Author: Nammur Express Admin

ವಿಶ್ವ ಯೋಗ ದಿನಾಚರಣೆಯಲ್ಲಿ ಹಾಜರ್ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪತ್ರ NAMMUR EXPRESS NEWSಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 21ರಂದು ಅರಮನೆ ನಗರಿ ಮೈಸೂರಿಗೆ ಬರಲಿದ್ದಾರೆ.ವಿಶ್ವ ಯೋಗ ದಿನಾಚರಣೆಯನ್ನು ಪ್ರಧಾನಿ ಮೈಸೂರಿನಲ್ಲಿ ಆಚರಿಸಲಿದ್ದಾರೆ. ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಪ್ರಧಾನಿಗಳು ಯೋಗಾ ದಿನಾಚರಣೆಗೆ ಚಾಲನೆ ನೀಡಿ ಬಳಿಕ ತಾವು ಕೂಡ ಯೋಗ ಮಾಡಲಿದ್ದಾರೆ.ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.

Read More

ದೇಸಿ 5 ಜಿ ನೆಟ್ವರ್ಕ್ ಬಳಸಿ ಮೊದಲ ಕರೆ ಯಶಸ್ವಿ!ಆಡಿಯೋ, ವಿಡಿಯೋ ಕರೆ ಸ್ವೀಕರಿಸಿದ ಸಚಿವದೇಶದಲ್ಲಿ 5 ಜಿ ಯುಗಾರಂಭಕ್ಕಿನ್ನು ಕ್ಷಣಗಣನೆ NAMMUR EXPRESS NEWSಚೆನ್ನೈ: ಸಂಪೂರ್ಣವಾಗಿ ದೇಶದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ 5 ಜಿ ನೆಟ್ವರ್ಕ್ ಬಳಸಿ ಮಾಡಲಾದ ಮೊದಲ ಆಡಿಯೋ ವಿಡಿಯೋ ಕರೆಯನ್ನು ಗುರುವಾರ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ವೀಕರಿಸಿದರು.ಐಐಟಿ ಮದ್ರಾಸ್ ತಂತ್ರಜ್ಞಾರೊಬ್ಬರೂ ಮಾಡಿದ ಕರೆಯನ್ನು ಅವರು ಸ್ವೀಕರಿಸುವ ಮೂಲಕ ದೇಶದಲ್ಲಿ5ಜಿ ಯುಗಾರಂಭಕ್ಕೆ ನಾಂದಿ ಹಾಡಿದರು.ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಸಚಿವ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿಯವರ ಕನಸು ಸಾಕಾರವಾಗಿದೆ,4ಜಿ ಹಾಗೂ 5ಜಿ ತಂತ್ರಜ್ಞಾನವನ್ನು ಇಡೀ ಜಗತ್ತಿಗಾಗಿ ದೇಶದಲ್ಲಿ ಅಭಿವೃದ್ಧಿಪಡಿಸುವುದು ಅವರ ಕನಸಾಗಿತ್ತು, ಈ ಮೂಲಕ 5 ಜಿ ನೆಟ್ವರ್ಕ್ ಅನ್ನು ಸಂಪೂರ್ಣವಾಗಿ ದೇಶಿಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. 5ಜಿ ತಂತ್ರಜ್ಞಾನದಿಂದ ಅನೇಕ ಆವಿಷ್ಕಾರಗಳಿಗೆ ಸಹಕಾರಿಯಾಗಲಿದೆ.

Read More

ಜಲಧಾರೆ ಮೂಲಕ ರಾಜ್ಯದಲ್ಲಿ ಸಂಚಲನದೇವಮೂಲೆಗಾಗಿ ಮಾಗಡಿಗೆ ಶಿಫ್ಟ್ರಾಮನಗರದಿಂದ ನಿಖಿಲ್, ಹಾಸನದಿಂದ ಪ್ರಜ್ವಲ್? NAMMUR EXPRESS NEWSಬೆಂಗಳೂರು: ಭಾರತೀಯ ರಾಜಕೀಯದಲ್ಲಿ ಮಹತ್ವ ಪಡೆದಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ವರ್ಷ ಬಾಕಿ ಇದೆ. ಈ ನಡುವೆ ರಾಜಕೀಯದ ರಣಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರುವಾಸಿಯಾಗಿರುವ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಮ್ಯಾಜಿಕ್ ಮಾಡಲು ಹೊರಟಿದೆ.ಮತ್ತೊಮ್ಮೆ ಸಿಎಂ ಆಗುವ ಕನಸಿನೊಂದಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕುಮಾರಸ್ವಾಮಿ ಇದೀಗದೇವಮೂಲೆಗಾಗಿ ಮಾಗಡಿಗೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ.ರಾಜ್ಯದ ಕ್ಷೇತ್ರವೊಂದರಿಂದ ಕಣಕ್ಕಿಳಿದು ಗೆದ್ದು ಬಂದರೇ, ಸಿಎಂ ಆಗೋ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರದೇ ಹೋದಲ್ಲಿ ಪಕ್ಷ ವಿಸರ್ಜನೆ ಮಾಡೋದಾಗಿ ಪಣತೊಟ್ಟಿದ್ದಾರೆ. ಹೀಗಾಗಿ ದೇವಮೂಲೆ ಇರುವ ವಿಧಾನಸಭಾ ಕ್ಷೇತ್ರದ ಮೊರೆ ಹೋಗಿದ್ದಾರೆ.ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಪ್ರಸ್ತುತ ಜೆಡಿಎಸ್ ತೆಕ್ಕೆಯಲ್ಲಿದೆ. ಇದು ದೇವಮೂಲೆಯ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಿಂದ ಕಣಕ್ಕಿಳಿದು ಶಾಸಕರಾದರೇ ಸಿಎಂ ಆಗೋ ಅವಕಾಶ ಇದೆಯಂತೆ. ಇದೇ ಕಾರಣಕ್ಕೆ ಎಚ್ಚಿಕೆ…

Read More

600 ಉದ್ಯೋಗಿಗಳನ್ನು ವಜಾಗೊಳಿಸಿದ ಕಾರ್ಸ್ 24ವೇದಾಂತು ಕಂಪನಿಯಿಂದಲೂ ಉದ್ಯೋಗಿಗಳ ವಜಾಸರ್ಕಾರ ಬಾಯಿ ಮಾತಲ್ಲಿ ಸುಳ್ಳು ಹೇಳುತ್ತಿದೆಯಾ..? ಉದ್ಯಮಗಳಿಗೆ ಬೆಂಬಲ ಕೊಟ್ರೆ ಮಾತ್ರ ಉದ್ಯೋಗ ಸೃಷ್ಟಿ! ಲಕ್ಷ ಲಕ್ಷ ಉದ್ಯೋಗ ಕುಸಿತ ಸಾಧ್ಯತೆ!? NAMMUR EXPRESS NEWSಬೆಂಗಳೂರು: ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರಲ್ಲಿ ಸ್ಟಾರ್ಟ್ ಅಪ್ ಕರೋನಾ ಬಳಿಕ ಒಂದರ ಮೇಲೆ ಒಂದು ಬಾಗಿಲು ಹಾಕಿಕೊಳ್ಳುತ್ತಿವೆ. ಇದೀಗ ಒಂದರ ನಂತರ ಒಂದರಂತೆ ಸ್ಟಾರ್ಟ್ಅಪ್ ಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ, ಇದೀಗ ಕಾರ್ಸ್ 24 ಎಂಬ ಕಂಪನಿಯು 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಗಳಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.ಸಾಫ್ಟ್ ಬ್ಯಾಂಕ್ ಮತ್ತು ಆಲ್ಫಾ ವೇವೆ ಗ್ಲೋಬಲ್ ಬೆಂಬಲಿತ, ಬಳಸಿದ ಕಾರುಗಳನ್ನು ಮಾರಾಟ ಮಾಡುವ ಈ ಕಂಪನಿಯಲ್ಲಿ 9000 ಉದ್ಯೋಗಿಗಳಿದ್ದಾರೆ,600 ಉದ್ಯೋಗಿಗಳ ವಜಾ ದೊಂದಿಗೆ ಕಾರ್ಸ್ 24 ಇತ್ತೀಚೆಗಷ್ಟೇ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿದ ಆನ್ ಅಕಾಡೆಮಿ ವೇದಾಂತು ಮತ್ತು ಮಿಶೋಗಳನ್ನು ಸ್ಟಾರ್ಟಪ್ ಗಳ ಪಟ್ಟಿಗೆ ಸೇರಿದೆ. ದಿನದಿನಕ್ಕೂ ಈ ಪಟ್ಟಿ…

Read More

ಬಕಲ್ ಹಾಕದೇ ISI ಮಾರ್ಕ್ ಇಲ್ಲದಿದ್ದರೆ ಫೈನ್ಹೊಸ ಟ್ರಾಫಿಕ್ ನಿಯಮ ಏನು.. ಎತ್ತ…?ರೆಡ್ ಸಿಗ್ನಲ್ ಜಂಪ್ ಮಾಡಿದರೆ 2000 ರೂ ದಂಡ NAMMUR EXPRESS NEWSನವದೆಹಲಿ: ಬಕಲ್ ಹಾಕದೇ ಇಂಡಿಯನ್ ಸ್ಟ್ಯಾಂಡರ್ಡ್ಇನ್‌ಸ್ಟಿಟ್ಯೂಟ್(ಐಎಸ್‌ಐ) ಮಾರ್ಕ್ ಇಲ್ಲದ ಹೆಲ್ಮಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ ಇನ್ನು ಮುಂದೆ 2 ಸಾವಿರ ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದು ಹೊಸ ನಿಯಮ.ಮೋಟಾರು ವಾಹನ ಕಾಯ್ದೆಯಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಮತ್ತು ಸರಿಯಾದ ಹೆಮ್ಮೆಟ್ ಧರಿಸದೇ ಇದ್ದಲ್ಲಿ 2 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಯಾವುದಕ್ಕೆ ಎಷ್ಟು ದಂಡ?ನೀವು ಹೆಮ್ಮೆಟ್ ಧರಿಸಿದ್ದರೂ ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸುವಾಗ ಬ್ಯಾಂಡ್/ಬಕಲ್ ಬಿಚ್ಚಿದ್ದರೆ 1,000 ರೂ. ದಂಡ ತೆರಬೇಕಾಗುತ್ತದೆ.ನಿಮ್ಮ ಹೆಮ್ಮೆಟ್ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ ನಿಮಗೆ 1,000 ರೂ. ದಂಡ ವಿಧಿಸಬಹುದು.ನೀವು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಉದಾಹರಣೆಗೆ ಹೆಮ್ಮೆಟ್ ಧರಿಸಿಯೂ ರೆಡ್ ಸಿಗ್ನಲ್ ಜಂಪ್…

Read More

ಜನ, ಸಾಮಾಜಿಕ ಸೇವೆಯಲ್ಲಿ ಮುಂಚೂಣಿಕುರುಬ ಸಮಾಜದ ನಾಯಕರಿಂದ ಹೆಚ್ಚಿದ ಒತ್ತಡಶಿವಮೊಗ್ಗದಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕೆ? NAMMUR EXPRESS NEWSಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಈಶ್ವರಪ್ಪ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕೆಂಬ ಒತ್ತಡ ಇದೀಗ ಹೆಚ್ಚಾಗಿದೆ.ಈಶ್ವರಪ್ಪ ಅವರ ಜತೆ ಜತೆಗೆ ಕಾಂತೇಶ್ ಅವರು ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಸದಾ ಚಟುವಟಿಕೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರರಷ್ಟೇ ಶಿವಮೊಗ್ಗದಾದ್ಯಂತ ಹೆಸರು ಮಾಡಿದ್ದಾರೆ. ಎಲ್ಲಾ ಅರ್ಹತೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿ ಪಕ್ಷ ಬರುವ ಪರಿಷತ್ ಚುನಾವಣೆಯಲ್ಲಿ ಕಾಂತೇಶ್ ಅವರನ್ನು ಆಯ್ಕೆ ಮಾಡಿ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹ ವ್ಯಕ್ತವಾಗಿದೆ. ಕಾಂತೇಶ್ ಅವರಿಗೆ ಸ್ಥಾನ ಮಾನ ನೀಡಲು ಒತ್ತಡ? ಈಶ್ವರಪ್ಪ ಬಳಿಕ ಶಿವಮೊಗ್ಗದಲ್ಲಿ ಕಾಂತೇಶ್ ಅವರೇ ಉತ್ತರಾಧಿಕಾರಿ ಎನ್ನಲಾಗಿತ್ತು. ಜೊತೆಗೆ ಪಕ್ಷ, ಕಾರ್ಯಕರ್ತರು,. ನಾಯಕರ ಜತೆ ಕಾಂತೇಶ್ ಗುರುತಿಸಿಕೊಂಡಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಪಕ್ಷದ ವಲಯದಲ್ಲಿ ಹಲವು…

Read More

ರಾಜ್ಯದಲ್ಲಿ ಶೇ.85.63ರಷ್ಟು ಫಲಿತಾಂಶಶೇ.81.03 ವಿದ್ಯಾರ್ಥಿಗಳು, ಶೇ.90.29 ವಿದ್ಯಾರ್ಥಿನಿಯರು ಪಾಸ್‌145 ಮಂದಿಗೆ ಶೇ.100 ಫಲಿತಾಂಶ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಶೇ.85.63ರಷ್ಟು ಫಲಿತಾಂಶ ಪ್ರಕಟವಾಗಿದೆ. ಶೇ.81.03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ ಶೇ.90.29 ವಿದ್ಯಾರ್ಥಿನಿಯರು ಪಾಸ್‌ ಆಗಿದ್ದಾರೆ. 145 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ. 10 ವರ್ಷಗಳಲ್ಲೇ ಇದು ದಾಖಲೆ ಫಲಿತಾಂಶವಾಗಿದೆ.ಶಿಕ್ಷಣ ಸಚಿವ ನಾಗೇಶ್‌ ಅವರು ಮಧ್ಯಾಹ್ನ 12:30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು. ಫಲಿತಾಂಶ ವೀಕ್ಷಣೆ ಹೇಗೆ? ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

Read More

ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಸೇವೆರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪ್ರದಾನ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹರಳೀಮಠ ನಾಗರಾಜ್ ಹಾಗೂ ಜಯಮ್ಮ ದಂಪತಿಯ ಪುತ್ರಿ ವಿಮಲ ಸಂಕೇತ್ ಹೆಗ್ಡೆ ಅವರಿಗೆ ವಾಣಿಜ್ಯ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಡಿಸಿದ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿವಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ರೋಲ್ ಆಫ್ ಮೈಕ್ರೋ ಫೈನಾನ್ಸ್ ಇನ್ ವುಮೆನ್ ಎಂಪವರ್ಮೆಂಟ್ ವಿಥ್ ಸ್ಪೆಷಿಯಲ್ ರೆಫರೆನ್ಸ್ ಟು ಶಿವಮೊಗ್ಗ ಜಿಲ್ಲೆ ಎಂಬ ಮಹಾ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪ್ರದಾನ ಮಾಡಿದೆ.ವಿಮಲ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಆಕಾಶ್ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧ ಮಂಡಿಸಿದ್ದಾರೆ. ಇವರು ಪ್ರಸ್ತುತ ತುಂಗಾ ಮಹಾವಿದ್ಯಾಲಯದ ಎಂ.ಕಾಂ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಸಾಧನೆಗೆ ಶುಭಾಶಯಗಳುಡಾ. ವಿಮಲ ಅವರ ಸಾಧನೆಗೆ ತುಂಗಾ ಮಹಾವಿದ್ಯಾಲದ ಆಡಳಿತ ಮಂಡಳಿ, ಬೋಧಕ ವರ್ಗ, ಸಿಬ್ಬಂದಿ, ವಿದ್ಯಾರ್ಥಿಗಳು ಶುಭಾಶಯ ಸಲ್ಲಿಸಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಶುಭಾಶಯ ಸಲ್ಲಿಸುತ್ತದೆ

Read More

ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆಇಂದು ಭಾರೀ ಮಳೆ: ಎಲ್ಲೆಡೆ ರೆಡ್ ಅಲರ್ಟ್ತಾಲೂಕು ಆಡಳಿತಗಳಿಂದ ಮಳೆ ಸಭೆ NAMMUR EXPRESS NEWSಶಿವಮೊಗ್ಗ: ಕಳೆದ 2 ದಿನಗಳಿಂದ ರಾಜ್ಯದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಮಲೆನಾಡಿನಲ್ಲಿ ಮಳೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಇಡೀ ದಿನ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ಮೇ 19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಭಾರಿ ಮಳೆಯಾಗುವ ಸಂಭವವಿದೆ. ಸುಮಾರು 10 ಸೆಂಟಿಮೀಟರ್ ನಿಂದ 15 ಸೆಂಟಿಮೀಟರ್ ಮಳೆ ಸುರಿಯುವ ಸಾಧ್ಯತೆಯಿದೆ.ಹಲವೆಡೆ ಅಪಘಾತ!: ಮಳೆ ಹಿನ್ನೆಲೆ ಹಲವೆಡೆ ಸಣ್ಣ ಪುಟ್ಟ ಅಪಘಾತ ಸಂಭವಿಸಿದೆ. ಇನ್ನು ಮರಗಳು ಧರೆಗೆ ಉರುಳಿವೆ. ಅಧಿಕಾರಿಗಳೇ ಎಚ್ಚರ ಎಚ್ಚರಮಳೆ ಅನಾಹುತ ಸೃಷ್ಟಿಸುವ ಸಾಧ್ಯತೆಗಳಿದ್ದು ತಾಲೂಕು ಆಡಳಿತಗಳು…

Read More

ತಮ್ಮ ಮನೆಯ ಕಾರ್ಯಕ್ರಮದಲ್ಲಿ ಗಿಡ ಕೊಟ್ಟು ಮಾದರಿಯಾದ ಶಂಕರಮನೆ ಅರುಣ್!ತೀರ್ಥಹಳ್ಳಿಯ ಈ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ NAMMUR EXPRESS NEWSತೀರ್ಥಹಳ್ಳಿ: ನಾವು ಅನೇಕ ಕಡೆ ಕಾರ್ಯಕ್ರಮಗಳನ್ನು ನೋಡಿದ್ದೇವೆ, ಕಾರ್ಯಕ್ರಮದಲ್ಲಿ ಮನೆಗೆ ಬಂದ ಅತಿಥಿಗಳಿಗೆ ಅನೇಕ ಗಿಫ್ಟ್, ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ತೀರ್ಥಹಳ್ಳಿಯ ಯುವ ಸಂಘಟಕರು ಹಾಗೂ ಕ್ರಿಯಾಶೀಲ ಯುವಕರಾದ ಶಂಕರ ಮನೆ ಅರುಣ್ ಅವರು ಕೈಮರ ಬಳಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಅತಿಥಿಗೂ ಒಂದು ತೆಂಗಿನ ಗಿಡವನ್ನುನೀಡುವ ಮೂಲಕ ಮಾದರಿಯಾದರು. ಈ ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ತೆಂಗಿನಗಿಡಗಳನ್ನು ಕೊಟ್ಟು ಮನೆಯಲ್ಲಿ ನೆಡುವಂತೆ ಅವರು ಮನವಿ ಮಾಡಿದರು. ಸ್ಥಳೀಯ ಊರಿನ ಹಾಗೂ ಬಂದಂತಹ ಅತಿಥಿಗಳು ತೆಂಗಿನ ಗಿಡವನ್ನು ಖುಷಿಯಿಂದ ತೆಗೆದುಕೊಂಡು ಹೋದರು.ಮಾದರಿ ಕೆಲಸ: ಕಾರ್ಯಕ್ರಮಗಳಲ್ಲಿ ಸೀರೆ ಲ್, ಬಟ್ಟೆ, ತಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ಗಿಫ್ಟ್ ಕೊಡುವ ಬದಲು ಇಂತಹ ಹೀಗೆ ಗಿಡಗಳನ್ನು ನೀಡುವಂತಹ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಯಿತು.ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತದೆ, ಪ್ರತಿಯೊಬ್ಬರೂ ಒಂದು…

Read More