ಬೆಂಗಳೂರಿನ ಇಬ್ಬರು ಸೇರಿ ಒಟ್ಟು 40 ಮಂದಿ ವಶಕ್ಕೆ NAMMUR EXPRESS NEWSಮಂಗಳೂರು: ಸುಳ್ಯ ತಾಲ್ಲೂಕು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಸೇರಿದಂತೆ ಒಟ್ಟು 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಸ್ತುವಾಹನಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿರುವ ಅವರು, ನಾಗರಿಕರು ಸಹ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.ಸರಣಿ ಕೊಲೆಗಳ ತನಿಖೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮಸೂದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಪ್ರಮುಖರು ಸಿಕ್ಕಿದ್ದಾರೆ.ಉಳಿದವರನನ್ನು ಶೀಘ್ರ ಬಂಧಿಸುತ್ತೇವೆ. ಫಾಜಿಲ್ ಹತ್ಯೆಗೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನೂ ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಈ ಪ್ರಕರಣವನ್ನು ಶೀಘ್ರ ಭೇದಿಸಬಹುದು. ಗಡಿಭಾಗದಲ್ಲಿ ಚೆಕ್ ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗುತ್ತದೆ ಎಂದು ಹೇಳಿದರು.ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗಳ ಜೊತೆ ತನಿಖಾ ಪ್ರಗತಿ ಕುರಿತು ಸಭೆ ನಡೆಸಿದ ಅವರು, ಅಗತ್ಯ ಮಾಹಿತಿ ಪಡೆದುಕೊಂಡರು. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಮಂಗಳೂರು ಪೊಲೀಸ್ ಕಮಿಷನರ್…
Author: Nammur Express Admin
NAMMUR EXPRESS NEWSಉಡುಪಿ : ಡಾ.ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಮತ್ತು ಉದಯವಾಣಿ ಪತ್ರಿಕೆಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಸಂಸ್ಥಾಪಕ ಟಿ.ಮೋಹನದಾಸ್ ಎಂ.ಪೈ, ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.89 ವರ್ಷದ ಪೈ ಅವರು ತಮ್ಮ ಸಹೋದರರಾದ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ ಮತ್ತು ಸಹೋದರಿಯರಾದ ಆರ್.ವಸಂತಿ, ಜಯಂತಿ ಪೈ, ಇಂದುಮತಿ ಪೈ ಮತ್ತು ಆಶಾ ಪೈ ಅವರನ್ನು ಅಗಲಿದ್ದಾರೆ.ಡಾ.ಟಿ.ಎಂ.ಎ. ಪೈ ಅವರ ಹಿರಿಯ ಪುತ್ರ, ಮೋಹನ್‌ದಾಸ್ ಪೈ ಅವರು ಆಧುನಿಕ ಮಣಿಪಾಲದ ವಾಸ್ತುಶಿಲ್ಪಿಯಾಗಿ ಜನಪ್ರಿಯರಾಗಿದ್ದರು. ಟಿ.ಎಂ.ಎ ಪೈ ಫೌಂಡೇಶನ್ ಮತ್ತು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಜೊತೆಗೆ, ಅವರು ಎಂಜಿಎಂ ಕಾಲೇಜು ಟ್ರಸ್ಟ್ ಮತ್ತು ಐಸಿಡಿಎಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದರು.ಕಲೆ ಮತ್ತು ಸಂಸ್ಕೃತಿಯ ಪ್ರೇಮಿ, ಮೋಹನ್‌ದಾಸ್ ಪೈ ಅವರು ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರ, ಜಾನಪದ ಪ್ರದರ್ಶನ ಕಲೆಗಳ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಮತ್ತು ಎಂಜಿಎಂ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿದರು. ಬಹುಸಂಸ್ಕೃತಿಯ ತಾಣವಾದ ಪಾರಂಪರಿಕ ಗ್ರಾಮವನ್ನು ನಿರ್ಮಿಸಲು…
ರಾಜ್ಯದಲ್ಲಿ ಹೆಚ್ಚಿದ ಪತ್ರಕರ್ತರ ಮೇಲಿನ ಹಲ್ಲೆಶಿವಮೊಗ್ಗದಲ್ಲೂ ಗೃಹ ಸಚಿವರಿಗೆ ಮನವಿ NAMMUR EXPRESS NEWSತೀರ್ಥಹಳ್ಳಿ: ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವರದಿ ಮಾಡಲು ಹೋಗಿದ್ದ ಕನ್ನಡ ಪ್ರಭ ಮತ್ತು ಸಂಯುಕ್ತ ಕರ್ನಾಟಕ ವರದಿಗಾರರ ಮೇಲೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಶಾಖೆ ತೀವ್ರವಾಗಿ ಖಂಡಿಸಿದೆ.ಮುತ್ಸದ್ದಿ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ರಮೇಶ್ ಕುಮಾರ್ ಅವರು ತಮ್ಮ ಸ್ಥಾನದ ಜವಾಬ್ದಾರಿ ಮರೆತು ಪತ್ರಕರ್ತರಿಬ್ಬರ ಮೇಲೆ ಹಲ್ಲೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಅದ್ದರಿಂದ ಕೂಡಲೆ ಅವರು ಕ್ಷಮೆಯಾಚಿಸಬೇಕು.ಪತ್ರಕರ್ತರ ಮೇಲಿನ ಇಂತಹ ಹಲ್ಲೆ ಮತ್ತು ದೌರ್ಜನ್ಯಗಳನ್ನು ಸಂಘವು ಸಹಿಸುವುದಿಲ್ಲ. ಕೂಡಲೇ ರಮೇಶ್ ಕುಮಾರ್ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆಯ ಅಧ್ಯಕ್ಷರಾದ ಡಾನ್ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷರಾದ ಮುನ್ನೂರ್ ಮೋಹನ್ ಶೆಟ್ಟಿ,ಜಿಲ್ಲಾ ಸಂಘದ ಪ್ರತಿನಿಧಿ ಟಿ ಜೆ ಅನಿಲ್, ಕಾರ್ಯದರ್ಶಿಯಾದ ಮುರುಘರಾಜ್, ಖಜಾಂಚಿ ಶ್ರೀಕಾಂತ್.…
2024ಕ್ಕೂ ಮೋದಿ ಸಾರಥಿ: ಅಮಿತ್ ಶಾ ಘೋಷಣೆಅಮಿತ್ ಷಾ, ಅರುಣ್ ಸಿಂಗ್ ಘೋಷಣೆ NAMMUR EXPRESS NEWSನವ ದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರೇ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.ಬಿಜೆಪಿ ಕೇಂದ್ರ ಸಮಿತಿ ಇದನ್ನು ಸ್ಪಷ್ಟಪಡಿಸಿದೆ.ಗೃಹ ಸಚಿವ ಅಮಿತ್ ಶಾ ಭಾನುವಾರ ಪಾಟ್ನಾದಲ್ಲಿ ಮಾತನಾಡಿ ಮೋದಿ ನೇತೃತ್ವದಲ್ಲಿ ಲೋಕ ಸಭಾ ಚುನಾವಣೆ ನಡೆಯಲಿದೆ ಎಂದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, 2024ರ ಲೋಕಸಭೆ ಮತ್ತು 2025ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಹೋರಾಡಲಿದೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.2024ರ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದ್ದು, ನರೇಂದ್ರ ಮೋದಿ ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. 2024ರಲ್ಲಿ ಹಾಗೂ 2025ರಲ್ಲಿ ಬಿಹಾರದಲ್ಲಿ ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳಲ್ಲಿ…
49kg ವಿಭಾಗದಲ್ಲಿ ಕಾಮನ್ವೆಲ್ತ್ ರೆಕಾರ್ಡ್ ಜೊತೆಗೆ ಚಿನ್ನದ ಪದಕ NAMMUR EXPRESS NEWS2014 ಮತ್ತು 2018ರ ಕಾಮನ್‍ವೆಲ್ತ್ ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಚಿನ್ನ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಈ ಬಾರಿಯು ಚಿನ್ನದ ಪದಕ ಗೆದ್ದಿದ್ದಾರೆ.49kg ವಿಭಾಗದಲ್ಲಿ ಕಾಮನ್ವೆಲ್ತ್ ರೆಕಾರ್ಡ್ ಜೊತೆಗೆ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾಳೆ.2017ರ ವಿಶ್ವ ಚಾಂಪಿಯನ್ಶಿಪ್ಪಿನಲ್ಲಿ ಚಿನ್ನ,2020ರ ಟೋಕಿಯೋ ಒಲಂಪಿಕ್ಕಿನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.ಇಷ್ಟೆಲ್ಲ ಸಾಧನೆ ಮಾಡಿದ ಭಾರತದ ಹೆಮ್ಮೆಯ ಪುತ್ರಿ, ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವ ‘ಖೇಲ್ ರತ್ನ’ವನ್ನೇ ಪಡೆದಾಕೆ ಇದೀಗ ಭಾರತಕ್ಕೆ ಚಿನ್ನದ ಪದಕ ತಂದಿದ್ದಾಳೆ.
ಲಾಲ್ ಬಾಗ್ ಹೂವಲ್ಲಿ ಅರಳಿದ್ದಾರೆ ಪುನೀತ್!9 ತಿಂಗಳ ಪುಣ್ಯ ಸ್ಮರಣೆ: ಅಭಿಮಾನಿಗಳ ಕಣ್ಣೀರುಪುನೀತ್ ಹೆಸರಲ್ಲಿ ಮುಂದುವರಿದ ಸಮಾಜ ಸೇವೆ NAMMUR EXPRESS NEWSಬೆಂಗಳೂರು: ಭಾರತ ಕಂಡ ಅಪ್ರತಿಮ ನಟ, ಸಮಾಜ ಸೇವಕ ಪುನೀತ್ ರಾಜ್ ಕುಮಾರ್ ಮರೆಯಾಗಿ 9 ತಿಂಗಳು ಕಳೆದಿದೆ. ಜುಲೈ 29ಕ್ಕೆ 9 ತಿಂಗಳು ಕಳೆದಿದ್ದು 9 ತಿಂಗಳ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಕಣ್ಣೀರಲ್ಲೆ ಕಳೆದಿದ್ದಾರೆ.ಪುನೀತ್ ಹೆಸರಲ್ಲಿ ಮುಂದುವರಿದ ಸಮಾಜ ಸೇವೆ ಮುಂದುವರಿದಿದ್ದು, ಎಲ್ಲಾ ಕಡೆ ರಕ್ತದಾನ, ನೇತ್ರದಾನ ಶಿಬಿರ ನಡೆಯುತ್ತಿವೆ. ಲಕ್ಷ ಲಕ್ಷ ಜನ ರಕ್ತದಾನ ಮಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿವೆ.ಪುನೀತ್ ದೇಶಕ್ಕೆ ಮಾದರಿ!ದೇಶದಲ್ಲೇ ನಟನೊಬ್ಬ ಸಾಮಾಜಿಕ ಪ್ರೇರಣೆಯಿಂದ ಮಾದರಿಯಾಗಿದ್ದಾರೆ. ಮೃತಪಟ್ಟರೂ ಅವರ ಹೆಸರಲ್ಲಿ ಪ್ರತಿ ದಿನ ಒಂದಲ್ಲ ಒಂದು ಸಮಾಜಪರ ಕೆಲಸ ನಡೆಯುತ್ತಿದೆ. ಪುನೀತ್ ಹೂವಿನ ಪ್ರತಿಮೆಗೆ ಸಿದ್ಧತೆ75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ಅಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೂವಿನ ಪ್ರತಿಮೆ ಮಾಡಲು…
ಓಲಾ ಕಂಪನಿಯಿಂದ ಸಾವಿರ ಉದ್ಯೋಗ ಕಟ್!ಸಾಮರ್ಥ್ಯ ಇಲ್ಲದ ಉದ್ಯೋಗಿಗಳಿಗೆ ಅವಕಾಶ ಇಲ್ಲಎಲ್ಲಾ ಕಂಪನಿಗಳಲ್ಲೂ ಕಾಂಟ್ರಾಕ್ಟ್ ಪದ್ಧತಿ ಜಾರಿ NAMMUR EXPRESS NEWSದೇಶದಲ್ಲಿ ಕರೋನಾ ಬಳಿಕ ಒಂದು ಕಡೆ ಸರ್ಕಾರ ಉದ್ಯೋಗ ಸೃಷ್ಟಿ ಮೇಲೆ ತಲೆಕೆಡಿಸಿಕೊಂಡಿದ್ದರೆ ಇನ್ನೊಂದು ಕಡೆ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ತೆಗೆಯುತ್ತಿವೆ.ಅದರಲ್ಲೂ ಸಾಮರ್ಥ್ಯ ಇಲ್ಲದ ಉದ್ಯೋಗಿಗಳಿಗೆ ಅವಕಾಶ ಇಲ್ಲವಾಗುತ್ತಿದೆ. ಕಂಪನಿಗಳ ಲಾಭದ ದೃಷ್ಟಿಯಿಂದ ಕಾರ್ಯಕ್ಷಮತೆ ಹೆಚ್ಚಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್ ಇದೆ. ಜೊತೆಗೆ ಓರ್ವ ಕೆಲಸಗಾರರಾಗದೆ ಕಂಪನಿಯ ಅಭಿವೃದ್ಧಿಗೆ ನೌಕರರು ಕೆಲಸ ಮಾಡಬೇಕಿದೆ. ಎಲ್ಲಾ ಕಂಪನಿಗಳಲ್ಲೂ ಕಾಂಟ್ರಾಕ್ಟ್ ಪದ್ಧತಿ ಜಾರಿಯಾಗುತ್ತಿದೆ.ಓಲಾದಲ್ಲಿ 1000 ಉದ್ಯೋಗಿಗಳ ವಜಾ!: ಓಲಾ ತನ್ನ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರಕ್ಕಾಗಿ ನೇಮಕ ಮಾಡುತ್ತಿರುವಂತೆಯೇ, ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿದೆ.ಕಾರ್ಯ ಕ್ಷಮತೆ ಇಲ್ಲದವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವಂತೆ ವರದಿಯಲ್ಲಿ ತಿಳಿಸಲಾಗಿದೆ. ಸಂಸ್ಥೆಯು ವಜಾ ಮಾಡಲು ಬಯಸುವ ಕೆಲವು ಉದ್ಯೋಗಿಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ. ಆದ್ದರಿಂದ ಅವರು ರಾಜೀನಾಮೆ ನೀಡುತ್ತಾರೆ ಎಂದು ಅದು ಸೇರಿಸಿದೆ ಆದಾಗ್ಯೂ, ಕಂಪನಿಯು ಲಿಥಿಯಂ-ಐಯಾನ್ ಬ್ಯಾಟರಿ…
ಮಂಗಳೂರಿನ ಗುರುರಾಜ ಪೂಜಾರಿ ಸಾಧನೆಭಾರತಕ್ಕೆ ಎರಡನೇ ಪದಕ ಸಂಭ್ರಮ NAMMUR EXPRESS NEWSಮಂಗಳೂರು: ಮಂಗಳೂರಿನ ಗುರುರಾಜ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.ಬರ್ಮಿಂಗ್ ಹ್ಯಾಂನಲ್ಲಿ ಶನಿವಾರ ನಡೆದ ಪುರುಷರ 61 ಕೆಜಿ ವಿಭಾಗದ ಫೈನಲ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.ಗುರುರಾಜ ಪೂಜಾರಿ ಒಟ್ಟಾರೆ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗಳಿಸಿದರು. ಸ್ಟ್ಯಾಚ್ ವಿಭಾಗದಲ್ಲಿ 119 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 151 ಕೆಜಿ ಭಾರ ಎತ್ತಿ ಪದಕ ಖಚಿತಪಡಿಸಿಕೊಂಡರು. ಕೆನಡಾದ ಸಿಮಾರ್ಡ್ ವಿರುದ್ಧದ ನೇರಾನೇರ ಸ್ಪರ್ಧೆಯಲ್ಲಿ 1 ಕೆಜಿ ಹೆಚ್ಚು ಭಾರ ಎತ್ತಿ ಪದಕ ಗೆದ್ದ ಸಾಧನೆ ಮಾಡಿದರು.ಮಲೇಷ್ಯಾದ ಮುಹಮದ್ ಅಜಿಲ್ ಬಿಡಿನ್ 285 ಕೆಜಿ ಭಾರ ಎತ್ತಿ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂ ಜಿನಿವಾದ ಮೊರಿಯಾ ಬಾರು 273 ಕೆಜಿ ಭಾರ…
ಘನ ವಾಹನಗಳಿಗೆ ಆಗಸ್ಟ್ 31 ರ ವರೆಗೆ ನಿಷೇಧಜಿಲ್ಲಾಧಿಕಾರಿ ಹೇಳಿಕೆ NAMMUR EXPRESS NEWSಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರವನ್ನು ಆಗಸ್ಟ್ 31 ರ ವರೆಗೆ ನಿಷೇಧಿಸಲಾಗಿದೆ. ಆದಾಗ್ಯೂ, ಸಾರ್ವಜನಿಕರಿಂದ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲು ಮನವಿ ಬರುತ್ತಿರುವುದರಿಂದ ಮತ್ತು ಈಗಾಗಲೇ ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಬಿದ್ದು ಹೋಗಿದ್ದ ಗಾರ್ಡ್ ವಾಲ್ ನ ಮರು ನಿರ್ಮಾಣ ಕಾರ್ಯ ಕೈಗೊಂಡಿದ್ದು ಸದ್ಯ ತಾತ್ಕಾಲಿಕ ದುರಸ್ತಿ ಮುಂದುವರಿದಿದ್ದು, ದುರಸ್ಥಿ ಸಂಪೂರ್ಣವಾಗಿ ಮುಗಿಯಲು ಎರಡು ವಾರಗಳ ಕಾಲಾವಧಿ ಬೇಕಾಗಿರುವುದರಿಂದ ಹಾಗೂ ಪ್ರಸ್ತುತ ಆಗುಂಬೆಯಲ್ಲಿ ಮಳೆಯಾಗುತ್ತಿದ್ದು ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ 31-08-2022 ವರೆಗೆ ನಿಷೇಧ ಹೇರಲಾಗಿದ್ದು, ಲಘುವಾಹನ ಮತ್ತು ಬಸ್ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ಎಂ ರಾವ್ ಆದೇಶ ಹೊರಡಿಸಿದ್ದಾರೆ.
ಕೊನೆ ದಿನಾಂಕ ವಿಸ್ತರಣೆಗೆ ತೆರಿಗೆದಾರರ ಪಟ್ಟು NAMMUR EXPRESS NEWSನವದೆಹಲಿ : 2021-22ನೇ ಹಣಕಾಸು ವರ್ಷಕ್ಕೆ ಜುಲೈ 28ರವರೆಗೆ ಇ ಫೈಲಿಂಗ್ ಪೋರ್ಟಲ್ ಮೂಲಕ 4 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ. ಆದಾಯ ತೆರಿಗೆ ಇಲಾಖೆ ರಿಟರ್ಸ್ ಫೈಲ್ ಮಾಡಲು ಜುಲೈ 31 ಕೊನೆಯ ದಿನವಾಗಿದೆ.2022ರ ಜುಲೈ 28ರವರೆಗೆ 4.09 ಕೋಟಿಗೂ ಹೆಚ್ಚು ಐಟಿಆರ್‌ಗಳು ಮತ್ತು 2022ರ ಜುಲೈ 28ರಂದು 36 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. AY 2022-23 ಗಾಗಿ ITR ಅನ್ನು ಸಲ್ಲಿಸಲು ಅಂತಿಮ ದಿನಾಂಕವು ಜುಲೈ 31, 2022 ಆಗಿದೆ. “ಎಂದು ಐ-ಟಿ ಇಲಾಖೆ ಟೀಟ್‌ನಲ್ಲಿ ತಿಳಿಸಿದೆ. 2021-22 ರ ಹಣಕಾಸು ವರ್ಷಕ್ಕೆ ಜುಲೈ 25 ರವರೆಗೆ 3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ.ಕಳೆದ ಹಣಕಾಸು ವರ್ಷದಲ್ಲಿ (2020-21), ಡಿಸೆಂಬರ್ 31, 2021 ರ ವಿಸ್ಕೃತ ಗಡುವು ದಿನಾಂಕದೊಳಗೆ ಸುಮಾರು 5.89 ಕೋಟಿ ITR ಗಳನ್ನು ಸಲ್ಲಿಸಲಾಗಿದೆ. ITR…