-ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳ ವರ್ತನೆ ಬದಲು-ಕೊರೋನಾ ಟೈಂನಲ್ಲಿ ಮೊಬೈಲ್ ಬಲೆಗೆ ಬಿದ್ದ ಗಂಡೈಕಳು ನಾಗರಾಜ್ ನವೀಮನೆ ಮೈಸೂರುಸತತ 9 ತಿಂಗಳಿನಿಂದ ಆನ್ಲೈನ್ ಕ್ಲಾಸ್ ಅಂಥ ಮನೆಯಲ್ಲೇ ಕಾಲ ಕಳೆದ ಮಕ್ಕಳ ನಡವಳಿಕೆಯಲ್ಲಿ ತುಸು ಬದಲಾವಣೆಯಾಗಿದೆ. ಪೋಷಕರ ಮಾತಿಗೆ ಬೆಲೆ ಕೂಡದೇ ಇರುವುದು, ರಾತ್ರಿ ಇಡೀ ಮೊಬೈಲ್ ನೋಡುತ್ತಾ, ನಿದ್ದೆಗೆಟ್ಟು ಮಕ್ಕಳು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದಾರೆ ಎಂದು ಪೋಷಕರು ತಮ್ಮ ಅಳುಕನ್ನು ಹೇಳಿಕೊಳ್ಳುತ್ತಿದ್ದಾರೆ ಗಂಡು ಮಕ್ಕಳು ತುಸು ಪೋಲಿ ಹಾಗೂ ಉಡಾಳರಾಗಿದ್ದಾರೆ! ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳು ನಿಯೋಜಿಸಿರುವ ಕೆಲವು ಮನಶಾಸ್ತ್ರಜ್ಞರ ಬಳಿ -ಪಾಲಕರು ಹೊತ್ತು ತರುತ್ತಿರುವ ದೂರುಗಳಿವು ಗ್ರಾಮೀಣ ಭಾಗಕ್ಕಿಂತ ಹೆಚ್ಚಾಗಿ ನಗರದ ಭಾಗಗಳಲ್ಲಿ ಕಂಡು ಬರುತ್ತಿದ್ದು, ಅದರಲ್ಲೂ ಉದ್ಯೋಗಸ್ಥ ದಂಪತಿಗೆ ಇದೊಂದು ತಲೆನೋವಾಗಿ ಪರಿಣಮಿಸಿದೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಕ್ಕಳು ಮೊಬೈಲ್ನಲ್ಲೇ ತಮಗಿಷ್ಟ ಬಂದ ಸಂಗತಿಯನ್ನು ಬ್ರೌಸ್ ಮಾಡುತ್ತಿದ್ದಾರೆ. ಇದರಿಂದ ನಿತ್ಯ ತಮ್ಮ ಬಳಿ ಎಡತಾಕುವ ಪಾಲಕರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎನ್ನುತ್ತಾರೆ ಮನಶಾಸ್ತ್ರಜ್ಞರು. ಕೋವಿಡ್ನಿಂದ…
Author: Nammur Express Admin
-ಕನಿಷ್ಠ ಹಾಜರಾತಿ ಇಲ್ಲದಿದ್ದರೂ ವಾರ್ಷಿಕ ಪರೀಕ್ಷೆಗೆ ಅವಕಾಶ-ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ ಬೆಂಗಳೂರು : ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್ ಗಳ ವಾರ್ಷಿಕ ಪರೀಕ್ಷೆಗೆ ಕನಿಷ್ಠ ಹಾಜರಾತಿ ಇಲ್ಲದಿದ್ದರೂ ಅವಕಾಶ ನೀಡವಂತಹ ಮಹತ್ವದ ನಿರ್ಧಾರ ಕೈ ಗೊಂಡಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಾಲಿನಲ್ಲಿ ಶಾಲೆ-ಕಾಲೇಜುಗಳು ಬಂದ್ ಆಗಿದ್ದು, ಕೆಲವು ದಿನಗಳಿಂದ ಶಾಲೆ, ಕಾಲೇಜುಗಳು ಆರಂಭವಾಗಿದ್ದು, ವಾರ್ಷಿಕ ಪರೀಕ್ಷೆಗೆ ಕನಿಷ್ಠ ಹಾಜರಾತಿ ಇಲ್ಲದಿದ್ದರೂ ಅವಕಾಶ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಶೇ. 70 ರಷ್ಟು ಮತ್ತು ಶೇ. 75 ಕ್ಕಿಂತ ಹೆಚ್ಚಿನ ಹಾಜರಾತಿ ಕಡ್ಡಾಯವಾಗಿ ಇರಬೇಕಿತ್ತು. ಆದರೆ ಕೊರೋನಾ ಕಾರಣ ತರಗತಿಗೆ ಹೋಗಲಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ.ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ತಡವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಾಜರಾತಿ ಇಲ್ಲದಿದ್ದರೂ ವಾರ್ಷಿಕ ಪರೀಕ್ಷೆಗೆ ಅವಕಾಶ…
-ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷರಿಂದ ಪರಿಶೀಲನೆ.-11ತಿಂಗಳ ಒಳಗಾಗಿ ಕನ್ನಡನಾಡಿಗೆ ವಿಷ್ಣು ಸ್ಮಾರಕ ಸಮರ್ಪಣೆ. ಮೈಸೂರು,ಜ.9 : ಮೈಸೂರಿನಿಂದ ಸುಮಾರು ಆರು ಕಿಲೋ ಮೀಟರ್ ಅಂತರದಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಸ್ಥಳಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಮೇಜ್ ಗ್ಯಾಲರಿ ಮತ್ತು ಸಭಾಂಗಣದ ಕಾಮಗಾರಿ ಆರಂಭಗೊಂಡಿದ್ದು, ವಿಶ್ವದರ್ಜೆಯ ಸ್ಮಾರಕ ಸ್ಥಳ ಇದಾಗಬೇಕು, ರಾಜ್ಯ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಅತೀವ ಆಸಕ್ತಿ ವಹಿಸುತ್ತಿದೆ ಎಂದರು. ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣು ಸ್ಮಾರಕವುಸುಮಾರು 11 ಕೋಟಿ ರೂ.ಗಳ ಯೋಜನೆಯಾಗಿದ್ದು, ಪೊಲೀಸ್ ಗೃಹ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿರುವ ಈ ಕಾಮಗಾರಿಯ ನಿರ್ವಹಣೆಯನ್ನು ರೇವನಿ ಪ್ರಸಾದ್ ಕನ್ಸ್ಟ್ರಕ್ಷನ್ ಕಂಪನಿ ಮಾಡುತ್ತಿದೆ. 11 ತಿಂಗಳ ಒಳಗಾಗಿ ಕನ್ನಡ ನಾಡಿಗೆ ಈ ಕಾರ್ಯವನ್ನುಸಮರ್ಪಣೆ ಮಾಡಲಿದೆ. ವಾರ್ತಾ ಆಯುಕ್ತರ ಈ ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಾಯಕ ಎಂಜಿನಿಯರ್ಗಳಾದ ಮಂಜುನಾಥ್ ಸ್ಮಾರಕದ…
-ಕೆಜಿಎಫ್ ಚಾಪ್ಟರ್-2 ಟೀಸರ್ ನೋಡಿ ಫಿದಾ ಅದಾ ಸ್ಟಾರ್‍ಗಳು-ದೇಶ-ವಿದೇಶದಲ್ಲೂ ಸದ್ದು ಮಾಡಿದ ಪವರ್‍ಫುಲ್ ಲೈನ್ಸ್ ಕೆಜಿಎಫ್ ಚಿತ್ರದಿಂದ ಇಡೀ ಭಾರತ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ನೋಡುವಂತಾಗಿದೆ. ಈಗ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಪರಭಾಷೆ ಮಂದಿ ವಾಹ್ ಎನ್ನುತ್ತಿದ್ದಾರೆ., ಆಯಾ ಭಾಷೆಯ ಸ್ಟಾರ್ ನಟರ ಚಿತ್ರಗಳಿಗೆ ಸೆಡ್ಡು ಹೊಡೆಯಲಿದೆ ಎಂಬ ಟಾಕ್ ಸಹ ಇದೆ. ಇದೀಗ, ‘ಪವರ್ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ಫುಲ್…..’ ಈ ಸಾಲುಗಳು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಹಳ ಸೂಕ್ತವಾಗುತ್ತದೆ. ಯಶ್ ಅವರಿಗೆ ಮಾತ್ರವಲ್ಲ ಪ್ರಶಾಂತ್ ನೀಲ್ ಅವರಿಗೂ ಇದು ಚೆನ್ನಾಗಿ ಸೂಕ್ತವಾಗುತ್ತದೆ” ಎಂದು ತೆಲುಗು ನಟ ಕಾರ್ತಿಕೇಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯ ಸೂಪರ್ ಹೀರೋ ಹೃತಿಕ್ ರೋಷನ್ ಕೆಜಿಎಫ್ ಟೀಸರ್ ನೋಡಿದ್ದು ತೀವ್ರ ಸಂತಸ ಹಂಚಿಕೊಂಡಿದ್ದಾರೆ. ”ಎಂತಹ ಅದ್ಭುತ ಟ್ರೈಲರ್, ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ಹ್ಯಾಪಿ ಬರ್ತಡೇ ಯಶ್” ಎಂದು ಪೋಸ್ಟ್ ಮಾಡಿದ್ದಾರೆ. ತಮಿಳು ನಟ ವಿಷ್ಣು ವಿಶಾಲ್…
-ಆಕಾಶವಾಣಿಯಲ್ಲಿ ಜ.11ರಿಂದ ಶೈಕ್ಷಣಿಕ ಕಾರ್ಯಕ್ರಮ.-ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ. ಬೆಂಗಳೂರು: ಶಿಕ್ಷಣ ಇಲಾಖೆಯು ಆಕಾಶವಾಣಿ ಮೂಲಕ ಜನವರಿ 11 ರಿಂದ “ಕಲಿಯುತ್ತಾ ನಲಿಯೋಣ” ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮಗಳನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ಜನವರಿ 11ರಿಂದ ಏಪ್ರಿಲ್ 5 ರವರೆಗೆ ಆಕಾಶವಾಣಿ ಪ್ರಸಾರ ಮಾಡಲಾಗುತ್ತಿದೆ.ಸೋಮವಾರದಿಂದ ಶುಕ್ರವಾರದವರೆಗೂ ಬೆಳಿಗ್ಗೆ 10 ಗಂಟೆಯಿಂದ 10.15 ರವರೆಗೆ ಒಂದು ಮತ್ತು ಎರಡನೇ ತರಗತಿಗಳಿಗೆ ಹಾಗೂ 10:15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿಗಳಿಗೆ ಹಾಡು, ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧರೀತಿಯ ಮಕ್ಕಳ ಕಲಿಕಾ ಪೂರ್ವಕ ಕಾರ್ಯಕ್ರಮದ ಪ್ರಸಾರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ ಎಂದು ಸಚಿವರು ವಿವರಿಸಿದ್ದಾರೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಎಲ್ಲಾ ಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.ಅಲ್ಲಿ ಪ್ರಸಾರಗೊಳ್ಳುವ…
-ಕೋಳಿ ಮಾಂಸ, ಮೊಟ್ಟೆ ಸೇವನೆಯಿಂದ ತೊಂದರೆ ಇದೆಯಾ?-ಸಾಂಕ್ರಾಮಿಕ ರೋಗವಾಗಿ ಪರಿಣಮಿಸಬಹುದು ಎಚ್ಚರ ಕೋವಿಡ್ ಅಪಾಯ ತೀವ್ರ ಮಟ್ಟದಲ್ಲಿ ಇರುವ ಹೊತ್ತಲ್ಲೇ ಜಗತ್ತಿಗೆ ಹಕ್ಕಿ ಜ್ವರ ಕಾಡತೊಡಗಿದೆ. ಭಾರತದಲ್ಲೂ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರ ವ್ಯಾಪಿಸಿದೆ. ಕೇರಳ, ಹರಿಯಾಣ ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಬರ್ಡ್ ಫ್ಲೂ ಪ್ರಕರಣಗಳು ಬೆಳಕಿಗೆ ಬಂದಿದ್ದು,ಕರ್ನಾಟಕದಲ್ಲೂ ಹಲವು ಪಕ್ಷಿಗಳು ಸಾವನ್ನಪ್ಪಿವೆ. ಅವೂ ಹಕ್ಕಿ ಜ್ವರ ಪ್ರಕರಣಗಳಾ ಎಂಬುದು ಇನ್ನೂ ದೃಢಪಟ್ಟಿಲ್ಲ.ಆದರೆ ನೆರೆಯ ಕೇರಳದಲ್ಲಿ ಹಕ್ಕಿಜ್ವರವಿರುವಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.ಹಕ್ಕಿಜ್ವರದ ಪ್ರಮುಖ ರೋಗ ಲಕ್ಷಣವೆಂದರೆ ಕೆಮ್ಮು, ಜ್ವರ, ಗಂಟಲು ನೋವು, ಮೈಕೈ ನೋವು, ನ್ಯೂಮೋನಿಯಾ ಪ್ರಮುಖವಾದವು. ಕೋಳಿ ಮಾಂಸ, ಮೊಟ್ಟೆ ತಿನ್ನಬಹುದೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಹುಟ್ಟುತ್ತದೆ. ಆದರೆ, ಮೊಟ್ಟೆ ಮತ್ತು ಮಾಂಸವನ್ನು ಸರಿಯಾಗಿ ಬೇಯಿಸಿ ಸೇವಿಸಿದರೆ ಸಮಸ್ಯೆ ಇಲ್ಲ. ಆದರೆ, ಕೋಳಿ ಫಾರಂಗಳಲ್ಲಿ ಯಾವುದಾದರೂ ಒಂದು ಕೋಳಿಗೆ ಈ ವೈರಸ್ ಸೋಂಕು ತಗುಲಿರುವುದು ಕಂಡು ಬಂದಲ್ಲಿ ಕೂಡಲೇ ಫಾರಂನ…
-ಹಣ ವರ್ಗಾವಣೆ ವಿಚಾರದ ಕುರಿತು ವಿವಾದ-ನಾಳೆ ಬೆಳಗ್ಗೆ (ಜ 8) 11 ಗಂಟೆಗೆ ವಿಚಾರಣೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಹಣ ವರ್ಗಾವಣೆ ವಿಚಾರದ ಕುರಿತು ವಿವಾದ ಸೃಷ್ಟಿ ಮಾಡಿಕೊಂಡಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಹಾಜರಾಗಿದ್ದರು. ಈಗ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ. ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ನೀಡಿದೆ. ರಾಧಿಕಾ ಕುಮಾರಸ್ವಾಮಿ ಅಕೌಂಟ್ಗೆ 1.25 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ಸಿಸಿಬಿ, ರಾಧಿಕಾ ಕುಮಾರಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ನಾಳೆ ಬೆಳಗ್ಗೆ (ಜ 8) 11 ಗಂಟೆಗೆ ರಾಧಿಕಾ ಕುಮಾರಸ್ವಾಮಿ ಅವರು ಸಿಸಿಬಿ ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕು. ಗಣ್ಯರು, ಉದ್ಯಮಿಗಳಿಂದ ಕೋಟ್ಯಂತರ ಹಣವನ್ನು ವಂಚಿಸಿರುವ ಆರೋಪದಲ್ಲಿ ಯುವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದಾದ ನಂತರದಲ್ಲಿ ಈ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದಿದೆ. ಯುವರಾಜ್ ಅವರು ರಾಧಿಕಾ ಮತ್ತು ಅವರ ಸಹೋದರನ ಬ್ಯಾಂಕ್ ಖಾತೆಗೆ 1.25 ಕೋಟಿ…
-ಮನೆಯೇ ಮೊದಲ ಪಾಠಶಾಲೆ ಆಗಲಿ-ಪೋಷಕರ ವರ್ತನೆ ಮಕ್ಕಳಿಗೆ ಪೂರಕವಾಗಿರಲಿ ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕವಾಗಿ ಅವರನ್ನುಸದೃಢವಾಗಿಸಬೇಕು.ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮಕ್ಕಳು ಮನೆಯಲ್ಲಿರುವ ತಂದೆ-ತಾಯಿ, ಸಂಬಂಧಿಕರನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಅವರ ಮಾನಸಿಕ ಬೆಳವಣಿಗೆಗೆ ಒಂದು ಒಳ್ಳೆಯ ವಾತಾವರಣ ನೀಡಬೇಕು. ಹೆತ್ತವರು ಹಾಗೂ ಮನೆಯವರು ತಮ್ಮ ಸಿಟ್ಟು, ಕೋಪವನ್ನು ನಿಯಂತ್ರಿಸಿಕೊಳ್ಳುವುದು ಕೂಡ ಮಹತ್ವವಾಗಿರುತ್ತದೆ. ಮಕ್ಕಳ ಮುಂದೆ, ಜಗಳವಾಡುವುದು, ಇನ್ನೊಬ್ಬರ ಕುರಿತು ಚಾಡಿ ಮಾತನಾಡುವುದು, ಸುಳ್ಳನ್ನಾಡುವುದರಿಂದ ಅವರು ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಾರೆ. ಹಾಗಾಗಿ ಅವರಿಗೆ ತಪ್ಪಿನ ಅರಿವು ಮೊದಲೇ ಮೂಡಿಸಬೇಕು.ಇನ್ನೊಬ್ಬರನ್ನು ಕ್ಷಮಿಸುವ, ಕಷ್ಟದಲ್ಲಿಯೂ ಭರವಸೆಯನ್ನು ಕಳೆದುಕೊಳ್ಳದ ಶಿಕ್ಷಣ ಮನೆಯಿಂದಲೇ ಶುರುವಾಗಬೇಕು. ಹಾಗೇ ಅವರನ್ನು ಎಲ್ಲರ ಜತೆ ಬೆರೆಯುವುದಕ್ಕೆ ಬಿಡಬೇಕು. ಆಗ ಅವರಿಗೆ ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬುದು ತಿಳಿಯುತ್ತದೆ
-ನೈಸರ್ಗಿಕ ಪದಾರ್ಥದ ಕಡೆ ಗಮನಹರಿಸಿ.-ಈ ತೊಂದರೆ ಇದ್ದರೆ ಮೌತ್ ವಾಶ್ ಬೇಡ ಬೆಂಗಳೂರು : ಬಾಯಿಂದ ದುರ್ವಾಸನೆ ಬರಬಾರದೆಂದು,ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಲೆಂದು ನಾವು ಮೌತ್ ವಾಶ್ ಗಳನ್ನು ಬಳಸುತ್ತೇವೆ.ಇದರಿಂದ ಬಾಯಿ ಸ್ವಚ್ಚವಾಗುವ ಅನುಭವ ನಮಗೆ ದೊರೆಯುತ್ತದೆ.ಆದರೆ ಈ ಮೌತ್ ವಾಶ್ ಗಳನ್ನು ಬಳಸುವುದರಿಂದ ತೊಂದರೆ ಸಹಾ ಕಂಡುಬರುತ್ತದೆ. ಮೌತ್ ವಾಶ್ ಬಳಸುವುದರಿಂದ ಬಾಯಲ್ಲಿ ಅಲರ್ಜಿಯಾಗುವ ಸಂಭವವಿದೆ. ಹಾಗೇ ಬಾಯಿಯಲ್ಲಿ ಉರಿ, ನಾಲಿಗೆ ರುಚಿ ಕೆಡುವುದು, ಕೆಲವರಿಗೆ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುವ ಸಾಧ್ಯತೆ ಹೆಚ್ಚಿರುತ್ತದೆ.ಇದರಿಂದಾಗಿ ಇಂತಹ ಸಮಸ್ಯೆ ಇರುವವರು ಮೌತ್ ವಾಶ್ ಬಳಸಬೇಡಿ. ಅದರ ಬದಲು ಲವಂಗ, ಏಲಕ್ಕಿಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು ಉತ್ತಮವಾಗಿರುತ್ತದೆ.
-ಬೆಳ್ಳಕ್ಕಿಗಳ ನಿಗೂಢ ಸಾವು-ರಾಜ್ಯದಲ್ಲಿ ಹೈ ಅಲರ್ಟ್ ಶಿವಮೊಗ್ಗ: ಕರೊನಾ ಸೋಂಕು ಮತ್ತು ರೂಪಾಂತರಿ ಕರೊನಾ ಆತಂಕದ ನಡುವೆ ಹಕ್ಕಿಜ್ವರ ಭೀತಿ ದೇಶಾದ್ಯಂತ ದಟ್ಟವಾಗಿ ಆವರಿಸಿದೆ.ನೆರೆಯ ರಾಜ್ಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (ಊ5ಓ8) ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ಬೆಳ್ಳಕ್ಕಿ ಮೃತಪಟ್ಟಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಪಕ್ಷಿಗಳು ನಿಗೂಢವಾಗಿ ಸಾಯುತ್ತಿವೆ. ಅದೇ ರೀತಿ ಬುಧವಾರ ಮಂಗಳೂರು ಸಮೀಪ ಮಂಜನಾಡಿ ಗ್ರಾಮದ ಆರಂಗಡಿ ಬಳಿಯ ಗುಡ್ಡವೊಂದರಲ್ಲಿ ಕೆಲವು ಕಾಗೆಗಳು ಸತ್ತಿದ್ದು, ರಾಜ್ಯಕ್ಕೂ ಹಕ್ಕಿಜ್ವರ ಕಾಲಿಟ್ಟಿರುವ ಶಂಕೆ ಆತಂಕ ಸೃಷ್ಟಿಸಿದೆ.ಹೀಗಿರುವಾಗಲೇ ಗುರುವಾರ ಶಿವಮೊಗ್ಗ ನಗರದ ಸವಳಂಗ ರಸ್ತೆಯ ರೋಟರಿ ಯುವ ಕೇಂದ್ರದ ಬಳಿ ಬೆಳ್ಳಕ್ಕಿಗಳು ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ.ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಕ್ಕಿಗಳು ಸತ್ತು ಬಿದ್ದಿರುವುದು ಎಲ್ಲೆಡೆ ಆತಂಕ ಸೃಷ್ಟಿಸಿದ್ದು, ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಕಾಲೇಜು ಸಿಬ್ಬಂದಿ…