ಬಟ್ಟೆ, ಪ್ಲಾಸ್ಟಿಕ್, ಕಸ ಎಸೆಯುವುದು ತಪ್ಪಲ್ಲವೇ..?25 ಟನ್ ಕಸ ತೆಗೆದ ಯುವ ಬ್ರಿಗೇಡ್ ಸಂಸ್ಥೆ NAMMUR EXPRESS NEWSಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯದ ಕೆಲಸ. ತಮ್ಮ ಪಾಪಗಳನ್ನು ಸ್ನಾನ ಮಾಡಿ ತೊಳೆದುಕೊಳ್ಳುವುದು ಎಂಬುದು ಬಹು ವರ್ಷದಿಂದ ಬಂದ ವಾಡಿಕೆ.ಆದರೆ ನೇತ್ರಾವತಿಗೆ ಸ್ನಾನಕ್ಕೆ ಬಂದ ಭಕ್ತರು ಅಲ್ಲಿಯೇ ಬಟ್ಟೆ, ಪ್ಲಾಸ್ಟಿಕ್, ಕಾಯಿ, ಫೋಟೋ, ತಮ್ಮ ಉಡುಪು ಗಳನ್ನು ಎಸೆದು ವಿಕೃತಿ ಮೆರೆಯುತ್ತಿದ್ದಾರೆ. ಇತ್ತೀಚಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡದ ನೂರಾರು ಕಾರ್ಯಕರ್ತರು ಬೆಳಗಿನಿಂದ ಸಂಜೆಯವರೆಗೂ ಕೆಲಸ ಮಾಡಿ ಸುಮಾರು 25 ಟನ್ ಗಳಷ್ಟು ಕಸ ಹೊರತೆಗೆದಿದ್ದಾರೆ!.ಪ್ರತಿ ವರ್ಷ ಇಲ್ಲಿ ಸಂಘ ಸಂಸ್ಥೆಗಳು ಈ ಕಸ ಕ್ಲೀನ್ ಮಾಡುತ್ತವೆ. ಆದ್ರೆ ನದಿಯ ಪಾವಿತ್ರ್ಯತೆ ಮಾತ್ರ ಹಾಳಾಗುತ್ತಲೇ ಇದೆ.ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಮತ್ತು ಆಡಳಿತ ಮಂಡಳಿ ಈ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕಿದೆ.ಬಟ್ಟೆ ಬರೆ ನದಿಗೆ ಹಾಕಿ ಮಲೀನ ಮಾಡಿದರೆ ದಂಡ ಹಾಕಲಾಗುವುದು. ಮತ್ತೆ ನಿಮ್ಮ ಪ್ರತಿಯೊಂದು ಕಾರ್ಯವೂ ಸಿಸಿಟಿವಿಯಲ್ಲಿ…
Author: Nammur Express Admin
70 ವಯಸ್ಸಾದವರಿಗೆ ರಾಜಕೀಯ ಸಂಘಟನೆ ಹೊಣೆಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೇಟ್ಯುವಕರಿಗೆ ಶೇ.50ರಷ್ಟು ಸ್ಥಾನ ಫಿಕ್ಸ್ಇನ್ನಾದರೂ ಬದಲಾಗುತ್ತಾ ಓಭಿರಾಯನ ಕಾಲದ ಕಾಂಗ್ರೆಸ್ ತಂತ್ರ?! NAMMUR EXPRESS NEWSಉದಯಪುರ(ರಾಜಸ್ಥಾನ): ದೇಶದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ರಾಜಕಾರಣದಲ್ಲಿ ಬಿಗ್ ಟರ್ನ್ ಮಾಡಲು ತಂತ್ರಗಾರಿಕೆ ಶುರು ಮಾಡಿದೆ.ಕಾಂಗ್ರೆಸ್ ಸೋಲಿನ ಜತೆಗೆ ಇಡೀ ದೇಶದಲ್ಲಿ ಅವಸಾನದ ಅಂಚಿಗೆ ಸಾಗಲು ಪ್ರಮುಖ ಕಾರಣ ಹಳೆ ಮುಖಗಳ ಹಳೆ ರಾಜಕೀಯ. ಅದೇ ಭಾಷಣ ಅದೇ ಮುಖ. ಈಗ ಮೊದಲ ಹಂತದಲ್ಲಿ ಪಕ್ಷ 70 + ವಯಸ್ಸಾದವರಿಗೆ ಅವಕಾಶ ನೀಡದಿರಲು ನಿರ್ಧಾರ ಮಾಡಿದೆ. ಅವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಿದೆ. ಬಿಜೆಪಿಯಲ್ಲಿ ಈಗಾಗಲೇ ಈ ನಿಯಮವಿದೆ. ಹೀಗಾಗಿ ಯುವ ಜನತೆಗೆ ಹೆಚ್ಚು ಅವಕಾಶ ಸೃಷ್ಟಿ ಆಗಿದೆ. ಹೀಗಾಗಿ ಬಿಜೆಪಿ ಮಾಸ್ ಪಟ್ಟ ಅಲಂಕರಿಸಿದೆ.ಯುವಕರಿಗೆ ಶೇ.50ರಷ್ಟು ಸ್ಥಾನ ಫಿಕ್ಸ್: ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ತುಂಬಿ ಹೋಗಿದ್ದಾರೆ. ಇದರಿಂದ ಪಕ್ಷ ಸಂಘಟನೆ ಮಕಾಡೆ ಮಲಗಿದೆ. ಇದರಿಂದ ಕಳೆದ 15 ವರ್ಷದಲ್ಲಿ…
ಯೋಜನೆ ಏನು.. ಎತ್ತ..? ಯಾರಿಗೆ ಅನುಕೂಲದಾಖಲೆ ಏನು… ಪಡೆಯೋದು ಹೇಗೆ? NAMMUR EXPRESS NEWSಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವವರು, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಕುಟುಂಬಗಳಿಗೆ ಪೂರೈಸುತ್ತಿರುವ ಉಚಿತ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಬಿಪಿಎಲ್ ಹೊಂದಿರುವವರಿಗೆ 40 ಘಟಕಗಳಿಂದ ತಿಂಗಳಿಗೆ 75 ಯೂನಿಟ್‌ಗಳಿಗೆ ಉಚಿತ ನೀಡಲು ನಿರ್ಧರಿಸಲಾಗಿದೆ.ಇದರಿಂದ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 979 ಕೋಟಿ ರೂ. ಹೊರೆ ಬೀಳಲಿದೆ.ಕಳೆದ ತಿಂಗಳು ಬಾಬು ಜಗಜೀವನ್ ರಾಮ್ ಅವರ 115 ಜನ್ಮದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಂಗಳಿಗೆ 40 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ತಿಂಗಳಿಗೆ 75 ಯೂನಿಟ್‌ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದರು. ಸಿಎಂ ಘೋಷಣೆ ಮಾಡಿದ ಒಂದು ತಿಂಗಳೊಳಗೆ ಇಂಧನ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು, ಅಂತಿಮ ಅನುಮೋದನೆಗಾಗಿ ಸಿಎಂ ನೇತೃತ್ವದ ಹಣಕಾಸು ಇಲಾಖೆಗೆ ಸಲ್ಲಿಸಿದೆ. ಈ ನಿರ್ಧಾರವು ಮೇ 2022ರಿಂದ ಜಾರಿಗೆ ಬರಲಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಇತ್ತೀಚಿನ…
ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಕಾರ್ಯಕ್ರಮಸಂಜೆಯವರೆಗೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ NAMMUR EXPRESS NEWSತುಂಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಡಾ.ಬಿ.ಗಣಪತಿ ಅವರಿಗೆ “ಭಾವಾಭಿನಂದನೆ” ಶಿಷ್ಯಸಂಭ್ರಮ – ಶಿಷ್ಯನಮನ ಕಾರ್ಯಕ್ರಮ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ಶುರುವಾಗಿದೆ.ಶಿಷ್ಯ ವೃಂದ ಎಲ್ಲಾ ಶಿಷ್ಯರು ಮತ್ತು ಅವರ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು, ಸಾಹಿತ್ಯ ಆಸಕ್ತರು ಆಗಮಿಸುತ್ತಿದ್ದಾರೆ. ಈಗ ಶಿಷ್ಯರ ನಮನ ಕಾರ್ಯಕ್ರಮ ನಡೆಯುತ್ತಿದೆ. ಮಧ್ಯಾಹ್ನ ಸಭಾ ಕಾರ್ಯಕ್ರಮ ಮದ್ಯಾಹ್ನ 2.30 ರಿಂದ 4.30ರವರೆಗೆಶಿಷ್ಯನಮನ, ಗಣಪತಿ ಉತ್ತುಂಗಅರಿವಿನ ಬೆಳಗುಭಾವಾಭಿನಂದನೆಅಕ್ಕರದ ಮಾಲೆ ಮುಡಿಸುವವರು : ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹಿರಿಯ ಮೇಷ್ಟ್ರು, ಬೆಂಗಳೂರುಅವ್ಯಕ್ತ ಲೋಕದ ಅನಾವರಣ : ಚಾಂದಿನಿ, ಕವಯಿತ್ರಿ ಮಾನವ ಹಕ್ಕು ಹೋರಾಟಗಾರ್ತಿ, ಬೆಂಗಳೂರುಮನದ ಮಾತುಗಳು ,ಡಾ. ಜಿ.ಎಂ. ಪುಟ್ಟಯ್ಯ ಪ್ರಾಧ್ಯಾಪಕರು, ಕನ್ನಡ ವಿ.ವಿ., ಹಂಪಿ,ಭಾವಸ್ಪಂದನೆ : ಡಾ.ಬಿ. ಗಣಪತಿ ಉತ್ತುಂಗ ಸಮಸ್ತ ತೀರ್ಥಹಳ್ಳಿಯ ಜನತೆಗೆ ಸುಸ್ವಾಗತ… ಡಾ. ಗಣಪತಿ ಶಿಷ್ಯರು ಕುಟುಂಬ, ಸ್ನೇಹಿತರ ಸಮೇತ ಆಗಮಿಸಲು ಮನವಿ ಮಾಡಲಾಗಿದೆ.
ಮೇ 16ರಿಂದ ಶಾಲೆಗಳು ಆರಂಭ: ಸರ್ವ ಸಿದ್ಧತೆತಳಿರು ತೋರಣ, ಅಲಂಕಾರದಿಂದ ಶಾಲೆ ಸಿಂಗಾರ NAMMUR EXPRESS NEWSಬೆಂಗಳೂರು: 2022-23ನೇ ಸಾಲಿನ ಶಾಲೆಗಳು ಮೇ 16ರಿಂದ ಆರಂಭವಾಗಲಿದ್ದು, ಈ ವೇಳೆ ಸಕಲ ಸಿದ್ಧತೆ ಮಾಡಿಕೊಂಡು ಶಾಲೆ ಶುಭಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.ಎಲ್ಲಾ ಶಾಲೆಗಳು ಸ್ವಚ್ಛಗೊಂಡಿದ್ದು ಮಕ್ಕಳು, ಶಿಕ್ಷಕರು, ಪೋಷಕರು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಶಾಲಾ ಆರಂಭಕ್ಕೂ ಮುನ್ನ ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಅದರಂತೆ ಎಲ್ಲ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಅಧಿಕಾರಿ ವರ್ಗ ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿತ್ತು. ಶಾಲಾ ಪ್ರಾರಂಭದ ಮುನ್ನಾ ಶಾಲಾ ತರಗತಿ ಕೊಠಡಿಗಳು, ಕೋಣೆ, ಶೌಚಾಲಯ ಇತ್ಯಾದಿ ಗಳನ್ನು ಸ್ವಚ್ಛಇಟ್ಟುಕೊಳ್ಳಬೇಕು. ಶಾಲೆಯನ್ನು ತಳಿರು ತೋರಣ, ರಂಗೋಲಿಯಿಂದ ಅಲಂಕರಿಸಬೇಕು. ಮಧ್ಯಾಹ್ನ ಮಕ್ಕಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಪಾಲಕರು, ನಾಗರಿಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಾಲಾ ಹಬ್ಬದಲ್ಲಿ ಭಾಗವಹಿಸುವಂತೆ ವ್ಯವಸ್ಥೆ…
ರಾಜಧಾನಿಯಲ್ಲಿ ಸಹ್ಯಾದ್ರಿ ಸಂಘದಿಂದ ಕಾರ್ಯಕ್ರಮಕೆವಿಆರ್ ಆಶಯ ಮುಂದುವರಿಸಲು ಪಣ NAMMUR EXPRESS NEWSಬೆಂಗಳೂರು: ಸಹ್ಯಾದ್ರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಕೆ.ವಿ.ಆರ್ ಟ್ಯಾಗೋರ್ ಆವರಿಗೆ ನುಡಿ ನಮನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.ಮೇ 12 ಅವರು ಮೃತಪಟ್ಟು ಒಂದು ವರ್ಷ ಆಗಿದ್ದು ಅವರ ಸೇವೆ, ಒಡನಾಟ, ಸಹಾಯ, ವ್ಯಕ್ತಿತ್ವನ್ನು ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ನೆನಪಿಸಿಕೊಳ್ಳಲಾಯಿತು.ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ನೆನಪಿನಂಗಳದಲ್ಲಿ…ಕೆ.ವಿ.ಆರ್ ಟಾಗೋರ್ ಎಂಬ ಕಾರ್ಯಕ್ರಮ ಟ್ಯಾಗೋರ್ ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಜೊತೆಗೆ ಅವರ ಮಾನವೀಯ ಕೆಲಸಗಳನ್ನು ಮುಂದುವರಿಸಲು ಸಹ್ಯಾದ್ರಿ ಸಂಘ ಪಣ ತೊಟ್ಟಿತು.ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎನ್. ಎಸ್ ಶ್ರೀಧರಮೂರ್ತಿ ಪ್ರಾಸ್ತಾವಿಕ ಮಾತನಾಡಿ,ಟ್ಯಾಗೋರ್ ಪ್ರೀತಿಯ ಕಡಲು. ಅವರ ಜೀವನ ಮೌಲ್ಯಗಳನ್ನು ಸಾರುವುದು ಸಮಾಜದ ಕೆಲಸ. ನಾವೆಲ್ಲರೂ ಸೇರಿ ಅವರ ಕೆಲಸಗಳನ್ನು ಮುಂದುವರಿಸೋಣ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಮುದ್ದುಕೃಷ್ಣ ಮಾತನಾಡಿ, ರಾಜ್ಯದಲ್ಲಿ ಓರ್ವ ಪೊಲೀಸ್ ಅಧಿಕಾರಿಯಾಗಿ…
100 ರೂ ಲಿಪ್‌ಸ್ಟಿಕ್ ಆಸೆಗೆ ಕಳೆದುಕೊಂಡಿದ್ದು 3 ಲಕ್ಷ!ಹೆಚ್ಚಿದ ವಂಚನೆ: ಸೈಬರ್ ಕ್ರೈಂ ಪೊಲೀಸ್ ಮೌನ?! NAMMUR EXPRESS NEWSಬೆಂಗಳೂರು: ನೂರು ರೂಪಾಯಿ ಲಿಪ್‌ಸ್ಟಿಕ್ ಆಸೆಗೆ ಬಿದ್ದ ಯುವತಿಯೊಬ್ಬರು ಬರೋಬ್ಬರಿ ಮೂರೂವರೆ ಲಕ್ಷ ಕಳೆದುಕೊಂಡಿದ್ದಾರೆ.ಹೌದು, ಆಶ್ಚರ್ಯವಾದರೂ ಇದು ನಿಜ. ಇತ್ತೀಚೆಗೆ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಅಮಾಯಕ ಜನ ಸಿಕ್ಕರಂತೂ, ಅವರಿಗೆ ಮೋಸ ಮಾಡೋದಿಕ್ಕೆ ರೆಡಿಯಾಗಿ ಇರ್ತಾರೆ. ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ನಿವಾಸಿಯಾಗಿರೋ ಯುವತಿಯೊಬ್ಬರಿಗೆ ಆನ್‌ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡ್ತಿದ್ದೀವಿ ಮೇಡಂ ಅಂತಾ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ. ಹಾಗೇ ಮಾತು ಮುಂದುವರಿಸಿ, ನಮ್ಮಲ್ಲಿ ನೂರು ರೂಪಾಯಿ ಲಿಪ್‌ಸ್ಟಿಕ್ ಬುಕ್ ಮಾಡಿದ್ರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಯುವತಿಗೆ ತಲೆ ಸವರಿದ್ದ. ಆತನ ಮಾತನ್ನು ನಂಬಿದ ಯುವತಿ ನೂರು ರೂಪಾಯಿ ತಾನೇ ಓಕೆ ಅಂತಾ ಹೇಳಿದ್ದರು.ನೂರು ರೂಪಾಯಿ ಬೆಲೆಯ ಲಿಪ್‌ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿದ್ದ. ಮೇಡಂ…
ಮೇ ಮಧ್ಯದ ಬಳಿಕ ಮುಂಗಾರು ಪ್ರವೇಶರಾಜ್ಯದಲ್ಲಿ 3 ದಿನ ಮಳೆ ಅಬ್ಬರ..?!ಬೆಂಗಳೂರಲ್ಲಿ ಮಳೆಗೆ ಓರ್ವ ಬಲಿ NAMMUR EXPRESS NEWSಬೆಂಗಳೂರು: ಮೇ 15ರ ಬಳಿಕ ಮುಂಗಾರು ಸೆಟ್ ಆಗಲಿದೆ ಎಂಬ ಮಾಹಿತಿ ನಡುವೆ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದೆ ಎಂದುರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಳೆಯಾಗಲಿದೆ.ಭಾನುವಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಲೆನಾಡು, ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಶನಿವಾರ ಭಾರೀ ಮಳೆ ಶುರುವಾದಾಗ ನಾಲ್ವರು…
ವಿಧಾನ ಪರಿಷತ್ ಸ್ಥಾನಕ್ಕೆ ಯಡಿಯೂರಪ್ಪ ಮಗನ ಹೆಸರು ಅಂತಿಮ?ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಪಕ್ಕಾ..?ಮೇಲ್ಮನೆ, ರಾಜ್ಯ ಸಭಾ ಚುನಾವಣೆ::ಯಾರು ಕಣಕ್ಕೆ? NAMMUR EXPRESS NEWSಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದೆ.ರಾಜ್ಯ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು. ವಿಧಾನ ಪರಿಷತ್ 1 ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಹೆಸರು ಅಂತಿಮಗೊಳಿಸಲಾಗಿದೆ. ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರನ್ನು ಶಿಫಾರಸು ಮಾಡಲಾಗಿದೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.ಮಾಜಿ ಸಿಎಂ ಯಡಿಯೂರಪ್ಪಗೆ ಈ ಮೊದಲೇ ಸಂದೇಶ ರವಾನೆ ಆಗಿತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಶುಕ್ರವಾರ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ…
ವೈಯಕ್ತಿಕ ಕೆಲಸಕ್ಕಾಗಿ ತೆರಳಿದ್ದೆ ಎಂದ ಆರಗ ಜ್ಞಾನೇಂದ್ರ NAMMUR EXPRESS NEWSಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ದೆಹಲಿ ಭೇಟಿ ಹಲವು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ.ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ, ಗೃಹಸಚಿವ ಆರಗ ಜ್ಞಾನೇಂದ್ರರವರುಕೂಡ ದೆಹಲಿಗೆ ತೆರಳಿದ್ದರು. ಇದು ನಾನಾ ಬಗೆಯ ಚರ್ಚೆಗೆ ಕಾರಣವಾಗಿತ್ತು. ಒಂದು ಕಡೆ ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ತಮ್ಮ ಖಾಸಗಿ ಕೆಲಸವೊಂದು ದೆಹಲಿ ಮಟ್ಟದಲ್ಲಿ ಆಗಬೇಕಿದ್ದರಿಂದ ಅದಕ್ಕಾಗಿ ಸಮಯ ಕೇಳಿದ್ದ ಗೃಹಸಚಿವರಿಗೆ ದೆಹಲಿ ನಾಯಕರು ಭೇಟಿಗೆ ಅವಕಾಶ ನೀಡಿದ್ದರಿಂದ ದಿಢೀರ್ ದೆಹಲಿಗೆ ತೆರಳಿದ್ದರು ಎಂದು ಹೇಳಲಾಗಿದೆ. ಆರಗ ಹೇಳಿದ್ದೇನು?” ನಾನು ದೆಹಲಿಗೆ ಹೋಗಿದ್ದು ಖಾಸಗಿ ಕೆಲಸಕ್ಕಾಗಿ, ಅಲ್ಲಿ ಸಿಎಂ ಬೊಮ್ಮಾಯಿ ಅಲ್ಲಿ ಅವರು ಇದ್ದರು ಅವರನ್ನ ಭೇಟಿಯಾಗಿದ್ದೇನೆ ಅಷ್ಟೆ. ಆದರೆ ಹೈಕಮಾಂಡ್ ನಾಯಕರನ್ನು,…