Author: Nammur Express Admin

ಮಂಗಳವಾರದಿಂದ ಮೂರು ತಂಡಗಳ ಪ್ರವಾಸ NAMMUR EXPRESS NEWSಮುಂಬರುವ ಚುನಾವಣೆಗೆ ಮತ್ತು ಪಕ್ಷ ಸಂಘಟನೆಗಾಗಿ ಮಂಗಳವಾರದಿಂದ 13 ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಮೂರು ತಂಡಗಳನ್ನು ಬಿಜೆಪಿ ಪ್ರಕಟಿಸಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ,ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ. ಈ ತಂಡದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು ಸಂಸದರು ಶಾಸಕರು ಸೇರಿದಂತೆ ಇನ್ನಿತರ ನಾಯಕರು ಇರಲಿದ್ದು ಹತ್ತು ವಿಭಾಗಗಳಲ್ಲಿ ಪ್ರವಾಸ ನಡೆಸಿ ಜಿಲ್ಲಾಮಟ್ಟದ ಕೋರ್ ಕಮಿಟಿ ಸಭೆ ಪದಾಧಿಕಾರಿಗಳ ಸಭೆ ಜಿಲ್ಲಾ ಪ್ರಮುಖರೊಂದಿಗೆ ಸಮಾಲೋಚನೆಯನ್ನು ನಡೆಸಲಿದ್ದಾರೆ. ಅಲ್ಲಲ್ಲಿ ಸಮಾವೇಶ ಆಯೋಜಿಸುವ ಮೂಲಕ ಪಕ್ಷ ಸಂಘಟನೆಗೆ ತಯಾರಿ ನಡೆಸಲಾಗಿದೆ. ಎ.16.17 ರಂದು ವಿಜಯನಗರದಲ್ಲಿ ನಡೆಯಲಿರುವ ಪಕ್ಷದ ಕಾರ್ಯ ಕಾರಿನಲ್ಲಿ ಎಲ್ಲಾ ನಾಯಕರು ಸಮಾವೇಶಗೊಳ್ಳಲಿದ್ದಾರೆ.ತಂಡ-1ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉಪಾಧ್ಯಕ್ಷರಾದ ಪ್ರತಾಪ್ ಸಿಂಹ, ತೇಜಸ್ವಿನಿ ಅನಂತಕುಮಾರ್, ಎಂ ರಾಜೇಂದ್ರ ಮಾಜಿ…

Read More

ಇಂಡಿಕೇಟರ್ ಇಲ್ಲದಿದ್ದರೆ ₹500 ದಂಡವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ NAMMUR EXPRESS NEWSನಾಗರಿಕರೆ ದ್ವಿಚಕ್ರವಾಹನಗಳನ್ನು ಮನೆಯಿಂದ ಹೊರ ತೆಗೆಯುವ ಮುನ್ನ ಜಾಗ್ರತೆ ಇರಲಿ, ನಿಮ್ಮ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ್ ಇಲ್ಲದೆ ಹೋದರೆ ₹500 ದಂಡ ತರಬೇಕಾಗುತ್ತದೆ.ನಗರದ ವ್ಯಾಪ್ತಿ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೊಲೀಸರು, ಈಗ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ್ ದೀಪಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದಾರೆ. ಮುಂದಿನ ವಾರದಿಂದ ಈ ನಿಯಮ ಜಾರಿಗೆ ಬರಲಿದೆ ಈ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ನಗರದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಹೆಚ್ಚಿನದಾಗಿ ದ್ವಿಚಕ್ರವಾಹನಗಳೇ ತುತ್ತಾಗುತ್ತಿದ್ದು ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ ಎಂಬುದು ಅಪಘಾತಗಳ ವಿಮರ್ಶೆಯಿಂದ ಗೊತ್ತಾಗಿದೆ. ಈ ದ್ವಿಚಕ್ರ ವಾಹನಗಳ ಅಪಘಾತಗಳ ಪೈಕಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ, ಸೈಡ್ ಮಿರರ್ ಗಳನ್ನು ಅಳವಡಿಸಿಕೊಳ್ಳದೆ ಹಾಗೂ ಇಂಡಿಕೇಟರ್ ದೀಪಗಳನ್ನು ಬಳಸದೆ ಅಡ್ಡಾದಿಡ್ಡಿಯಾಗಿ…

Read More

ಡೆತ್‌ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆಉಡುಪಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ NAMMUR EXPRESS NEWSಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಪ್ರತಿನಿಧಿಗಳು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಉಡುಪಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ಪತ್ತೆಯಾಗಿದ್ದಾರೆ. ಮೊಬೈಲ್‌ನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಸಂತೋಷ್ ಪಾಟೀಲ್ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ…

Read More

ಹಲವೆಡೆ ಭಾರೀ ಮಳೆಗೆ ಮರ ಧರೆಗೆ: ವಿದ್ಯುತ್ ಇಲ್ಲಮಲೆನಾಡಿನ ಅನೇಕ ಕಡೆ ನೆಟ್ವರ್ಕ್ ಇಲ್ಲ NAMMUR EXPRESS NEWSಮಲೆನಾಡು/ಬೆಂಗಳೂರು: ಅಕಾಲಿಕ ಮಳೆಗೆ ಜನಜೀವನ ತತ್ತರಗೊಂಡಿದೆ. ಮಲೆನಾಡಿನಲ್ಲಿ ಪ್ರತಿ ದಿನವೂ ಮಳೆ ಅಬ್ಬರ ಹೆಚ್ಚಾಗಿದೆ. ಒಂದು ಕಡೆ ಮಳೆಯಿಂದ ದುರಂತ ಸಂಭವಿಸಿದರೆ ಮತ್ತೊಂದು ಕಡೆ ಅಡಿಕೆಗೆ ಕೊಳೆ ಬರುವ ಆತಂಕ ಎದುರಾಗಿದೆ. ಕಳೆದ ಎರಡು ದಿನದಿಂದ ಬಿರುಗಾಳಿಗೆ ಮನೆಯ ಮೇಲೆ ಉರುಳಿದ ತೆಂಗಿನ ಮರ ಉರುಳಿವೆ. ಯಾವುದೇ ಪ್ರಾಣಪಾಯ ಆದ ಬಗ್ಗೆ ವರದಿ ಆಗಿಲ್ಲ.ನರಸಿಂಹರಾಜಪುರ ತಾಲೂಕು ಉಂಬಳೇಬೈಲು ಗ್ರಾಮದ ಕಣಗಲಸರ ಕ್ಯಾಂಪ್ ನ ಉಪೇಂದ್ರ ರವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.ಬಿರುಗಾಳಿ ಸಹಿತ ಭಾರಿ ಮಳೆ, ಸಿಡಿಲು ಬಡಿದು 14 ಕುರಿ, ಕುದುರೆ ಸಾವು: ಹುಬ್ಬಳ್ಳಿ ಸೇರಿ ಧಾರವಾಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಕುಂದಗೋಳ ತಾಲೂಕಿನಲ್ಲಿ ಸಿಡಿಲಿಗೆ 14 ಕುರಿ, ಒಂದು ಕುದುರೆ ಬಲಿಯಾಗಿವೆ.ಉತ್ತರ ಕರ್ನಾಟಕ, ಕರಾವಳಿ, ಮೈಸೂರು, ಬೆಂಗಳೂರು ಭಾಗದಲ್ಲೂ ಅಕಾಲಿಕ ಮಳೆಯಾಗುತ್ತಿದೆ. ಅಡಿಕೆಗೆ ರೋಗ ಭೀತಿ..!?ಅಕಾಲಿಕ ಮಳೆ…

Read More

ಪಕ್ಷಾತೀತ ಹೋರಾಟಕ್ಕೆ ಸಜ್ಜು: ಪೂರ್ವಭಾವಿ ಸಭೆಏ.18ಕ್ಕೆ ಶೃಂಗೇರಿಯಲ್ಲಿ ಸಭೆ: ಸಹಿ ಸಂಗ್ರಹ ಸಿದ್ಧತೆಮಲೆನಾಡು ಜನಪರ ಒಕ್ಕೂಟದ ಆಯೋಜನೆ NAMMUR EXPRESS NEWSಮಲೆನಾಡು ಹೊರಗಿನವರಿಗೆ ನೋಡಲು ಚಂದ. ಆದರೆ ಮಲೆನಾಡಿನ ಮಡಿಲಿನಲ್ಲಿ ಬದುಕು ನಡೆಸುತ್ತಿರುವ ಮಲೆನಾಡ ಮಕ್ಕಳ ಕಷ್ಟಗಳು ಹೇಳತೀರದಾಗಿದೆ. ಕೆಲವೊಂದು ಸಮಸ್ಯೆಗಳು ತಕ್ಷಣಕ್ಕೆ ಹೊಳೆದರೆ ಇನ್ನುಳಿದ ಭೀಕರ ಸಮಸ್ಯೆಗಳು ಮುಂದಿನ ದಿನಗಳಲ್ಲಿ ನಮ್ಮ ಕಾಲಕ್ಕೂ ಅಥವಾ ನಮ್ಮ ಮಕ್ಕಳ ಕಾಲಕ್ಕೂ ನಮ್ಮನ್ನು ತಬ್ಬಲಿ ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ನಮಗೆ ಬಂದೊದಗಿರುವ ಹಾಗೂ ಮುಂದೆ ಬರಲಿರುವ ಸಮಸ್ಯೆಗಳ ಬಗ್ಗೆ ನಾವು ನೀವು ಅರಿತುಕೊಂಡು – ಒಬ್ಬ ಮಲೆನಾಡಿಗನಾಗಿ ಹಾಗೂ ಪಕ್ಷಾತೀತವಾಗಿ ಒಗ್ಗಟಾಗಿ ಒಂದು ಆಂದೋಲನವನ್ನೇ ರೂಪಿಸಬೇಕಿದೆ. ಈ ಮಲೆನಾಡ ನೆಲ ಹೋರಾಟದ ನೆಲವಾಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮನ್ನ ಆಳುವವರಿಗೆ ನಮ್ಮ ಸಮಸ್ಯೆಗಳ ಬಗ್ಗೆ ಆಂದೋಲನದ ಮೂಲಕ ಕಣ್ಣು ತೆರೆಸಬೇಕಾಗಿದೆ.ಈಗಾಗಲೇ “ಸಹಿ ಸಂಗ್ರಹ” ದ ಆಂದೋಲನವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ “ಮಲೆನಾಡಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮುಷ್ಕರ ಹೂಡುವ ಕುರಿತು” ಚರ್ಚಿಸಲು ಪೂರ್ವಭಾವಿ ಸಭೆಯನ್ನು…

Read More

5000ಕ್ಕೂ ಹೆಚ್ಚು ತೀರ್ಥಹಳ್ಳಿ, ಮಲೆನಾಡಿಗರ ಸಮ್ಮಿಲನರಾಜಕೀಯ, ಉದ್ಯಮ, ಸಂಘಟನಾ ಕ್ಷೇತ್ರದ ಸಮಾಗಮಕಾರ್ಯಕ್ರಮದಲ್ಲಿ ಭಾವುಕರಾದ ಆರಗ ಜ್ಞಾನೇಂದ್ರ!ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಅಶ್ವಥನಾರಾಯಣ, ರಾಘವೇಂದ್ರ, ಹಾಲಪ್ಪ, ಕುಮಾರ್ ಬಂಗಾರಪ್ಪ, ಜೀವರಾಜ್ ಸೇರಿ ಗಣ್ಯರ ಮನದ ಮಾತು NAMMUR EXPRESS NEWSಬೆಂಗಳೂರು: ಅದೊಂದು ಭಾವುಕ ಕ್ಷಣ. ತೀರ್ಥಹಳ್ಳಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಬೆಂಗಳೂರು ಅರಮನೆ ಆವರಣದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಬೆಂಗಳೂರು ನಿವಾಸಿಗಳ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಗೃಹ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮತ್ತು ಅವರ ತಂಡ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಜನ ಸೇರಿತ್ತು.ತೀರ್ಥಹಳ್ಳಿ ಮೂಲದ ರಾಜಕೀಯ, ಉದ್ಯಮ, ಸಂಘಟನೆ, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರ ಸೇರಿ ಎಲ್ಲಾ ಜನತೆ ಆಗಮಿಸಿದ್ದರು.ಎಲ್ಲಾ ಅತಿಥಿಗಳು ಮಲೆನಾಡಿನ ನಾಯಕರ ಬಗ್ಗೆ, ತೀರ್ಥಹಳ್ಳಿ ಜನತೆ, ಪರಿಸರದ ಬಗ್ಗೆ ಹೊಗಳಿದರು.ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, 5000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಖ್ಯಾತ ಕಲಾವಿದ ಕೋಟೆಗದ್ದೆ ರವಿ ಆರಗ ಚಿತ್ರ ಬಿಡಿಸಿ ಚಿತ್ರ ನಮನ ಸಲ್ಲಿಸಿದರು.ಸಿಎಂ…

Read More

ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ವರ್ಚಸ್ಸು ಫೇಲ್ಇತಿಹಾಸದ ಪಕ್ಷಕ್ಕೆ ಮುಳುವಾಯಿತೇ ಹಳೆ ತಂತ್ರಗಾರಿಕೆ?!ಯುವ ಜನತೆಗಿಲ್ಲ ಅವಕಾಶ: ನಾಯಕರ ಒಳಪೆಟ್ಟುಫಲ ನೀಡದ ಓಭಿರಾಯನ ಕಾಲದ ಪ್ಲಾನ್ಆಮ್ ಆದ್ಮಿ ಪಾರ್ಟಿಗಿಂತ ಕಡಿಮೆ ಸ್ಥಾನ NAMMUR EXPRESS NEWSಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಜೊತೆಗೆ ಪಕ್ಷದ ವರ್ಚಸ್ಸು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ.ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ್ ಅಲ್ಲಿ ಜನರಿಂದ ದೂರವಾದ ಪಕ್ಷ ಗೋವಾದಲ್ಲಿ ಅಧಿಕಾರ ಹಿಡಿಯುವ ಕನಸು ಕಂಡಿದ್ದರೂ ಕಾಂಗ್ರೆಸ್‍ಗೆ ಮತದಾರರು ಶಾಕ್ ನೀಡಿದ್ದಾರೆ. ಪಂಜಾಬ್‍ನಲ್ಲಿ ಪಕ್ಷದ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಮುಖ್ಯಮಂತ್ರಿಯಾಗಿದ್ದ ಚರಣ್‍ಜಿತ್ ಸಿಂಗ್ ಚೆನ್ನಿ ಮತ್ತು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೋತಿದ್ದು, ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗುವಂತೆ ಮಾಡಿದೆ. ಇನ್ನು 117 ಸ್ಥಾನಗಳ ಪೈಕಿ 18 ಸ್ಥಾನ ಪಡೆದಿದೆ. ಆಪ್ 92 ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ.ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೆಸರೇ ಇಲ್ಲದಾಗಿದೆ. ನೂರಾರು ರ್ಯಾಲಿ, ಮೆರವಣಿಗೆ, ಪ್ರಿಯಾಂಕಾ, ರಾಹುಲ್ ಪ್ರಚಾರ ಟುಸ್ ಆಗಿದೆ.…

Read More

2ನೇ ಬಾರಿಗೆ ಉತ್ತರ ಪ್ರದೇಶ ಸಿಎಂ ಆದ ಆದಿತ್ಯನಾಥ್ಉತ್ತರ ಪ್ರದೇಶದ ರಾಜಕೀಯದಲ್ಲಿ ಹಲವು ದಾಖಲೆಸೋತ ಘಟಾನುಘಟಿ ನಾಯಕರು.. ಯಾರು ಯಾರು..? NAMMUR EXPRESS NEWSದೇಶದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿದಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕಾರಾವಧಿ(5 ವರ್ಷ ಪೂರ್ಣಗೊಳಿಸಿ ಎರಡನೇ ಅವಧಿಗೆ ಗೆದ್ದಿದ್ದಾರೆ. ಈ ಮೂಲಕ ಈ ದಾಖಲೆ ಮಾಡಿದ ಯುಪಿಯ ಮೊದಲ ಸಿಎಂ ಆಗಲಿದ್ದಾರೆ. ಯುಪಿಯ ಕಳೆದ 70 ವರ್ಷಗಳ ಚುನಾವಣಾ ಇತಿಹಾಸದಲ್ಲಿ, ಮುಖ್ಯಮಂತ್ರಿಯೊಬ್ಬರು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದು ಮತ್ತು ಸತತವಾಗಿ ಎರಡನೇ ಅವಧಿಗೆ ಆಯ್ಕೆಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಯೋಗಿ ಹೊಸ ದಾಖಲೆ ಬರೆದಿದ್ದಾರೆ.ಇನ್ನು ಯುಪಿಯಲ್ಲಿ ಸತತವಾಗಿ ಗೆದ್ದ ಐದನೇ ಮುಖ್ಯಮಂತ್ರಿ ಯೋಗಿ. 1975ರಲ್ಲಿ ಸಂಪೂರ್ಣಾನಂದ, 1962ರಲ್ಲಿ ಚಂದ್ರಬಾನು ಗುಪ್ತಾ, 1974ರಲ್ಲಿ ಹೇಮಾವತಿ ನಂದನ್ ಬಹಗುಣ ಮತ್ತು 1985ರಲ್ಲಿ ನಾರಾಯಣ್ ದತ್ ತಿವಾರಿ ಈ ಮೊದಲು ಈ ಸಾಧನೆ ಮಾಡಿದವರು.ಕಾಂಗ್ರೆಸ್‌ನ ಎನ್ ಡಿ ತಿವಾರಿ ಅವರು 1985ರಲ್ಲಿ ಅವಿಭಜಿತ ಯುಪಿಯ ಸಿಎಂ ಆಗಿದ್ದರು.…

Read More

ದೇಶದಲ್ಲಿ ಬಿಜೆಪಿಗೆ ಜೈ ಎಂದ ಮತದಾರಐದು ರಾಜ್ಯಗಳ ಪೈಕಿ 4 ಕಡೆ ಅಧಿಕಾರಪಂಜಾಬ್ ಅಧಿಕಾರದ ಚುಕ್ಕಾಣಿ ಹಿಡಿದ ಆಪ್ಕಾಂಗ್ರೆಸ್, ಎಸ್ಪಿ ಪಕ್ಷಗಳಿಗೆ ಮುಖಭಂಗ NAMMUR EXPRESS NEWSಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ದೇಶದ ಜನ ಮತ್ತೆ ಬಿಜೆಪಿ ಕೈ ಹಿಡಿದಿದ್ದಾರೆ. ಐದು ರಾಜ್ಯಗಳಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಗುರುವಾರ ನಡೆದು, ಫಲಿತಾಂಶ ಬಂದಿದ್ದು ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಂಜಾಬ್ ಆಮ್ ಆದ್ಮಿ ಪಾಲಾಗಿದೆ.ಫಲಿತಾಂಶ ಹಲವಾರು ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದ್ದು ಕಾಂಗ್ರೆಸ್ ರಾಷ್ಟ್ರ ನಾಯಕರು, ಮಾಯಾವತಿ, ಅಖಿಲೇಶ್ ಯಾದವ್ ಸೇರಿ ಅನೇಕರ ಭವಿಷ್ಯಕ್ಕೆ ಮಂಕು ತಂದಿದೆ.ಸಣ್ಣ ಜಾತಿಗಳನ್ನು ಜೋಡಿಸಿಕೊಂಡು ಈ ಬಾರಿ ಅಧಿಕಾರಕ್ಕೆ ಬರುತ್ತೇನೆಂಬ ಛಲದಿಂದ ಮುನ್ನುಗ್ಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಗ್ಗರಿಸಿದ್ದಾರೆ. ಬಿಜೆಪಿಯು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ದಲ್ಲಿ ಮತ್ತೆ ಅಧಿಕಾರ ಹಿಡಿದಿದ್ದು ಎರಡನೇ ಬಾರಿ ಗೆಲುವು ದಾಖಲಾಗಿದೆ.80…

Read More

ಮೋಡ ಕವಿದ ವಾತಾವರಣ: ಭಾರೀ ಬಿಸಿಲು NAMMUR EXPRESS NEWSಮಲೆನಾಡು: ರಾಜ್ಯದಲ್ಲಿ ಎರಡು ದಿನ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೇ ರಾಜಧಾನಿಯಲ್ಲಿ ಮಳೆ ಆಗಿದ್ದು ತಣ್ಣನೆ ವಾತಾವರಣ ನಿರ್ಮಾಣವಾಗಿದೆ.ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಕಾರಣ ಮಳೆ ಸಾಧ್ಯತೆ ಇದೆ. ಬಿಸಿಲು ಬಿಸಿಲು..! ಮಲೆನಾಡ ಬಹುತೇಕ ತಾಲೂಕುಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಜನ ಮನೆಯಿಂದ ಹೊರ ಬರುತ್ತಿಲ್ಲ. ತಂಪು ಪಾನೀಯಗಳಿಗೆ ಭಾರೀ ಡಿಮ್ಯಾಂಡ್ ಕಂಡು ಬರುತ್ತಿದೆ.

Read More