Author: Nammur Express Admin

ಒತ್ತುವರಿ ತೆರವಿಗೆ ಅಕ್ಟೋಬರ್ ಗಡುವುಖಾತೆಗಳ ವಿವರವನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿ ನಮೂದಿಸುವಂತೆ ಸೂಚನೆ NAMMUR EXPRESS NEWSಬೆಂಗಳೂರು: ಸರ್ಕಾರಿ ಶಾಲೆ-ಕಾಲೇಜುಗಳ ಆಸ್ತಿ ಸಂರಕ್ಷಣಾ ಅಭಿಯಾನದಡಿ ಅಕ್ಟೋಬರ್‌ನೊಳಗೆ ಒತ್ತುವರಿ ತೆರವು ಮಾಡಿಸಿ ಶಿಕ್ಷಣ ಸಂಸ್ಥೆಯ ಹೆಸರಿಗೆ ಖಾತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.ದಾನಿಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆ, ಕಾಲೇಜಿಗೆ ನೀಡಿರುವ ನಿವೇಶನ, ಭೂಮಿಯು ಶಿಕ್ಷಣ ಸಂಸ್ಥೆಗಳ ಹೆಸರಿಗೆ ಖಾತೆ ಆಗದೆ ಕೆಲವೆಡೆ ಒತ್ತುವರಿಯಾಗಿದೆ. ಇದು ಕೆಲವೊಮ್ಮೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವ ಸನ್ನಿವೇಶ ಉಂಟಾಗುತ್ತದೆ. ಆಸ್ತಿ ಬೇರೆಯವರ ಪಾಲಾಗುವುದನ್ನು ತಪ್ಪಿಸಲು ಇಲಾಖೆಯು ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಅಭಿಯಾನ ಹಮ್ಮಿಕೊಂಡಿದ್ದು ಈ ಅವಧಿಯೊಳಗೆ ಸಂಬಂಧಪಟ್ಟ ಶಾಲೆ-ಕಾಲೇಜಿನವರು, ಅಧಿಕಾರಿಗಳು ಖಾತೆ ಮಾಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಿವೇಶನ, ಭೂಮಿಯನ್ನು ಶೈಕ್ಷಣಿಕ ಸಂಸ್ಥೆಗಳ ಹೆಸರಿಗೆ ಖಾತೆ ಮಾಡಿಕೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಜಿಲ್ಲೆಯಲ್ಲಿ ಖಾತೆ ಮಾಡಿಕೊಳ್ಳದೆ ಇದ್ದರೆ ಅಂತಹವರು ಸೆಪ್ಟೆಂಬರ್‌ನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜಿಲ್ಲಾಧಿಕಾರಿಗಳು ಕಂದಾಯ…

Read More

ಆ.12ಕ್ಕೆ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಅಭಿಮಾನಿಗಳ ಕಾತುರ: ಎಲ್ಲೆಡೆ ಭರ್ಜರಿ ಸಿದ್ಧತೆ NAMMUR EXPRESS NEWSಕ್ರಾಂತಿ ಕ್ರಾಂತಿ ಕ್ರಾಂತಿ.. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಸದ್ದು ಜೋರಾಗಿದೆ. ರಾಜ್ಯದಲ್ಲಿ ಆ.12ಕ್ಕೆ ತೆರೆ ಕಾಣಲಿದ್ದು ಅಭಿಮಾನಿಗಳು ಸಿನಿಮಾವನ್ನು ತಮ್ಮ ಸಿನಿಮಾದಂತೆ ಅಚ್ಚುಕಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಕಡೆ ಅಭಿಮಾನಿಗಳೇ ಬೈಕ್ ಮೆರವಣಿಗೆ, ಪೋಸ್ಟರ್ ಅಂಟಿಸಿ ಪ್ರಚಾರ ಮಾಡಿದ್ದಾರೆ. ರಾಜ್ಯದಲ್ಲಿ ಬಿಗ್ ಸಿನಿಮಾ ಪಟ್ಟಿಗೆ ಕ್ರಾಂತಿ ಸಿನಿಮಾವೂ ಸೇರಲಿದೆ.ರಾಜ್ಯದ ನೂರಾರು ತಿಯೇಟರ್ ಅಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈಗಾಗಲೇ ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈ ನಡುವೆ ದರ್ಶನ ಅವರ ಪ್ಯಾನ್ ಇಂಡಿಯಾ ಸಿನಿಮಾ D 56 ಬಗ್ಗೆ ಚರ್ಚೆ ಕೂಡ ಶುರುವಾಗಿದೆ.ಎಲ್ಲಾ ಸುದ್ದಿಗಳಿಗೆ nammurexpress.in ವೀಕ್ಷಿಸಿ.

Read More

ಪ್ರಶಾಂತಿ ಚಿಕಿತ್ಸಾಲಯ ತೀರ್ಥಹಳ್ಳಿಯಲ್ಲಿ ಚಿಕಿತ್ಸೆಅಗಸ್ಟ್ 7ರಂದು ತಜ್ಞ ವೈದ್ಯ ಡಾ‌.ಅನೂಪ್ ನಾರಾಯಣ್ ಪ್ರಶಾಂತಿ ಚಿಕಿತ್ಸಾಲಯದಲ್ಲಿ ಆಯುರ್ವೇದ ಚಿಕಿತ್ಸೆಯ ಜೊತೆಗೆ ಫಿಸಿಯೋಥೆರಪಿ ಚಿಕಿತ್ಸಾ ಪದ್ಧತಿಯೂ ಪ್ರಾರಂಭವಾಗಿದೆ. ಮಂಗಳೂರಿನ ಫಿಸಿಯೋಥೆರಪಿ ತಜ್ಞ ವೈದ್ಯರಾದ ಡಾ‌. ಅನೂಪ್ ನಾರಾಯಣ್ ಅವರು ತಿಂಗಳಲ್ಲಿ ಎರಡು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಲಭ್ಯವಿರುತ್ತಾರೆ. ಈ ಕೆಳಕಂಡ ರೋಗಗಳಿಗೆ ಆಯುರ್ವೇದ ಔಷಧದ ಜೊತೆಗೆ ಫಿಸಿಯೋಥೆರಪಿ ಚಿಕಿತ್ಸೆ ಅಗಸ್ಟ್ 7 ಭಾನುವಾರ ಲಭ್ಯವಿರುತ್ತದೆ. ಪಾರ್ಶ್ವವಾಯುಸೊಂಟ ಮತ್ತು ಕುತ್ತಿಗೆ ನೋವು ಮತ್ತು ಸೆಳೆತಮಂಡಿನೋವುಕೈ ಕಾಲು ಮರಗಟ್ಟುವಿಕೆಫ್ರಾಕ್ಚರ್ ಎರಡನೆ ಹಂತದ ಚಿಕಿತ್ಸೆನರರೋಗಗಳು. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಕರೆ ಮಾಡಿ. 9481325360. ಪ್ರಶಾಂತಿ ಚಿಕಿತ್ಸಾಲಯ,ಸುಝಕೀ ಶೋ ರೂಂ ಹತ್ತಿರಕೊಪ್ಪ ಸರ್ಕಲ್, ತೀರ್ಥಹಳ್ಳಿ.

Read More

ಭಾರತಕ್ಕೆ 6ನೇ ಚಿನ್ನದ ಪದಕ ಕೊಟ್ಟ ಭಜರಂಗ್ಶೀಘ್ರದಲ್ಲಿ ಮತ್ತೊಂದು ಚಿನ್ನದ ನಿರೀಕ್ಷೆ NAMMUR EXPRESS NEWSಕಾಮನ್‌ವೆಲ್ತ್ ಗೇಮ್ಸ್ ನ ಕುಸ್ತಿಯಲ್ಲಿ ಭಾರತಕ್ಕೆ ಆರನೇ ಬಂಗಾರ ಗೆದ್ದುಕೊಟ್ಟ ಭಜರಂಗ್ ಪೂನಿಯ ಭಾರತ ಮಾತೆಯ ಭಾವುಟ ಹಿಡಿದು ಸಂಭ್ರಮಿಸಿದ್ದಾರೆ.ಕಾಮನ್‍ವೆಲ್ತ್ ಕ್ರೀಡಾಕೂಟದ ಪುರುಷರ 65ಕೆಜಿ ವಿಭಾಗದ ಕುಸ್ತಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಕುಸ್ತಿ ಪಟು ಭಜರಂಗ್ ಪೂನಿಯಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಫೈನಲ್‍ನಲ್ಲಿ ಕೆನಡಾದ ಮೆಕ್‍ನೀಲ್ ಲಾಚ್ಲಾನ್ ವಿರುದ್ಧ ಮುನ್ನಡೆ ಸಾಧಿಸುತ್ತ ಸಾಗಿದ ಪೂನಿಯಾ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಈ ಪದಕದೊಂದಿಗೆ ಭಾರತಕ್ಕೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 7ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.ಈ ಮೊದಲು ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ ಫೈನಲ್‍ನಲ್ಲಿ ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದು ಕುಸ್ತಿಯಲ್ಲಿ ಪದಕದ ಬೇಟೆಗೆ ಆರಂಭ ನೀಡಿದ್ದರು. ಈ ಮೂಲಕ ಭಾರತ ತಂಡ ಈವರೆಗೆ 2022ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 7 ಚಿನ್ನ, 8 ಬೆಳ್ಳಿ, 7 ಕಂಚು ಸೇರಿ ಒಟ್ಟು 22 ಪದಕ ಗೆದ್ದಂತಾಗಿದೆ.ಇಬ್ಬರು ಕುಸ್ತಿಪಟುಗಳಾದ…

Read More

ಹೂವು, ಹಣ್ಣು ಖರೀದಿಸಲು ಮುಗಿಬಿದ್ದ ಜನರುಮಾರಿಕಾಂಬ ದೇವಸ್ಥಾನದಲ್ಲಿ ಬಾಗಿನ ಕೊಡುವುದರ ಮೂಲಕ ವರಮಹಾಲಕ್ಷ್ಮಿ ಪೂಜೆ ಆಚರಣೆ NAMMUR EXPRESS NEWSತೀರ್ಥಹಳ್ಳಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆ.5 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಜನತೆ ಸಿದ್ದರಾಗಿದ್ದಾರೆ.ತೀರ್ಥಹಳ್ಳಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಲಕ್ಷ್ಮಿ ಪೂಜೆ ಅದ್ದೂರಿಯಾಗಿ ನಡೆಯಲಿದ್ದು ಮುತ್ತೈದೆಯರಿಗೆ, ಬಾಗಿನ ಕೊಡುವುದರ ಮೂಲಕ ಪೂಜೆಯನ್ನು ಆಚರಿಸುತ್ತಾರೆ ಹಾಗೂ ವರಮಹಾಲಕ್ಷ್ಮಿ ಹಬ್ಬದ ದಿನ ಮನೆ ಮನೆಗಳಲ್ಲಿಯೂ ವರಮಹಾಲಕ್ಷ್ಮಿ ಪೂಜೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಹಿಳೆಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಮನೆಯಲ್ಲಿ ಪ್ರತಿಷ್ಠಾಪನೆ!: ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆಯರು ಕಾತುರರಾಗಿದ್ದು ಪಟ್ಟಣದಲ್ಲಿ ಮಳೆಯನ್ನು ಲೆಕ್ಕಿಸದೆ ಜನರ ಖರೀದಿ ಜೋರಾಗಿದೆ. ವರಮಹಾಲಕ್ಷ್ಮಿ ಮೂರ್ತಿಯನ್ನಿಟ್ಟು ಸೀರೆ ತಾಳಿ ಬಂಗಾರದ ಆಭರಣ ಹೂಗಳಿಂದ ಲಕ್ಷ್ಮಿಯನ್ನು ಅಲಂಕರಿಸುತ್ತಾರೆ, ನೈವೇದ್ಯ ಮಾಡಿ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿಣ ಕುಂಕುಮ ಕೊಡುವುದರ ಮೂಲಕ ಮುತ್ತೈದೆಯರಲ್ಲಿ ಲಕ್ಷ್ಮಿ ರೂಪವನ್ನು ಕಾಣಲಾಗುತ್ತದೆ.ಅಂಗಡಿಗಳಲ್ಲಿ ವ್ಯಾಪಾರ ಜೋರು: ವರ ಮಹಾಲಕ್ಹ್ಮೀ ಪೂಜೆ ಹಿನ್ನೆಲೆ ಬಂಗಾರದ ಅಂಗಡಿಗಳು, ಬಟ್ಟೆ ಅಂಗಡಿಗಳು, ದಿನಸಿ ಅಂಗಡಿಗಳಲ್ಲಿ ವ್ಯಾಪಾರ…

Read More

ಮಲೆನಾಡಿನಲ್ಲಿ ಆಮ್ ಆದ್ಮಿ ಸಂಘಟನೆ ಜೋರುತೀರ್ಥಹಳ್ಳಿ, ಸಾಗರ ಅಭ್ಯರ್ಥಿಗಳ ಹೆಸರು ಅಂತಿಮ NAMMUR EXPRESS NEWSಹೊಸನಗರ /ತೀರ್ಥಹಳ್ಳಿ: ಮಲೆನಾಡಿನಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಜೋರಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಪ್ ಪಕ್ಷ ತನ್ನ ಚಟುವಟಿಕೆ ಹಾಗೂ ಸಂಘಟನೆ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಹೊಸನಗರದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟನೆ ಮಾಡಿದೆ. ಸಾಗರ ಅಭ್ಯರ್ಥಿ,ಹೈಕೋರ್ಟ್ ವಕೀಲ ದಿವಾಕರ್, ತೀರ್ಥಹಳ್ಳಿ ಅಭ್ಯರ್ಥಿ, ಆಪ್ ವಕ್ತಾರ ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ್ ಉದ್ಘಾಟನೆ ಮಾಡಿದರು. ಈ ವೇಳೆ ಜಿಲ್ಲಾ ಸಂಚಾಲಕರಾದ ನವಿಲೇಶ್, ಹೊಸನಗರ ಅಧ್ಯಕ್ಷ ಗಣೇಶ್ ಸೋಗೋಡು, ತೀರ್ಥಹಳ್ಳಿ ಅಧ್ಯಕ್ಷ ಮದನ್ ತನಿಕಲ್, ಸಾಗರ ಅಧ್ಯಕ್ಷ ಅಮೃತ್ ರೋಸ್, ಸೊರಬ ಪ್ರಮುಖರಾದ ದಾನಪ್ಪ ನಾಯಕ, ಮುಖಂಡರಾದ ಮೋಹನ್, ಎಲ್ಲಾ ತಾಲೂಕಿನ ಮುಖಂಡರು, ಕಾರ್ಯಕರ್ತರು ಇದ್ದರು. ತೀರ್ಥಹಳ್ಳಿಯಲ್ಲಿ ಶೀಘ್ರದಲ್ಲಿ ಹೊಸ ಕಚೇರಿ!ತೀರ್ಥಹಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದಿಂದ ಗ್ರಾಮ ಸಂಪರ್ಕ ಅಭಿಯಾನ ನಡೆಯುತ್ತಿದ್ದು ಮಳೆಗಾಲದ ಬಳಿಕ ಹೊಸ ಕಚೇರಿ ಉದ್ಘಾಟನೆಗೊಳ್ಳಲಿದೆ.ಖ್ಯಾತ ವಕೀಲರು, ಸಂಘಟಕರೂ ಆದ ಶಿವಕುಮಾರ್…

Read More

NAMMUR EXPRESS NEWSತೀರ್ಥಹಳ್ಳಿ : ಕುಡುವಳ್ಳಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ತೀರ್ಥಹಳ್ಳಿ ವತಿಯಿಂದ ಉಚಿತವಾಗಿ ಛತ್ರಿಗಳನ್ನು ನೀಡಲಾಯಿತು. ಅಧ್ಯಕ್ಷರಾದ ಲ|| ಅಶೋಕ್ ಕುಡುವಳ್ಳಿ ಎಲ್ಲಾ ಮಕ್ಕಳಿಗೆ ಕೊಡೆಗಳನ್ನು ವಿತರಿಸಿದರು. ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲ|| ಜಗದೀಶ್ ಕುಡುವಳ್ಳಿ ಮುಖ್ಯೋಪದ್ಯಾಯರಾದ ಶ್ರೀ ಲೋಕೇಶ್ ಹಾಗು ಶಿಕ್ಷಕರಾದ ಶ್ರೀಮತಿ ಅಚ೯ನಾ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Read More

ರುಚಿ ಮತ್ತು ಶುಚಿಯಾದ ಬಾಳೆ ಎಲೆ ಮೀನು ಊಟ ಈಗ ತೀರ್ಥಹಳ್ಳಿಯ ಹೃದಯ ಭಾಗದಲ್ಲಿ ಮಂಡಗದ್ದೆ ಮಾದರಿಯ ಬಾಳೆಎಲೆ ಮೀನು ಊಟ ಈಗ ಕೊಪ್ಪ ಸರ್ಕಲ್ ಸಮೀಪದ ಶೆಟ್ರುಗದ್ದೆ ಕಾಂಪ್ಲೆಕ್ಸ್ ನಲ್ಲಿ ದಿನಾಂಕ :07-08-2022 ರಂದು ಶುಭಾರಂಭಗೊಳ್ಳಲಿದೆ. ಮೀನು ಊಟದ ಜೊತೆಗೆ ಚಿಕನ್‌‌ ದಮ್ ಬಿರಿಯಾನಿ, ಮಟನ್, ಚೈನೀಸ್, ಖಾಧ್ಯಗಳು ಕೂಡ ಲಭ್ಯವಿರುತ್ತದೆ. ತೀರ್ಥಹಳ್ಳಿಯ ಹೃದಯ ಭಾಗದಲ್ಲಿ ಶುಭಾರಂಭಗೊಳ್ಳುತ್ತಿರುವ ನಮ್ಮ ಹೋಟೆಲ್ ಮಾಲ್ಗುಡಿಗೆ ನಿಮಗೆ ಆತ್ಮೀಯ ಸ್ವಾಗತ.ರುಚಿ ಮತ್ತು ಶುಚಿಯಾದ ಆಹಾರಕ್ಕಾಗಿ ಭೇಟಿ ನೀಡಿ ಹೋಟೆಲ್ ಮಾಲ್ಗುಡಿ.. ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ ಸಚಿನ್ & ಪವನ್ Grand OpeningPlease join us to Celebrate the grand opening of our new Hotel “HOTEL MALGUDI” at Thirthahalli. We would be looking forward for your presence on August 7th 2022 at Shetrugadde Complex, Soppugudde Road, Koppa Circle, Thirthahalli. With your…

Read More

ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದಲ್ಲಿ ಬಿಡುಗಡೆತುಳು ಕಲಾವಿದರ ಹೊಸ ಪ್ರಯೋಗ NAMMUR EXPRESS NEWSತೀರ್ಥಹಳ್ಳಿ: ತುಳುನಾಡಿನ ಖ್ಯಾತ ಕಲಾವಿದರ ಸೂಪರ್ ಹಿಟ್ ಕಾಮಿಡಿ ಎಂಟರ್ಟೈನರ್, ಯಶಸ್ವಿ 11ನೇ ವಾರ ಪೂರೈಸಿರುವ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ತುಳು ಚಿತ್ರತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದಲ್ಲಿ ತೆರೆ ಕಂಡಿದೆ. ತುಳುನಾಡ ಖ್ಯಾತ ರಾಹುಲ್ ಅಮೀನ್ ನಿರ್ದೇಶಿಸಿದ್ದಾರೆಆನಂದ್ ಎನ್ ಕುಮಾರ್ ನಿರ್ಮಿಸಿದ್ದಾರೆ. ಬಿ.ಅಶೋಕ್ ಕುಮಾರ್, ಪವನ್ ಕುಮಾರ್, ಸುಹಾನ್ ಪ್ರಸಾದ್ – ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್-ಅಜಯ್ ಬಾಳಿಗ-ಸೀತಾರಾಮ ಶೆಟ್ಟಿವಿಷ್ಣು ಪ್ರಸಾದ್.ಪಿ-ಜಾಕೋಬ್ ಜಾನ್ಸನ್ – ಸ್ರಾಜನ್ ಕುಮಾರ್ – ಚೇತನ್ ಡಿಸೋಜ, ಜೀತೇಶ್ ಕುಮಾರ್ – ಪ್ರಸನ್ನ ಶೆಟ್ಟಿ ಬೈಲೂರು – ನವೀನ್ ಶೆಟ್ಟಿ ಮುಂತಾದವರು ಸಿನಿಮಾದಲ್ಲಿ ಕೈ ಜೋಡಿಸಿದ್ದಾರೆ. ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರ ಸೇರಿದಂತೆ ಕರಾವಳಿಯ ಹಲವೆಡೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಸರ್ವರೂ ಚಿತ್ರ ನೋಡಲು ಪ್ರದರ್ಶಕರು ಮನವಿ ಮಾಡಿದ್ದಾರೆ.

Read More