-ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ-ಲಸಿಕೆ ಪಡೆಯಲೂ ನಿಯಮ ಪಾಲನೆ ಬೆಂಗಳೂರು: ರಾಜ್ಯದಲ್ಲೂ ನಾಳೆಯಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಲಸಿಕೆ ವಿತರಣಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಹೆಸರು ನೋಂದಣಿ ಸಮಯದಲ್ಲಿ ನೀಡಿದ ಗುರುತಿನ ಚೀಟಿ ತೋರಿಸಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.ಶನಿವಾರದಿಂದ ಕೋವಿಡ್ ಲಸಿಕೆ ವಿತರಣೆ ಆರಂಭವಾಗಲಿದೆ. ಈಗಾಗಲೇ ಆನ್ ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಂಡವರ ಮೊಬೈಲ್ ಸಂಖ್ಯೆಗೆ ನಿಗದಿತ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯ ಸಂದೇಶ ಕಳುಹಿಸಲಾಗುತ್ತದೆ. ಅದರ ಪ್ರಕಾರ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ. ಇನ್ನು ಲಸಿಕೆ ಅಭಿಯಾನ ನಡೆಯುವ ಸ್ಥಳದಲ್ಲಿ ವ್ಯಕ್ತಿಯ ಭಾವಚಿತ್ರ ಇರುವ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ. ಅದನ್ನು ಕೇಂದ್ರದಲ್ಲಿನ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ ಎಂದೂ ಇಲಾಖೆ ಮಾಹಿತಿ ನೀಡಿದೆ.
Author: Nammur Express Admin
-ಸೆಂಟ್ರಲ್ ವಿಸ್ತಾ: ನಿರ್ಮಾಣ ಕಾರ್ಯ ಶುರು-ಪ್ರಧಾನಿ ನರೇಂದ್ರ ಮೋದಿಯಿಂದ ಭೂಮಿಪೂಜೆ ನವದೆಹಲಿ: ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಕಳೆದ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದು, ಶುಕ್ರವಾರ ಚಾಲನೆ ನೀಡಲಾಯಿತು. 2022ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 75ನೇ ಸ್ವಾತಂತ್ರ್ಯೋತ್ಸವ ಅದೇ ವರ್ಷ ನಡೆಯಲಿದೆ.ಹಾಗಾಗಿ ಆ ವರ್ಷದ ಚಳಿಗಾಲದ ಅಧಿವೇಶವನ್ನು ನೂತನ ಸಂಸತ್ಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ನಿರ್ಮಾಣ ಕಾರ್ಯವು 35 ದಿನ ತಡವಾಗಿ ಆರಂಭವಾಗಿದ್ದರೂ ನಿಗದಿತ ಅವಧಿಗೂ ಮೊದಲೇ ನೂತನ ಸಂಸತ್ ಭವನವನ್ನು ನಿರ್ಮಿಸಲಾಗುವುದು’ ಎಂದು ಸಂಸ್ಥೆ ಹೇಳಿದೆ.₹ 971 ಕೋಟಿ ವೆಚ್ಚದ ಈ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಲಿ.ಗೆ ನೀಡಲಾಗಿದೆ.
-ಹಾವಿನಿಂದ ಪಾರಾಗಿ ಕೆರೆಗೆ ಬಿದ್ದ ಸ್ನೇಕ್ ಪ್ರಭಾಕರ್ -ಸೂಕ್ತ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ ಶಿವಮೊಗ್ಗ: ಕಾಳಿಂಗ ಸರ್ಪವನ್ನು ಹಿಡಿಯಲು ಹೋದ ಉರಗ ತಜ್ಞರೊಬ್ಬರು ಹಾವಿನ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯ ಕೋಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮತ್ತಿಘಟ್ಟದಲ್ಲಿ ನಡೆದಿದೆ. ಮತ್ತಿಘಟ್ಟದ ಮನೆಯ ಹತ್ತಿರದ ತೋಟದಲ್ಲಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಪ್ರಭಾಕರ್ ಎಂಬ ಉರಗ ತಜ್ಞರೊಬ್ಬರು ಹಿಡಿಯಲು ಹೋದಾಗ ಸರ್ಪವು ತೋಟದ ನಡುವೆ ಇದ್ದ ಕೆರೆಗೆ ಇಳಿದಿದೆ. ಈ ವೇಳೆ ಕೆರಯಲ್ಲಿದ್ದ ಮರದ ತುಂಡಿನ ಮೇಲೆ ನಿಂತು ಕಾಳಿಂಗ ಸರ್ಪವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಪ್ರಯತ್ನಿಸಿದಾಗ ಅದು ಸ್ನೇಕ್ ಪ್ರಭಾಕರ್ ಮೇಲೆಯೇ ದಾಳಿ ನಡೆಸಲು ಮುಂದಾಗಿ ಪ್ರಭಾಕರ್ ಕಾಲಿಗೆ ಕಡಿಯಲು ಮುಂದಾಯಿತು. ಕೂಡಲೇ ಅದರಿಂದ ಸ್ನೇಕ್ ಪ್ರಭಾಕರ್ ತಪ್ಪಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಆಗ ಮತ್ತೆ ದಾಳಿ ಮಾಡಿದ ಕಾಳಿಂಗ ಸರ್ಪವು ಪ್ರಭಾಕರ್ ಮುಖಕ್ಕೆ ಕಚ್ಚಲು ಪ್ರಯತ್ನಿಸಿದೆ. ಕೂಡಲೇ ಜಾಗೃತರಾದ ಅವರು ಹಾವಿನ…
-ವಾಟ್ಸಪ್ ನಲ್ಲಿ ದೋಷ, ಬಳಕೆದಾರರಿಗೆ ಗೊಂದಲ-ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ ವಾಟ್ಸಪ್ ನವದೆಹಲಿ(ಜ.12): ಸ್ನೇಹಿತರು, ಕುಟುಂಬ ಸದಸ್ಯರ ನಡುವಿನ ವೈಯಕ್ತಿಕ ಮಾಹಿತಿ ವಿನಿಮಯಕ್ಕೆಂದು ಸ್ಥಾಪಿಸಲಾದ ಖಾಸಗಿ ವಾಟ್ಸಾಪ್ ಗ್ರೂಪ್ಗಳು ಗೂಗಲ್ ಸರ್ಚ್ ನಲ್ಲಿ ಲಭ್ಯವಾಗುತ್ತಿದೆ ಎಂಬ ಆಘಾತಕಾರಿ ವಿಷಯ ಕೇಳಿ ಬರುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರ ಮಾಹಿತಿಯನ್ನು ಮಾತೃಸಂಸ್ಥೆ ಫೇಸ್ಬುಕ್ ಜೊತೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡುತ್ತಿದೆ. ಈ ಕಾರಣ ವಾಟ್ಸಾಪ್ನ ಸುರಕ್ಷತೆ ಬಗ್ಗೆ ಬಳಕೆದಾರರಿಗೆ ಗೊಂದಲ ಉಂಟುಮಾಡಿದೆ. ಗ್ರೂಪ್ಚಾಟ್ ಇನ್ವೈಟ್ಗಳ ಇಂಡೆಕ್ಸಿಂಗ್ ಗೂಗಲ್ನಲ್ಲಿ ಸೋರಿಕೆಯಾಗಿರುವ ಕಾರಣ, ಯಾವುದೇ ವ್ಯಕ್ತಿ ಇನ್ಯಾವುದೇ ಖಾಸಗಿ ವಾಟ್ಸಾಪ್ ಗ್ರೂಪ್ಗಳ ಇನ್ವೈಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅದರಲ್ಲಿ ಸೇರಿಕೊಳ್ಳುವಂತಾಗಿದೆ. ಅಷ್ಟುಮಾತ್ರವಲ್ಲ ಬಳಕೆದಾರರ ಪ್ರೊಫೈಲ್, ಮೊಬೈಲ್ ನಂಬರ್, ಪ್ರೊಫೈಲ್ ಚಿತ್ರಗಳು ಸೇರಿದಂತೆ ವೈಯಕ್ತಿಕ ಮಾಹಿತಿ ಕೂಡಾ ಗೂಗಲ್ ಹುಡುಕಾಟದಲ್ಲಿ ಲಭ್ಯವಿದೆ. ಹೀಗಾಗಿ ಯಾರು ಬೇಕಾದರೂ, ಗೂಗಲ್ ಸಚ್ರ್ನಲ್ಲಿ ಯಾವುದೇ ಖಾಸಗಿ ವಾಟ್ಸಾಪ್ ಗ್ರೂಪ್ಗಳಿಗಾಗಿ ಹುಡುಕಾಟ ನಡೆಸಿ ಇನ್ವೈಟ್ ಕ್ಲಿಕ್ ಮಾಡುವ ಮೂಲಕ ಗ್ರೂಪ್ ಸೇರಿಕೊಳ್ಳುವ ಅವಕಾಶ…
-ಕಂಪ್ಯೂಟರ್ ನ ನಿರಂತರ ಬಳಕೆ ಹೆಚ್ಚು ಅಪಾಯ ಇಲ್ಲಿದೆ ಸಂಪೂರ್ಣ ಮಾಹಿತಿ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಎನ್ನುವುದು ನಮ್ಮೆಲ್ಲರ ಜೀವನದ ಪ್ರಮುಖ ಅಂಗವಾಗಿದೆ ಎಂದು ಹೇಳಬಹುದು. ಯಾವುದೇ ಕಚೇರಿ, ಮನೆ, ಶಾಲೆ ಎಲ್ಲಿಗೂ ಹೋದರೂ ಒಂದು ಕಂಪ್ಯೂಟರ್ ಕಂಡುಬರುವುದು. ಕೆಲವರಿಗೆ ಪ್ರತಿನಿತ್ಯವೂ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡಬೇಕಾಗುತ್ತದೆ. ಕಂಪ್ಯೂಟರ್ ನಿಂದ ದಿನವಿಡಿ ಬಳಕೆ ಮಾಡುವ ಪರಿಣಾಮವಾಗಿ ಅದರಿಂದ ಹಲವಾರು ಸಮಸ್ಯೆಗಳು ಕಾಡುವುದು. ಪ್ರತಿದಿನವೂ ಕಂಪ್ಯೂಟರ್ ಬಳಕೆ ಮಾಡುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಅದೇ ರೀತಿಯಾಗಿ ಹಲವಾರು ಸಮಸ್ಯೆಗಳು ಕೂಡ. ದಿನವಿಡಿ ಅಥವಾ ದಿನದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಲಿದ್ದರೆ, ಆಗ ನೀವು ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಿಸಲೇಬೇಕು. ಮಾಂಸಖಂಡಗಳಲ್ಲಿ ಸಮಸ್ಯೆಗಳು:-ಕಂಪ್ಯೂಟರ್ ನ್ನು ನಿರಂತರವಾಗಿ ಬಳಕೆ ಮಾಡುವವರಲ್ಲಿ ಹಲವಾರು ಸಮಸ್ಯೆಗಳು ಕಂಡುಬರುವುದು. ಪ್ರಮುಖವಾಗಿ ಸ್ನಾಯುಗಳಲ್ಲಿ ನೋವು ಅಥವಾ ನಿಶ್ಯಕ್ತಿಯು ಕಾಡುವುದು ಮಾತ್ರವಲ್ಲದೆ, ಬೆನ್ನು ನೋವು, ಎದೆ ನೋವು, ನೋವು, ಕೈ, ಭುಜ ಮತ್ತು ಕಾಲುಗಳಲ್ಲಿ ಸ್ಪರ್ಶವಿಲ್ಲದೆ…
-ಬಳಕೆದಾರರ ಮನಗೆದ್ದ ಸಿಗ್ನಲ್ ಆ್ಯಪ್-ಬೇರೆ ಆ್ಯಪ್ ಗಳತ್ತ ಮುಖಮಾಡುತ್ತಿರುವ ಜನರು. ವಾಟ್ಸ್ಆ್ಯಪ್ ತನ್ನ ಪ್ರೈವೆಸಿ ಪಾಲಿಸಿಯನ್ನು ಅಪ್ಡೇಟ್ ಮಾಡಿದೆ. ಬಳಕೆದಾರರನ್ನು ನೂತನ ಪಾಲಿಸಿಯನ್ನು ಒಪ್ಪಿಕೊಳ್ಳುವಂತೆ ನೋಟಿಫಿಕೇಶನ್ ಕಳುಹಿಸಿದ್ದು, ಅನೇಕರು ವ್ಯಾಟ್ಸ್ಆ್ಯಪ್ ನ ಹೊಸ ಪ್ರೈವೆಸಿ ಪಾಲಿಸಿಗೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಬೇರೆ ಆ್ಯಪ್ಗಳತ್ತ ಜನರು ಮುಖಮಾಡುತ್ತಿದ್ದು, ವಾಟ್ಸ್ ಆ್ಯಪ್ಗೆ ಪರ್ಯಾಯವಾಗಿ ಜನಪ್ರಿಯತೆಗೊಳ್ಳುತ್ತಿರುವ ಸಿಗ್ನಲ್ ಆ್ಯಪ್ ಅನ್ನು ಜನರು ಬಳಸಲು ಪ್ರಾರಂಭಿಸುತ್ತಿದ್ದಾರೆ. ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿ ಬಳಸುತ್ತಿದ್ದಾರೆ. ಸಿಗ್ನಲ್ ಆ್ಯಪ್ ಅನ್ನು ಸಿಗ್ನಲ್ ಫೌಂಡೇಷನ್, ಸಿಗ್ನಲ್ ಮೆಸೆಂಜರ್ ಸಹಕಾರಿಂದ ಅಭಿವೃದ್ಧಿ ಪಡಿಸಲಾಗಿದ್ದು, ಜುಲೈ 29, 2014ರಲ್ಲಿ ಸಿಗ್ನಲ್ ಅಯಪ್ ಅನ್ನು ಬಿಡುಗಡೆ ಮಾಡಲಾಯಿತು. ವಾಟ್ಸ್ ಆ್ಯಪ್ನಂತೆಯೇ ಕಾರ್ಯನಿರ್ವಹಿಸುವ ಸಿಗ್ನಲ್ ಆ್ಯಪ್ನಲ್ಲಿ ವಾಯ್ಸ್ ಕರೆ, ವಿಡಿಯೋ ಕರೆ, ಫೋಟೋ, ಫೈಲ್ ಮತ್ತು ಸಂದೇಶ ರವಾನಿಸಬಹುದಾಗಿದೆ.ಐಒಎಸ್, ಆಯಂಡ್ರಾಯ್ಡ್, ಡೆಸ್ಕ್ಟಾಪ್ ಬಳಕೆದಾರರು ಕೂಡ ಸಿಗ್ನಲ್ ಆಯಪ್ ಅನ್ನು ಬಳಸಬಹುದಾಗಿದೆ. ಜಾವಾ, ಸಿ, ಜಾವಾಸ್ಕ್ರಿಪ್ಟ್, ಆಬ್ಜೆಕ್ಟ್-ಸಿ ಪ್ರೊಗ್ರಾಂಮಿಂಗ್ ಭಾಷೆಯಲ್ಲಿ ಇದನ್ನು…
-ಚಳಿ ನಿವಾರಣೆಗಾಗಿ ಮುಂಜಾನೆಯ ಸೂರ್ಯನ ಬಿಸಿಲಿಗೆ ಮೈ ಒಡ್ಡುತ್ತೀರಾ-ಆರೋಗ್ಯ ವೃದ್ದಿಸುತ್ತೆ ಸೂರ್ಯ ರಶ್ಮಿ ಚಳಿಗಾಲದಲ್ಲಿ ಸೂರ್ಯನ ಕಿರಣಗಳಿಗೆ ನಿಮ್ಮನ್ನುನೀವು ಒಗ್ಗಿಕೊಳ್ಳುವುದರಿಂದ ಹಲವು ಲಾಭಗಳನ್ನು ಪಡೆಯಬಹುದು. ತ್ವಚೆಯ ಅಲರ್ಜಿ ನಿವಾರಿಸಲು ಇದು ಅತ್ಯುತ್ತಮ. ವಿಟಮಿನ್ ಡಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುವಂತೆ ಮಾಡಲು ಸೂರ್ಯ ಕಿರಣವೇ ಅತ್ಯುತ್ತಮ ಮಾರ್ಗ. ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಲಾಭಗಳನ್ನು ಸೂರ್ಯನ, ಬೆಳಗಿನ ಹಾಗೂ ಸಂಜೆಯ ಕಿರಣಗಳು ನೀಡುತ್ತವೆ. ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ನಿಮ್ಮನ್ನು ನೀವು ಒಡ್ಡಿಕೊಂಡರೆ ಸಾಕು ಅನೇಕ ಲಾಭಗಳಿವೆ.ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಕ್ಯಾಲ್ಸಿಯಂ ಸಮಸ್ಯೆ ದೂರವಾಗಿ, ಸ್ನಾಯುಗಳು ಗಟ್ಟಿಯಾಗುತ್ತದೆ. ಕೀಲು ನೋವಿನಂಥ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ಈ ಸಮಸ್ಯೆ ಇರುವವರು ನಿತ್ಯ ಬಿಸಿಲಿಗೆ ನಿಲ್ಲಬೇಕು. ಮೆದುಳಿನ ಆರೋಗ್ಯ ಕಾಪಾಡಲೂ ಸಹಾ ಇದು ಸಹಕಾರಿ ಮತ್ತು ನಿದ್ರಾಹೀನತೆ ಸಮಸ್ಯೆ ದೂರವಾಗಿ, ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ.
-ಆರೋಗ್ಯಯುತವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಿ-ಇಲ್ಲಿದೆ ಸೂಕ್ತ ಸಲಹೆಗಳು ನಾವು ಸೇವಿಸುವ ಆಹಾರವು ಉತ್ತಮ ಪೋಷಕಾಂಶಗಳನ್ನು ಹೊಂದಿದಾಗ ಮಾತ್ರ ಉತ್ತಮವಾದ ಮತ್ತು ಆರೋಗ್ಯಯುತವಾದ ಚರ್ಮವನ್ನು ಪಡೆಯಲು ಸಾಧ್ಯವಾಗುತ್ತದೆ. ಚರ್ಮವು ಮನುಷ್ಯನ ದೇಹದಲ್ಲಿ ಅತಿ ಮುಖ್ಯವಾದ ಅಂಗವಾಗಿದೆ. ಆರೋಗ್ಯಯುತ ಚರ್ಮವನ್ನು ಪಡೆಯಲು ನಾವು ಹಲವಾರು ರೀತಿಯ ಉತ್ತಮ ಆಹಾರಗಳನ್ನು ಸೇವಿಸಿದಾಗ ಮಾತ್ರ ಉತ್ತಮ ಚರ್ಮ ನಮ್ಮದಾಗುತ್ತದೆ.ಉತ್ತಮ ಚರ್ಮ ಪಡೆಯಲು ನಾವು ಹಲವಾರು ರೀತಿಯ ವಿಟಮಿನ್ಗಳು ಇರುವ ಆಹಾರಗಳನ್ನು ಸೇವಿಸಬೇಕು. ಅದರಲ್ಲಿ ವಿಟಮಿನ್ ಎ ಅಂಶವು ನಮ್ಮ ಚರ್ಮದ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ. ವಿಟಮಿನ್ ಎ ಅಂಶವು ಚರ್ಮದ ಆರೋಗ್ಯಕ್ಕೆ ಒಂದು ವರ ಎಂದರೆ ತಪ್ಪಾಗುವುದಿಲ್ಲ. ಚರ್ಮಕ್ಕೆ ವಿಟಮಿನ್ ಎ ಪ್ರಯೋಜನಗಳುವಿಟಮಿನ್-ಎ ರೆಟಿನಾಲ್ ಎಂಬ ಅಂಶವನ್ನು ಒಳಗೊಂಡಿದ್ದು, ಇದು ಹೊಸ ಚರ್ಮದ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ವಿಟಮಿನ್-ಎ ನಲ್ಲಿ ಅತಿ ಹೆಚ್ಚಿನ ಮಟ್ಟದ ಆಂಟಿಆಕ್ಸಿಡೆಂಟ್ಗಳಿವೆ , ಅದರಲ್ಲೂ ಬೀಟಾ ಕೆರೋಟಿನ್ ಇದ್ದು ಇದು ವಯಸ್ಸಾಗುವಿಕೆ ಲಕ್ಷಣಗಳನ್ನು ತಡೆಯುತ್ತದೆ. ಇದಲ್ಲದೆ ವಿಟಮಿನ್ ಎ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು…
-47ನೇ ವಸಂತಕ್ಕೆ ಕಾಲಿಟ್ಟ ದಿ ವಾಲ್-ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ಕ್ರಿಕೆಟ್ ಜಗತ್ತಿನಲ್ಲಿ ದಿ ವಾಲ್ ಎಂದೇ ಫೇಮಸ್ ಆಗಿರುವ ಭಾರತ ತಂಡದ ಮಾಜಿ ಆಟಗಾರ “ರಾಹುಲ್ ದ್ರಾವಿಡ್” ಗೆ ಇಂದು 47ನೇ ಹುಟ್ಟು ಹಬ್ಬದ ಸಂಭ್ರಮ. ಚಿತ್ರರಂಗ ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಫಾರ್ಮ್ ಎನ್ನುವುದು ತಾತ್ಕಾಲಿಕ, ಆದರೆ ವ್ಯಕ್ತಿತ್ವ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ರಾಹುಲ್ ದ್ರಾವಿಡ್ ಜೀವಂತ ಉದಾಹರಣೆ.ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಸ್ಟೀವ್ ವಾ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದಾರೆ.ಎಲ್ಲರೂ ಸಚಿನ ತೆಂಡೂಲ್ಕರ್ ಅವರನ್ನು ಹೊಗಳುತ್ತಾರೆ. ಅವರು ತಮ್ಮದೇ ಆದ ಪ್ರತಿಭೆಯನ್ನು ಹೊಂದಿರಬಹುದು, ಆದರೆ ನನ್ನ ಪುಸ್ತಕದಲ್ಲಿ ರಾಹುಲ್ ದ್ರಾವಿಡ್ ಕಲಾವಿದ. -ಪೀಟರ್ ಒ ಟೂಲ್ನನ್ನ ಜೀವನದಲ್ಲಿ ಯಾರನ್ನಾದರೂ ಬ್ಯಾಟಿಂಗ್ ಮಾಡಲು ಹಾಕಿಕೊಳ್ಳಬಹುದು, ಆದರೆ ನನ್ನ ಆಯ್ಕೆ ಯಾವಾಗಲೂ ಕಾಲಿಸ್ ಅಥವಾ ದ್ರಾವಿಡ್ ಆಗಿರುತ್ತದೆ. -ಬ್ರಿಯಾನ್ ಲಾರಾದ್ರಾವಿಡ್ ಯುವಕರಿಗೆ ಪರಿಪೂರ್ಣ ಆದರ್ಶ. ನಮ್ಮನ್ನು…
-ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್-ಫೇಸ್‍ಬುಕ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತಾನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ತೀರ ಅಪರೂಪ. ಸಿನಿಮಾಗಳ ಬಗ್ಗೆ ಅಪ್ ಡೇಟ್ ಬಿಟ್ಟರೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಸಕ್ರೀಯರಾಗಿರುವುದು ತುಂಬಾ ಕಡಿಮೆ. ಆದರೆ ಲೈವ್ ಬರುವುದಾಗಿ ಹೇಳಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಬಾನುವಾರ ಲೈವ್ ಬಂದಿದ್ದ ಡಿ ಬಾಸ್ ಸಾಕಷ್ಟು ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ. ಮುಖ್ಯವಾಗಿ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದ ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮಿಸುವಂತೆ ಮಾಡಿದರು.?ಸಹೋದರ ದಿನಕರ್ ಜೊತೆ ಯಾವಾಗ ಸಿನಿಮಾ ಮಾಡುತ್ತಾರೆ? ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಮುಂದಿನ ಸಿನಿಮಾಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ‘ದಿನಕರ್ ಮತ್ತು ನನ್ನ ಸಿನಿಮಾವನ್ನು ಯಾವಾಗ ಬೇಕಾದರೂ ಮಾಡಬಹುದು. ಇರುವ ಪ್ರಾಜೆಕ್ಟ್ ಮುಗಿಸುವುದಕ್ಕೆ ಸಮಯವಿಲ್ಲ.’ ಎಂದಿದ್ದಾರೆ. ಮೊದಲು ಚಿತ್ರಮಂದಿರಗಳು ಓಪನ್…