-ಇಂದಿನಿಂದ ರಾಜ್ಯ ಪ್ರವಾಸ-ಸಂಜೆ ಕೋರ್ ಕಮಿಟಿ ಸಭೆಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದು, ಅಮಿತ್ ಶಾ ಅವರು ಸಂಜೆ 4.40ರ ಬಳಿಕ ವಿಧಾನಸೌಧದಲ್ಲಿ ಅಧಿಕೃತ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆಸಚಿವ ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ತಲೆದೋರಿರುವ ಗೊಂದಲದ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಅಧಿಕೃತ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಶನಿವಾರ ಆಗಮಿಸಲಿದ್ದಾರೆ.ಭದ್ರಾವತಿಯಲ್ಲಿ ಕೇಂದ್ರ ಕ್ಷಿಪ್ರ ಕಾರ್ಯಪಡೆ(ಆರ್ಎಎಫ್) ಘಟಕಕ್ಕೆ ಶಂಕುಸ್ಥಾಪನೆ, ಬೆಂಗಳೂರಿನಲ್ಲಿ ಪೊಲೀಸ್ ವಸತಿ ಗೃಹಗಳ ಸಮರ್ಪಣೆ, ಬಾಗಲಕೋಟೆಯಲ್ಲಿ ಎಥೆನಾಲ್ ಘಟಕಕ್ಕೆ ಭೂಮಿ ಪೂಜೆ ಹಾಗೂ ಬೆಳಗಾವಿಯ ಜನಪ್ರತಿನಿಧಿ ಸಮಾವೇಶದಲ್ಲಿ ಭಾಗಿಯಾಗಲು ಅಮಿತ್ ಶಾ ಬರುತ್ತಿದ್ದಾರೆ.ಈ ಅವಧಿಯಲ್ಲಿ ಪಕ್ಷದ ಪ್ರಮುಖ ನಾಯಕರನ್ನೂ ಭೇಟಿಯಾಗಲಿದ್ದಾರೆ. ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಬೆಳಗಾವಿಯಲ್ಲಿ ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಯಲಿದೆ. ಹಾಗಾಗಿ ರಾಜಕೀಯವಾಗಿಯೂ ಅಮಿತ್ ಶಾ ಭೇಟಿಗೆ ಮಹತ್ವ ಬಂದಂತಾಗಿದೆ.
Author: Nammur Express Admin
-ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅಧ್ಯಕ್ಷರೇ?-ಜನವರಿ 22ಕ್ಕೆ ನಿರ್ಧಾರಬೆಂಗಳೂರು: ಹಾವೇರಿಯಲ್ಲಿ ಫೆ. 26ರಿಂದ 28ರವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕವಿ ಹಾಗೂ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ನಾಡೋಜ ಡಾ. ಮನು ಬಳಿಗಾರ್ ಅಧ್ಯಕ್ಷಾವಧಿಯಲ್ಲಿ ಈಗಾಗಲೇ ನಾಲ್ಕು ಬಾರಿ ಸಮ್ಮೇಳನ ನಡೆದಿದ್ದು, ಬ್ರಾಹ್ಮಣ, ಲಿಂಗಾಯತ ಸೇರಿದಂತೆ ಪ್ರಮುಖ ಸಮುದಾಯಗಳ ಮುಖಂಡರಿಗೆ ಆ ಸ್ಥಾನ ನೀಡಲಾಗಿದೆ. ಹೀಗಾಗಿ, ಈ ವರ್ಷ ಗೌಡ ಸಮುದಾಯಕ್ಕೆ ಆ ಪಟ್ಟ ಒಲಿಯಬೇಕಿದ್ದು, ಮುಂಚೂಣಿಯಲ್ಲಿ ದೊಡ್ಡರಂಗೇಗೌಡರ ಹೆಸರು ಕೇಳಿಬರುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಜ.22ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಅಂದು ಮಧ್ಯಾಹ್ನ ಕಸಾಪದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು.
-ಪ್ರಧಾನಿ ನರೇಂದ್ರ ಮೋದಿಗೆ, ದೇಶದ ಎಲ್ಲ ಜನತೆಗೆ ಅಭಿನಂದನೆ ಸಲ್ಲಿಸಿದ ಸಿ.ಎಂಬೆಂಗಳೂರು: ಕೋವಿಡ್ ಲಸಿಕೆ ಪಡೆದುಕೊಳ್ಳಲು ಜನರು ಯಾವುದೇ ರೀತಿಯಲ್ಲಿ ಭಯ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿಸಿದರು. ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 243 ಕಡೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ದೇಶದ ಎಲ್ಲ ಜನ ಅಭಿನಂದನೆ ಸಲ್ಲಿಸುತ್ತೇವೆ, ಅವರ ಪರಿಶ್ರಮದಿಂದ ಭಾರತದಲ್ಲೇ ತಯಾರಾದ ಲಸಿಕೆ ಜನರಿಗೆ ದೊರಕುವಂತಾಗಿದೆ. ಕೋವಿಡ್ ನಿಂದ ಸಿಕ್ಕಿ ನರಳುತ್ತಿದ್ದ ಜನರ ಪ್ರಾಣ ಉಳಿಸಲು ಕೆಲಸದಲ್ಲಿ ಮೋದಿ ಯಶಸ್ವಿ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-ರಾಜ್ಯದಲ್ಲಿ ಫಸ್ಟ್ ಡೇ 24,300 ಮಂದಿಗೆ ಲಸಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಳಗ್ಗೆ 10.30ಕ್ಕೆ ಚಾಲನೆಬೆಂಗಳೂರು: ಮಹಾಮಾರಿ ಕೊರೋನಾ ದ ಆರ್ಭಟವು ದಿನೇ ದಿನೇ ಹೆಚ್ಚಾಗಿದ್ದು, ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ಒಟ್ಟು 3 ಲಕ್ಷ ಮಂದಿ ಮೊದಲ ದಿನ ಲಸಿಕೆ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ 24,300 ಜನರಿಗೆ ವ್ಯಾಕ್ಸಿನ್ ದೊರೆಯಲಿದೆ.ಸೋಂಕಿನ ಮೊದಲ ಪ್ರಕರಣ ಕಾಣಿಸಿಕೊಂಡ ಬರೋಬ್ಬರಿ 10 ತಿಂಗಳು 8 ದಿನಗಳ ಬಳಿಕ ನಡೆಯುತ್ತಿರುವ ಈ ಲಸಿಕಾ ಅಭಿಯಾನದ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ರಾಜ್ಯದಲ್ಲಿ 243 ಕೇಂದ್ರಗಳು ಲಸಿಕೆ ವಿತರಣೆಗೆ ಸರ್ವ ರೀತಿಯಲ್ಲಿಸಜ್ಜಾಗಿವೆ. ಮೂರು ಹಂತಗಳಲ್ಲಿನಡೆಯುವ ಲಸಿಕೆ ವಿತರಣೆಯ ಮೊದಲ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ.ರಾಜ್ಯದ ಮೊದಲ ಲಸಿಕೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಗ್ರೂಪ್ ಡಿ ದರ್ಜೆ ನೌಕರ/ಪೌರ ಕಾರ್ಮಿಕ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಲಸಿಕೆ ಪಡೆದವರು ಅರ್ಧ ತಾಸು ಲಸಿಕೆ…
-ಆಸ್ಟ್ರೇಲಿಯಾ 369ಕ್ಕೆ ಆಲೌಟ್ -ಭಾರತಕ್ಕೆ ಆರಂಭಿಕ ಆಘಾತ ಬ್ರಿಸ್ಬೇನ್: ಆಸ್ಟ್ರೇಲಿಯಾ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ 369 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಭಾರತದ ಪರ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 3 ವಿಕೆಟ್ ಪಡೆದರು. ಟಿ. ನಟರಾಜನ್ ಕೂಡ 3 ವಿಕೆಟ್ ಪಡೆದು ಮಿಂಚಿದರು. ನಿನ್ನೆ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಇಂದು ಕೂಡ ಉತ್ತಮ ಆಟ ಪ್ರದರ್ಶಿಸಿತ್ತು. ನಾಯಕ ಟಿಮ್ ಪೆನ್ 50 ರನ್ ಗಳಿಸಿದರೆ, ಕೆಮರೂನ್ ಗ್ರೀನ್ 47, ನಾಥನ್ ಲಯೋನ್ 22, ಸ್ಟಾರ್ಕ್ 22 ರನ್ ಗಳಿಸಿದರು. ವಿರಾಮದ ನಂತರ ಆಡಲಿಳಿದ ಭಾರತಕ್ಕೆ ಆರಂಭದಲ್ಲೆ ಆಘಾತ ಎದುರಾಗಿದೆ. 1 ಬೌಂಡರಿ ಸಿಡಿಸಿ ಲಯ ಕಂಡುಕೊಳ್ಳುವ ಮೊದಲೇ ಶುಭ್ ಮನ್ ಗಿಲ್ ಸ್ಟೀವನ್ ಸ್ಮಿತ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ. ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದಾರೆ.
-ನಟರಾಜನ್ ಬೌಲಿಂಗ್ಗೆ ಝಹೀರ್ ಖಾನ್ ಫುಲ್ ಫಿದಾ!-ಪ್ರಥಮ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಿತ್ತ ಎಡಗೈ ವೇಗಿ ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ವೃತ್ತಿ ಜೀವನ ಆರಂಭಿಸಿದ ಮೊದಲನೇ ದಿನವೇ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ ಎಡಗೈ ವೇಗಿ ಟಿ ನಟರಾಜನ್ ಅವರನ್ನು ಭಾರತ ತಂಡದ ಮಾಜಿ ವೇಗಿ ಝಹೀರ್ ಖಾನ್ ಗುಣಗಾನ ಮಾಡಿದ್ದಾರೆ.ಕಳೆದ ಮೂರು ತಿಂಗಳು ತಮಿಳುನಾಡು ಮೂಲದ ಎಡಗೈ ವೇಗಿ ಟಿ ನಟರಾಜನ್ ಪಾಲಿಗೆ ಅದ್ಭುತ ದಿನಗಳು, ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ವಿಮಾನವೇರಿದ್ದ ಯುವ ವೇಗಿ ಓಡಿಐ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಶುಕ್ರವಾರ ನಟರಾಜನ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಭಾರತದ 300ನೇ ಆಟಗಾರ ಎನಿಸಿಕೊಂಡರು. ಅಲ್ಲದೆ, ಝಹಿರ್ ಖಾನ್ ಬಳಿಕ ದೀರ್ಘಾವಧಿ ಕ್ರಿಕೆಟ್ನಲ್ಲಿ ಭಾರತದ ಪ್ರತಿನಿಧಿಸಿದ ಮೊದಲ ಎಡಗೈ ವೇಗಿ ಎಂಬ ಗೌರವಕ್ಕೆ ಭಾಜನರಾದರು.ನಟರಾಜನ್ ಚೊಚ್ಚಲ ಪ್ರವೇಶದ ಪ್ರಥಮ ಇನಿಂಗ್ಸ್ನಲ್ಲಿಯೇ ಮೂರು ವಿಕೆಟ್ ಉರುಳಿಸಿದ್ದು ವಿಶೇಷವಾಗಿತ್ತು.. .
-ಗೋವಾ ಚಿತ್ರೋತ್ಸವಕ್ಕೆ ಕಿಚ್ಚ ಮುಖ್ಯ ಅತಿಥಿ-ಪಣಜಿಯಲ್ಲಿ ನಡೆಯುವ ಪ್ರತಿಷ್ಟಿತ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ ನಡೆಯುವ 51ನೇ ವರ್ಷದ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ ಜ.16ರಿಂದ ಆರಂಭವಾಗುತ್ತಿದೆ. ಈ ಪ್ರತಿಷ್ಠಿತ ಚಿತ್ರೋತ್ಸವವನ್ನು ನಟ ಕಿಚ್ಚ ಸುದೀಪ್ ಉದ್ಘಾಟನೆ ಮಾಡಲಿದ್ದಾರೆ. ಈ ಅವಕಾಶ ಪಡೆದ ಕನ್ನಡದ ಏಕೈಕ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ ಎಂಬುದು ವಿಶೇಷ. ಜ.16ರಿಂದ ಜ.24ರವರೆಗೆ ಈ ಚಿತ್ರೋತ್ಸವ (IಈಈI) ನಡೆಯಲಿದ್ದು ಅದರ ಉದ್ಘಾಟನಾ ಸಮಾರಂಭವು ಪಣಜಿ ನಗರದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ (ಜ.16) ಜರುಗಲಿದೆ. ಈ ಮಹತ್ವದ ಕಾರ್ಯಕ್ರಮಕ್ಕೆ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ಕಿಚ್ಚನ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಕನ್ನಡ ಚಿತ್ರೋದ್ಯಮದ ಮಂದಿಗೆ ಹೆಮ್ಮೆಯ ಸಂಗತಿಯೇ ಸರಿ.
-ಮೂರೇ ದಿನಗಳಲ್ಲಿ ಸೂಪರ್ ಹಿಟ್-ವೀಕೆಂಡ್ ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ನಟ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಕೊರೊನಾ ನಡುವೆಯೂ ಮೊದಲ ದಿನ ದಾಖಲೆಯ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ಮಾಸ್ಟರ್ ಪ್ರೇಕ್ಷಕರನ್ನು ಸೆಳೆದಿದೆ. ಆಸ್ಟ್ರೇಲಿಯಾದಲ್ಲಿ ‘ಮಾಸ್ಟರ್’ ಸಿನಿಮಾ ಮೂರು ದಿನಕ್ಕೆ ದಾಖಲೆ ಮೊತ್ತದ ಕಲೆಕ್ಷನ್ ಪಡೆದಿದೆ. ಮೂರು ದಿನದಲ್ಲಿ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 3.60 ಕೋಟಿಗೂ ಹೆಚ್ಚು ಹಣ ಗಳಿಸಿದೆ ವಿಜಯ್ ನಟನೆಯ ಮಾಸ್ಟರ್ ಸಿನಿಮಾ. ವೀಕೆಂಡ್ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನೂ ಹಲವು ದೇಶಗಳಲ್ಲಿ ಮಾಸ್ಟರ್ ಬಿಡುಗಡೆ ಆಗಿದೆ. ನ್ಯೂಜಿಲೆಂಡ್ನಲ್ಲಿ ಮೊದಲ ದಿನ 27 ಲಕ್ಷಕ್ಕೂ ಹೆಚ್ಚು ಹಣ ಗಳಿಸಿತ್ತು ಮಾಸ್ಟರ್. ಅಮೆರಿಕದಲ್ಲಿ ಮಾಸ್ಟರ್ಗೆ ಹೆಚ್ಚು ಚಿತ್ರಮಂದಿರಗಳು ದೊರೆತಿಲ್ಲ ಎನ್ನಲಾಗಿದೆ. ಬಿಡುಗಡೆ ಆದ ಮೊದಲ ದಿನವೂ ಭಾರತದಲ್ಲಿ ಒಳ್ಳೆಯ ಕಲೆಕ್ಷನ್ ಪಡೆದಿದೆ ಮಾಸ್ಟರ್. ಕೊರೊನಾ…
-ಜನವರಿ 19ರಂದು ಮುಂದಿನ ಮಾತುಕತೆ!-ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನವದೆಹಲಿ: ಕೃಷಿ ಕಾನೂನುಗಳ ಕುರಿತು ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯ 9ನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಮುಂದಿನ ಸುತ್ತಿನ ಮಾತುಕತೆ ಜನವರಿ 19 ರಂದು ನಡೆಯಲಿದೆ.ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಕಳೆದ ವರ್ಷ ನವೆಂಬರ್ 26ರಿಂದ ದೆಹಲಿಯ ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂದ್ಹಾಗೆ, ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವ ಸೂಚನೆಯ ಹಿನ್ನೆಲೆಯಲ್ಲಿ, ಪ್ರತಿಭಟನಾ ನಿರತ ರೈತ ಮುಖಂಡರು ಗುರುವಾರ 9ನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು. ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಜೋಗಿಂದರ್ ಸಿಂಗ್ ಉಗ್ರನ್ ಪಿಟಿಐಗೆ ಈ ವಿಷಯ ತಿಳಿಸಿದ್ದು, ‘ನಾವು ನಾಳೆ ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದೇವೆ. ಶುಕ್ರವಾರದ ಸಭೆಯಲ್ಲಿ ನಮಗೆ ಹೆಚ್ಚಿನ ಭರವಸೆ ಇಲ್ಲ, ಏಕೆಂದರೆ ಸರ್ಕಾರವು ಎಸ್ ಸಿ ನೇಮಕ ಮಾಡಿದ ಸಮಿತಿಯನ್ನು ಉದಾಸೀನಾ ಮಾಡುತ್ತದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸದುದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು…
-ಮಂಗಳೂರಿನಲ್ಲಿ ಇಬ್ಬರ ಬಂಧನ-ಕಸ್ಟಮ್ ಅಧಿಕಾರಿಗಳಿಂದ ತಪಾಸಣೆ ಮಂಗಳೂರು: ಶಾರ್ಜಾದಿಂದ ಕೇರಳಕ್ಕೆ ಅಕ್ರಮವಾಗಿ 1.09 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾ ಡುತ್ತಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37) ಮತ್ತು ಮೊಹಮ್ಮದ್ ಶೋಯೇಬ್ ಮುಗು (31) ಬಂಧಿತ ಆರೋಪಿಗಳು.ಶಾರ್ಜಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಇವರಿಬ್ಬರನ್ನು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಆರೋಪಿಗಳು ಒಳ ಉಡುಪಿನಲ್ಲಿ 24 ಕ್ಯಾರೆಟ್ನ ಸುಮಾರು 2.15ಕೆ.ಜಿ. ತೂಕದ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳನ್ನು ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನ್ಸ್ ಜಾರ್ಜ್ ಅಭಿನಂದಿಸಿದ್ದಾರೆ. ಕಸ್ಟಮ್ಸ್ ಉಪ ಆಯುಕ್ತ ಪ್ರವೀಣ್ ಖಾಂದಿ, ಸೂಪರಿಂಡೆಂಟ್ಗಳಾದ ಶ್ರೀಕಾಂತ್ ಕೆ., ನವೀನ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಪತ್ತೆಹಚ್ಚಿದರು.