ಹೊಸ ಚಿತ್ರ ಹೀರೋಗೆ ಚಾಲನೆ: ಹೊಸ ಟ್ರೆಂಡ್… ಸಿನಿಮಾ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್.ಇನ್ಸ್ಯಾಂಡಲ್‍ವುಡ್‍ಗೆ ಸದಭಿರುಚಿಯ ಚಿತ್ರಗಳನ್ನು ನೀಡುವ ಮೂಲಕ ಸದ್ದು ಮಾಡಿರುವ ರಿಷಬ್ ಶೆಟ್ಟಿ ಇದೀಗ ಮತ್ತೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.ರಿಷಬ್ ಶೆಟ್ಟಿ ನಟಿಸಿರುವ “ಹೀರೊ” ಸಿನಿಮಾದ ಟ್ರೇಲರ್ ಸಂಕ್ರಾಂತಿಯಂದು ಬಿಡುಗಡೆ ಆಗಿದೆ. ರಿಷಬ್ ಶೆಟ್ಟಿ ನಾಯಕನಾಗಿರುವ ಈ ಸಿನಿಮಾಗೆ ಮೊಟ್ಟ ಮೊದಲ ಬಾರಿಗೆ ಭರತ್ ರಾಜ್ ನಿರ್ದೇಶನ ಮಾಡಿದ್ದಾರೆ. ಲಾಕ್ ಡೌನ್ ನಂತರ ಸಿನಿಮಾ ಶೂಟಿಂಗ್ ನಡೆದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಮೂಲಕ ಮತ್ತೆ ಹೊಸ ಭರವಸೆ ಮೂಡಿಸಿದ್ದಾರೆ.
Author: Nammur Express Admin
ವಿದೇಶಿ ಮಹಿಳೆಯ ಖತರ್‍ನಾಕ್ ಪ್ಲಾನ್ಎಟಿಎಂನಿಂದ 17 ಲಕ್ಷ ವಂಚನ: ಬಂಧನ ಬೆಂಗಳೂರು: ಎಟಿಎಂ ಮಷಿನ್‍ಗಳಿಗೆ ಡಿವೈಸ್ ಅಳವಡಿಸಿ ವಿವಿಧ ಗ್ರಾಹಕರ ಖಾತೆಗಳಿಂದ 17 ಲಕ್ಷ ರೂ. ಕಳವು ಮಾಡಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರು ಪೆÇೀಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸ್ಪೇನ್‍ನ ಸೇಫಿನಿ ಎಂದು ಗುರುತಿಸಲಾಗಿದೆ. ಈಕೆ ಡಿಅವೈಸ್ ಉಪಯೋಗಿಸಿ ಎಟಿಎಂ ಕೇಂದ್ರಗಳಿಂದ ವಿವಿಧ ಗ್ರಾಹಕರ ಖಾತೆಗಳಲ್ಲಿದ್ದ 17 ಲಕ್ಷ ರೂ. ಕಳವು ಮಾಡಿದ್ದಾಳೆ. ಶಿವರಾಮ ಕಾರಂತ ನಗರದ ಎಸ್.ಬಿ.ಐ. ಎಟಿಎಂಗೆ 1500 ರೂ. ಡ್ರಾ ಮಾಡಲು ಹೋಗಿದ್ದ ಗ್ರಾಹಕರಿಗೆ ಎಟಿಎಂನಿಂದ 1 ಲಕ್ಷ ಹಣ ಬಂದಿದ್ದು ಕಂಡು ಗಾಬರಿಯಾಗಿದೆ. ಆತ ತಕ್ಷಣ ಬ್ಯಾಂಕ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ತಕ್ಷಣ ಸ್ಥಳಕ್ಕೆ ಧಾವಿಸಿದ ಬ್ಯಾಂಕ್ ಸಿಬ್ಬಂದಿಗಳ ತಂಡ ಮತ್ತೊಮ್ಮೆ ಅದೇ ಡೆಬಿಟ್ ಕಾರ್ಡ್ ಬಳಸಿ 1500 ವಿತ್ ಡ್ರಾ ಮಾಡಿದಾಗ ಎಟಿಎಂನಿಂದ ಅದೇ ಮೊತ್ತದ ಹಣ ಬಂದಿದೆ. ಅದಾಗಿ ಮರುದಿನ ಸ್ಥಳಕ್ಕಾಗಮಿಸಿದ ತಾಂತ್ರಿಕ ಸಿಬ್ಬಂದಿಗಳ ತಂಡಕ್ಕೆ ಎಟಿಎಂನಲ್ಲಿ ಬೇರೆ ಡಿವೈಸ್ ಇರುವುದು ಗೊತ್ತಾಗಿದೆ.…
ರಾಜ್ಯಾದ್ಯಂತ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆಯಾವುದೇ ಅಡ್ಡ ಪರಿಣಾಮ ಇಲ್ಲ: ಸಚಿವ ಬೆಂಗಳೂರು/ಚಿಕ್ಕಬಳ್ಳಾಪುರ: ಮಾರಕ ರೋಗ ಕರೋನಾಕ್ಕೆ ಈಗ ಲಸಿಕೆ ಸಿಕ್ಕಿದೆ. ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆದಿದೆ, ಈ ನಡುವೆ ಈ ವಾರದಿಂದ ರಾಜ್ಯಾದ್ಯಂತ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ದಿನವೇ 62% ಮಂದಿಗೆ ಲಸಿಕೆ ನೀಡಿರುವುದು ಆಶಾದಾಯಕವಾಗಿದೆ. ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ. ಡಾ.ಸುದರ್ಶನ್ ಬಲ್ಲಾಳ್ ಅವರು ಲಸಿಕೆ ಪಡೆದಿದ್ದು, ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ಜನರು ಲಸಿಕೆಯ ಮೇಲೆ ವಿಶ್ವಾಸವಿಡಬೇಕು. ಲಸಿಕೆ ಪಡೆದರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎರಡನೇ ಡೋಸ್ ಪಡೆದ 10 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಬರುತ್ತದೆ. ಅಲ್ಲಿಯವರೆಗೂ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು. ಮಣಿಪಾಲ್…
ಕಲಬುಗಿಯ ಸೇಡಂನಲ್ಲಿ 4.22 ಲಕ್ಷ ಪತ್ತೆಕಂತೆ ಕಂತೆ ಖೋಟಾ ನೋಟು: ಓರ್ವ ಅರೆಸ್ಟ್! ಕಲಬುರಗಿ: ಕಂತೆ ಕಂತೆ ಖೋಟಾ ನೋಟುಗಳನ್ನು ಬ್ಯಾಗಿನಲ್ಲಿಟ್ಟು ಬೇರೆಡೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಕಲಬುರಗಿ ಪೆÇೀಲೀಸರು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಲವೆಡೆ ಕಳ್ಳ ನೋಡು ದಂಧೆ ಸಕ್ರೀಯವಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಿದೆ. ಈ ಹಿನ್ನೆಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಸೇಡಂ ಆಶ್ರಯ ಕಾಲೋನಿ ನಿವಾಸಿ ಚಿನ್ನಸಾಬ ಮಳಗಿ ಎಂದು ಗುರುತಿಸಲಾಗಿದೆ. ಈತನಿಂದ 500, 200 ಮತ್ತು 100 ರೂಪಾಯಿ ಮುಖ ಬೆಲೆಯ 4.22 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಒಂದು ಬೈಕ್ ಹಾಗೂ ಮೊಬೈಲ್ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಖೋಟಾನೋಟು ಎಲ್ಲಿ ತಯಾರಾಗುತ್ತಿತ್ತು? ಅದನ್ನೆಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನುವ ಬಗ್ಗೆ ಹೆಚ್ಚಿನ ತನಿಖೆಯಿಂದ ತಿಳಿಯಬೇಕಿದೆ. ಈ ಮೂಲಕ ಮತ್ತೆಕಳ್ಳ ನೋಟು ಸದ್ದು ಮಾಡಿದೆ.
-ಸಹೋದರರಿಗೆ ಸಾಂತ್ವನ ಹೇಳಿದ ಕ್ರಿಕೆಟಿಗರು-ಸಹೋದರರ ಕ್ರಿಕೆಟ್ ಏಳಿಗೆಗೆ ಅಪಾರವಾದ ಕೊಡುಗೆ ವಡೋದರ: ಟೀಮ್ ಇಂಡಿಯಾದ ಆಲ್-ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರ ತಂದೆ ಹಿಮಾಂಶು (71 ವರ್ಷ) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. ಸಹೋದರರು ಕ್ರಿಕೆಟ್ ಬದುಕಿನಲ್ಲಿ ಕಂಡ ಏಳ್ಗೆಗೆ ಹಿಮಾಂಶು ಅಪಾರವಾದ ಕೊಡುಗೆಗಳನ್ನು ನೀಡಿದ್ದರು.ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡ ತಂಡವನ್ನು ಮುನ್ನಡೆಸುತ್ತಿದ್ದ ಕೃನಾಲ್ ಪಾಂಡ್ಯ, ತಂದೆಯ ನಿಧನದ ಹಿನ್ನೆಲೆಯಲ್ಲಿ ಟೂರ್ನಿಯ ಬಯೋ-ಬಬಲ್ ತೊರೆದು ನಿರ್ಗಮಿಸಿದ್ದಾರೆ. ಈ ಟೂರ್ನಿಯಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಮುಂಬರುವ ಇಂಗ್ಲೆಂಡ್ ವಿರುದ್ಧದ ತವರಿನ ಸೀಮಿತ ಓವರ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದರು. ಪಾಂಡ್ಯ ಸಹೋದರರ ಸಹ-ಆಟಗಾರರು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬರೋಡದವರೇ ಆದ ಮಾಜಿ ಆಲ್-ರೌಂಡರ್ ಗಳಾದ ಇರ್ಫಾನ್-ಯೂಸುಫ್ ಪಠಾಣ್ ಸಹೋದರರು, ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತಿತರರು ಪಾಂಡ್ಯ ಸಹೋದರರಿಗೆ ಸಾಂತ್ವಾನ ಹೇಳಿದ್ದಾರೆ.
-ಮನಸ್ಸನ್ನು ಉಲ್ಲಾಸವಾಗಿಸೋ ನಡಿಗೆ -ಆರೋಗ್ಯ ಸದೃಢವಾಗಿರಿಸಲು ಸರಳ ಸೂತ್ರ ಆರೋಗ್ಯವೇ ಭಾಗ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ, ಕೆಲಸ, ಮಾಡಲು ಅನುಕೂಲವಾಗುತ್ತದೆ.ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಅನೇಕರು ಶ್ರಮ ವಹಿಸುತ್ತಾರೆ.ವ್ಯಾಯಾಮ, ಯೋಗ, ಜಿಮ್ ಮೊದಲಾದವುಗಳ ಮೂಲಕ ಸದೃಢ ಆರೋಗ್ಯ ಕಂಡುಕೊಳ್ಳುತ್ತಾರೆ. ಇದರೊಂದಿಗೆ ವಾಕಿಂಗ್ ಮಾಡುವುದರಿಂದಲೂ ಹಲವು ಪ್ರಯೋಜನಗಳಿವೆ. ನಡಿಗೆ ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸದಿಂದ ಇಡುತ್ತದೆ.ಬೆಳಿಗ್ಗೆ ಮತ್ತು ಸಂಜೆ ವಾಕ್ ಮಾಡುವುದರಿಂದ ಜಡತ್ವ ದೂರವಾಗುತ್ತದೆ. ಇದರಿಂದ ದಿನವಿಡೀ ಉತ್ಸಾಹವಿರುತ್ತದೆ. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ವಾಕಿಂಗ್ ಒಳ್ಳೆಯದು. ವಾಕಿಂಗ್ ಜೊತೆಗೆ ಸರಳ ವ್ಯಾಯಾಮ ಮಾಡುವುದರಿಂದಲೂ ಅನುಕೂಲವಾಗುತ್ತದೆ. ಯುವಕರು, ವಯಸ್ಕರು, ಹಿರಿಯರಿಗೂ ವಾಕಿಂಗ್ ನಿಂದ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಾರೆ.
-ಸ್ಥಳದಲ್ಲೇ ಕಾರನ್ನು ಬಿಟ್ಟು ಯುವಕ ಯುವತಿ ಪರಾರಿ-ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜು ಬೆಂಗಳೂರು: ನಗರದ ಮೈಸೂರು ರೋಡ್ನ ಸಿರ್ಸಿ ಸರ್ಕಲ್ ಬಳಿ ಐಷಾರಾಮಿ ಕಾರ್ವೊಂದು ಅಪಘಾತಕ್ಕೀಡಾಗಿದ್ದು, ಡ್ರೈವರ್ ಕುಡಿದ ಮತ್ತಿನಲ್ಲಿದ್ದದ್ದೇ ಈ ಅಪಘಾತಕ್ಕೆ ಕಾರಣ ಇರಬಹುದು ಎನ್ನಲಾಗಿದೆ.ಮೈಸೂರು ರೋಡ್ ಫೈಓವರ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಘಟನೆ ನಡೆದ ವೇಳೆ ಕಾರಿನಲ್ಲಿದ್ದ ಯುವಕ-ಯುವತಿಗೆ ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದ್ದು, ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಮದ್ಯದ ಬಾಟಲ್ಗಳು ಪತ್ತೆಯಾಗಿವೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಚಿಕ್ಕಪೇಟೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ಸಾವಿರ ಪಕ್ಷಿಗಳ ವಧೆಕೋಳಿ ಸಾಕಾಣೆ ಕೂಡ ನಿಲ್ಲಿಸುವಂತೆ ಸೂಚನೆ ಔರಂಗಬಾದ್: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಸುಮಾರು ಎರಡು ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವರು.ಮಹಾರಾಷ್ಟ್ರದ ಪರ್ಭನಿ ಮತ್ತು ಬೀಡ್ ಜಿಲ್ಲೆಗಳ ಎರಡು ಗ್ರಾಮಗಳಲ್ಲಿ ಕೋಳಿಗಳು ಹಕ್ಕಿಜ್ವರದಿಂದ ಮೃತಪಟ್ಟಿದ್ದು, ಇದರಿಂದ ಇಲ್ಲಿ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ. ಕೋಳಿ ಸಾಕಾಣೆ ಕೂಡ ನಿಲ್ಲಿಸುವಂತೆ ಇಲ್ಲಿನವರಿಗೆ ಸೂಚನೆ ನೀಡಲಾಗಿದೆ.ಶನಿವಾರ ಎರಡು ಗ್ರಾಮದ ಸುಮಾರು ಎರಡು ಸಾವಿರ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವರು.
-ಇದು ಯಾವುದಕ್ಕೆ ಒಳ್ಳೆಯದು?-ಇಲ್ಲಿದೆ ಸಂಪೂರ್ಣ ಮಾಹಿತಿ ಸಾಮಾನ್ಯವಾಗಿ ಗ್ರೀನ್ ಟೀ, ಜಿಂಜರ್ ಟೀ, ಲೆಮೆನ್ ಟೀ ಈ ತರಹದ ಟೀ ಗಳನ್ನು ಕೇಳಿದ್ದೇವೆ. ಆದರೆ ಇಲ್ಲಿ ನೀವು ಕೇಳದೇ ಇರುವ ರೋಸ್ ಟೀ ಬಗ್ಗೆ ತಿಳಿದುಕೊಳ್ಳಿ..ರೋಸ್ ಟೀ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೋಸ್ ಟೀಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಬಹುದು. ಕೆಮ್ಮು ಮತ್ತು ಶೀತ ನಿವಾರಕ ಗುಣವಿರುವ ರೋಸ್ ಟೀ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮನೆಯಲ್ಲಿ ಗುಲಾಬಿ ಹೂವುಗಳಿದ್ದರೆ ರೋಸ್ ಟೀ ಯನ್ನು ಸುಲಭವಾಗಿ ತಯಾರಿಸಬಹುದು. ತಾಜಾ ಹೂವಿನ ಎಸಳುಗಳನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ. ಹತ್ತು ನಿಮಿಷ ಕುದಿದ ಬಳಿಕ ಸೋಸಿ. ಸಕ್ಕರೆ ಬದಲು ಬೆಲ್ಲ ಸೇರಿಸಿ ಕುಡಿಯಬಹುದು.ಮಳಿಗೆಯಿಂದ ತಂದ ಗುಲಾಬಿಯಾದರೆ ಎಸಳನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಮನೆಯಲ್ಲಿ ಹೆಚ್ಚು ಗುಲಾಬಿ ಅರಳಿದ್ದರೆ ಅದನ್ನು ಬಿಸಿಲಿನಲ್ಲಿ ಒಣಗಿಸಿ ತೆಗೆದಿಡಿ. ಬೇಕಾದಾಗ ನೀರಿಗೆ ಹಾಕಿ ಕುದಿಸಿ ತಾಜಾ ಚಹಾ ತಯಾರಿಸಬಹುದು. ಈ ಟೀಯನ್ನು ಎಲ್ಲಾ…
-ಮೊಡವೆಯುಕ್ತ ಚರ್ಮಕ್ಕೆ ಬೈ ಬೈ ಹೇಳಿ-ಇಲ್ಲಿದೆ ಸೂಪರ್ ಟಿಪ್ಸ್ ಮುಖದಲ್ಲಿ ಮೊಡವೆಗಳಾದಾಗ ಅದು ಬೇಗನೆ ಗುಣಮುಖವಾಗುವುದಿಲ್ಲ, ಗುಣವಾದರೂ ಮುಖದಲ್ಲಿ ಕಲೆಯನ್ನು ಹಾಗೆಯೇ ಉಳಿಸಿಬಿಡುತ್ತದೆ.ಮುಖದಲ್ಲಿ ಮೊಡವೆಗಳಾದರೆ ಯಾರಿಗೂ ಇಷ್ಟವಾಗೋದಿಲ್ಲ. ಮೊಡವೆಗಳ ಚರ್ಮವನ್ನು ನಿಭಾಯಿಸುವುದು ಒಂದು ಸಮಸ್ಯೆಯಾಗಿಬಿಟ್ಟಿದೆ. ನೀವು ಮೊಡವೆಗಳ ವಿರುದ್ಧ ಹೋರಾಡಿದರೂ, ಕಿರಿಕಿರಿಯಾಗುವುದಂತೂ ಖಂಡಿತ.ಬಿಸಿಲಿಗೆ ಮೊಡವೆ ಗುರುತುಗಳು ಇನ್ನು ಹೆಚ್ಚಾಗಬಹುದು. ಈ ಗುರುತುಗಳನ್ನು ತಪ್ಪಿಸಲು ನೀವು ಪ್ರತಿದಿನ ಮನೆಯಿಂದ ಹೊರಗೆ ಹೋಗುವಾಗ ಸನ್ಸ್ಕ್ರೀನ್ ಹಚ್ಚಿಕೊಳ್ಳುವುದನ್ನು ಮರೆಯದಿರಿ. ಎಎಚ್ಎ (ಆಲ್ಫಾ ಹೈಡ್ರಾಕ್ಸಿ ಆಸಿಡ್), ಗ್ಲೈಕೋಲಿಕ್ ಆಸಿಡ್, ಬಿಎಚ್ಎ (ಬೀಟಾ ಹೈಡ್ರಾಕ್ಸಿ ಆಸಿಡ್) ಮತ್ತು ಸ್ಯಾಲಿಸಿಲಿಕ್ ಆಮ್ಲದೊಂದಿಗೆ ಚರ್ಮದ ರಕ್ಷಣೆಯ ಉತ್ಪನ್ನಗಳನ್ನು ನೋಡಿ. ಕ್ಲೆನ್ಸರ್ ನಿಂದ ಎಕ್ಸ್ಫೋಲಿಯೇಟರ್ಗಳವರೆಗೆ, ಈ ಪದಾರ್ಥಗಳನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಚರ್ಮವನ್ನು ಪುನರ್ಯೌವನಗೊಳಿಸಬಹುದು.ಆಸ್ಕೋರ್ಬಿಕ್ ಆಮ್ಲ, ವಿಟಮಿನ್ ಸಿ ಚರ್ಮದ ಸ್ಪಷ್ಟತೆಯನ್ನು ಸುಧಾರಿಸಲು ಅದ್ಭುತಗಳನ್ನು ಮಾಡುತ್ತದೆ. ಇದು ಸ್ವತಂತ್ರ ಆಮೂಲಾಗ್ರ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಮೇಲೆ ವರ್ಣದ್ರವ್ಯದ ಕಲೆಗಳನ್ನು ಮಸುಕಾಗಿಸುತ್ತದೆ.