ಸಾವರ್ಕರ್ ಭಾವಚಿತ್ರ ತೆರವು ಪ್ರಕರಣ: ಓರ್ವನಿಗೆ ಚಾಕು ಇರಿತಮತ್ತೆ ಮಲೆನಾಡ ನಗರದಲ್ಲಿ ಅಶಾಂತಿ..! NAMMUR EXPRESS NEWSಶಿವಮೊಗ್ಗ ನಗರದ ಸಿಟಿಮಾಲ್ ನಲ್ಲಿ ಸಾವರ್ಕರ್ ಪೋಟೋ ವಿವಾದ ಬೆನ್ನಲ್ಲೆ ಸೋಮವಾರ ಮತ್ತೆ ವಿವಾದ ಭುಗಿಲೆದ್ದಿದೆ. ಸಾವರ್ಕರ್ ಭಾವಚಿತ್ರವನ್ನೂ ತೆರವುಗೊಳಿಸಿದರು ಎಂಬ ಕಾರಣಕ್ಕೇ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದುಅಮೀರ್ ಅಹಮದ್ ಸರ್ಕಲ್ ಬಳಿ ಹಾಕಲಾಗಿದ್ದ ಸಾವರ್ಕರ್ ಪೋಟೋವನ್ನು ತೆಗಿದಿದ್ದು ವಿವಾದಕ್ಕೆ ಕಾರಣವಾಗಿದೆ.ಭಾವಚಿತ್ರ ತೆಗೆದ ಕಾರಣಕ್ಕೆ ಎರಡು ಗುಂಪುಗಳು ಪರಸ್ಪರ ಜಮಾಯಿಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರುಭಾವಚಿತ್ರ ತೆಗೆದ ಕಾರಣಕ್ಕೆ ಎರಡು ಗುಂಪುಗಳು ಪರಸ್ಪರ ಜಮಾಯಿಸಿದ್ದರಿಂದ ಪೊಲೀಸರ ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರುಇನ್ನೂ ಸ್ಥಳದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಚಾಕು ಇರಿತ: ಮಲೆನಾಡು ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಗಲಾಟೆಯ ಬೆನ್ನಲ್ಲೇ ಮತ್ತಷ್ಟು ಗಲಾಟೆ ನಡೆಯುತ್ತಿದೆ. ಶಿವಮೊಗ್ಗದ ಬಜಾರ್‌ನಲ್ಲಿ ಓರ್ವನಿಗೆ ಚಾಕು ಇರಿಯಲಾಗಿದೆ. . ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು.…
Author: Nammur Express Admin
ಡಾ.ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮತೀರ್ಥಹಳ್ಳಿ ಪಟ್ಟಣ, ಹಳ್ಳಿಗಳಲ್ಲಿ ಆಚರಣೆ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಅಮೃತ್ ಆತ್ರೇಶ್ ಹೆಚ್.ಆರ್ ಧ್ವಜಾರೋಹಣ ಮಾಡಿದರು. ಪ.ಪಂ.ಅಧ್ಯಕ್ಷೆ ಶಬನಂ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ರಂಗಾಯಣ ನಿರ್ದೇಶಕ ಸಂದೇಶಜವಳಿ, ಅಧಿಕಾರಿಗಳಾದ ಪ ಪಂ ಮುಖ್ಯ ಅಧಿಕಾರಿ ಕುರಿಯ ಕೋಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್, ತಾ ಪಂ ಕಾರ್ಯನಿರ್ವಹಣಾಧಿಕಾರಿ ಶೈಲಾ ಎನ್, ಡಿವೈಎಸ್ಪಿ ಶಾಂತವೀರ, ಡಾ. ಸುಧಾ ಇತರರು ಇದ್ದರು.ಜನಪ್ರತಿನಿಧಿಗಳು, ಅಧಿಕಾರಿಗಳು, ಪಟ್ಟಣ ಪಂಚಾಯತ್ ಸದಸ್ಯರುಗಳು, ರಾಜ್ಯ ಮಟ್ಟದ ನಿಗಮ ಮಂಡಗಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕಿನ ಎಲ್ಲಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಾಗರೀಕರು, ಶಾಲಾ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು. ತೀರ್ಥಹಳ್ಳಿ ತಾಲೂಕಿನ ಅನೇಕ ಸಾಧಕರನ್ನು ಇದೇ ವೇಳೆ ಸನ್ಮಾನ ಮಾಡಲಾಯಿತು.ಗೃಹ ಸಚಿವ ಆರಗ ಜ್ಞಾನೇಂದ್ರ ಅವರು…
ಕೇಸರಿ ಫೌಂಡೇಶನ್ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಗುರೂಜಿ ಕರೆ NAMMUR EXPRESS NEWSಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಮಠಮಾನ್ಯಗಳು, ದೇಗುಲಗಳಲ್ಲೂ ಸ್ವಾತಂತ್ರ್ಯ ಹಬ್ಬ ಮನೆ ಮಾಡಿದೆ.ಬ್ಯಾಟರಾಯನಪುರದ ಕೇಸರಿ ಫೌಂಡೇಶನ್ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜ ಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ ಅವರು ಭಾಗವಹಿಸಿ ಶುಭಾಶೀರ್ವಚನ ನೀಡಿದರು. ಈ ಸಂಧರ್ಭ ಪರಮ್ ವಿಶಿಷ್ಟ್ ಸೇವಾ ಮೆಡಲ್ ಪುರಸ್ಕೃತರಾದ ಏರ್ ಮಾರ್ಷಲ್ ಎಸ್.ಪಿ ಸಿಂಗ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀ ಕಾ. ಶಂ ಶ್ರೀಧರ್, ಕೇಸರಿ ಫೌಂಡೇಷನ್ ಸಂಸ್ಥಾಪಕರಾದ ತಮ್ಮೇಶ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.
ಏನೇನು ಹೊಸ ಯೋಜನೆ..?, ಸಿಎಂ ಹೇಳಿದ್ದೇನು..?ಮೋದಿ, ಬೊಮ್ಮಾಯಿ ಅವರಿಂದ ಯುವ ಜನತೆಗೆ ಕರೆ NAMMUR EXPRESS NEWSಬೆಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ವೇಳೆ ಸಿಎಂ ಬೊಮ್ಮಾಯಿ ಹೊಸ 5 ಯೋಜನೆ ಘೋಷಣೆ ಮಾಡಿದ್ದಾರೆ.ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶೇ100ರಷ್ಟು ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ. ವರೆಗೆ ಸಹಾಯ ಧನ ಘೋಷಿಸಿದ್ದಾರೆ.ರೈತ ವಿದ್ಯಾನಿಧಿ ಯೋಜನೆಯನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 4,050 ಅಂಗನವಾಡಿ ತೆರೆಯಲು ನಿರ್ಧರಿಸಲಾಗಿದ್ದು, ಇದರಿಂದ 8,100 ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ರಾಜ್ಯದ ಸೈನಿಕರು ಕರ್ತವ್ಯದಲ್ಲಿದ್ದಾಗ ಮಡಿದರೆ, ಅವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಘೋಷಣೆ ಮಾಡಲಾಗಿದೆ. ಸ್ತ್ರೀ ಶಕ್ತಿ ಸಂಘ ಅಭಿವೃದ್ಧಿ ಮಾಡಿದ್ದೇವೆ, ಶಾಲೆಗಳ ಅಭಿವೃದ್ಧಿ…
ರಾಜಧಾನಿಯಲ್ಲಿ ಸಿಎಂ ಬೊಮ್ಮಾಯಿ ಧ್ವಜಾರೋಹಣರಾಜ್ಯದ ಅಭಿವೃದ್ಧಿಗೆ ಎಲ್ಲರ ಕೊಡುಗೆ ಸ್ಮರಿಸಿದ ಸಿಎಂಎಲ್ಲಾ ತಾಲೂಕಲ್ಲೂ ಅಧಿಕಾರಿಗಳು, ಶಾಸಕರ ಧ್ವಜಾರೋಹಣ NAMMUR EXPRESS NEWSಒಂದು ಕಡೆ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಿದರೆ ಇತ್ತ ರಾಜಧಾನಿ ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮಾಡಲಿರುವ ಅವರು ಗೌರವ ರಕ್ಷೆ ಸ್ವೀಕರಿಸಿದ ನಂತರ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.ಅಮೃತ ಮಹೋತ್ಸವ ನೆನಪಿಗೆ ಸರ್ಕಾರ ಹೊಸ ಹೊಸ ಯೋಜನೆಯನ್ನು ಸಿಎಂ ಘೋಷಣೆ ಮಾಡಿದ್ದಾರೆ.ಮಹಿಳೆಯರ ಸ್ವ ಉದ್ಯೋಗ, 250 ಕೋಟಿ ವೆಚ್ಚದಲ್ಲಿ ಶೌಚಾಲಯ, ಭೂ ರಹಿತ ಮಕ್ಕಳಿಗೆ ಸೌಲಭ್ಯ, ಶೇ.100ರಷ್ಟು ಶೌಚಾಲಯ ನಿರ್ಮಾಣ, 4050 ಹೊಸ ಅಂಗನವಾಡಿ ನಿರ್ಮಾಣ, ಶಾಲಾ ಪೂರ್ವ ಶಿಕ್ಷಣ, ಮೃತ ಯೋಧರ ಕುಟುಂಬಕ್ಕೆ ಸರ್ಕಾರಿ ಕೆಲಸದ ಜತೆ 25 ಲಕ್ಷ ಸಹಾಯ ಧನ, ಕರಕುಶಲ ಅಭಿವೃದ್ಧಿ ನಿಗಮದಿಂದ 50 ಸಾವಿರ ಸಾಲ, 8100 ಮಂದಿ ಮಹಿಳೆಯರಿಗೆ ಉದ್ಯೋಗ ಸೇರಿದಂತೆ ಅನೇಕ…
ಮೋದಿ ಧ್ವಜಾರೋಹಣ ಮಾಡಿ ದೇಶದ ಜನರ ಕುರಿತು ಭಾಷಣದೇಶದ ಮನೆ ಮನೆ, ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯ ಹಬ್ಬ NAMMUR EXPRESS NEWSನವದೆಹಲಿ/ ಬೆಂಗಳೂರು: 75ನೇ ವರ್ಷದ ಸಂಭ್ರಮದ ಸ್ವಾತಂತ್ರ ದಿನದ ಅಂಗವಾಗಿ ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನು ಕುರಿತು ಮಾತನಾಡಿದ್ದಾರೆ.ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವುದಾಗಲೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆಯಿಂದ ಗಮನ ಸೆಳೆದರು.ರಾಷ್ಟ್ರೀಯ ಧ್ವಜದ ಚಿತ್ರವಿರುವ ಟರ್ಬಾನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀತಿ ಬಣ್ಣದ ನೆಹರೂ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್ ಹಾಗೂ ಅದಕ್ಕೊಪ್ಪುವ ವಿಶೇಷ ವಿನ್ಯಾಸದ ಪೇಟ ಗಮನ ಸೆಳೆಯಿತು.ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಡಾ. ರಕ್ಷಣಾ ಕಾರ್ಯದರ್ಶಿಯು ಪ್ರಧಾನ ಮಂತ್ರಿಯವರಿಗೆ ಜನರಲ್ ಆಫೀಸರ್ ಕಮಾಂಡಿಂಗ್ (GoC), ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ, AVSM ಅನ್ನು…
ಆಗುಂಬೆ ಬಸ್ ನಿಲ್ದಾಣದ ಬಳಿ ಭಾಷಣ ಮಾಡಿದ್ದರುತೀರ್ಥಹಳ್ಳಿಯಲ್ಲಿ ಮಾಂಗಲ್ಯವನ್ನೇ ನೀಡಿದ ಮಹಾತಾಯಿ! NAMMUR EXPRESS NEWSತೀರ್ಥಹಳ್ಳಿ 75ನೇ ಸ್ವಾತಂತ್ರ ಅಮೃತೋತ್ಸವ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಆಗುಂಬೆ ಸರ್ಕಲ್ ಬಸ್ ಸ್ಟಾಪ್ ಪಕ್ಕದ ಪಾರ್ಕಿನ ಮುಂಭಾಗದಲ್ಲಿ ಗಾಂಧೀಜಿಯ ಕಲ್ಲಿನ ಸ್ತಂಭದಲ್ಲಿ ಗಾಂಧೀಜಿಯ ಮುಖ ಅನಾವರಣ ಮಾಡಲು ಸಿದ್ಧತೆ ನಡೆದಿದೆ.ಗಾಂಧೀಜಿಯವರು ರಾಷ್ಟ್ರೀಯ ಚಳುವಳಿಯನ್ನು ಉದ್ದೀಪನ ಗೊಳಿಸುವ ಸಲುವಾಗಿ 17. 8.1927 ರಂದು ತೀರ್ಥಹಳ್ಳಿಗೆ ಆಗಮಿಸಿ ಶ್ರೀ ಲಿಂಗಪ್ಪನವರ ಡ್ರಾಮಾ ಥಿಯೇಟರಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದು ಗಾಂಧಿ ಹೋರಾಟಕ್ಕೆ ಸಂಗ್ರಹವಾದ ರೂಪಾಯಿ ರೂ.1506 ಅನ್ನು ತೀರ್ಥಹಳ್ಳಿಮಹಾಜನತೆ ಗಾಂಧಿ ಚರಕ ನಿಧಿಗೆ ಅರ್ಪಿಸಿದ್ದರು ಎಂದು 1.9.1927ರ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಗಾಂಧೀಜಿ ತೀರ್ಥಹಳ್ಳಿಯ ಭೇಟಿ ವಿಶೇಷವಾಗಿ ಉಲ್ಲೇಖವಾಯಿತು, ಅಂದು ದೇಶದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಎಂದು ಇದರ ಮಾಹಿತಿಯನ್ನು ಡಿ ಎಸ್ ಸೋಮಶೇಖರ್ ನಿವೃತ್ತ ಪ್ರಾಂಶುಪಾಲರು ತೀರ್ಥಹಳ್ಳಿ ಉಲ್ಲೇಖಿಸಿದ್ದಾರೆ.ಗಾಂಧೀಜಿಯ ಮುಖವಾಡವನ್ನು ಬಾಳೆಬೇಲಿನ ಖ್ಯಾತ ಕಲಾವಿದರಾದ ಬಿ.ಡಿ. ಜಗದೀಶ್ ಅವರ ಕಲಾಕುಸಿರಿಯಲ್ಲಿ ತಾಮೃ ಹಾಗೂ ಹಿತ್ತಾಳಿ ಲೋಹದಲ್ಲಿ…
ಆಂಧ್ರಪ್ರದೇಶ ರಾಯಚೋಟಿಯಲ್ಲಿ ನಡೆದ ಘಟನೆಜಯಪುರ : ಭಾರೀ ಮಳೆಗೆ ಬೆಳೆಹಾನಿಯಾದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕೃಷಿಕ NAMMUR EXPRESS NEWSಆಂಧ್ರಪ್ರದೇಶ : ಆಂಧ್ರಪ್ರದೇಶ ರಾಯಚೋಟಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಅತ್ತೆಯೋರ್ವಳು ಸೊಸೆಯ ತಲೆ ಕಡಿದು ಪೊಲೀಸ್ ಠಾಣೆಗೆ ತೆಗೆದುಕೊಂಡ ಭಯಾನಕ ಘಟನೆ ಬೆಳಕಿಗೆ ಬಂದಿದೆ.ರಾಯಚೋಟಿಯ ಕೆ.ರಾಮಾಪುರಂ ವಾಸವಿದ್ದ ಸೊಸೆ ವಸುಂಧರಾ ಎಂಬಾಕೆಯನ್ನು ಆಕೆಯ ಅತ್ತೆ ಸುಬ್ಬಮ್ಮ ಎಂಬಾಕೆ ಕೊಚ್ಚಿ ಕೊಲೆ ಮಾಡಿದ್ದಾಳೆ.ಮಧ್ಯಾಹ್ನದ ವೇಳೆ ಸೊಸೆಯನ್ನು ಮನೆಗೆ ಕರೆದುಕೊಂಡ ಬಂದ ಅತ್ತೆ ಹಾಗೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಸೊಸೆಯ ರುಂಡ-ಮುಂಡವನ್ನು ಕ್ರೂರವಾಗಿ ಕತ್ತರಿಸಿ ಬೇರೆ ಮಾಡಿದ್ದಾರೆ ಎಂದು ವರದಿಯಾಗಿದೆ.ಬಳಿಕ ಅತ್ತೆ ವಸುಂಧರಾ ತಲೆ ಹಿಡಿದು ಠಾಣೆಗೆ ತೆರಳಿದ್ದಾಳೆ. ಆ ನಂತರ ಪೊಲೀಸರು ಸೂಚಿಸಿದಂತೆ ಮನೆಗೆ ಬಂದು ಅತ್ತೆ ಶವದ ಬಳಿ ತಲೆ ಇಟ್ಟಿದ್ದಾರೆ.ಕೊಲೆ ಪ್ರಕರಣದ ಕುರಿತು ಅನ್ನಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ರಾಜು ಅವರು ಮಾಹಿತಿ ನೀಡಿದ್ದು, ಆರೋಪಿಯು ತನ್ನ ಸೊಸೆಯೊಂದಿಗೆ…
ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಗರಂರಾಜ್ಯದಲ್ಲಿ ಗರಿಷ್ಠ ಕರೋನಾ ಕೇಸ್ಮಳೆ ಬಿಸಿಲಿನ ಆಟ: ಹದಗೆಟ್ಟಿದೆ ಅರೋಗ್ಯ NAMMUR EXPRESS NEWSಬೆಂಗಳೂರು: ಇತ್ತೀಚೆಗೆ ಕೆಲ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರ ದಾಖಲಾತಿ ನಿರಾಕರಿಸಿರುವ ಪ್ರಕರಣ ಇದೀಗ ಸರ್ಕಾರದ ಗಮನಕ್ಕೆ ಬಂದಿದೆ.ಕರೋನಾ ಸೋಂಕು ಇರುವವರನ್ನು ತಮ್ಮ ಆಸ್ಪತ್ರೆಗಳಲ್ಲಿ ದಾಖಲು ಮಾಡದ ಸಂಸ್ಥೆಗಳ ಮೇಲೆ ಕೆಪಿಎಂಇ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು.ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಅರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.ರಾಜ್ಯದಲ್ಲಿ ಶುಕ್ರವಾರ 2,032 ಜನರಿಗೆ ಕರೋನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 5 ಜನರ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು, ಧಾರವಾಡ , ಕೊಪ್ಪಳ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಕರೋನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 10,395 ಇದ್ದು, ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 6.63 ಇದೆ. ಬೆಂಗಳೂರಿನಲ್ಲಿಂದು…
ಮನೆ ಮನೆಯಲ್ಲೂ ಹರ್ ಘರ್ ತಿರಂಗಾಭಾರತದಲ್ಲಿ ಮೊಳಗಿದ ದೇಶ ಭಕ್ತಿಧ್ವಜಾರೋಹಣ ಏನು ಮಾಡಬೇಕು, ಏನು ಮಾಡಬಾರದು? NAMMUR EXPRESS NEWSಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಪೂರ್ಣಗೊಂಡು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆ.13 ರಿಂದ 15ರವರೆಗೆ ದೇಶದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಲಿದೆ.ಆ.13ರಿಂದ ಶುರುವಾದ ತ್ರಿವರ್ಣ ಧ್ವಜ ಪ್ರತಿ ಮನೆ ಮನೆ, ಕಚೇರಿಯಲ್ಲೂ ಹಾರಾಟ ನಡೆಯಲಿದೆ. ಕೋಟಿ ಕೋಟಿ ಜನ ತಮ್ಮ ದೇಶದ ಹೆಮ್ಮೆ ಮೆರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಭಾವುಟ ಹಾರಿಸುವ ವೇಳೆ ಹಲವು ಎಚ್ಚರ ವಹಿಸಬೇಕಿದೆ. ಏನೇನು ಎಚ್ಚರಿಕೆ ಇಲ್ಲಿದೆ ಮಾಹಿತಿ ಧ್ವಜದಲ್ಲಿ ಯಾವಾಗಲೂ ಕೇಸರಿ ಬಣ್ಣ ಮೇಲೆ ಬಂದು ಹಸಿರು ಬಣ್ಣ ಕೆಳಗಿರಬೇಕುಹರಿದಿರುವ ಧ್ವಜ ಹಾರಿಸುವಂತಿಲ್ಲತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿಸಮನಾಗಿ ಬೇರೆ ಯಾವುದೇ ಧ್ವಜ ಹಾರಿಸುವಂತಿಲ್ಲಧ್ವಜವನ್ನು ಅಲಂಕಾರಿಕ ವಸ್ತುವಾಗಿ ಬಳಸುವಂತಿಲ್ಲತುಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜ ಇರುವಂತಿಲ್ಲಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲಧ್ವಜವನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸುವಂತಿಲ್ಲ.…