-ಕೊನೆಗೂ ಬೋನಿಗೆ ಬಿದ್ದ ನರಭಕ್ಷಕ-ಆನೆಗೊಂದಿಯಲ್ಲಿ ಕಾರ್ಯಾಚರಣೆ ಯಶಸ್ವಿ ಕೊಪ್ಪಳ: ಕಳೆದ ಕೆಲವು ತಿಂಗಳುಗಳಿಂದ ತೀವ್ರ ಉಪಟಳ ಕೊಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಬಳಿಯ ಶ್ರೀ ಆದಿಶಕ್ತಿ ದುರ್ಗಾ ದೇವಿ ದೇವಸ್ಥಾನ ಸಮೀಪ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.ಚಿರತೆ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಆನೆಗೊಂದಿ ಸುತ್ತಲಿನ ಪ್ರದೇಶದಲ್ಲಿ ಬೋನು ಇಡಲಾಗಿತ್ತು. ಚಿರತೆಗೆ ಇಬ್ಬರು ಬಲಿಯಾಗಿದ್ದು ಅರಣ್ಯ ಇಲಾಖೆಯಿಂದ ಎರಡು ತಿಂಗಳಿಂದ ಚಿರತೆ ಹಿಡಿಯಲು ಪ್ರಯತ್ನ ಸಾಗಿತ್ತು. ಡಿಸೆಂಬರ್ ನಲ್ಲಿ ಚಿರತೆ ಸೆರೆಯಾಗಿದ್ದು ಕಮಲಾಪುರದ ಝೂ ಗೆ ಬಿಡಲಾಗಿತ್ತು. ಸೋಮವಾರ ಬೆಳಗಿನ ಜಾವ ಅರಣ್ಯ ಇಲಾಖೆಯ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ.ಸುಮಾರು 5 ವರ್ಷದ ಗಂಡು ಚಿರತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೋನಿಗೆ ಬಿದ್ದಿರುವ ಈ ಚಿರತೆ ನರಭಕ್ಷಕ ಎನ್ನುವುದು ಇನ್ನೂ ಖಚಿತವಾಗಿಲ್ಲ.
Author: Nammur Express Admin
-ಜನವರಿ 21ರಂದು “ಫ್ಯಾಂಟಮ್” ಸಿನಿಮಾ ಬಗ್ಗೆ ಅಪ್ ಡೇಟ್-ನಿರ್ದೇಶಕ ಅನೂಪ್ ಭಂಡಾರಿ ಟ್ವಿಟ್ಟರ್ ನಲ್ಲಿ ಮಾಹಿತಿ ಬಹು ನಿರೀಕ್ಷಿತ ಕಿಚ್ಚ ಸುದೀಪ್ ಅಭಿನಯದ “ಫ್ಯಾಂಟಮ್” ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ಸಿಕ್ಕಿರಲಿಲ್ಲ. ಇದೀಗ ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.ನಿರ್ದೇಶಕ ಅನೂಪ್ ಭಂಡಾರಿ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಜನವರಿ 21ರಂದು “ಫ್ಯಾಂಟಮ್” ಸಿನಿಮಾಗೆ ಸಂಬಂಧಿಸಿದಂತೆ ಮುಖ್ಯವಾದ ಪ್ರಕಟಣೆ ಮಾಡಲಾಗುತ್ತದೆ ಎಂದು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಹಾಗೂ #PಊಂಓಖಿಔಒUPಆಂಖಿಇಎಂಓ21 ಎಂಬ ಹ್ಯಾಷ್ಟ್ಯಾಗ್ ಸಹ ಪ್ರಮೋಟ್ ಮಾಡಿದ್ದಾರೆ.ಕನ್ನಡ ಸಿನಿಮಾಗಳು ಫ್ಯಾನ್ ಇಂಡಿಯಾ ಭಾಷೆಗಳಲ್ಲಿ ರಿಲೀಸ್ ಆಗುವ ಟ್ರೆಂಡ್ ಹೆಚ್ಚಾಗಿದೆ. ಪೊಗರು, ಯುವರತ್ನ, ರಾಬರ್ಟ್, ಕೆಜಿಎಫ್ ಎಲ್ಲವೂ ಬಹುಭಾಷೆಯಲ್ಲಿ ಬರ್ತಿದೆ. ಈ ನಿಟ್ಟಿನಲ್ಲಿ ಫ್ಯಾಂಟಮ್ ಸಿನಿಮಾ ಸಹ ಬಹುಭಾಷೆಯಲ್ಲಿ ತೆರೆಗೆ ಬರಬಹುದಾ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
-ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರೋ ಅನೈತಿಕ ದಂಧೆ -ಅಕ್ರಮಕ್ಕೆ ಕಡಿವಾಣ ಹಾಕುವಂತೆ ಮಲೆನಾಡಿಗರ ಆಗ್ರಹ ತೀರ್ಥಹಳ್ಳಿ: ತಾಲ್ಲೂಕಿನ ಬೆಜ್ಜವಳ್ಳಿ, ಕನ್ನಂಗಿ, ಹಣಗೆರೆ, ಕೋಣಂದೂರು, ಕಟ್ಟೆಹಕ್ಕಲು ಭಾಗದಲ್ಲಿ ಓಸಿ ದಂಧೆ ಜೀವ ಪಡೆಯುತ್ತಿದೆ. ಪೊಲೀಸರ ನೆರಳಿನಲ್ಲಿ ದಂಧೆ ನಡೆಯುತ್ತಿದೆ ಎನ್ನಲಾಗಿದ್ದು, ದಂಧೆಗೆ ಕಡಿವಾಣ ಹಾಕದಿದ್ದರೆ ಬಡವರ ದುಡಿಮೆ ಹಣ ಜೂಜು ಅಡ್ಡೆಯ ಪಾಲಾಗುವ ಆತಂಕ ಎದುರಾಗಿದೆ. ನಕಲಿ ನೋಟು ಚಲಾವಣೆ, ಓಸಿ ದಂಧೆ, ಅಕ್ರಮ ಮದ್ಯ ಮಾರಾಟ ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದು, ಓಸಿ ಚೀಟಿ ಬರೆಯುವವರ ಜಾಲ ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿದೆ. ಅಂತರ್ಜಾಲ ಸಂಪರ್ಕದಿಂದ ಓಸಿ ದಂಧೆ ತೀವ್ರಗೊಳ್ಳುತ್ತಿದೆ. ವಾಟ್ಸ್ಆಪ್, ಮೆಸೇಜ್ಗಳಲ್ಲಿ ಗುಪ್ತ ಸಂಖ್ಯೆಗಳನ್ನು ಕೋಡ್ವರ್ಡ್ ಮೂಲಕ ರವಾನೆ ಮಾಡಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಸಣ್ಣ ಪುಟ್ಟ ಹಳ್ಳಿಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ ಓಸಿ ಆಡುವವರಿಂದ ಹಣ ಸಂಗ್ರಹಿಸಲಾಗುತ್ತದೆ. ಪೊಲೀಸರಿಗೆ ಓಸಿ ಚಟುವಟಿಕೆಯ ಮಾಹಿತಿ ಇದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಇತ್ತೀಚೆಗಷ್ಟೆ ತೀರ್ಥಹಳ್ಳಿ ಪಟ್ಟಣದಲ್ಲಿ ₹ 200ರ ನಕಲಿ ನೋಟು ಪತ್ತೆಯಾಗಿದ್ದು, ಅಸಲಿ ನೋಟಿಗೂ ನಕಲಿ ನೋಟಿಗೂ…
-‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ’ ಕುರಿತು ಕಾರ್ಯಗಾರ -ಗೋಷ್ಠಿಯಲ್ಲಿ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳು ತೀರ್ಥಹಳ್ಳಿ: ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಜನವರಿ 20 ಹಾಗೂ 21ರಂದು ಕುಪ್ಪಳಿಯ ಹೇಮಾಂಗಣದಲ್ಲಿ ‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ’ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಲಿದೆ ಎಂದು ಕಮ್ಮಟದ ನಿರ್ದೇಶಕ ಡಾ.ಬಿ.ಎಂ. ಪುಟ್ಟಯ್ಯ ತಿಳಿಸಿದ್ದಾರೆ. ಕಾರ್ಯಾಗಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟಿಸುತ್ತಿದ್ದು, ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ. ರಮೇಶ ವಹಿಸುವರು. ಗೋಷ್ಠಿಯಲ್ಲಿ ‘ಶ್ರೀ ರಾಮಾಯಣ ದರ್ಶನಂ ಸಮಕಾಲೀನ ವಿಚಾರಗಳು’ ಕುರಿತು ಡಾ.ರಾಜೆಂದ್ರ ಬುರಡಿಕಟ್ಟಿ, ‘ಕುವೆಂಪು ಸಾಹಿತ್ಯ ವಿಮರ್ಶೆ’ ಕುರಿತು ಡಾ.ಎಚ್. ಶಶಿಕಲಾ, ‘ಕುವೆಂಪು ಕಥೆಗಳ ಮಾದರಿ’ ಬಗ್ಗೆ ಡಾ.ನಾಗಭೂಷಣ ಬಗ್ಗನಡು, ‘ಕುವೆಂಪು ಕಾವ್ಯ: ಸಮಕಾಲೀನತೆ’ ಕುರಿತು ಕಮ್ಮಟ ನಿರ್ದೇಶಕ ಡಾ.ಬಿ.ಎಂ. ಪುಟ್ಟಯ್ಯ, ‘ಕುವೆಂಪು ಸಾಹಿತ್ಯದಲ್ಲಿ ಪರಿಸರ’ದ ಬಗ್ಗೆ ಡಾ.ಲಿಂಗಪ್ಪ ಗೋನಾಳ್ ಹಾಗೂ ‘ಕುವೆಂಪು…
-ಜ.21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ ಸಮಿತಿ-ಸೋಶಿಯಲ್ ಮೀಡಿಯಾ ದುರುಪಯೋಗ ವಿಚಾರ ಡಿಜಿಟಲ್ ಡೆಸ್ಕ್ : ಸೋಶಿಯಲ್ ಮೀಡಿಯಾ ದುರುಪಯೋಗದ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆ ಫೇಸ್ ಬುಕ್ ಮತ್ತು ಟ್ವಿಟರ್ ಅಧಿಕಾರಿಗಳಿಗೆ ಭಾರತದ ಸಂಸದೀಯ ಸಮಿತಿ ಸಮನ್ಸ್ ನೀಡಿದೆ.ಐಟಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಜನವರಿ 21 ರಂದು ಫೇಸ್ಬುಕ್ ಮತ್ತು ಟ್ವಿಟರ್ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸಮಿತಿ ತಿಳಿಸಿದ್ದು,ಐಟಿ ಕುರಿತ ಸಂಸದೀಯ ಸಮಿತಿಯು ರಾಜಕೀಯ ಲಾಭಕ್ಕಾಗಿ ಫೇಸ್ಬುಕ್ ಅನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಗಮನಿಸುತ್ತಿತ್ತು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಫೇಸ್ಬುಕ್ ಮತ್ತು ಟ್ವಿಟರ್ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
-ವ್ಯಾಟ್ಸಪ್ ನಲ್ಲೂ “ಊP”ಗ್ಯಾಸ್ ಬುಕ್ಕಿಂಗ್ ಮಾಡಬಹುದು-ಆನ್ಲೈನ್ ಪೇಮೆಂಟ್ ಕೂಡ ಲಭ್ಯ ಬೆಂಗಳೂರು : ಎಚ್ ಪಿಸಿಎಲ್ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಇನ್ಮುಂದೆ ಗ್ರಾಹಕರು ವಾಟ್ಸಪ್ ಮೂಲಕವೂ ಎಚ್ ಪಿ ಗ್ಯಾಸ್ ಬುಕ್ ಮಾಡಬಹುದು ಎಂದು ತಿಳಿಸಿದೆ.ಹೌದು, ಇನ್ಮುಂದೆ ಗ್ರಾಹಕರು ಮೊಬೈಲ್ ಸಂಖ್ಯೆ 9222201122 ಸೇವ್ ಮಾಡಿಕೊಂಡು ಬುಕ್ (ಃಔಔಏ)) ಎಂದು ಸಂದೇಶ ಕಳುಹಿಸಿದರೆ ಗ್ಯಾಸ್ ಬುಕ್ ಆಗಲಿದೆ.ಹೆಚ್ಚಿನ ಮಾಹಿತಿಗಾಗಿ ಇದೇ ನಂಬರ್ ಗೆ ಹೆಲ್ಪ್ (ಊಇಐP) ಎಂದು ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು. ಜೊತೆಗೆ ಎಲ್ ಪಿಜಿ ಕೋಟಾ, ಎಲ್ ಪಿಜಿ ಐಡಿ, ಸಬ್ಸಿಡಿ ಬಗ್ಗೆಯೂ ಮಾಹಿತಿ ಸಿಗಲಿದೆ.ಗ್ಯಾಸ್ ಬುಕ್ಕಿಂಗ್ ಆದ ನಂತರ ನಿಮ್ಮ ಮೊಬೈಲ್ ಗೆ ಒನ್ ಟೈಮ್ ಪಾಸವರ್ಡ್ ಬರಲಿದ್ದು, ಈ ಪಾಸ್ ವರ್ಡ್ ಅನ್ನು ಗ್ಯಾಸ್ ತಲುಪಿಸಿದವರಿಗೂ ತಿಳಿಸಬೇಕು. ಜೊತೆಗೆ ಎಚ್ ಪಿಸಿಎಲ್ ಡಿಜಿಟಲ್ ಪೇಮೆಂಟ್ ಪರಿಚಯಿಸುತ್ತಿದ್ದು, ಇನ್ಮುಂದೆ ಗ್ರಾಹಕರು ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೇಜಾನ್ ಪೇ ಮೂಲಕ ಪೇಮೆಂಟ್ ಪಾವತಿಸಬಹುದು ಎನ್ನಲಾಗಿದೆ.
-ಚಿತ್ರರಂಗದಲ್ಲಿ ಸದ್ದು ಮಾಡಲು ಬರುತ್ತಿರುವ “ಕರಾಬು”-ಕೆಲವೇ ದಿನಗಳಲ್ಲಿ ಡೇಟ್ ಅನೌನ್ಸ್ ನಟ ಧ್ರುವ ಸರ್ಜಾ ಅಭಿನಯದ “ಪೊಗರು ಚಿತ್ರ ಇದೇ ಫೆಬ್ರವರಿಯಲ್ಲಿ ತೆರೆಗೆಬರೋದು ಬಹುತೇಕ ಖಚಿತ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು.“ಪೊಗರು’ಚಿತ್ರದ ಪ್ರಚಾರಕ್ಕೆ ಇನ್ನೂ ಸಮಯಾವಕಾಶ ಬೇಕಾಗಿರುವುದರಿಂದ, ಚಿತ್ರತಂಡ ಬಿಡುಗಡೆಯನ್ನು ಏಪ್ರಿಲ್ಗೆ ಮುಂದೂಡುವ ಯೋಚನೆಯಲ್ಲಿದೆ ಎನ್ನಲಾಗುತ್ತಿದೆ.ಏಪ್ರಿಲ್ 15 ಅಥವಾ 22ಕ್ಕೆ ತೆರೆಗೆ ತರಲು ಚಿತ್ರತಂಡ ಯೋಚಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಡೇಟ್ ಅನೌನ್ಸ್ ಮಾಡುತ್ತೇವೆ ಎನ್ನುವುದು ನಿರ್ಮಾಪಕ ಗಂಗಾಧರ್ ಅವರ ಮಾತು.
-ಗ್ರಾಹಕರಿಗೆ ಬಿಗ್ ಶಾಕ್…!-ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠಮಟ್ಟ ತಲುಪಿದ ಪೆಟ್ರೋಲ್ ಬೆಲೆ ನವದೆಹಲಿ: ಸೋಮವಾರ ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಿದ ಪರಿಣಾಮ ಇದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು, 84.70 ರೂ.ನಿಂದ 84.95 ರೂ. ತಲುಪಿದೆ. ಡೀಸೆಲ್ ಬೆಲೆ ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು 74.88 ರೂ.ನಿಂದ 75.13 ರೂಪಾಯಿ ತಲುಪಿದೆ. ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 91.6 ರೂಪಾಯಿಗೆ ಏರಿಕೆಯಾಗಿದ್ದು, ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್ 84.95 ರೂ., ಡೀಸೆಲ್ 75.13 ರೂ., ಇದೆ. ಮುಂಬೈನಲ್ಲಿ ಪೆಟ್ರೋಲ್ 91.56 ರೂ., ಡೀಸೆಲ್ 81.87 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ 87.63 ರೂ., ಡೀಸೆಲ್ 80.43 ರೂ. ಇದೆ. ಕೊಲ್ಕೊತ್ತಾದಲ್ಲಿ ಪೆಟ್ರೋಲ್ 86.39…
-ರಾಜ್ಯದ 6 ಮಹಾನಗರ ಪಾಲಿಕೆಗಳಿಗೆ ಅನಾಥ ಸ್ಥಿತಿ-ಶಾಸಕರು, ಸಚಿವರು ಹಾಗೂ ಅಧಿಕಾರಿಗಳದ್ದೇ ದರ್ಬಾರು ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಆರು ಮಹಾನಗರ ಪಾಲಿಕೆಗಳು ಅನಾಥ ಸ್ಥಿತಿ ಅನುಭವಿಸುತ್ತಿವೆ. ಸರಕಾರಗಳು ವಾರ್ಡ್ ಪುನರ್ ವಿಂಗಡಣೆ, ಮೀಸಲು ನಿಗದಿ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನೇ ನಡೆಸದೆ ಕಾಲಹರಣ ಮಾಡುತ್ತಿದ್ದು, ಚುನಾಯಿತ ಪ್ರತಿನಿಧಿಗಳಿಲ್ಲದೆ ಜನರೂ ಸಂಕಟಪಡುವಂತಾಗಿದೆ. ಕೆಲವು ಪಾಲಿಕೆಗಳಲ್ಲಿ 22 ತಿಂಗಳಿನಿಂದ ಚುನಾಯಿತ ಆಡಳಿತವಿಲ್ಲ. ರಾಜ್ಯದ ಹತ್ತು ಪಾಲಿಕೆಗಳ ಪೈಕಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಆಡಳಿತಾಧಿಕಾರಿಗಳದೇ ದರ್ಬಾರ್ ನಡೆಯುತ್ತಿದೆ. ಅಧಿಕಾರಿಗಳ ಮೂಲಕ ಸ್ಥಳೀಯ ಶಾಸಕರು, ಸಚಿವರು ತಮ್ಮ ‘ಅಧಿಕಾರದ ದರ್ಪ’ ಮೆರೆಯುತ್ತಿದ್ದಾರೆ. ಸಕಾಲಕ್ಕೆ ಚುನಾವಣೆ ನಡೆಸದೆ ಇರುವುದು ಸಂವಿಧಾನದ 74ನೇ ತಿದ್ದುಪಡಿಯಡಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಹಾಗೂ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾಗಿದೆ.ಪಾಲಿಕೆ, ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಎಲ್ಲ ಪಕ್ಷಗಳ ಪಾಲೂ ಇದೆ. ಆಡಳಿತ ನಡೆಸುವ ಪ್ರತಿಯೊಂದು ಪಕ್ಷವೂ ಆಯಾ ಕಾಲಘಟ್ಟಕ್ಕೆ…
-ತೋಟಗಾರಿಕೆ ಇಲಾಖೆಯಿಂದ ಮಹತ್ವದ ನಿರ್ಧಾರ-ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಬಂದ್ ಬೆಂಗಳೂರು, ಜನವರಿ 18: ತೋಟಗಾರಿಕಾ ಇಲಾಖೆ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ವರ್ಷ ಸಣ್ಣ ಪ್ರಮಾಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ರೂಪಾಂತರಿ ಕೊರೊನಾ ಭೀತಿಯು ಜನರಲ್ಲಿ ಕಾಡುತ್ತಿದ್ದು, ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಲಾಲ್ಬಾಗ್ನಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ನಡೆಸದಂತೆ ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.ಜೊತೆಗೆ ಮೈಸೂರು ಉದ್ಯಾನ ಕಲಾಸಂಘ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸುವುದು ಬೇಡ ಎಂದು ಹೇಳಿತ್ತು. ತೋಟಗಾರಿಕೆ ಸಚಿವ ನಾರಾಯಣಗೌಡ ಅವರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆಗಸ್ಟ್ನಲ್ಲಿಯೂ ಪ್ರದರ್ಶನ ರದ್ದಾಗಿತ್ತು, ಅಲ್ಲದೆ ಎರಡು ಮೂರು ತಿಂಗಳ ಮೊದಲೇ ಪೂರ್ವ ಸಿದ್ಧತೆಗಳು ನಡೆಯಬೇಕಿತ್ತು.ಈ ಬಾರಿ ಸಿದ್ಧತೆಗಳನ್ನು ನಡೆಸಲಾಗಿಲ್ಲ.ಹಣವೂ ಇಲ್ಲ ಸರಳವಾಗಿ ಮಾಡಿದರೆ ಜನ ಬರುವುದು ಅನುಮಾನ, ಹೀಗಾಗಿ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮನವಿ ಮಾಡಲಾಗಿತ್ತು ಎಂದು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.