Author: Nammur Express Admin

ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪೋಷಕರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ತಮ್ಮ ಮಕ್ಕಳ ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಮನವಿ ಮಾಡಿದ್ದಾರೆ.ಶಿವಮೊಗ್ಗದ ಸಂತೆ ಕಡೂರು ಗ್ರಾಮದ ತೇಜಸ್, ಉಕ್ರೇನ್ ದೇಶದಲ್ಲಿ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ. ಯುದ್ಧ ಆರಂಭದ ಬೆನ್ನಿಗೆ ತೇಜಸ್, ಶಿವಮೊಗ್ಗದಲ್ಲಿರುವ ತಂದೆ ಜಗದೀಶ್, ತಾಯಿ ದೇವಕಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ತಾವು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾರೆ.ಉಕ್ರೇನ್ ದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ಇದ್ದಾರೆ ಅನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ರಾಯಭಾರ ಕಚೇರಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ವಿಮಾನಯಾನ ಸೇವೆ ಪುನಾರಂಭ ಆಗುತ್ತಿದ್ದಂತೆ ಎಲ್ಲರನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.ಶಿವಮೊಗ್ಗ ಜಿಲ್ಲೆಯ ಮತ್ತಷ್ಟು ಮಂದಿ ವಿದ್ಯಾಭ್ಯಾಸಕ್ಕಾಗಿಉಕ್ರೇನ್ ದೇಶಕ್ಕೆ ತೆರಳಿರುವ ಸಾಧ್ಯತೆ ಇದೆ. ಯಾರೆಲ್ಲೆ ಅಲ್ಲಿಗೆತೆರಳಿದ್ದಾರೆ ಅನ್ನುವ ಕುರಿತು ರಾಜ್ಯ ಸರ್ಕಾರ ಮಾಹಿತಿ ಪಡೆದುಕೊಳ್ಳುತ್ತಿದೆ.

Read More

ವಿಶ್ವ ಮಾರುಕಟ್ಟೆಯಲ್ಲಿ ಸಂಚಲನ: ಭಾರತದ ಮೇಲೂ ಎಫೆಕ್ಟ್700 ರಷ್ಯಾ ಯೋಧರ ಸಾವು: ಅಪಾರ ಆಸ್ತಿ ಪಾಸ್ತಿ, ಜೀವ ಹಾನಿ135 ಮಂದಿ ಕನ್ನಡಿಗರು ಉಕ್ರೇನ್ ಅಲ್ಲಿ ತತ್ತರ NAMMUR EXPRESS NEWSಉಕ್ರೇನ್: ಮೂರನೇ ಮಹಾಯುದ್ಧ ಎಂದೇ ಬಿಂಬಿತವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಅಧಿಕೃತವಾಗಿ ಆರಂಭವಾಗಿದೆ. ರಷ್ಯಾ ದೇಶವು ಈಗಾಗಲೇ ಉಕ್ರೇನ್ ಮೇಲೆ ಬಾಂಬ್, ಮಿಸೈಲ್ ದಾಳಿ ಆರಂಭಿಸಿದೆ. 203 ಕಡೆ ರಷ್ಯಾ ದಾಳಿ ಮಾಡಿದೆ.ಇನ್ನು 700ಕ್ಕೂ ಹೆಚ್ಚು ಮಂದಿ ರಷ್ಯಾ ಯೋಧರು ಸಾವನ್ನು ಕಂಡಿದ್ದಾರೆ.ಉಕ್ರೇನ್ ಅಲ್ಲಿರುವ ಎಲ್ಲಾ ವಿಮಾನ ನಿಲ್ದಾಣ, ವಿಮಾನ ಬೇಸ್, ಪ್ರಮುಖ ಪಟ್ಟಣಗಳ ಮೇಲೆ ದಾಳಿ ಮಾಡಲಾಗಿದೆ. ಜನರು ಬೀದಿಗೆ ಬಿದ್ದಿದ್ದಾರೆ. ರಷ್ಯಾದಲ್ಲಿ ಕೂಡ ಈ ಯುದ್ಧಕ್ಕೆ ಅಪಸ್ವರ ವ್ಯಕ್ತವಾಗಿದೆ. ಭಾರತೀಯರ ರಕ್ಷಣೆಗೆ ಹೆಲ್ಪ್ಲೈನ್ ಭಾರತ ಸರ್ಕಾರ ಉಕ್ರೇನ್ ದೇಶದಲ್ಲಿದ್ದ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು , ಉದ್ಯೋಗಸ್ಥರನ್ನು ಭಾರತ ಸರಕಾರವು ತ್ವರಿತವಾಗಿ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು ಅಪಾಯದಲ್ಲಿ ಸಿಲುಕುವ ಮೊದಲೇ ‌ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಉಕ್ರೇನ್…

Read More

20000 ಮಂದಿ ಭಾರತೀಯರು ಅತಂತ್ರದಲ್ಲಿಕನ್ನಡದ 135 ಮಂದಿ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮರಾಜ್ಯ ಸರ್ಕಾರದ ರಾಜತಾಂತ್ರಿಕ ಕ್ರಮ NAMMUR EXPRESS NEWSಭಾರತೀಯ ವಿದೇಶಾಂಗ ಸಚಿವರ ಜತೆ ಮಾತುಕತೆಯಲ್ಲಿದ್ದೇವೆ. ಕನ್ನಡಿಗ ಜನರ ರಕ್ಷಣೆಗೆ ಬದ್ಧವಾಗಿದ್ದೇವೆ. ಎಲ್ಲಾ ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿದ್ದೇವೆ. ಕನ್ನಡಿಗರನ್ನು ಕರೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಸವರಾಜ ಬೊಮ್ಮಾಯಿಸಿಎಂ, ಕರ್ನಾಟಕ ನಮಗೆ ಭಾರತ ಎಂಬಸ್ಸಿ ಕಚೇರಿಯಿಂದ ಮಾಹಿತಿ ಬಂದಿದೆ. ನಾವು ಸಂಪರ್ಕದಲ್ಲಿದ್ದೇವೆ. ನಮಗೆ ಭಾರತ ಸರ್ಕಾರದ ನೆರವು ಬೇಕಿದೆ. ಗಾನವಿವಿದ್ಯಾರ್ಥಿನಿಶಿವಮೊಗ್ಗ 20000 ಮಂದಿ ಭಾರತೀಯರು ಆತಂಕದಲ್ಲಿಉಕ್ರೇನ್ ಅಲ್ಲಿ ಶಿಕ್ಷಣ, ಸಂಶೋಧನೆ, ಉದ್ಯಮ ಸೇರಿ ಇತರೆ ಕಾರಣಕ್ಕಾಗಿ ಭಾರತದ ಸುಮಾರು 20 ಸಾವಿರ ಮಂದಿ ಭಾರತಿಯರಿದ್ದಾರೆ. ಸುಮಾರು 135 ಕನ್ನಡಿಗರಿದ್ದಾರೆ. ಅವರೆಲ್ಲರ ರಕ್ಷಣೆಗೆ ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಉಕ್ರೇನ್‌ನಲ್ಲಿರುವ ಕನ್ನಡಿಗರಿಗಾಗಿ ಅವರ ಸಂಬಂಧಿಕರಿಗಾಗಿ ಕರ್ನಾಟಕ ಸರ್ಕಾರದ ಸಹಾಯವಾಣಿ080 – [email protected]@gmail.com

Read More

ಕನ್ನಡದ ಮೇರು ಕವಿ ಚೆನ್ನವೀರ ಕಣವಿ ಇನ್ನಿಲ್ಲ!ಕರೋನಾ ಬಳಿಕ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ವಿಧಿವಶ NAMMUR EXPRESS NEWSಹುಬ್ಬಳ್ಳಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಚೆನ್ನವೀರ ಕಣವಿ (93) ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.ಅನಾರೋಗ್ಯದಿಂದಾಗಿ ಜನವರಿ 14ರಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ದಾಖಲಾಗಿ,ಚಿಕಿತ್ಸೆ ಪಡೆಯುತ್ತಿದ್ದರು.ಮಂಗಳವಾರ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿಸಲಾಗಿತ್ತು. ಈ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಅವರು ಇನ್ನಿಲ್ಲವಾಗಿದ್ದಾರೆ.ಚೆನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್‌ಎಂದು ಪ್ರಸಿದ್ದರಾದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ…

Read More

9 ಜಿಂಕೆ ಕೊಂಬುಗಳ ವಶ: ಓರ್ವನ ಬಂಧನ NAMMUR EXPRESS NEWSಬೆಂಗಳೂರು: ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ವ್ಯಕ್ತಿ. ಈತ ಶಾಂತಿನಗರದ ಬಸ್ ಡಿಪೋ ಸಮೀಪ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಿಂಹಪ್ಪನನ್ನು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜಿಂಕೆ ಕೊಂಬುಗಳು ಎಲ್ಲಿ ಸಿಕ್ಕಿದವು, ಯಾರು ಮಾರಾಟಕ್ಕೆ ಕೊಟ್ಟರು, ಯಾವ ಕಾಡಿನಿಂದ ಕೊಂಬುಗಳನ್ನು ತರಲಾಗಿದೆ. ಯಾರಿಗೆ ಮಾರಾಟ ಮಾಡಲು ಬಂದನೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Read More

ಕಟ್ಟಡದಿಂದ ತಪ್ಪಿಸಿಕೊಂಡ ಮೂವರು ಪರಾರಿಕರೋನಾ ಭಯ ಬೇಡ, ಜಾಗೃತಿ ಇರಲಿ.. NAMMUR EXPRESS NEWSಮಡಿಕೇರಿ: ಮಡಿಕೇರಿಯಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಕರೋನಾ ಪಾಸಿಟಿವ್ ಆದ ಮೂವರು ನಾಪತ್ತೆಯಾಗಿದ್ದು ಸೀಲ್‌ಡೌನ್‌ ಕಟ್ಟಡದಿಂದ ತಪ್ಪಿಸಿಕೊಂಡ ಮೂವರು ಕಾರ್ಮಿಕರು ಪರಾರಿಯಾಗಿದ್ದಾರೆ.ಗುರುವಾರ ಬೆಳಗ್ಗೆ ಕಟ್ಟಡದಿಂದ ಹೊರಹೋದ ಮೂವರು ಕರೆ ಮಾಡಿದಾಗ ಪುತ್ತೂರಿನಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಈ ಕಟ್ಟಡದಲ್ಲಿದ್ದ ಎಲ್ಲರಿಗೂ ಕರೋನಾ ಬಂದಿತ್ತು. ಎಲ್ಲಾ ಕಾರ್ಮಿಕರಿಗೆ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಒಂದೇ ಕಟ್ಟಡದಲ್ಲಿ 59 ಕಾರ್ಮಿಕರಿಗೆ ಪಾಸಿಟಿವ್ ಬಂದಿತ್ತು. ಸಾರ್ವಜನಿಕವಾಗಿ ಓಡಾಡುತ್ತಿರುವ ಪಾಸಿಟಿವ್ ಆದ ಕಾರ್ಮಿಕರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕ್ವಾರೈನ್ಟೈನ್ ಮಾಡಲಾಗಿತ್ತು.ಮಡಿಕೇರಿಯ ಗಾಂಧಿ ಮೈದಾನದ ಎದುರಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಕರೋನಾ ಬಗ್ಗೆ ಹೆದರಿಕೆ ಬೇಡ, ಎಚ್ಚರ ಇರಲಿ..!ಮಾಸ್ಕ್ ಧರಿಸಿ..!

Read More

34 ವರ್ಷಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ NAMMUR EXPRESS NEWSನವ ದೆಹಲಿ: ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರಲು ಸಿದ್ಧತೆ ನಡೆದಿದೆ. 34 ವರ್ಷಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗಲಿದೆ. ಹಾಗಾದರೆ ಏನೇನು ಬದಲಾಗಲಿದೆ ಎಂಬುದನ್ನು ಇಲ್ಲಿ ನೋಡೋಣ. 5 ವರ್ಷಗಳ ಮೂಲಭೂತ ನರ್ಸರಿ @4 ವಯಸ್ಸುJr. ಕೆಜಿ @5 ವಯಸ್ಸುSr. ಕೆಜಿ @6 ವಯಸ್ಸು1 ನೇ @7 ವಯಸ್ಸು2 ನೇ @8 ವಯಸ್ಸು 3 ವರ್ಷಗಳ ಪೂರ್ವಸಿದ್ಧತೆ3 ನೇ @9 ವಯಸ್ಸು4 ನೇ @10 ವಯಸ್ಸು5 ನೇ @11 ವಯಸ್ಸು 3 ವರ್ಷಗಳ ಮಧ್ಯ6 ನೇ @12 ವಯಸ್ಸು7 ನೇ @13 ವಯಸ್ಸು8 ನೇ @14 ವಯಸ್ಸು 4 ವರ್ಷಗಳ ದ್ವಿತೀಯ9 ನೇ @15 ವಯಸ್ಸುSC @16 ವಯಸ್ಸು1st Yr.Jr.Course @17 ವಯಸ್ಸುSYJC @18 ವಯಸ್ಸು ವಿಶೇಷ ಮತ್ತು ಪ್ರಮುಖ ವಿಷಯಗಳು:ಬೋರ್ಡ್ 12ನೇ ತರಗತಿಯಲ್ಲಿ ಮಾತ್ರ ಇರುತ್ತದೆ, ಎಂಫಿಲ್ ಮುಚ್ಚಲಾಗುವುದುಕಾಲೇಜು ಪದವಿ 4 ವರ್ಷಗಳು,10 ನೇ…

Read More

ಸರ್ಕಾರಕ್ಕೆ ಉದ್ಯಮಿಗಳ ಮೊರೆ: ಇಂದು ಮಹತ್ವದ ಮೀಟಿಂಗ್ಉದ್ಯಮ ಕ್ಷೇತ್ರಕ್ಕೆ ಬೇಕು ಆರ್ಥಿಕತೆಯ ಟಾನಿಕ್ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೋನಾ ಹಾಗೂ ಓಮಿಕ್ರೋನ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಜಾರಿಯಾಗಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಪ್ಯೂ ತೆರವಿಗೂ ಒತ್ತಡ ಹೆಚ್ಚುತ್ತಲೇ ಇದೆ. ಮದ್ಯ ಮಾರಾಟಗಾರರು, ಖಾಸಗಿ ಶಿಕ್ಷಣ ಸಂಸ್ಥೆಯ ಒಕ್ಕೂಟದವರು, ಸ್ವಿಮ್ಮಿಂಗ್ ಫೂಲ್ ಮಾಲೀಕರು, ಜಿಮ್ ಮಾಲೀಕರು ಸೇರಿದಂತೆ ಎಲ್ಲರೂ ನಿಯಮ ಸಡಿಲಿಕೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಾರೆ.10ನೇ ತರಗತಿಗೆ ಪರೀಕ್ಷೆಗಳಿಗೆ ಇನ್ನು 2 ತಿಂಗಳು ಬಾಕಿ ಇದೆ.ಈ ಮಕ್ಕಳಿಗೆ ಈವರೆಗೆ ಕೇವಲ 4 ತಿಂಗಳಷ್ಟೇ ಪಾಠ ನಡೆದಿದೆ ಎಂಬ ಕಾರಣಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಪತ್ರ ಬರೆದಿರುವ ರುಪ್ಸ ಆಫ್ ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವಂತೆ ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದೆ.ಬಡ ಕೂಲಿ ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ ಈ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗುವುದು ದೊಡ್ಡ ಸಮಸ್ಯೆ ಎಂದಿದ್ದಾರೆ. ಫಿಲ್ಮ್…

Read More

ಕರೋನಾ ನಡುವೆ ಈಗ ಮಂಗನ ಕಾಯಲೆ ಭೀತಿಶಿವಮೊಗ್ಗ ಜಿಲ್ಲೆಯಲ್ಲಿ ಕಾಯಲೆ ಹೆಚ್ಚಳ? NAMMUR EXPRESS NEWSತೀರ್ಥಹಳ್ಳಿ: ಕರೋನಾ ಸೋಂಕಿನ ಬೆನ್ನಲ್ಲೇ ಮಂಗನಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೇಸ್ ಕಡಿಮೆಯಾದರೂ ಚಳಿ ಹೆಚ್ಚಿದಂತೆ ರೋಗ ಹೆಚ್ಚಳ ಆತಂಕವೂ ಇದೆ.ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆಗ್ರಾಮದ ಮಹಿಳೆಯೊಬ್ಬಳಲ್ಲಿ ಮಂಗನಕಾಯಿಲೆಯ ವೈರಾಣು ಪತ್ತೆಯಾಗಿದೆ. ಹೀಗಾಗಿ ಮೊದಲ ಕೇಸ್ ದಾಖಲಾಗಿದೆ.ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದೆ. ಸದ್ಯ ಅವರು ತಾಲ್ಲೂಕಿನ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.ಮಂಗನಕಾಯಿಲೆ ಪತ್ತೆಯಾದ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಮಂಗಗಳು ವರದಿಯಾಗಿಲ್ಲ. ಮೊನ್ನೆಯಷ್ಟೇ ಮಂಗಗಳ ಉಣುಗು ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು ಕಂಡಿದ್ದವು. ಮಲೆನಾಡಿನಲ್ಲಿ ಮಂಗಗಳು ಹೆಚ್ಚಿದ್ದು ಮತ್ತಷ್ಟು ಭಯ ಹುಟ್ಟಿಸಿದೆ.

Read More

ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆಕೆಟ್ಟ ಕೆಲಸದಲ್ಲಿ ಶಾಮೀಲಾದ್ರೆ ಕೆಲಸದಿಂದಲೂ ವಜಾ NAMMUR EXPRESS NEWSಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸ ಲಾಗುವುದು ಎಂದು ಗೃಹ ಸಚಿವ ಅರಗ ಎಚ್ಚರಿಕೆ ನೀಡಿದ್ದಾರೆ.ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ, ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಿಸಬೇಕಾದ ಹೊಣೆಗಾರಿಕೆ ಹೊಂದಿರುವ ಪೊಲೀಸರೇ ಅಪರಾಧ ಎಸಗುವುದನ್ನು ಸಹಿಸುವುದಿಲ್ಲ. ಪೊಲೀಸ್ ಇಲಾಖೆಯ ಸಿಬ್ಬಂದಿ ಅಪರಾಧದಲ್ಲಿ ಭಾಗಿಯಾಗಿರುವುದು ಪತ್ತೆಯಾದರೆ ಅವರ ವಿರುದ್ಧ ಕಠಿಣಕ್ರಮ ನಿಶ್ಚಿತ ಎಂದಿದ್ದಾರೆ.ಮುಖ್ಯಮಂತ್ರಿಯವರ ನಿವಾಸದ ಸಮೀಪ ಭದ್ರತ ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿಯೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಪತ್ತೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಲಾಗುವುದು. ಅವರಿಗೆ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಲಾಗಿದೆ.ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದಾರೆ. ಅವರಲ್ಲಿ ಬೆರಳೆಣಿಕೆಯಷ್ಟು ಮಂದಿ…

Read More