Author: Nammur Express Admin

ವಿನಯ್ ಗುರೂಜಿ, ಆರಗ, ಕಿಮ್ಮನೆ, ಆರ್.ಎಂ ಉದ್ಘಾಟನೆಮೊದಲ ದಿನದಿಂದ ಗ್ರಾಹಕರ ಕುತೂಹಲ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಲ್ಲಿರುವ ಟಿ.ಎಸ್.ಟಿ ದಿನಸಿ ಉತ್ಪನ್ನಗಳ ಬೃಹತ್ ಮಳಿಗೆಯನ್ನು ಅವಧೂತ ವಿನಯ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆಯನ್ನು ಮಾಡಿದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಂಜಿ ಚನ್ನವೀರಪ್ಪ, ಪ ಪಂ ಅಧ್ಯಕ್ಷರಾದ ಶಬನಂ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಶ್ರೀ ಎಚ್.ಎನ್ ವಿಜಯದೇವ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು.ವಿನಯ್ ಗುರೂಜಿ ಮಾತನಾಡಿ, ತೀರ್ಥಹಳ್ಳಿಯಂತಹ ಸಣ್ಣ ಊರಲ್ಲಿ ಇಂತಹ ಮಾಲ್ ಮಾಡಿರುವುದು ಸಾಧನೆ. ವಿವಿಧ ಕ್ಷೇತ್ರದಲ್ಲಿ ಸಾಧನೆಯ ಗುರಿ ಮುಟ್ಟಲು ತಮ್ಮ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಅಭಿವೃದ್ಧಿಗೆ ತಮ್ಮ ಸಂಸ್ಥೆ ಸಹಕಾರ ಮಾಡಲಿದೆ ಎಂದರು. ಟಿಎಸ್‌ ಟಿ…

Read More

7,000 ಬಸ್ ಗಳು ಬುಕ್, ಬಿಗಿ ಬಂದೋಬಸ್ತ್ NAMMUR EXPRESS NEWSದಾವಣಗೆರೆ: ಆಗಸ್ಟ್ 3ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಿದ್ಧರಾಮೋತ್ಸವಕ್ಕಾಗಿ ದಾವಣಗೆರೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನ ಕರೆತರಲು 7,000 ಬಸ್ ಗಳು ಬುಕ್ ಆಗಿವೆ.ಆಗಸ್ಟ್ 3ರಂದು ದಾವಣಗೆರೆ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕಳೆದ ಎರಡು ವಾರಗಳಿಂದ ರಾತ್ರಿ ಹಗಲು ನಡೆಯುತ್ತಿರುವ ವೇದಿಕೆ, ಕಾರ್ಯಕರ್ತರಿಗೆ ಪೆಂಡಾಲ್, ಆಸನ, ಊಟದ ಸಿದ್ಧತೆ ಕೆಲಸಗಳು ಭರ್ಜರಿ ಸಾಗಿದೆ. ಈ ಕಾರ್ಯಕ್ರದಮ ಮುಖ್ಯ ವೇದಿಕೆಯಲ್ಲಿ ಆಗಸ್ಟ್ 3ರಂದು 2 ಗಂಟೆಗಳ ಕಾರ್ಯಕ್ರಮವಿರುತ್ತದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಉಪವೇದಿಕೆಗಳಲ್ಲೂ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.ಕಾರ್ಯಕ್ರಮಕ್ಕಾಗಿ ಭಾನುವಾರದವರೆಗೆ 325ಕ್ಕೂ…

Read More

ಕಾಂಗ್ರೆಸ್‌ನಿಂದ ಸಭಾತ್ಯಾಗ NAMMUR EXPRESS NEWSಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ಬೆಲೆಏರಿಕೆ ಕುರಿತು ಚರ್ಚೆಗೆ ಉತ್ತರಿಸಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಯ ವೌಲ್ಯಮಾಪನಕ್ಕಾಗಿ ಎಲ್ಲ ಮಾನದಂಡಗಳ ವಿವರಗಳನ್ನು ನೀಡಿ, ದೇಶವು ಆರ್ಥಿಕ ಹಿಂಜರಿತ ಅಥವಾ ಸ್ಥಗಿತತೆಯತ್ತ ಸಾಗುವ ಸಾಧ್ಯತೆಯಿಲ್ಲ ಎಂದು ಹೇಳಿದರು. ವಿತ್ತಸಚಿವೆಯ ಉತ್ತರವು ತಮಗೆ ತೃಪ್ತಿ ನೀಡಿಲ್ಲ ಎಂದು ಹೇಳಿದ ಕಾಂಗ್ರೆಸ್ ಸದಸ್ಯರು ಉತ್ತರದ ನಡುವೆಯೇ ಸಭಾತ್ಯಾಗ ನಡೆಸಿದರು.’ಸಾಂಕ್ರಾಮಿಕ,ಕೋವಿಡ್ ಎರಡನೇ ಅಲೆ,ಒಮೈಕ್ರಾನ್ ಮತ್ತು ರಶ್ಯಾ ಉಕ್ರೇನ್ ಬಿಕ್ಕಟ್ಟುಗಳ ಹೊರತಾಗಿಯೂ ನಾವು ಹಣದುಬ್ಬರವನ್ನು ಶೇ.7ಕ್ಕಿಂತ ಕಡಿಮೆ ಮಟ್ಟದಲ್ಲಿ ಕಾಯ್ದುಕೊಂಡಿದ್ದೇವೆ. ಇದನ್ನು ಗುರುತಿಸಬೇಕು’ ಎಂದು ಹೇಳಿದ ಸೀತಾರಾಮನ್,ಪ್ರಸ್ತುತ ಚಿಲ್ಲರೆ ಹಣದುಬ್ಬರವು ಶೇ.7ರಷ್ಟಿದೆ. 2004ರಿಂದ 2014ರವರೆಗಿನ ಯುಪಿಎ ಆಡಳಿತದಲ್ಲಿ ಹಣದುಬ್ಬರವು ಎರಡಂಕಿಗಳಿಗೆ ತಲುಪಿತ್ತು. ಆ ಅವಧಿಯಲ್ಲಿ ಸತತ 22 ತಿಂಗಳುಗಳ ಕಾಲ ಹಣದುಬ್ಬರವು ಶೇ.9ಕ್ಕಿಂತ ಮೇಲೆಯೇ ಇತ್ತು ಎಂದರು.ಹೆಚ್ಚಿನ ಹಣದುಬ್ಬರವು ಆಹಾರ ಮತ್ತು ಇಂಧನಗಳಲ್ಲಿ ಉಂಟಾಗಿದೆ. ವಿಶ್ವದಲ್ಲಿ ಆಹಾರ ಹಣದುಬ್ಬರವು ಇಳಿಯುತ್ತಿದೆ ಮತ್ತು ಅದು ಭಾರತದಲ್ಲಿಯೂ ಇಳಿಯಲಿದೆ ಎಂದು ಅವರು ಹೇಳಿದರು.ಈಗಲೂ ಭಾರತವು…

Read More

ಮಂಜುನಾಥ ಗೌಡರದ್ದು ವಯುಕ್ತಿಕ ಪಾದಯಾತ್ರೆಆರಗ ಹೆದರುಪುಕುಲ : ಕಿಮ್ಮನೆ ಲೇವಡಿ NAMMUR EXPRESS NEWSತೀರ್ಥಹಳ್ಳಿ: ಆಗುಂಬೆ ಭಾಗದ ಜ್ವಲಂತ ಸಮಸ್ಯೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇದೀಗ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಕಿಮ್ಮನೆ ರತ್ನಾಕರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಕೆಪಿಸಿಸಿ ಆದೇಶದಂತೆ ಆ.1ರಿಂದ 10ರವರೆಗೆ ಎಲ್ಲಾ ಕಡೆ ಪಾದಯಾತ್ರೆ ನಡೆಸಬೇಕು. ಹೀಗಾಗಿ ಆಗಸ್ಟ್ 8ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿಯವರೆಗೆ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನ ಸಭೆ ನಡೆಸುವುದಾಗಿ ಹೇಳಿದರು.ಕೆಪಿಸಿಸಿ ರಾಜ್ಯಾಧ್ಯಕ್ಷರ ಮೇರೆಗೆ ಈ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದ ಹಾನಿ ಉಂಟಾಗಿದೆ. ಕಾಡಾನೆಗಳ ಹಾವಳಿಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ, ರೈತರಿಗೆ ಈ ವರ್ಷದಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ತುಂಬಾ ಹಾನಿ ಉಂಟಾಗಿದೆ, ಹಾಗೂ ಕಸ್ತೂರಿ ರಂಗನ್ ವರದಿ, ರೈತ ವಿರೋಧಿ ನಿಯಮ, ರಸ ಗೊಬ್ಬರ ಬೆಲೆ ಏರಿಕೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನೇರ ಹಣ…

Read More

ಕಿಚ್ಚನ ಕಥೆಗೆ ಮನಸೋತ ಪ್ರೇಕ್ಷಕರುಹೊಸ ದಾಖಲೆಯತ್ತ ಕನ್ನಡ ಸಿನಿಮಾ NAMMUR EXPRESS NEWSಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುತ್ತಿದೆ. ಕಿಚ್ಚನ ಅಭಿನಯ ಹಾಗೂ ಕಥೆಗೆ ಜನ ಮನಸೋತಿದ್ದಾರೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಗರಿ ಎನ್ನಬಹುದು. ಬಿಡುಗಡೆಯಾಗಿ ನಾಲ್ಕು ದಿನವಾಗಿದ್ದು, ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಲೆಕ್ಷನ್ ವಿಚಾರಕ್ಕೆ ಬಂದರೆ ಸಹ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.ಸದ್ಯ ಸಿನಿಮಾ 100 ಕೋಟಿ ರೂ ಕಲೆಕ್ಷನ್ ಮಾಡುವಂತ ಸಾಗುತ್ತಿದೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ ನಾಲ್ಕನೇ ದಿನದಂದು ಚಿತ್ರ 15 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ವರದಿಗಳ ಪ್ರಕಾರ, ದಕ್ಷಿಣ ಸಿನಿಮಾ ರಂಗದ ಮುಂದಿನ ದೊಡ್ಡ ಚಿತ್ರ ವಿಕ್ರಾಂತ್ ರೋಣ ಎನ್ನಬಹುದು.ಕಿಚ್ಚ ಸುದೀಪ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೊದಲ…

Read More

ಗುಡ್ಡಕುಸಿತಕ್ಕೆ ಇಬ್ಬರು ಮಕ್ಕಳ ಬಲಿಹಲವೆಡೆ ನೆರೆ ಭೀತಿ, ತಗ್ಗು ಪ್ರದೇಶಗಳಿಗೆ ಆತಂಕ NAMMUR EXPRESS NEWSಬೆಂಗಳೂರು: ರಾಜದಾನಿಯೂ ಸೇರಿದಂತೆ ರಾಜ್ಯಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನೆ ಹಿಂದಿನ ಗುಡ್ಡ ಜರಿದು ಮನೆಯೊಳಗಿದ್ದ ಇಬ್ಬರು ಮಕ್ಕಳು ಭೂಸಮಾಧಿಯಾಗಿದ್ದಾರೆ.ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರೆಗೆ ಸಮೀಪದ ಗುಡ್ಡ ಕುಸಿದುದರಿಂದ ಮನೆಯೊಳಗಿದ್ದ ಇಬ್ಬರು ಮಕ್ಕಳು ಭೂಸಮಾಧಿಯಾಗಿದ್ದು, ತಡರಾತ್ರಿ ಕಾರ್ಯಾಚರಣೆಯ ಬಳಿಕ ಮಕ್ಕಳ ಶವಗಳನ್ನು ಹೊರತೆಗೆಯಲಾಯಿತು.ತಗ್ಗು ಪ್ರದೇಶಗಳಿಗೆ ಆತಂಕ:ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಉಂಟಾಯಿತು. ನೆರೆ ನೀರು ನುಗ್ಗುವ ಭೀತಿಯಲ್ಲಿರುವ ತಗ್ಗು ಪ್ರದೇಶದ ಜನತೆ ಆತಂಕಪಟ್ಟರು. ರಾತ್ರಿ ಹತ್ತು ಗಂಟೆಯ ಬಳಿಕ ಮಳೆ ಶುರುವಾದುದರಿಂದ ಟ್ರಾಫಿಕ ಸಮಸ್ಯೆ ಉಂಟಾಗಲಿಲ್ಲ.ಕೊಡಗಿನಲ್ಲಿ ನೆರೆ ಭೀತಿ:ಕೊಡಗಿನ ಹಲವೆಡೆ ಭಾರಿ ಮಳೆಯಾಗಿದೆ. ಕೊಯನಾಡಿನ ಕೊಯನಾಡು ಕಿಂಡಿ ಅಣಿಕಟ್ಟು…

Read More

ಪ್ರಣಾಳಿಕೆ, ನೀತಿ, ವಿಷನ್ 2023 ಸಮಿತಿಗೆ ನೇಮಕ NAMMUR EXPRESS NEWSಶಿವಮೊಗ್ಗ : ರಾಜ್ಯ ಕಾಂಗ್ರೆಸ್’ನ ಪ್ರಣಾಳಿಕೆ, ನೀತಿ ಮತ್ತು ವಿಷನ್ 2023 ಸಮಿತಿಗೆ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಅಖಿಲ ಭಾರತೀಯ ಕಾಂಗ್ರೆಸ್‌ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಮಿತಿಗೆ ಡಾ. ಜಿ.ಪರಮೇಶ್ವರ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಮಾಜಿ ಶಾಸಕ ಮಧು ಬಂಗಾರಪ್ಪ, ಪ್ರೊ. ರಾಧಾಕೃಷ್ಣ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಪಟ್ಟಿಗೆ ಅಂಕಿತ ಹಾಕಿದ್ದಾರೆ ಎಂದು ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರ 36 ರೂ. ಇಳಿಕೆ NAMMUR EXPRESS NEWSಹೊಸದಿಲ್ಲಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು ಸೋಮವಾರ 36 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.ಇದರೊಂದಿಗೆ ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 2,012.50 ರೂ.ನಿಂದ 1,976ಕ್ಕೆ ಇಳಿದಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಜುಲೈ 6ರಂದು 50 ರೂ.ಗೆ ಹೆಚ್ಚಿಸಲಾಗಿತ್ತು.

Read More

ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು NAMMUR EXPRESS NEWSನವದೆಹಲಿ: ಸಾಲ ಮಾಡಿ ವಾಹನ ಕೊಳ್ಳುವವರಿಗೆ ಇಲ್ಲೊಂದು ಎಚ್ಚರಿಕೆ. ಸಾಲ ಮರುಪಾವತಿಸದಿದ್ದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಯಾವುದೇ ಸಮಯದಲ್ಲಿ ಬಂದು ನಿಮ್ಮ ವಾಹನವನ್ನು ಮುಟ್ಟುಗೋಲು ಹಾಕಬಹುದು. ಅದು ಅಪರಾಧವಾಗುವುದಿಲ್ಲ. ಹೀಗಂತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಸಾಲ ಮಾಡಿ ವಾಹನ ಕೊಳ್ಳುವಾಗ ಆ ವಾಹನ ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯ ಹೆಸರಿನಲ್ಲಿಯೇ ಇರುತ್ತದೆ. ಪೂರ್ತಿಯಾಗಿ ಸಾಲ ಪಾವತಿಸಿದ ನಂತರದಾಖಲೆಯಲ್ಲಿ ಹೆಸರು ಬದಲಾಗುವವರೆಗೆ ಸಂಸ್ಥೆಗೆ ವಾಹನದ ಮೇಲೆ ಅಧಿಕಾರವಿರುತ್ತದೆ. ಹಾಗಾಗಿ ಮುಟ್ಟುಗೋಲು ಹಾಕಿಕೊಂಡರೂ ಅದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ಜಸ್ಟಿಸ್ ಚೌಹಾಣ್‌ರ ಏಕಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.ವಾಹನ ಮುಟ್ಟುಗೋಲು ಹಾಕಿದ ಕುರಿತು 2009ರಲ್ಲಿ ವ್ಯಕ್ತಿಯೋರ್ವರು ಗುವಾಹಟಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವಾಹನವನ್ನು ಅವರಿಗೆ ಹಿಂದಿರುಗಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಹಣಕಾಸು ಸಂಸ್ಥೆ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

Read More

90ಕ್ಕೂ ಅಧಿಕ ವಾಹನ ವಶಕ್ಕೆ NAMMUR EXPRESS NEWSಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿ ಹಾಗೂ ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಲಾಗಿರುವ ರಾತ್ರಿ ನಿಷೇಧಾಜ್ಞೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ 200ಕ್ಕೂ ಅಧಿಕ ಮಂದಿ ಹಾಗೂ 90ಕ್ಕೂ ಅಧಿಕ ವಾಹನಗಳನ್ನು ಮಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿದೆ.ವಾಹನ ಪರಿಶೀಲನೆ ಬಳಿಕ ರಿಲೀಸ್ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧ ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

Read More