ಕಸ್ತೂರಿ ರಂಗನ್ ವರದಿ ಜಾರಿಗೆ ಒಂದು ವರ್ಷ ಸಮಯ ಕೊಟ್ಟ ಕೇಂದ್ರಸಿಎಂ, ಗೃಹ ಸಚಿವ ಆರಗ ನೇತೃತ್ವದಲ್ಲಿ ನಿಯೋಗ NAMMUR EXPRESS NEWSಬೆಂಗಳೂರು: ಮಲೆನಾಡಿನ ರೈತರ ಪಾಲಿಗೆ ತೂಗುಗತ್ತಿಯಾಗಿರುವಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡದಂತೆ ಹಾಗೂ ರೈತರ ಕೋರಿಕೆಯಂತೆಪ್ರತ್ಯಕ್ಷ ಸರ್ವೇ ನಡೆಸುವಂತೆ ಕೇಂದ್ರ ಅರಣ್ಯ ಸಚಿವರಾದ ಭೂಪೆಂದ್ರ ಯಾದವ್ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ನಿಯೋಗದೊಂದಿಗೆ ಭೇಟಿಮಾಡಿ ಚರ್ಚೆ ನಡೆಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯ ರಾಘವೇಂದ್ರ, ಮಾಜಿ ಸಚಿವ ಸಿ.ಟಿ ರವಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮೈಸೂರು ಸಂಸದ ಪ್ರತಾಪ್ ಸಿಂಹ, ಸಾಗರ ಶಾಸಕ ಹಾಲಪ್ಪ ಮತ್ತಿತರರ ನಿಯೋಗದ ಮನವಿಯನ್ನು ಪುರಸ್ಕರಿಸಿದ ಭೂಪೆಂದರ್ ಯಾದವ್ ಅವರು ಸಮಿತಿ ರಚಿಸಿ, ಎಲ್ಲ ರಾಜ್ಯಗಳ ಸಲಹೆಗಳನ್ನು ಸ್ವೀಕರಿಸಿ, ರೈತರ ಹಿತ ಕಾಯುವ ವರದಿಯನ್ನು ಮುಂದಿನ ಒಂದು ವರ್ಷದ ಒಳಗಾಗಿ ಸಚಿವಾಲಯಕ್ಕೆ ಸಲ್ಲಿಸಲು ಸೂಚಿಸಿದ್ದಾರೆ.…
Author: Nammur Express Admin
ದೇಶದಲ್ಲೇ ಪ್ರಥಮ ಪ್ರಯತ್ನಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ NAMMUR EXPRESS NEWSಬೆಂಗಳೂರು: ಗೋಶಾಲೆಗಳಿಂದ ಜಾನುವಾರುಗಳನ್ನು ದತ್ತು ಪಡೆಯುವುದನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಜುಲೈ 28 ರಂದು ಹಸು ದತ್ತು ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಭಮಲಾ ಚವ್ಹಾಣ್ ಹೇಳಿದ್ದಾರೆ.”ಜಾನುವಾರುಗಳನ್ನು ಸಂರಕ್ಷಿಸಲು ಗೋಶಾಲೆಗಳಲ್ಲಿ ಅವುಗಳನ್ನು ಸಾಕುವ ಮತ್ತು ಪೋಷಣೆ ಮಾಡುವ ಉದ್ದೇಶದಿಂದ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರವು ದೇಶದಲ್ಲೇ ಪ್ರಥಮ ಬಾರಿಗೆ ‘ಪುಣ್ಯಕೋಟಿ ದತ್ತು ಯೋಜನೆ’ ಆರಂಭಿಸಲು ಉತ್ಸುಕವಾಗಿದೆ” ಎಂದು ಅವರು ಹೇಳಿದ್ದಾರೆ.ಜುಲೈ 28ಕ್ಕೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಅದೇ ದಿನ ಲೋಕಾರ್ಪಣೆ ಸಮಾರಂಭ ನಡೆಯಲಿದೆ.100 ಸರಕಾರಿ ಗೋಶಾಲೆಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದ್ದು, ಈ ಎಲ್ಲಾ ಗೋಶಾಲೆಗಳಲ್ಲಿ ದೇಸೀ ಮತ್ತು ಮಿಶ್ರತಳಿ ಜಾನುವಾರು, ನಿರ್ಗತಿಕ, ದಣಿದ, ವೃದ್ಧ, ರೋಗಗ್ರಸ್ತ, ರೈತರಿಂದ ಕೈಬಿಟ್ಟ ಹಸು, ಗಂಡು ಕರುಗಳು ಮತ್ತು ನ್ಯಾಯಾಲಯ ಮತ್ತು ಪೊಲೀಸ್ ಕಸ್ಟಡಿಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳಿಗೆ ಆಶ್ರಯ…
ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ ವಿಶ್ವ ಸಂಸ್ಥೆಭಾರತ, ಕರ್ನಾಟಕದಲ್ಲಿಯೂ ಅಪಾಯ ಹುಷಾರ್..! NAMMUR EXPRESS NEWSವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದೆ. ಇಲ್ಲಿಯವರೆಗೆ, 70ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿದೆ.ಡಬ್ಲ್ಯೂ.ಎಚ್.ಓ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಯುಎನ್ ಆರೋಗ್ಯ ಸಂಸ್ಥೆಯ ಮೌಲ್ಯಮಾಪನವು ಅಪಾಯವು ಹೆಚ್ಚಾಗಿರುವ ಯುರೋಪಿಯನ್ ಪ್ರದೇಶವನ್ನು ಹೊರತುಪಡಿಸಿ, ಜಾಗತಿಕವಾಗಿ ಎಲ್ಲಾ ಪ್ರದೇಶಗಳಲ್ಲಿ ಮಂಕಿಪಾಕ್ಸ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.ಈ ಎಲ್ಲಾ ಕಾರಣಗಳಿಗಾಗಿ, ಜಾಗತಿಕ ಮಂಕಿಪಾಕ್ಸ್ ಏಕಾಏಕಿ ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ನಾನು ನಿರ್ಧರಿಸಿದ್ದೇನೆ” ಎಂದು ಡಬ್ಲ್ಯೂ.ಎಚ್.ಓ ಮುಖ್ಯಸ್ಥರು ಹೇಳಿದ್ದಾರೆ.ಜುಲೈ 20 ರಂದು, ಡಬ್ಲ್ಯೂ.ಎಚ್.ಓ ಈ ವರ್ಷ 70 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಿಂದ ಸುಮಾರು 14,000 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ. 5 ಸಾವುಗಳು ವರದಿಯಾಗಿದ್ದವು. ಈ ಎಲ್ಲ ಸಾವುಗಳು ಆಫ್ರಿಕಾದಲ್ಲಿ ಸಂಭವಿಸಿವೆ ಎಂದೂ ಡಬ್ಲ್ಯೂ.ಎಚ್.ಓ ಹೇಳಿದೆ . ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ದೇಶಗಳಲ್ಲಿ ಚಿಕಿತ್ಸೆಗೆ…
ಕರ್ನಾಟಕ ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣಸ್ಟಾರ್ಟ್ ಆಪ್ ಕಂಪನಿಗಳಿಗೆ ನೆರವು ನೀಡಿ..! NAMMUR EXPRESS NEWSಬೆಂಗಳೂರು: ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಎಲ್ಲಾ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೆ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ. ಆದ್ರೆ ಉದ್ಯೋಗದಾತ ಸಣ್ಣ ಕಂಪನಿಗಳಿಗೆ ಸರ್ಕಾರದ ನೆರವು ಏನೂ ಸಾಲದಾಗಿದೆ.ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು, ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.2.5 ರಿಂದ ಶೇ 3 ರಷ್ಟು ಆಗಲಿದೆ.ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆಯ ಪ್ರಮಾಣದ ಆಧಾರದ ಮೇಲೆ ಮಧ್ಯಮ ಬೃಹತ್ ಆಲ್ಟ್ರಾ ಮೆಗಾ ಮತ್ತು ಸೂಪರ್ ಮೆಗಾ ಕೈಗಾರಿಕೆಗಳೆಂದು ವರ್ಗೀಕರಿಸಲಾಗಿದೆ, ಹೂಡಿಕೆ ವಿಸ್ತರಣೆಯ ಸಂದರ್ಭದಲ್ಲಿ ಹೂಡಿಕೆ…
ಜುಲೈ 31ಕ್ಕೆ ಅಂತ್ಯ: ನಿಮ್ಮ ಆದಾಯ ತೆರಿಗೆ ಕಟ್ಟಿ.. NAMMUR EXPRESS NEWSನವದೆಹಲಿ: ಆದಾಯ ತೆರಿಗೆ ವಿವರ ಸಲ್ಲಿಕೆಯ ಗಡುವು ಇದೇ ತಿಂಗಳ 31ಕ್ಕೆ ಅಂತ್ಯವಾಗಲಿದ್ದು ಅದನ್ನು ವಿಸ್ತರಿಸುವ ಆಲೋಚನೆ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ ಎಂದು ರೆವೆನ್ಯೂ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.2021-22ನೇ ಹಣಕಾಸು ವರ್ಷಕ್ಕೆ ಜುಲೈ 20ರವರೆಗೆ 2.3 ಕೋಟಿಗೂ ಅಧಿಕ ರಿಟರ್ನ್ಸ್ ಗಳು ಸಲ್ಲಿಕೆ ಆಗಿವೆ, ರಿಟರ್ನ್ ಸಲ್ಲಿಕೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಿ ಬಾರಿಯೂ ರಿಟರ್ನ್ಸ್ ಸಲ್ಲಿಕೆ ಅವಧಿಯು ವಿಸ್ತರಣೆ ಆಗುತ್ತದೆ ಎಂದು ಜನರು ಭಾವಿಸುತ್ತಾರೆ, ಹೀಗಾಗಿ ಆರಂಭದಲ್ಲಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣ ಕಡಿಮೆ ಇರುತ್ತದೆ, ಆದರೆ ಈಗ ದಿನವೂ 15 ಲಕ್ಷದಿಂದ 18 ಲಕ್ಷ ರಿಟರ್ನ್ಸ್ ಸಲ್ಲಿಕೆ ಆಗುತ್ತಿದೆ, ಈ ಸಂಖ್ಯೆಯು ನಿಧಾನವಾಗಿ 25 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಬಜಾಜ್ ಹೇಳಿದ್ದಾರೆ.2020-21ನೇ ಹಣಕಾಸು ವರ್ಷದಲ್ಲಿ 5.89 ಕೋಟಿ ರಿಟರ್ನ್ಸ್ ಸಲ್ಲಿಕೆ ಆಗಿತ್ತು.
ಬೇಜವಾಬ್ದಾರಿ ನೌಕರರ ವಿರುದ್ಧ ಶಿಸ್ತು ಕ್ರಮಬೆಳಗ್ಗೆ 10 ಗಂಟೆ ಕಡ್ಡಾಯ: ಹೊರಗೆ ಹೋಗಬೇಕಾದ್ರೆ ಪರ್ಮಿಷನ್ ತಗೋಬೇಕು! NAMMUR EXPRESS NEWSಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗದಿದ್ದರೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎಚ್ಚರಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಕಡ್ಡಾಯವಾಗಿ ಕಚೇರಿಗೆ ಆಗಮಿಸಬೇಕು’ ಎಂದು ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ‘ನೌಕರರು ಕಚೇರಿ ವೇಳೆ ಪೂರ್ಣಗೊಳ್ಳುವವರೆಗೂ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕು. ಅನ್ಯ ಕರ್ತವ್ಯದ ಮೇಲೆ ಹೊರಗೆ ತೆರಳಬೇಕಾದಲ್ಲಿ ಚಲನ-ವಲನ ವಹಿಯಲ್ಲಿ ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಲಾಗಿದೆ.ಸರ್ಕಾರದ ಈ ನಿಯಮ ಜನರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಸರ್ಕಾರಿ ಕಚೇರಿಗಳಲ್ಲಿ ಮೇಲಿನ ಅಧಿಕಾರಿಗಳಿಂದ ಹಿಡಿದು ಸಣ್ಣ ನೌಕರ ಕೂಡ ಕಚೇರಿ ಸಮಯದಲ್ಲಿ ಸರಿಯಾಗಿ ಇರುವುದಿಲ್ಲ. ಇದರಿಂದಜನತೆಗೆ ಭಾರೀ ತೊಂದರೆ ಆಗುತ್ತಿತ್ತು. ಈಗ ಸರ್ಕಾರ ಇತ್ತ ಗಮನ…
ಸರಿಯಾಗುವವರೆಗೆ ಎಲ್ಲೆಲ್ಲಿ ಹೋಗಬಹುದು?ಪದೇ ಪದೇ ಕುಸಿತ: ಶಾಶ್ವತ ಪರಿಹಾರ ಇಲ್ವಾ? NAMMUR EXPRESS NEWSತೀರ್ಥಹಳ್ಳಿ: ಮಲೆನಾಡು ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿದ್ದು, ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರಬಿದ್ದಿದೆ. ಇದರಿಂದ ಘಾಟಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.ಘಾಟಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದ ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈಗಾಗಲೇ ತಿರುವಿನಲ್ಲಿ ಹೋದವರು ವಾಪಸ್ ಆಗುತ್ತಿದ್ದಾರೆ. ಇನ್ನೂ ಘಾಟಿ ಕೆಳಗೆ ಸೋಮೇಶ್ವರ ಚೆಕ್ಪೋಸ್ಟ್ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ. ಮೇಲ್ಬಾಗ ಆಗುಂಬೆ ಘಾಟಿ ಚೆಕ್ಪೋಸ್ಟ್ ಬಳಿಯೇ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಪದೇ ಪದೇ ಗುಡ್ಡ ಕುಸಿತ!: ಆಗುಂಬೆ ಘಾಟಿಯಲ್ಲಿ ಪದೇ ಪದೇ ಗುಡ್ಡ ಕುಸಿತ ಸಂಭವಿಸಿದ್ದು ಈ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವು ಮನೆ ಕುಸಿದಿದೆ. ಅನಾಹುತ ಸಾಧ್ಯತೆ ಇದೆ. ಕಳೆದ ವರ್ಷ ನೂರಾರು ಕಡೆ ಗುಡ್ಡ ಕುಸಿದಿದ್ದು ಇನ್ನು ಈ ಬಾರಿಯೂ ಗುಡ್ಡ ಕುಸಿಯುವ ಸಾಧ್ಯತೆ ಇದೆ.ಪರ್ಯಾಯ…
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ !ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್, ಉಡುಪಿ ಜಿಲ್ಲೆ ಎರಡನೇ, ಚಿತ್ರದುರ್ಗ ಲಾಸ್ಟ್ NAMMUR EXPRESS NEWSಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದರು. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ61.88 ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಲಾಗಿದೆ.ವಿದ್ಯಾರ್ಥಿಗಳುhttp://www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆದಿತ್ತು. ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಫ್ರೆಶರ್ಸ್ ವಿದ್ಯಾರ್ಥಿಗಳಲ್ಲಿ 5,99,794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,022,697 ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ 61,838 ವಿದ್ಯಾರ್ಥಿಗಳಲ್ಲಿ 14,403 ಮಂದಿ ಪಾಸಾಗಿದ್ದಾರೆ. 21,931 ಖಾಸಗಿ ವಿದ್ಯಾರ್ಥಿಗಳಲ್ಲಿ 5,866 ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (88.02) ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಜಿಲ್ಲೆ (86.38) ಎರಡನೇ ಸ್ಥಾನ ಪಡೆದಿದೆ. ಶೇ…
ಸೂಚನಾ ಫಲಕ ಇಲ್ಲ… ಕೇಳೋರು ಇಲ್ಲ..ಇನ್ನಷ್ಟು ಬಲಿ ಬೇಕು… ಅಧಿಕಾರಿಗಳೇ..? NAMMUR EXPRESS NEWSಯಡೂರು: ಯಡೂರು ಸಮೀಪದ ಸುಳುಗೋಡು ಗ್ರಾಮಪಂಚಾಯತ್ ವ್ಯಾಪ್ತಿಯ ಕರೆಕತ್ತಲು ಸೇತುವೆ ಬಳಿ ಪುನಃ ಪುನಃ ಅಪಘಾತ ಸಂಭವಿಸುತ್ತಿವೆ.ಟಿಂಬರ್ ಲಾರಿಯೊಂದು ಕರೆ ಕತ್ತಲೆ ಸೇತುವೆ ಬಳಿ ಅಪಘಾತವಾಗಿ ಬಾರಿ ಅನಾಹುತ ಆಗುವುದು ತಪ್ಪಿದೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದ 15ರಿಂದ 20 ದಿನಗಳಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ. ಕಡಿದಾದ ತಿರುವು ಹಾಗೂ ಯಾವುದೇ ಮುನ್ನೆಚ್ಚರಿಕಾ ಫಲಕ ಇಲ್ಲದೆ ಏಳೆಂಟು ವರ್ಷಗಳಿಂದ ಈ ಪ್ರದೇಶದಲ್ಲಿ 30 ರಿಂದ 40 ವಾಹನಗಳ ಅಪಘಾತವಾಗಿದೆ. ಒಂದು ತಿಂಗಳ ಹಿಂದೆ ಆದ ಬಸ್ ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಈ ಸ್ಥಳದಲ್ಲಿ ಹತ್ತು ಹಲವು ಸಾರಿ ಅಪಘಾತಗಳಾದರೂ ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಭಾಗದಲ್ಲಿ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ.ಸೂಕ್ತ ಸೂಚನಾ ಫಲಕ ಅಳವಡಿಸಿ ರಸ್ತೆಯ ತಿರುವುಗಳನ್ನು ಸರಿಪಡಿಸಿ ಅಪಘಾತ ತಡೆಯಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬಂದಿದೆ.…
ಸ್ಥಳೀಯರಿಗೆ ಹರಾಜು ನೀಡಲು ಹೋರಾಟಕ್ಕೆ ಸಜ್ಜುಉದ್ಯೋಗ, ಉದ್ಯಮ ಕೈ ತಪ್ಪಿದರೆ ಅಪಾಯದ ಭೀತಿಏನೇ ಆಗಲಿ, ಕುರುವಳ್ಳಿ ಬಂಡೆ ಕೆಜಿಎಫ್ ಆಗದಿರಲಿ..! NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಕುರುವಳ್ಳಿ ಬಂಡೆ ಇದೀಗ ಹರಾಜು ಮಾಡಲು ಸರಕಾರ ಸಿದ್ಧತೆ ನಡೆಸಿದೆ. ಆದರೆ ಇಲ್ಲಿನ ಸ್ಥಳೀಯರ ಉದ್ಯೋಗ, ಉದ್ಯಮ, ಬದುಕು ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.ಸ್ಥಳೀಯರಿಗೆ ಅವಕಾಶ ನೀಡಬೇಕು, ನೈಸರ್ಗಿಕವಾಗಿ ಹಲವು ದಶಕಗಳಿಂದ ಬಂಡೆ ನಡೆಸಿದವರಿಗೆ ಆಧ್ಯತೆ ಮೇರೆಗೆ ಬಂಡೆ ನಡೆಸಲು ಅವಕಾಶ ಆಗಬೇಕು ಎಂಬ ಒತ್ತಾಯ ಸ್ಥಳೀಯವಾಗಿ ಕೇಳಿ ಬಂದಿದ್ದು ಇದೇ ಅಗ್ರಹ ಗೃಹ ಮಂತ್ರಿಯವರಿಗೂ ತಲುಪಿದೆ.ಗಣಿ ಇಲಾಖೆ ಮೇ 25ರಂದು ಟೆಂಡರ್ ಕರೆದಿದ್ದು ಈ ಟೆಂಡರ್ ಬಾರಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ತೀರ್ಥಹಳ್ಳಿ ಕುರುವಳ್ಳಿ ಬಂಡೆಯಲ್ಲಿ ಸುಮಾರು 10 ದಶಕಗಳಿಂದ ಸ್ಥಳೀಯ ಕುರುವಳ್ಳಿಯ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದ್ರಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸಾವಿರಾರು ಕೂಲಿ ಕಾರ್ಮಿಕರ ಬದುಕು ಇದೆ. ಜತೆಗೆ ಕಲ್ಲು ಬಂಡೆ ನಂಬಿದ ಲೋಡರ್ಸ್, ಹೋಟೆಲ್,…