ಇಹಲೋಕ ತ್ಯಜಿಸಿದರು. ಇವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ಕಥಾ ಸಂಕಲನ, ಕಾದಂಬರಿ, ರಾಜಕೀಯ ವಿಶ್ಲೇಷಣೆ, ನಾಟಕ,ವೈಜ್ಞಾನಿಕ ಬರಹಗಳ ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.ತೇಜಸ್ವಿಯವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿಯವರ ಮೊದಲನೆಯ…

Read More

ನಕ್ಷೆಗಳ ಪ್ರಿಂಟ್ಔಟ್ ಗೆ ಇನ್ನೂ ಕಚೇರಿಗೆ ಹೋಗಬೇಕಿಲ್ಲ NAMMUR EXPRESS NEWSಬೆಂಗಳೂರು : ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ ಪೋಡಿ, ಭೂ ಪರಿವರ್ತನೆ ಸ್ಕೆಚ್ ಹದ್ದುಬಸ್ತು ಮತ್ತು ಇತರ ನಕ್ಷೆಗಳನ್ನು ಇನ್ನು ಮುಂದೆ ಆನ್ ಲೈನ್ ನಲ್ಲೇ ಪಡೆದುಕೊಳ್ಳಬಹುದು ಎಂದು ಸರ್ವೇ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನಿಶ್ ಮೌದ್ಗೀಲ್ ತಿಳಿಸಿದ್ದಾರೆ.ಈ ಸಂಬಂಧ ಸ್ವೀಟ್ ಮಾಡಿರುವ ಅವರು 11ಇ ಪೊಡಿ, ಭೂ ಪರಿವರ್ತನೆ ಸ್ಕೆಚ್ ಹದ್ದುಬಸ್ತು ಮತ್ತು ಇತರೆ ನಕ್ಷೆಗಳಿಗೆ ಅರ್ಜಿ ಸಲ್ಲಿಸಿದ ನಾಗರೀಕರು http://103,138,196,154/service19/Report/ApplicationDetails ವೆಬ್ ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು ಸರ್ವೆ ಸಿಬ್ಬಂದಿ ತಮ್ಮ ಜಮೀನಿಗೆ ಬಂದು ಸಂಬಂಧಿಸಿದ ಮಾಪನ ಕಾರ್ಯ ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್ ಸೈಟ್ ನಲ್ಲಿ ಆ ನಕ್ಷೆಗಳನ್ನು ಸಾರ್ವಜನಿಕರು ಮುದ್ರಣ ಪ್ರತಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವಾಗ ನಾಗರೀಕರು ಹಣ ಪಾವತಿಸಿರುವ ಕಾರಣ ನಕ್ಷೆ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಮುದ್ರಣ…

Read More

ಸಿಎಂ, ಯಡಿಯೂರಪ್ಪ ಗಣ್ಯರಿಂದ ಅಂತಿಮ ನಮನಉತ್ತರ ಕರ್ನಾಟಕದ ರಾಜಕೀಯ ಕೊಂಡಿ ಕಳಚಿತುತಂದೆಯ ಉತ್ತರಾಧಿಕಾರಿಯಾಗಿ ಪುತ್ರ ನಿಖಿಲ್ ಕತ್ತಿ? NAMMUR EXPRESS NEWSಬೆಳಗಾವಿ: ಹೃದಯಾಘಾತದಿಂದ ಬುಧವಾರ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಅಂತಿಮ ಸಂಸ್ಕಾರ ಅವರ ತಂದೆಯ ಸಮಾಧಿ ಸಮೀಪವೇ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗೇವಾಡಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ಕತ್ತಿ ಮನೆತನದ ಸ್ವಂತ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿಧಿ-ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಕಲ್ಕೂರ ರಸ್ತೆಗೆ ಹೊಂದಿಕೊಂಡಿರುವ ಉಮೇಶ ಕತ್ತಿ ಅವರ ತೋಟದಲ್ಲಿ, ಅವರ ತಂದೆ-ತಾಯಿಯವರ ಸಮಾಧಿ ಸಮೀಪವೇ ಅಂತಿಮ ಸಂಸ್ಕಾರ ನೆರವೇರಿತು. ಪುತ್ರ ನಿಖಿಲ್ ವಿಧಿ-ವಿಧಾನಗಳನ್ನು ನೆರವೇರಿಸಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಆರ್. ಅಶೋಕ, ಕೋಟ…

Read More

ತೀರ್ಥಹಳ್ಳಿಯ ಕಲಾವಿದ ಬಿ.ಡಿ. ಜಗದೀಶ್ ಅವರ ಸಾಧನೆ – ಕೆ.ಸಿ.ರೆಡ್ಡಿ, ಡಾ.ಅಂಬರೀಶ್‍ರವರ ಕಂಚಿನ ಪ್ರತಿಮೆ- ಶೀಘ್ರದಲ್ಲಿ ಲೋಕಾರ್ಪಣೆಗೆ ಸಿದ್ಧತೆ NAMMUR EXPRESS NEWSನಾಡಿನ ಖ್ಯಾತ ಕಲಾವಿದರಾದ ತೀರ್ಥಹಳ್ಳಿ ಮೂಲದ ಬಿ.ಡಿ.ಜಗದೀಶ್ ಬಾಣಂಕಿ ರಚಿಸಿರುವ ಕೆ.ಸಿ.ರೆಡ್ಡಿ ಮತ್ತು ಡಾ.ಅಂಬರೀಶ್ ಅವರ ಎರಡು ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣ್ಯರ ಸಮ್ಮುಖದಲ್ಲಿ ಶೀಘ್ರದಲ್ಲಿ ನಾಡಿಗೆ ಸಮರ್ಪಿಸಲಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಾಡಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯು 14 ಅಡಿ ಎತ್ತರವಿದ್ದು ಮೂರು ಟನ್ ತೂಕವನ್ನು ಹೊಂದಿದೆ. ವಿಧಾನಸೌಧದ ಒಂದು ಭಾಗದಲ್ಲಿ ತೀರ್ಥಹಳ್ಳಿಯವರೇ ಆದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವೃತ್ತವನ್ನು ಹೊಂದಿದ್ದು ಇನ್ನೊಂದು ಭಾಗದಲ್ಲಿ ಬಾಣಂಕಿ ಬಿ.ಡಿ.ಜಗದೀಶ್ ಮಾಡಿರುವ ಕೆ.ಸಿ.ರೆಡ್ಡಿ ಅವರ ಕಂಚಿನ ಪ್ರತಿಮೆ ಶಾಶ್ವತವಾಗಿ ನಿರ್ಮಾಣವಾಗಲಿದೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತಾಗಿದೆ. ಡಾ.ಅಂಬರೀಶ್ ಅವರ ಪ್ರತಿಮೆ 16 ಅಡಿ ಎತ್ತರವಿದ್ದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‍ರವರ ಸಮಾಧಿಯ ಪಕ್ಕದಲ್ಲಿ ಸ್ಥಾಪಿಸಲಾಗುವುದು. ಇದರ ತೂಕ 3 1/2 ಟನ್ ತೂಕವಿದ್ದು ಜಗದೀಶ್ ಅವರ…

Read More

ವಿದ್ಯುತ್ ಶಾಕ್’ನಿಂದ ಮೂವರು ಸಾವುಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲು6 ಜನರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು NAMMUR EXPRESS NEWSಮೂಡಿಗೆರೆ: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ವಿದ್ಯುತ್ ತಂತಿ ಪೆಂಡಾಲ್ ಗೆ ತಗುಲಿದ ಪರಿಣಾಮ ದುರಂತ ನಡೆದಿದೆ.ಪೆಂಡಲ್ ನಲ್ಲಿದ್ದ ರಾಜು (47) ರಚನಾ (35) ಪಾರ್ವತಿ (26) ಮೃತ ದುರ್ದೈವಿಗಳು. ಗಾಯಗೊಂಡ ಆರು ಜನ ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಹಾಸನಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರಲ್ಲಿ ಕಂಡು ಕೇಳರಿಯದಷ್ಟು ಮಳೆ: ಅನಾಹುತರಸ್ತೆ, ಅಂಡರ್ ಪಾಸ್, ಮನೆಗಳು ಮುಳುಗಡೆ5ಕ್ಕೂ ಹೆಚ್ಚು ಸಾವು: ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಮಳೆ ಅನಾಹುತ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಸಾವಿರಾರು ಎಕರೆ ಜಮೀನು ಹಾಳಾಗಿದೆ. 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ರಾಜಧಾನಿ ಕಂಡು ಕೇಳರಿಯದಷ್ಟು ಮಳೆಯಾಗಿದೆ.ಬೆಂಗಳೂರಿನ ರಸ್ತೆ, ಅಂಡರ್ ಪಾಸ್, ರಾಜ ಕಾಲುವೆ ಮುಳುಗಿ ಅಪಾರ್ಟ್ಮೆಂಟ್, ಮನೆಗಳ ಒಳಗೆ ನೀರು ನುಗ್ಗಿದೆ. ಪರಿಣಾಮ ಸಾವಿರಾರು ಮನೆಗಳು ಬೀಳುವ ಹಂತ ತಲುಪಿವೆ. ಇನ್ನು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. 2014ರ ಬಳಿಕ ದಾಖಲೆಯ ಮಳೆ!ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಭಾನುವಾರ ರಾತ್ರಿ ಮೇಘಸ್ಫೋಟದಂತೆ ಮೂರು ಗಂಟೆ ನಿರಂತರ ಮಳೆ ಸುರಿದಿತ್ತು. ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ…

Read More

ಹೃದಯಾಘಾತದಿಂದ ಮಧ್ಯ ರಾತ್ರಿ ಬೆಂಗಳೂರಲ್ಲಿ ನಿಧನಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕ ಇನ್ನಿಲ್ಲ NAMMUR EXPRESS NEWSಬೆಂಗಳೂರು: ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಆಹಾರ ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.ಅರಣ್ಯ ಇಲಾಖೆ ಕೂಡ ನಿರ್ವಹಿಸುತ್ತಿದ್ದ ಉಮೇಶ್ ಕತ್ತಿ ಅವರಿಗೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ರಾತ್ರಿ 10ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಸಚಿವರು, ಶಾಸಕರು ಆಸ್ಪತ್ರೆಗೆ ತೆರಳಿದ್ದಾರೆ. ರಾಮಯ್ಯ ಆಸ್ಪತ್ರೆ ವೈದ್ಯರು ಕತ್ತಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಚಿಕಿತ್ಸೆ ಫಲ ನೀಡಲಿಲ್ಲ.ಅರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಅಶ್ವಥನಾರಾಯಣ ಸೇರಿ ಅನೇಕರು ಭೇಟಿ ನೀಡಿದ್ದಾರೆ.ಡಾಲರ್ಸ್ ಕಾಲೋನಿಯಲ್ಲಿ ಅಂತಿಮ ದರ್ಶನದ ಬಳಿಕ ಬೆಳಗಾವಿಗೆ ಅಂತಿಮ ಕಾರ್ಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಕತ್ತಿ ಅವರಿಗೆ ಈ ಹಿಂದೆ 3 ಬಾರಿ ಹೃದಯಘಾತವಾಗಿತ್ತು.1985ರಿಂದ ಹುಕ್ಕೇರಿ ಕ್ಷೇತ್ರದ ಶಾಸಕರಾಗಿದ್ದ 61 ವರ್ಷದ ಲ್ಲಿ 8 ಬಾರಿ ಶಾಸಕರಾಗಿದ್ದ ಕತ್ತಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು.ಬಿಜೆಪಿಯ ಹಿರಿಯ ಶಾಸಕರಾಗಿ,2…

Read More