ರಾಶಿ ಇಡಿ : ಬಂಪರ್ ಬೆಲೆ NAMMUR EXPRESS NEWSಕಳಸ: ಕೆಂಪು ಅಡಿಕೆ ಬೆಲೆ ಎರಡು ವಾರಗಳಿಂದ ಏರು ಹಾದಿಯಲ್ಲಿದ್ದು, ‘ರಾಶಿ ಇಡಿ’ ಮಾದರಿಗೆ ಕ್ವಿಂಟಲ್‌ಗೆ ₹ 55 ಸಾವಿರ ಧಾರಣೆ ಬಂದಿದೆ. ಇದು ಈ ವರ್ಷದ ಗರಿಷ್ಠ ಮಟ್ಟವಾಗಿದೆ.ಅಡಿಕೆ ಮಾರಾಟ ಮಾಡದೆ ಉಳಿಸಿಕೊಂಡಿರುವ ಬೆಳೆಗಾರರ ಪಾಲಿಗಿದು ಬಂಪರ್ ಬೆಲೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಹಸಿ ಅಥವಾ ಸರಕು ಮಾದರಿ ಅಡಿಕೆಗೆ ಕ್ವಿಂಟಲ್‌ಗೆ ₹ 63 ಸಾವಿರದಿಂದ 180 ಸಾವಿರದವರೆಗೆ ಮಾರಾಟವಾಗಿದೆ.ಬೆಟ್ಟೆ ಅಡಿಕೆ ಕ್ವಿಂಟಲ್‌ಗೆ 156 ಸಾವಿರ, ರಾಶಿ ಇಡಿ ಅಡಿಕೆಗೆ ₹54 ಸಾವಿರ ಬೆಲೆ ಇದೆ. ಗೊರಬಲು ಅಡಿಕೆ ಕೂಡ ₹40 ಸಾವಿರಕ್ಕೆ ಮಾರಾಟ ಆಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ಮಂಗಳವಾರ ರಾಶಿ ಇಡಿ ಅಡಿಕೆಯನ್ನು ಕ್ವಿಂಟಲ್‌ಗೆ ₹55,500 ದರದಲ್ಲಿ ಖರೀದಿಸಿದರು.ಅಡಿಕೆಯನ್ನು ಮಾರಾಟ ಮಾಡದೆ ಉಳಿಸಿಕೊಂಡಿರುವ ಬೆಳೆಗಾರರ ಸಂಖ್ಯೆ ಶೇ 10ಕ್ಕಿಂತಲೂ ಕಡಿಮೆ ಇದ್ದು, ಬೆಲೆ ಏರಿಕೆ ಲಾಭ ಹೆಚ್ಚಿನವರಿಗೆ ಲಭಿಸುತ್ತಿಲ್ಲ. ಶೇ 50ಕ್ಕಿಂತ ಹೆಚ್ಚಿನ ಅಡಿಕೆ ಬೆಳೆಗಾರರು ಕಳೆದ ಹಂಗಾಮಿನಲ್ಲಿ ಸಂಸ್ಕರಣೆಯ…
Author: Nammur Express Admin
ಚುನಾವಣಾ ಆಯೋಗ ಹೇಳಿದ್ದೇನು? NAMMUR EXPRESS NEWSಹೊಸದಿಲ್ಲಿ: ಆಧಾರ್ ಸಲ್ಲಿಸಿಲ್ಲವೆಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ನಮೂದನ್ನು ಅಳಿಸುವಂತಿಲ್ಲ ಎಂದು ಚುನಾವಣಾ ಆಯೋಗವು ಸೋಮವಾರ ಸ್ಪಷ್ಟಪಡಿಸಿದೆ. ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆ ಕುರಿತು ಕೆಲವು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು,ನಮೂನೆ-6ಬಿ ಅನ್ನು ಸಲ್ಲಿಸುವುದು ಸ್ವಯಂಪ್ರೇರಿತವಾಗಿದೆ. ಆಧಾರ್ ಸಲ್ಲಿಕೆಯಾಗಿಲ್ಲ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ನಮೂದನ್ನು ಅಳಿಸುವಂತಿಲ್ಲ ಎಂದು ತಿಳಿಸಿದೆ.ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಜೋಡಣೆ ಮತ್ತುದೃಢೀಕರಣಕ್ಕಾಗಿ ಮತದಾರರಿಂದ ಆಧಾರ್ ಸಂಗ್ರಹವುಸ್ವಯಂಪ್ರೇರಿತವಾಗಿರಬೇಕು ಎಂದು ತಿಳಿಸಿ ತಾನು ಜುಲೈ 4ರಂದು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗೆ ಬರೆದಿರುವ ಪತ್ರವನ್ನೂ ಆಯೋಗವು ಉಲ್ಲೇಖಿಸಿದೆ.ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆಗಾಗಿ ಮತದಾರರ ಆಧಾರ್ ವಿವರಗಳನ್ನು ಕೋರಲು ಪರಿಷ್ಕೃತ ನೋಂದಣಿ ನಮೂನೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಹಾಲಿ ಮತದಾರರಿಂದ ಆಧಾರ್ ವಿವರಗಳನ್ನು ಪಡೆಯಲು ಹೊಸ ನಮೂನೆ 6ಬಿ ಅನ್ನೂ ತರಲಾಗಿದೆ.ಮತದಾರರ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ ನಮೂನೆ 6ಬಿಯಲ್ಲಿ ಉಲ್ಲೇಖಿಸಲಾಗಿರುವ 11 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದರ ಪ್ರತಿಯನ್ನು ಸಲ್ಲಿಸುವಂತೆ…
ಆಗಸ್ಟ್ 24ರಿಂದ 27ರ ವರೆಗೆ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ NAMMUR EXPRESS NEWSಮಡಿಕೇರಿ: ಕಾಂಗ್ರೆಸ್- ಬಿಜೆಪಿ ಪಕ್ಷದ ಸಮಾವೇಶ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ಆಗಸ್ಟ್ 24ರಿಂದ 27ರ ವರಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾದ್ಯಂತ ಆಗಸ್ಟ್ 24ರ ಬೆಳಗ್ಗೆ 6 ಗಂಟೆಯಿಂದ ಆ.27ರಂದು ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ.ಆಗಸ್ಟ್ 26 ರಂದು ಕಾಂಗ್ರೆಸ್ ಎಸ್ ಪಿ ಕಚೇರಿಗೆ ಮುತ್ತಿಗೆ ಹಾಗೂ ಬಿಜೆಪಿಯಿಂದ ಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.(ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮ) ಹೊರತುಪಡಿಸಿ ಯಾವುದೇ ಸಭೆ ಸಮಾರಂಭ, ಪ್ರತಿಭಟನೆ, ಮೆರವಣಿಗೆ, ಜಾಥಾ, 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ, ವಿಜಯೋತ್ಸವ, ಪಟಾಕಿ ಸಿಡಿಸುವಂತಿಲ್ಲ ಮತ್ತು ಕಪ್ಪು ಬಟ್ಟೆ ಧರಿಸುವಂತಿಲ್ಲ.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆ NAMMUR EXPRESS NEWSಮಂಗಳೂರು: ಪ್ರಧಾನಿ ಮೋದಿ ಸೆಪ್ಟೆಂಬರ್ 2, ಶುಕ್ರವಾರದಂದು ಸರ್ಕಾರದ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಮಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಮಂಗಳೂರಿನ ಹೊರವಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶವನ್ನು ಆಯೋಜಿಸಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ. ಇದೇ ವೇಳೆ ನಗರದ ಹೊರವಲಯ ಕೂಳೂರಿನಲ್ಲಿ ಪಕ್ಷದ ಕಾರ್ಯಕ್ರಮವನ್ನು ಆಯೋಜಿಸಲು ರಾಜ್ಯ ಬಿಜೆಪಿ ಯೋಜನೆ ಹಾಕಿಕೊಂಡಿದೆ. ಈ ಮೂಲಕ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರಿಗೆ ಹೊಸ ಹುರುಪು ನೀಡಲು ಬಿಜೆಪಿ ಮುಂದಾಗಿದೆ.ನವ ಮಂಗಳೂರು ಬಂದರು ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ ನೀಡಲಾಗಿದೆ. ಎನ್‌ಎಂಪಿಎದ ಹಲವು ಯೋಜನೆಗಳ ಉದ್ಘಾಟನೆಗಾಗಿ ಪ್ರಧಾನಿಯವರನ್ನು ಅಹ್ವಾನಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಧಾನಿಯವರು ಒಪ್ಪಿಕೊಂಡಿದ್ದಾರೆ. ಮಂಗಳೂರು ಭೇಟಿ ಕುರಿತು ಪ್ರಧಾನಿ ಕಚೇರಿಯಿಂದ ಅಧಿಕೃತ ಮಾಹಿತಿ ದೊರೆತಿದ್ದು, ಮಂಗಳೂರು ಪ್ರವಾಸ ಕಾರ್ಯಕ್ರಮದ ಪಟ್ಟಿ ಅಂತಿಮಗೊಳಿಸುವ…
ಇಬ್ಬಿಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯಿಂದ ನಡೆಯಿತೊಂದು ಕೊಲೆಗೋಕಾಕ : ಆಟವಾಡುತ್ತಿದ್ದಾಗ ಲಾರಿ ಹರಿದು ಬಾಲಕಿಸ್ಥಳದಲ್ಲಿಯೇ ಸಾವು NAMMUR EXPRESS NEWSಕೋಲಾರ : ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೋಲಾರದ ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ಆಂಜಿನಪ್ಪ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.3 ದಿನ ರಜೆ ಪಡೆದು ಇನ್ಸ್‌ಪೆಕ್ಟರ್ ಆಂಜಿನಪ್ಪ ಹೊರ ರಾಜ್ಯಕ್ಕೆ ಹೋಗಿದ್ದರು.ಜೈಪುರದ ಜೈಸಿಂಗೇಪುರ ಖೋ ಪೊಲೀಸರು ಅಲ್ಲಿನ ಸಾಯಿಪುರ ಬಾಗ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಜೂಜಾಟ ಆಡುತ್ತಿದ್ದ 84 ಜನರನ್ನು ಬಂಧಿಸಿದ್ದಾರೆ.ಇದೇ ವೇಳೆ ಜೂಜಾಡುತ್ತಿದ್ದ ಕೋಲಾರದ ಸೈಬರ್ ಕ್ರೈಂ ಇನ್ಸ್ ಪೆಕ್ಟರ್ ಆಂಜಿನಪ್ಪ ಸೇರಿದಂತೆ ಟೊಮೋಟೋ ವ್ಯಾಪಾರಿ ಸುಧಾಕರ್, ನಾಮಿನಿ ನಗರಸಭೆ ಸದಸ್ಯ ಸತೀಶ್, ಸಬ್ ರಿಜಿಸ್ಟ್ರಾರ್ ಶ್ರೀನಾಥ್, ಉಪನ್ಯಾಸಕ ರಮೇಶ್, ಆರ್’ಟಿಒ ಸಿಬ್ಬಂದಿ ಶಬರೀಶ್’ರನ್ನು ಅರೆಸ್ಟ್ ಮಾಡಿದ್ದಾರೆ.ಇನ್ನೂ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಟ್ಟು ಹೋದ ಕಾರಣದಿಂದ ಕೋಲಾರ ಸೈಬರ್ ಕ್ರೈಂ ಠಾಣೆಯ ಇನ್ಸ್ ಪೆಕ್ಟರ್ ಅಂಜಿನಪ್ಪನನ್ನು ಕೇಂದ್ರ ವಿಭಾಗದ ಐಜಿಪಿ ಚಂದ್ರಶೇಖರ್ ಅಮಾನತುಗೊಳಿಸಿ…
ಡಿ ಸಿ ಎಸ್ಪಿಯಿಂದ ಗಣಪತಿ ಮಂಡಳಿಯವರ ಜೊತೆ ಪೂರ್ವಭಾವಿ ಸಭೆ NAMMUR EXPRESS NEWSಶಿವಮೊಗ್ಗ : ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಈ ಬಾರಿ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ, ಈ ಬಗ್ಗೆ ಭಾನುವಾರ ಜಿಲ್ಲಾಧಿಕಾರಿ ಡಾ. ಸಿಲ್ವಮಣಿ ಎಸ್ ಪಿ ಡಾ. ಬಿ ಎಂ ಲಕ್ಷ್ಮಿ ಪ್ರಸಾದ್ ಮತ್ತು ಹೆಚ್ಚುವರಿ ಎಸ್ಪಿ ವಿಕ್ರಮ್ ಅಮಾತೆ ಹಾಗೂ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಗಣಪತಿ ಮಂಡಳಿ ಯವರ ಜೊತೆ ಗಣಪತಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.2018-19ರ ಸಂದರ್ಭದಲ್ಲಿ ಗಣಪತಿ ಕೂರಿಸಿದ ರೀತಿಯಲ್ಲಿಯೇ ಅವಕಾಶ ನೀಡಲಾಗುವುದು ಆದರೆ ನಿಗದಿತ ವಿಸರ್ಜನೆ ಮೆರವಣಿಗೆಯ ಮಾರ್ಗ ಮೊದಲೇ ನೀಡಬೇಕು, ಕೊನೆಗಳಿಗೆಯಲ್ಲಿ ಮಾರ್ಗ ಬದಲಾಯಿಸಬಾರದು ಎಂದ ಅವರು, ಗಣಪತಿ ಸಮಿತಿಯವರು ಹಬ್ಬದ ಬಗ್ಗೆ ಮಾಹಿತಿ ಕೊಟ್ಟಿಲ್ಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು ಎಂದು ಎಸ್ಪಿ ಡಾ. ಬಿ ಎಂ ಲಕ್ಷ್ಮಿ ಪ್ರಸಾದ್ ಹೇಳಿದರು.ನಗರದಲ್ಲಿ ಇದುವರೆಗೂ ಗಣಪತಿಯ ಎತ್ತರದ ಪ್ರಶ್ನೆ ಬಂದಿಲ್ಲ ಆದರೂ…
ದಿಲ್ಲಿ ಗಡಿಯಲ್ಲಿ ಭದ್ರತೆ ಹೆಚ್ಚಳ NAMMUR EXPRESS NEWSಹೊಸದಿಲ್ಲಿ: ನಿರುದ್ಯೋಗದ ವಿರುದ್ಧ ಜಂತರ್ ಮಂತರ್‌ನಲ್ಲಿ ರೈತರು ನಡೆಸಲಿರುವ ಪ್ರತಿಭಟನೆಗೆ ಮುನ್ನ ದಿಲ್ಲಿ ಪೊಲೀಸರು ಸೋಮವಾರ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಸಿಂಘು ಹಾಗೂ ಗಾಝಿಪುರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ, ವಾಯುವ್ಯ ದಿಲ್ಲಿ ಹಾಗೂ ಗಾಝಿಪುರ ಗಡಿಯಲ್ಲಿರುವ ಸಿಂಘು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.ಇದಕ್ಕೂ ಮೊದಲು, ರೈತರ ಪ್ರಮುಖ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಮ್ಮ ಬಾಕಿ ಇರುವ ಬೇಡಿಕೆಗಳನ್ನು ಒತ್ತಾಯಿಸಲು ಗುರುವಾರದಿಂದ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ 75 ಗಂಟೆಗಳ ಧರಣಿಯನ್ನು ಆರಂಭಿಸುವುದಾಗಿ ಘೋಷಿಸಿತ್ತು.ಎಸ್ ಕೆ ಎಂ ಸುಮಾರು 40 ಕೃಷಿ ಸಂಸ್ಥೆಗಳನ್ನು ಒಳಗೊಂಡಿರುವ ಒಂದು ಗುಂಪಾಗಿದ್ದು, ಪ್ರಾಥಮಿಕವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸರಿಯಾದ ಅನುಷ್ಠಾನಕ್ಕೆ ಒತ್ತಾಯಿಸುತ್ತದೆ.ಎಪ್ರಿಲ್‌ನಲ್ಲಿ, ಕೇಂದ್ರದ ಭತ್ತ ಖರೀದಿ ನೀತಿಯನ್ನು ವಿರೋಧಿಸಿ ತೆಲಂಗಾಣ ನಾಯಕರು ಹೊಸದಿಲ್ಲಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು ಮತ್ತು ದೇಶದಲ್ಲಿ ಮತ್ತೊಂದು ಪ್ರತಿಭಟನೆಯ ಅಗತ್ಯವಿದೆ ಎಂದು ಹೇಳಿದ್ದರು.
ಮಲೆನಾಡಿನ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್3 ದಿನ ಭಾರೀ ಮಳೆ: ಹವಾಮಾನ ಇಲಾಖೆ NAMMUR EXPRESS NEWSಶಿವಮೊಗ್ಗ: ಮಲೆನಾಡು ಸೇರಿ ರಾಜ್ಯಾದ್ಯಂತ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.ಮಲೆನಾಡಿನ ಜಿಲ್ಲೆಗಳಲ್ಲಿ ಸಹ ಮುಂದಿನ ಐದು ದಿನ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಆಗಸ್ಟ್ 23 ಹಾಗೂ 24 ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 24 ರ ಬಳಿಕ ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿರ್ಮಾಪಕರ ಸಂಘದಿಂದ ತೀರ್ಮಾನ NAMMUR EXPRESS NEWSಜೀ ಕನ್ನಡ ವಾಹಿನಿಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಸೆಟ್‌ನಲ್ಲಿ ಇದೀಗ ಅಲ್ಲೋಲ ಕಲ್ಲೋಲವಾಗಿದೆ. ಧಾರವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅನಿರುದ್ಧರನ್ನು ಸೀರಿಯಲ್‌ನಿಂದ ಹೊರಗೆ ಕಳುಹಿಸಲಾಗಿದೆ. ಆರ್ಯವರ್ಧನ್ ಎಂಬ ಪಾತ್ರದ ಮೂಲಕ ಕರುನಾಡಿನ ಮನಸ್ಸನ್ನು ಗೆದ್ದಿದ್ದ ಅನಿರುದ್ಧರ ಕಿರಿಕ್ ತಾಳಲಾರದೇ ಧಾರವಾಹಿ ತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.ಈ ವಿಚಾರವಾಗಿ ಮಾತನಾಡಿದ ಕಿರುತೆರೆ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್ ಅನಿರುದ್ಧ ಸೀರಿಯಲ್ ಸೆಟ್ ನಲ್ಲಿ ಮಾಡಿಕೊಂಡ ಕಿರಿಕ್‌ಗಳ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿರ್ಮಾಪಕ ವಿಜಯ್ ಗೆ ಆದ ಅನುಭವ ನಾಳೆ ನಮಗೂ ಆಗಮಬಹುದು. ನಾವು ನಟ ಅನಿರುದ್ಧರನ್ನು ಬಾಯ್ಕಾಟ್ ಮಾಡುತ್ತಿಲ್ಲ. ಬದಲಾಗಿ ಅವರನ್ನು 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಡಲು ನಿರ್ಧರಿಸಿದ್ದೇವೆ. ಎಲ್ಲಾ ಚಾನೆಲ್‌ಗಳ ನಿರ್ಮಾಪಕರು ಈ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಎಲ್ಲ ಧಾರವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.ಸಂಚಿಕೆ ನಿರ್ದೇಶಕರಾದ ಉತ್ತಮ್ ಮಧು ಅವರಿಗೆ…
ಭರ್ಜರಿ ಕಲೆಕ್ಷನ್, ಸಿನಿಮಾ ತಂಡ ಫುಲ್ ಖುಷ್ಗಣೇಶ್, ದಿಗಂತ್ ಅಭಿನಯ ಮಾಡಿತು ಮೋಡಿ NAMMUR EXPRESS NEWSಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್, ನಟ ದಿಗಂತ್ ಕಾಂಬಿನೇಷನ್ ತೆರೆ ಮೇಲೆ ಮತ್ತೆ ಮೋಡಿ ಮಾಡಿದೆ. ಆಗಸ್ಟ್ 12 ರಂದು ಕರ್ನಾಟಕ ಸೇರಿದಂತೆ, ಹೊರ ರಾಜ್ಯ ಹಾಗೂ ದೇಶ ವಿದೇಶಗಳಲ್ಲೂ ಗಾಳಿಪಟ-2 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಮೂಡಿಬಂದಿದೆ.ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಗಾಳಿಪಟ-2 ಚಿತ್ರದ ಕಲೆಕ್ಷನ್ ಮಾಡಿದೆ. ಒಂದು ವಾರದ ಬಳಿಕವೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಸಾಲು ಸಾಲು ರಜೆ ಹಿನ್ನೆಲೆ ಗಾಳಿಪಟ 2 ಸಿನಿಮಾ ಕಲೆಕ್ಷನ್ ಡಬಲ್ ಆಗಿದೆ. ‘ಗಾಳಿಪಟ 2” ಗಣೇಶ್ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ.14 ವರ್ಷಗಳ ಹಿಂದೆ ಗಾಳಿಪಟ 175 ದಿನ ಪ್ರದರ್ಶನ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಗಾಳಿಪಟ-2 ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ…