Author: Nammur Express Admin

ಬಹುತೇಕ ಕಡೆ ಟಿಕೆಟ್ ಸೋಲ್ಡ್ ಔಟ್ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ3000ಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ರಿಲೀಸ್ಮುಂಜಾನೆಯೇ ಸಿನಿಮಾ ನೋಡಲು ಕ್ಯೂಕನ್ನಡ ಸಿನಿಮಾ ಈಗ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ NAMMUR EXPRESS NEWSಬೆಂಗಳೂರು: ಕನ್ನಡ ಸಿನಿಮಾವೊಂದು ಭಾರತದ ಬಹುತೇಕ ಕಡೆ ಪ್ರದರ್ಶನಗೊಳ್ಳುತ್ತಿದ್ದು ಸುಮಾರು 3000 ತಿಯೇಟರ್ ಮುಂದೆ ಜನ ಕ್ಯೂ ನಿಂತಿದ್ದಾರೆ.ಹೌದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಜು.28ರಂದು ಬಿಡುಗಡೆಗೊಂಡಿದೆ.ಬೆಂಗಳೂರು ಸೇರಿ ಬಹುತೇಕ ಕಡೆ ಜನ ಕ್ಯೂ ನಿಂತಿದ್ದಾರೆ. ಕೆಜಿಎಫ್ ಬಳಿಕ ಕನ್ನಡದ ಚಿತ್ರವೊಂದು ಈ ಮಟ್ಟಿಗೆ ಸದ್ದು ಮಾಡಿದೆ.ಟ್ರೈಲರ್, ಹಾಡುಗಳಿಂದ ಕೋಟಿ ಕೋಟಿ ಭಾರತೀಯರ ಮನ ಗೆದ್ದ ಸಿನಿಮಾ ಇದೀಗ ತೆರೆಗೆ ಬಂದಿದ್ದು ಪ್ರೇಕ್ಷಕ ಏನು ಒಪಿನಿಯನ್ ಕೊಡುತ್ತಾನೆ ಕಾದು ನೋಡಬೇಕು.ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಮುಂಜಾನೆ 5:30ಕ್ಕೆ ಮೊದಲ ಶೋ ಆರಂಭಗೊಂಡಿದೆ.ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Read More

ಪ್ರವೀಣ್ ಸಾವಿನ ನಂತರ ಸರ್ಕಾರದ ವಿರುದ್ಧವೇ ಕಾರ್ಯಕರ್ತರ ಆಕ್ರೋಶತಡ ರಾತ್ರಿ ಘೋಷಣೆ ಮಾಡಿದ ಸಿಎಂಸರ್ಕಾರದ ಜನೋತ್ಸವ ಮಂಕು NAMMUR EXPRESS NEWSಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕೋಶ ವ್ಯಕ್ತಪಡಿಸುತ್ತಿರುವುದರಿಂದ ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆ ರದ್ದು ಪಡಿಸಲಾಗಿದೆ.ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಡ ರಾತ್ರಿ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.ಸತತವಾಗಿ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕಾರ್ಯಕರ್ತರ ಆಕ್ರೋಶದ ನಡುವೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮದ ಸಂಭ್ರಮಾಚರಣೆ ನಡೆಸುವುದು ಎಷ್ಟು ಸರಿ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿತ್ತು.ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೂರಾರು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರವೀಣ್ ಪಾರ್ಥಿವ…

Read More

ಪ್ರವೀಣ್ ಸಾವಿನ ದುಃಖದಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದ ನಾಯಕಕುಟುಂಬದ ನೋವಲ್ಲಿ ಜತೆಯಾಗೋಣ ಎಂದು ಕರೆಸರಳ ನಾಯಕನ ನಡೆಗೆ ಎಲ್ಲೆಡೆ ಮೆಚ್ಚುಗೆ NAMMUR EXPRESS NEWSಕೊಪ್ಪ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಮಿಟಿಯ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರು ಹತ್ಯೆಗೆ ನಾಡು ಮರುಗಿದೆ. ಎಲ್ಲಾ ಕಡೆ ಕಂಬನಿ ವ್ಯಕ್ತವಾಗುತ್ತಿದೆ.ಇತ್ತ ಪ್ರಜ್ಞಾವಂತ ಶಾಸಕ ಎಂದೇ ರಾಜ್ಯದಲ್ಲಿ ಹೆಸರು ಮಾಡಿರುವ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸದೆ ಪ್ರವೀಣ್ ಅವರಿಗೆ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಕಾರ್ಯಕರ್ತರಿಗೂ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಮನವಿ ಮಾಡಿದ್ದಾರೆ. ರಾಜೇಗೌಡ ಅವರ ನಡೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿದೆ.ಜುಲೈ 28ರಂದು ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರು, ಪಕ್ಷದ ಪದಾಧಿಕಾರಿಗಳಿಗೆ ಹುಟ್ಟು ಹಬ್ಬ ಆಚರಣೆ ಬೇಡ ಎಂದು ತಿಳಿಸಿದ್ದಾರೆ.ಕುಟುಂಬದ ನೋವಲ್ಲಿ ನಾವು ನಿಲ್ಲೋಣಮನೆ ಮಗನ ಕಳೆದುಕೊಂಡ ಪೋಷಕರ ಹಾಗೂ ಮನೆಯವರ…

Read More

ಮಲೆನಾಡಲ್ಲಿ ಆಮ್ ಆದ್ಮಿ ಸಂಘಟನೆ ಜೋರುಸಾಲೂರು ಶಿವಕುಮಾರ್ ಗೌಡ, ದಿವಾಕರ್ ಉಪಸ್ಥಿತಿಸರ್ವರನ್ನು ಸ್ವಾಗತಿಸಿದ ಅಧ್ಯಕ್ಷ ಗಣೇಶ್ ಸೋಗೋಡು NAMMUR EXPRESS NEWSಹೊಸನಗರ: ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ನೂತನ ಕಾರ್ಯಾಲಯ ಜುಲೈ 31ರಂದು ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಪಕ್ಷದ ಸಂಘಟನೆ ಚುರುಕುಗೊಂಡಿದ್ದು ತೀರ್ಥಹಳ್ಳಿ ತಾಲೂಕಲ್ಲಿ ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ ಗೌಡ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಗೊಂಡಿದೆ. ಇನ್ನು ಹೊಸನಗರದಲ್ಲಿ ಗಣೇಶ್ ಸೋಗೋಡು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದಾರೆ.ಹೊಸ ನಗರದ ಸಂತೆ ಮಾರುಕಟ್ಟೆ ಮುಂಭಾಗ ನೂತನ ಕಚೇರಿ ಉದ್ಘಾಟನೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು, ಪಕ್ಷದ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ. ಸಮಸ್ತ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಗಣೇಶ್ ಸೋಗೊಡು ಮನವಿ ಮಾಡಿದ್ದಾರೆ.ಸಾಗರದ ಆಪ್ ಅಭ್ಯರ್ಥಿ ದಿವಾಕರ್ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಭಾಗಿಯಾಗಲಿದ್ದಾರೆ.

Read More

ಹಗಲು ಬಿಸಿಲು, ರಾತ್ರಿ ಮಳೆ: ಹೆಚ್ಚಿದ ಅನಾರೋಗ್ಯಶೀತ ಜ್ವರ, ಮಳೆ ಬಿಸಿಲು: ಆರೋಗ್ಯ ಹುಷಾರು NAMMUR EXPRESS NEWSತೀರ್ಥಹಳ್ಳಿ: ಮಳೆಗಾಲದಲ್ಲಿ ಬೇಸಿಗೆಯಂತಹ ವಾತಾವರಣ ಬುಧವಾರ ಕಂಡು ಬಂದಿದ್ದು ಸಂಜೆ ಮಳೆ ಹೆಚ್ಚಾಗಿತ್ತು. ಇದರಿಂದ ಮಳೆ ಬಿಸಿಲಿನ ಆಟ ಕಂಡು ಬಂದಿತು.ತೀರ್ಥಹಳ್ಳಿಯಲ್ಲಿ ಮಳೆ ಬಿಸಿಲು ಜನರಿಗೆ ಹೆಚ್ಚು ಆರೋಗ್ಯ ಸಮಸ್ಯೆ ಕಾಣುವ ಭೀತಿ ಎದುರಾಗಿದೆ.ಈಗಾಗಲೇ ಶೀತ, ಜ್ವರ, ಗಂಟಲು ನೋವು,ಮೈ ಕೈ ನೋವು ಹೆಚ್ಚಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್ ಮುಂದೆ ಜನರ ಸಂಖ್ಯೆ ಹೆಚ್ಚಿದೆ. ಕೊಂಚ ಬಿಸಿಲು ಅಡಿಕೆಗೆ ಔಷಧಿ ಹೊಡೆಯೋದು ಚುರುಕುಕೊಂಚ ಬಿಸಿಲು ಕಾರಣ ಅಡಿಕೆಗೆ ಔಷಧಿ ಹೊಡೆಯುವ ಕೆಲಸ ನಡೆಯುತ್ತಿದೆ. ಇನ್ನು ಬುಧವಾರ ಸಂಜೆ ಹಲವೆಡೆ ಗುಡುಗು ಸಿಡಿಲಿನ ಮಳೆಯಾಗಿದೆ. 15 ದಿನಗಳ ನಿರಂತರ ಮಳೆಯಿಂದ ಜನ ಹೈರಾಣರಾಗಿದ್ದರು.

Read More

ಏನಿದು ಹೊಸ ನಿಯಮ..? ಆದೇಶ ಏನು..?ಗೊಂದಲದ ಗೂಡು: ಪರಿಷ್ಕರಣೆ ಆಗುತ್ತಾ..? NAMMUR EXPRESS NEWSಬೆಂಗಳೂರು: 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲುಹೊಸದಾಗಿ ವಯೋಮಿತಿ ನಿಗದಿ ಮಾಡಿರುವ ಸರ್ಕಾರದಆದೇಶ ಹಲವು ಗೊಂದಲಗಳಿಗೆ ಕಾರಣವಾಗಿದೆ.ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಸೇರ್ಪಡೆ ಆಗಬೇಕಾದರೆ ಕಡ್ಡಾಯವಾಗಿ ವಿದ್ಯಾರ್ಥಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ಹೊರಡಿಸಿತ್ತು. ಒಂದನೇ ತರಗತಿಗೆ ದಾಖಲಾತಿ ಆಗಬೇಕದರೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂದು ಆದೇಶದಲ್ಲಿ ಉಲ್ಲೇಖ ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ.ಆದೇಶದಲ್ಲಿ ಆರ್‌ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ನ್ನು ಉಲ್ಲೇಖ ಮಾಡಲಾಗಿದೆ. ಈ ಆದೇಶದಲ್ಲಿ ಅನೇಕ ಗೊಂದಲಗಳಿದ್ದು, ಯಾವುದಕ್ಕೂ ಶಿಕ್ಷಣ ಇಲಾಖೆ ಸರಿಯಾಗಿ ಉತ್ತರ ನೀಡಿಲ್ಲ.ಗೊಂದಲ ಏನು? 2022-23ನೇ ಸಾಲಿಗೆ ಈಗಾಗಲೇ ದಾಖಲಾತಿ ಪಕ್ರಿಯೆ ಮುಗಿದಿದ್ದು ಈ ವರ್ಷ ಹಿಂದಿನ ಆದೇಶದಂತೆ 5 ವರ್ಷ 10 ತಿಂಗಳ ವಯೋಮಿತಿಯಲ್ಲಿ ದಾಖಲು ಮಾಡಲಾಗಿದೆ.ನಮ್ಮಲ್ಲಿ ಪೂರ್ವ ಪ್ರಾಥಮಿಕ ವ್ಯವಸ್ಥೆ ಎಲ್‌ಕೆಜಿ, ಯುಕೆಜಿ…

Read More

ಮೂರು ತಾಲೂಕಲ್ಲಿ ಬಂದ್ ಘೋಷಿಸಿದ ಸಂಘಟನೆಗಳುಹಿಂದೂ ನಾಯಕನ ಸಾವಿನ ತನಿಖೆ ಶುರುಪೊಲೀಸ್ ತಂಡ ರಚನೆ: ಆರಗ ಜ್ಞಾನೇಂದ್ರ NAMMUR EXPRESS NEWSಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (32) ಕೊಲೆಯಾದ ದುರ್ದೈವಿ. ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿಯನ್ನು ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ.ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿದ್ದಾರೆ. ನಾಕಾಬಂದಿ ಹಾಕಿ ಕೊಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ:ಪುತ್ತೂರಿನಲ್ಲಿ…

Read More

ಒಕ್ಕಲಿಗರ ಕ್ಷಮೆ ಕೇಳುವಂತೆ ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಅಗ್ರಹ NAMMUR EXPRESS NEWSತೀರ್ಥಹಳ್ಳಿ: ಶಾಸಕರಾದ ಜಮೀರ್ ಅಹಮದ್ ರವರು ಅನವಶ್ಯಕವಾಗಿ ಒಕ್ಕಲಿಗ ಜನಾಂಗದವರನ್ನು ರಾಜಕೀಯ ವಿಚಾರವಾಗಿ ಎಳೆದು ತರುತ್ತಿರುವುದು ವಿಷಾಧನೀಯ ಸಂಗತಿ, ನಮ್ಮ ಒಕ್ಕಲಿಗ ಸಮಾಜ ಹಿಂದಿನಿಂದಲೂ ಸಹ ಒಕ್ಕಲುತನವನ್ನು ಮಾಡಿ ಇಡೀ ದೇಶಕ್ಕೆ ಅನ್ನ ನೀಡುತ್ತಾ ದೇಶದಲ್ಲಿ ಕೃಷಿ ಪ್ರಧಾನ ಕಸುಬನ್ನಾಗಿ ಮಾಡಿಕೊಂಡು ದೇಶದ ಕೃಷಿ ಪ್ರಗತಿಗೆ ಅನನ್ಯ ನೆರವು ನೀಡಿದೆ. ಅಲ್ಲದೆ ಸಮಾಜದ ಹಲವು ಪ್ರಮುಖರು ಆಡಳಿತಾತ್ಮಕವಾಗಿ, ರಾಜಕೀಯವಾಗಿ, ಆರ್ಥಿಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿ ನಾಡಿಗೆ ಕೊಡುಗೆಯನ್ನು ನೀಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾತೃಗಳಾಗಿ ಇಂದಿಗೂ ಸಹ ಮಾದರಿ ನಗರವನ್ನಾಗಿ ಇಡೀ ಪ್ರಪಂಚದ ಭೂಪಟದಲ್ಲಿಯೇ ಬೆಂಗಳೂರು ನಗರ ಗುರುತಿಸುವಿಕೆಗೆ ಕಾರಣಕರ್ತರಾಗಿದ್ದಾರೆ. ಇಂತಹ ಒಕ್ಕಲಿಗ ಸಮುದಾಯದ ಬಗ್ಗೆ ಮಾನ್ಯ ಶಾಸಕರಾದ ಜಮೀ‌ರ್ ಆಹಮದ್ ರವರು ಕೇವಲವಾಗಿ ಮಾತನಾಡುವುದು ಅವರಿಗೆ ಶೋಭೆಯಲ್ಲ. ಇದನ್ನು ಸಮಾಜ ಖಂಡಿಸುತ್ತಾ ಮುಂದೆ ಸಮುದಾಯದ ವಿರುದ್ಧ ಇಂತಹ…

Read More

ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯ NAMMUR EXPRESS NEWSಬೆಂಗಳೂರು : ಚಾಲಕರ ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಪದೇ ಪದೇ ತಡೆದು ನಿಲ್ಲಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಹಿಂದಿನ ಆದೇಶವನ್ನು ಪಾಲನೆ ಮಾಡದೆ ವಾಹನ ಚಾಲಕರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ಅಂಥವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಈ ಆದೇಶ ಅನ್ವಯವಾಗಲಿದೆ, ಇದರನ್ವಯ ಮದ್ಯಪಾನ ಸೇವಿಸಿ ಯಾರಾದರೂ ವಾಹನ ಚಾಲನೆ ಮಾಡುವುದು ಕಂಡು ಬಂದರೆ ಅಂತಹ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು, ಉಳಿದಂತೆ ದಾಖಲೆಗಳ ಪರಿಶೀಲನೆ ನೆಪದಲ್ಲಿ ಸಾರ್ವಜನಿಕರಿಗೆ ಪದೇ ಪದೇ ತೊಂದರೆ ಕೊಟ್ಟರೆ ಆದೇಶ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.ಸಂಚಾರ ನಿಯಮ ಉಲ್ಲಂಘನೆ ಮಾಡದಿದ್ದರೂ ಸಂಚಾರಿ ಪೊಲೀಸ್ ಸುಖ ಸುಮ್ಮನೆ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ನಿಲ್ಲಿಸಿ…

Read More

ಎಣ್ಣೆ ಹೊಡೆದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು!ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ವಿಡಿಯೋ ವೈರಲ್ಮಂಗಳೂರು ಕಿಸ್ಸಿಂಗ್ ಪ್ರಕರಣ: 8 ಮಂದಿ ಅರೆಸ್ಟ್ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ! NAMMUR EXPRESS NEWSಶಿವಮೊಗ್ಗ/ಮಂಗಳೂರು: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಡಹಗಲೇ ಮದ್ಯ ಸೇವಿಸಿ ಕಾಲೇಜಿನ ಮುಂದೆಯೇ ಬಿದ್ದು ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಇಡೀ ವಿದ್ಯಾರ್ಥಿ ವರ್ಗ ತಲೆ ತಗ್ಗಿಸುವಂತಾಗಿದೆ.ಮೂವರು ಕಾಲೇಜು ವಿದ್ಯಾರ್ಥಿಗಳು ಮದ್ಯ ಸೇವಿಸಿ ಗಾಳಿಯಲ್ಲಿ ತೂರಾಡುತ್ತಿದ್ದು, ಕಾಲನ್ನು ಮುಂದೆಯೂ ಹಾಕಲಾರದೆ, ಹಿಂದೆಯೂ ಹಾಕಲಾರದೆ ನಶೆಯಲ್ಲಿ ವಿದ್ಯಾರ್ಥಿಗಳು ಒದ್ದಾಡುತ್ತಿದ್ದಾರೆ. ಮತ್ತಿನಲ್ಲಿ ಕ್ಯಾಂಪಸ್‌ನಲ್ಲಿ ಎಲ್ಲಂದರಲ್ಲಿ ವಾಲಾಡುತ್ತಾ ಬಿದ್ದಿದ್ದಾರೆ. ಇದನ್ನು ಸಹಪಾಠಿ ವಿದ್ಯಾರ್ಥಿಗಳಿಂದ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕಾಲೇಜು ಸಂಸ್ಥೆಯ ಹೆಸರಿನ ಟ್ಯಾಗ್ ಲೈನ್‌ನಲ್ಲಿ ವೈರಲ್ ಮಾಡಲಾಗಿದೆ.ಪೊಲೀಸರು ತನಿಖೆ ನಡೆಸಿದ್ದು, ತನಿಖೆಯಲ್ಲಿ ವಿದ್ಯಾರ್ಥಿಗಳು ಸಾಗರ ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿಕೊಂಡು ಬಸ್ ಹತ್ತಲು ಕಾಲೇಜಿನ ಹತ್ತಿರ ಬಂದಾಗ ಕಾಲೇಜಿನ ಗೇಟ್ ನಲ್ಲಿ ತಡೆದು…

Read More