ಎಲ್ಲಾ ನಾಯಕರು ಸೇರಿ ಸಂಘಟನೆ: ಸಿಎಂ ಬೊಮ್ಮಾಯಿಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಮೋದಿ NAMMUR EXPRESS NEWSಬೆಂಗಳೂರು: ಪಕ್ಷದ ಸಂಘಟನೆ, ಪ್ರವಾಸ, ಜನಸಂಪರ್ಕ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದ್ದು, ಆರು ಕಡೆ ದೊಡ್ಡ ರ್‍ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಡಿಯೂರಪ್ಪ ಅವರು ಪಕ್ಷದ ಸಂಘಟನೆಯ ಕುರಿತು ಚರ್ಚಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿಗೆ ಹೋಗಿ ಭೇಟಿಯಾಗಿ ಬಂದಿದ್ದಾರೆ. ಅಲ್ಲಿಯ ಮಾತುಕತೆ, ಸೂಚನೆಯ ಬಗ್ಗೆ ವಿವರವಾಗಿ ಚರ್ಚೆ ಮಾಡಿದ್ದೇವೆ. ಪ್ರಧಾನಿ ಮೋದಿಯವರು ಬರುವ ಸೆಪ್ಟೆಂಬರ್ 2ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ವತಿಯಿಂದ ಮಾಡಬೇಕಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಿದ್ದೇವೆ. ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್,…
Author: Nammur Express Admin
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಹಿತಿಮಲೆನಾಡಲ್ಲಿ ಭತ್ತದ ನೆಟ್ಟಿ ಮುಕ್ತಾಯಮಳೆ, ಬಿಸಿಲು ಹೆಚ್ಚಿದ ಕೊಳೆ ರೋಗ NAMMUR EXPRESS NEWSಪಂಜಾಬ್ ಮತ್ತು ಹರಿಯಾಣದಿಂದ ವರದಿಯಾಗಿರುವ ಭತ್ತದ ಸಸಿಗಳು ಕುಬ್ಜವಾಗಲು ಸದರ್ನ್ ರೈಸ್ ಬ್ಲ್ಯಾಕ್ ಸ್ಟೈಕ್ ಡ್ವಾರ್ಫ್ ವೈರಸ್ (ಎಸ್‌ಆರ್‌ಬಿಎಸ್‌ಡಿಎ) ಎಂಬ ನಿಗೂಢ ಕಾಯಿಲೆ ಕಾರಣ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಧೃಡಪಡಿಸಿದೆ.ಸದರ್ನ್ ರೈಸ್ ಬ್ಲ್ಯಾಕ್ ಸ್ಟೈಕ್ ಡ್ವಾರ್ಫ್ ವೈರಸ್ ಡಬಲ್ ಸ್ಟ್ಯಾಂಡರ್ಡ್ ಆರ್‌ನ್ ವೈರಸ್ ಆಗಿದೆ, ಇದು ಮೊದಲು 2001 ರಲ್ಲಿ ದಕ್ಷಿಣ ಚೀನಾದಲ್ಲಿ ಪತ್ತೆಯಾಗಿತ್ತು. ಅಕ್ಕಿಯಲ್ಲಿ ಕಂಡುಬಂದ ಗುಣಲಕ್ಷಣಗಳು ಮತ್ತು ಈ ವೈರಸ್‌ನ ಜೀನೋಮ್ ರಚನೆಯು ಅಕ್ಕಿ ಕಪ್ಪು ಗೆರೆಗಳ ಕುಬ್ಜ ವೈರಸ್ ನಂತೆ ಇರುತ್ತವೆ.ಅಕ್ಕಿಯ ಹೊರತಾಗಿ, ಎಸ್‌ಆರ್‌ಬಿಎಸ್‌ಡಿವಿ ವಿವಿಧ ಕಳೆ ಪ್ರಭೇದಗಳನ್ನೂ ಇದು ಸೋಂಕಿತಗೊಳಿಸುತ್ತದೆ. ಈ ವೈರಸ್ ಮೊದಲು ದಕ್ಷಿಣ ಚೀನಾದಲ್ಲಿ ಕಂಡುಬಂದ ಕಾರಣ, ಇದನ್ನು ಸದರ್ನ್ ರೈಸ್ ಬ್ಲ್ಯಾಕ್ ಎಂದು ಹೆಸರಿಸಲಾಯಿತು.ಆರ್ ಎನ್ಎ ಪ್ರತ್ಯೇಕಿಸಲಾದ ಸೋಂಕಿತ ಸಸ್ಯಗಳು ಮತ್ತು ವೆಕ್ಟರ್ ಕೀಟಗಳ ದೇಹ ಇವೆರಡರಲ್ಲೂ ವೈರಸ್…
ನೋಯ್ಡಾದ ಅಕ್ರಮ ಅವಳಿ ಕಟ್ಟಡ ನೆಲಸಮಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಯಾಚರಣೆಅಕ್ರಮ ಕಟ್ಟಡ ಕಟ್ಟುವವರೇ ನೋಡಿ ಹುಷಾರ್! NAMMUR EXPRESS NEWSಹೊಸದಿಲ್ಲಿ: ದೆಹಲಿ ಹೊರವಲಯದ ಉತ್ತರ ಪ್ರದೇಶದ ನೋಯ್ಡಾದಲ್ಲೂ ಭಾನುವಾರ ನಡೆದ ‘ಅವಳಿ ಕಟ್ಟಡ’ಗಳ ಧ್ವಂಸ ಕಾರ್ಯಾಚರಣೆ ಒಂದು ದೊಡ್ಡ ಪಾಠವಾಗಿದೆ. ಇದರೊಂದಿಗೆ 9 ವರ್ಷದ ಕಾನೂನು ಹೋರಾಟ ಕೊನೆಗೊಂಡಿದೆ.ಹೊಸದಿಲ್ಲಿ, ಮುಂಬಯಿ, ಚೆನ್ನೈ, ಬೆಂಗಳೂರು, ಭೋಪಾಲ್ ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ಭೂ ಒತ್ತುವರಿ ಮಾಡಿ ಕಟ್ಟಿದ ಕಟ್ಟಡಗಳು ಇದೀಗ ಆತಂಕದಲ್ಲಿವೆ.ನೊಯ್ಡಾದ ಸೆಕ್ಟರ್ ’93 ಎ’ನಲ್ಲಿ ನಿರ್ಮಿಸಿದ ಅಕ್ರಮ ಅವಳಿ ಕಟ್ಟಡ ಪ್ರಕರಣ ಇದಕ್ಕೆ ಅಪವಾದದಂತಿದೆ.ಉದ್ಯಾನ ನಿರ್ಮಿಸಬೇಕಿದ್ದ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು, 14 ಮಹಡಿಗಳಿಗೆ ಅನುಮತಿ ಸಿಕ್ಕಿದ್ದರೂ 40 ಮಹಡಿಯ ಕಟ್ಟಡ ನಿರ್ಮಿಸಿದ್ದ ಸೂಪರ್ ಟೆಕ್ ಕಂಪನಿಯು ಇದನ್ನು ಉಳಿಸಿಕೊಳ್ಳಲು 9 ವರ್ಷ ಕಾನೂನು ಹೋರಾಟ ನಡೆಸಿದರೂ ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ 100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು – ‘ವಾಟರ್‌ಫಾಲ್ ಇಂಫ್ಲೋಷನ್’ ತಂತ್ರಜ್ಞಾನದ ಮೂಲಕ ಅತ್ಯಂತ ಯೋಜನಾಬದ್ಧವಾಗಿ ಭಾನುವಾರ ಮಧ್ಯಾಹ್ನ…
ನಂಬರ್‌ಪ್ಲೇಟ್ ಇಲ್ಲದ ಕಾರಿನಿಂದ ಎಸ್ಕೆಪ್ಹಾವೇರಿಯಲ್ಲಿ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದ ಪೊಲೀಸರು NAMMUR EXPRESS NEWSಹಾವೇರಿ : ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುರುಘಾ ಶ್ರೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ಹೆದ್ದಾರಿಯಲ್ಲಿ ಶ್ರೀಗಳನ್ನು ಅರೆಸ್ಟ್ ಮಾಡಲಾಗಿದೆ.ಮುರುಘಾ ಶ್ರೀ ವಿರುದ್ಧ ಮಠದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸ್ ಕೇಸ್ ದಾಖಲಾಗಿತ್ತು.ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎದುರಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಕ್ಕ ಮಹಾದೇವಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಮುರುಘಾ ಶರಣರು ಲೈಂಗಿಕ ರೀತಿಯಲ್ಲಿ ಬಳಸಿಕೊಂಡಿದ್ದಾರೆಂಬ ಗಂಭೀರ ಆರೋಪ ಎದುರಾಗಿರುವ ಹಿನ್ನೆಲೆಯಲ್ಲಿ ಮಠದ ಬಗ್ಗೆ ಪರ – ವಿರೋಧದ ಚರ್ಚೆಗಳು ಈಗಾಗಲೇ ಹುಟ್ಟಿಕೊಂಡಿವೆ.ಈ ನಡುವೆ ತಮ್ಮವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬರುತ್ತಿದ್ದಂತೆಯೇ ಮಠದಿಂದ ಮರುಘಾ ಶರಣರು ನಾಪತ್ತೆಯಾಗಿದ್ದಾರಾ ಎಂಬ…
ಅಕ್ಟೋಬರ್ 17ಕ್ಕೆ ಚುನಾವಣೆ, 19ಕ್ಕೆ ಮತ ಎಣಿಕೆಕಾಂಗ್ರೆಸ್ ಪಕ್ಷದಲ್ಲಿ ಈಗ ಹೊಸ ರಾಜಕೀಯ ದಾಳ? NAMMUR EXPRESS NEWSಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಹೊಸ ಅಧ್ಯಕ್ಷರ ಚುನಾವಣೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಯಾರು ನೂತನ ಅಧ್ಯಕ್ಷರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಭೆಗೆ ವರ್ಚುವಲ್ ಆಗಿ ಭಾಗವಹಿಸಿದ್ದಾರೆ. ಶುಕ್ರವಾರ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ದಿಢೀರ್ ರಾಜೀನಾಮೆ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರು ಬರೆದ ಪತ್ರದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.ಚುನಾವಣೆಗೆ ಅಧಿಸೂಚನೆ ಸೆಪ್ಟೆಂಬರ್ 22, 2022 ರಂದು ಹೊರಡಿಸಲಿದ್ದು,ಸೆಪ್ಟೆಂಬರ್ 24ರಂದು ನಾಮ ನಿರ್ದೇಶನ ಪ್ರಾರಂಭವಾಗಲಿದೆ. ನಾಮನಿರ್ದೇಶನಕ್ಕೆ ಕೊನೆಯ ದಿನ ಸೆಪ್ಟೆಂಬರ್ 30 ಆಗಿದ್ದು ಅಕ್ಟೋಬರ್ 17ಕ್ಕೆ…
ಮತ್ತೂರು ಬಳಿ ಪಡಿತರದಾರರು, ಸ್ಥಳೀಯರಿಂದ ಪ್ರತಿಭಟನೆಉತ್ತಮ ಪಡಿತರ ವಿತರಿಸಲು ಗ್ರಾಮಸ್ಥರ ಪಟ್ಟು NAMMUR EXPRESS NEWSಮತ್ತೂರು( ಶಿವಮೊಗ್ಗ ಗ್ರಾಮಾಂತರ) : ಗಾಜನೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮತ್ತೂರು ಸೊಸೈಟಿಯಲ್ಲಿ ಕಳಪೆ ಅಕ್ಕಿಯನ್ನು ಖಂಡಿಸಿ ಸ್ಥಳೀಯ ಎಲ್ಲಾ ರೇಷನ್ ಕಾರ್ಡ್ ದಾರರು ಸೇರಿ ಪ್ರತಿಭಟನೆಯನ್ನು ಮಾಡಿದ್ದಾರೆ.ರಾಜ್ಯ ಸರ್ಕಾರ ಕಡು ಬಡವರಿಗಾಗಿ ಮೀಸಲಾಗುವ ಪಡಿತರ ಅಕ್ಕಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಾರಿ ಮಳೆಯಿಂದಾಗಿ ನಾಟಿ ಗದ್ದೆ ಕೊಚ್ಚಿ ಹೋಗಿದ್ದು ಜನರು ಊಟಕ್ಕೆಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಅದರಲ್ಲೂ ಸರಕಾರ ನೀಡುವ ಉಚಿತ ಅಕ್ಕಿ ಸಹ ಕಳಪೆಯಾಗಿದೆ ಮುಗ್ಗಲು ಹಿಡಿದಿರುವ ಅಕ್ಕಿಯನ್ನು ಜನರಿಗೆ ವಿತರಿಸಲಾಗುತ್ತಿದೆ. ಜಾನುವಾರು ಮತ್ತು ಕೋಳಿಗಳು ಸಹ ಇಂತಹ ಪಡಿತರ ತಿನ್ನಲಾರವು, ಒಳ್ಳೆಯ ಪಡಿತರ ವಿತರಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದು ಸಂಬಂಧಪಟ್ಟವರು ಬಂದು ಬಗೆಹರಿಸಲು ಪಟ್ಟು ಹಿಡಿದರು. ಬಳಿಕ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನಾದರೂ ಸಂಬಂಧಪಟ್ಟವರು ಗಮನಿಸಿ ಒಳ್ಳೆಯ ಪಡಿತರ ವಿತರಿಸಬೇಕೆಂದು ಗ್ರಾಹಕರು…
ಸೂಕ್ತ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನ?ಗುಲಾಂ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ NAMMUR EXPRESS NEWSದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ 23 ನಾಯಕರ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಕೂಡ ಸದಸ್ಯರಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಗುಲಾಂ ನಬಿ ಆಜಾದ್ ಜಮ್ಮು ಕಾಂಗ್ರೆಸ್ ಪ್ರಚಾರ ಸಮಿತಿ ಸ್ಥಾನದಿಂದಲೂ ಅವರು ಕೆಳಗಿಳಿದಿದ್ದರು. ಇನ್ನು ಗುಲಾಂ ನಬಿ ಆಜಾದ್ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಈ ಸಂಬಂಧ ಪತ್ರ ಬರೆದಿರುವ ಗುಲಾಂ ನಬಿ ಆಜಾದ್, 2013ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪಕ್ಷದ ಎಲ್ಲಾ ಹಿರಿಯ ಹಾಗೂ ಅನುಭವಿ ನಾಯಕರನ್ನು ಬದಿಗಿಟ್ಟಿದ್ದಾರೆ ಹಾಗೂ ಅನುಭವವೇ ಇಲ್ಲದವರು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲು ಆರಂಭಿಸಿದರು ಎಂದು ಆರೋಪಿಸಿದ್ದಾರೆ.ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ ಸಕ್ರಿಯರಾಗಿದ್ದ ಗುಲಾಂ ನಬಿ…
NAMMUR EXPRESS NEWSಶಿವಮೊಗ್ಗ: ಆಗಸ್ಟ್ 27ರಂದು 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಾಗೂ 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ(ನಿಧಿಗೆ 2ನೇ ಹೋಬಳಿ) ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವ ಬಗ್ಗೆ ವಿಶೇಷ ಅಭಿಯಾನವನ್ನು ಏರ್ಪಡಿಸಲಾಗಿದೆ. ಎಲ್ಲಾ ಅರ್ಹ ಮತದಾರರು ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಯ ಕಾರ್ಯಕ್ಕಾಗಿ ತಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನಿಗಧಿತ ನಮೂನೆ-6ಬಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರೆ ಸ್ವತಃ ಚುನಾವಣಾ ಆಯೋಗದ ಅಧಿಕೃತ ಜಾಲತಾಣ http://www.nvsp.in ಹಾಗೂ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ www.VHAApp ಮೂಲಕ ಆಧಾರ್ ಜೋಡಣೆಯನ್ನು ಮಾಡಿಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಎನ್.ಜೆ.ನಾಗರಾಜ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ NAMMUR EXPRESS NEWSಕೋಲಾರ: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲೀಸರ ಅವಶ್ಯಕತೆ ಹೆಚ್ಚಾಗಿದೆ. ಶೀಘ್ರದಲ್ಲೇ 5 ಸಾವಿರ ಪೋಲೀಸರನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಕೆಜಿಎಫ್ ಪೊಲೀಸ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ, ಶಸ್ತ್ರಾಗಾರ ಮತ್ತು ಶ್ವಾನದಳ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಜಿಎಫ್ ಪೊಲೀಸ್, ಪರಂಪರೆಗೆ ಒಂದು ದೊಡ್ಡ ಇತಿಹಾಸವಿದೆ. ಎರಡು ತಾಲ್ಲೂಕಿಗೆ ಒಂದು ರಾಜ್ಯದಲ್ಲಿ ಎಲ್ಲೂ ಇಲ್ಲ. ಆಡಳಿತ ಕಚೇರಿಗಾಗಿ 22.81 ಕೋಟಿ ಕಚೇರಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಒಂದು ವರ್ಷದಲ್ಲಿ ರಾಜ್ಯದಲ್ಲಿ 200 ಕೋಟಿ ವೆಚ್ಚದ 100 ಹೊಸ ಪೋಲೀಸ್ ಕಟ್ಟಡ ಕಟ್ಟಿದ್ದೇವೆ ಎಂದರು.
ವಾರ್ಡ್ ಮಟ್ಟದಲ್ಲೇ ಪರವಾನಗಿ ಪಡೆಯಿರಿಆಯೋಜಕರಿಂದ ಮುಚ್ಚಳಿಕೆ NAMMUR EXPRESS NEWSಬೆಂಗಳೂರು : ಗೌರಿ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅನುಮತಿ ಪಡೆಯುವ ಸಂಬಂಧ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗೊಂಡ ಏಕ ಗವಾಕ್ಷಿ ವ್ಯವಸ್ಥೆ ಇರಬೇಕು, ಅರ್ಜಿ ಸಲ್ಲಿಸಿದ 3 ದಿನದೊಳಗೆ ಪರವಾನಗಿ ನೀಡಬೇಕು, ಸರ್ಕಾರನೀಡಿರುವ ಸೂಚನೆ ಪಾಲಿಸುವ ಬಗ್ಗೆ ಆಯೋಜಕ ರಿಂದ ಮುಚ್ಚಳಿಕೆ ಪಡೆಯಬೇಕು ಎಂಬ ಅಂಶಗಳು ಸೇರಿದಂತೆ ವಿವಿಧ ಅಂಶ ಗಳನ್ನು ಒಳಗೊಂಡ ಮಾರ್ಗಸೂಚಿ ಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ಸಂಪರ್ಕ ಮತ್ತಿತರ ಪರವಾನಗಿ ಪಡೆಯಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು.ಸಂಬಂಧಿಸಿದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್ ಮಟ್ಟದಲ್ಲಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಏಕ ಗವಾಕ್ಷಿ ವ್ಯವಸ್ಥೆ ಸ್ಥಾಪಿಸಬೇಕು. ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಬೇಕು ಈ ಅರ್ಜಿಗಳನ್ನು…