Categories
ಬೆಂಗಳೂರು

ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

-ಕೆಜಿಎಫ್ ಚಾಪ್ಟರ್-2 ಟೀಸರ್ ನೋಡಿ ಫಿದಾ ಅದಾ ಸ್ಟಾರ್‍ಗಳು
-ದೇಶ-ವಿದೇಶದಲ್ಲೂ ಸದ್ದು ಮಾಡಿದ ಪವರ್‍ಫುಲ್ ಲೈನ್ಸ್

ಕೆಜಿಎಫ್ ಚಿತ್ರದಿಂದ ಇಡೀ ಭಾರತ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ನೋಡುವಂತಾಗಿದೆ. ಈಗ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಪರಭಾಷೆ ಮಂದಿ ವಾಹ್ ಎನ್ನುತ್ತಿದ್ದಾರೆ.
, ಆಯಾ ಭಾಷೆಯ ಸ್ಟಾರ್ ನಟರ ಚಿತ್ರಗಳಿಗೆ ಸೆಡ್ಡು ಹೊಡೆಯಲಿದೆ ಎಂಬ ಟಾಕ್ ಸಹ ಇದೆ. ಇದೀಗ, ‘ಪವರ್ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ಫುಲ್…..’ ಈ ಸಾಲುಗಳು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಹಳ ಸೂಕ್ತವಾಗುತ್ತದೆ. ಯಶ್ ಅವರಿಗೆ ಮಾತ್ರವಲ್ಲ ಪ್ರಶಾಂತ್ ನೀಲ್ ಅವರಿಗೂ ಇದು ಚೆನ್ನಾಗಿ ಸೂಕ್ತವಾಗುತ್ತದೆ” ಎಂದು ತೆಲುಗು ನಟ ಕಾರ್ತಿಕೇಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಇಂಡಸ್ಟ್ರಿಯ ಸೂಪರ್ ಹೀರೋ ಹೃತಿಕ್ ರೋಷನ್ ಕೆಜಿಎಫ್ ಟೀಸರ್ ನೋಡಿದ್ದು ತೀವ್ರ ಸಂತಸ ಹಂಚಿಕೊಂಡಿದ್ದಾರೆ. ”ಎಂತಹ ಅದ್ಭುತ ಟ್ರೈಲರ್, ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ಹ್ಯಾಪಿ ಬರ್ತಡೇ ಯಶ್” ಎಂದು ಪೋಸ್ಟ್ ಮಾಡಿದ್ದಾರೆ.

ತಮಿಳು ನಟ ವಿಷ್ಣು ವಿಶಾಲ್ ಅವರು ಕೆಜಿಎಫ್ ಟೀಸರ್ ಇಷ್ಟಪಟ್ಟಿದ್ದು ಟ್ವಿಟ್ಟರ್ ಮೂಲಕ ಶ್ಲಾಘಿಸಿದ್ದಾರೆ. ”ಕೆಜಿಎಫ್ ಟೀಸರ್ ಸಖತ್ ಆಗಿದೆ. ಯಶ್ ಅವರ ಪರ್ಫಾಮೆನ್ಸ್ ಚಿಂದಿ, ಪ್ರಶಾಂತ್ ನೀಲ್ ಅವರ ಕೆಲಸ ನಿಜಕ್ಕೂ ಅದ್ಭುತ, ಕಾಯುತ್ತಿದ್ದೇವೆ” ಎಂದು ವಿಷ್ಣು ವಿಶಾಲ್ ಟ್ವೀಟ್ ಮಾಡಿದ್ದಾರೆ.

ತೆಲುಗು ನಿರ್ದೇಶಕ ಹರೀಶ್ ಶಂಕರ್ ಎಸ್ ಸಹ ಕೆಜಿಎಫ್ ಟೀಸರ್ ಕಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ”ಯಶ್ ಭಾಯ್ ನಿಜಕ್ಕೂ ಅದ್ಭುತ, ಹೊಗಳಲು ಪದಗಳೇ ಸಿಗ್ತಿಲ್ಲ. ಯಶ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಸಹ ಕೆಜಿಎಫ್ ಟೀಸರ್ ಕಂಡ ಬೆರಗಾಗಿದ್ದಾರೆ. ಕಮರ್ಷಿಯಲ್ ಅಂಶಗಳೊಂದಿಗೆ ಇಂತಹ ಅದ್ಭುತ ಮೇಕಿಂಗ್ ಮಾಡಿರುವುದು ಅತ್ಯುತ್ತಮ ಎನಿಸುತ್ತಿದೆ. ಸೂಪರ್ ಟ್ರೈಲರ್ ಯಶ್, ಹ್ಯಾಪಿ ಬರ್ತಡೇ ಹಾಗೂ ನಿಮ್ಮ ಯಶಸ್ಸು ಮುಂದುವರಿಯಲಿ” ಎಂದು ವಿಶ್ ಮಾಡಿದ್ದಾರೆ.

ಇಷ್ಟು ದಿನ ಈ ಟೀಸರ್ಗಾಗಿ ಕಾಯುತ್ತಿದ್ದೇವೆ, ಈಗ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಕಾತುರದಿಂದ ಇದ್ದೇವೆ. ಯಶ್, ಪ್ರಶಾಂತ್ ನೀಲ್, ಸಂಜಯ್ ದತ್, ರವೀನಾ ಟಂಡನ್, ರವಿ ಬಸ್ರೂರು, ಹೊಂಬಾಳೆ ಫಿಲಂಸ್, ಶ್ರೀನಿಧಿ ಶೆಟ್ಟಿ ಇಡೀ ಕೆಜಿಎಫ್ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ವಿಶ್ ಮಾಡಿದ್ದಾರೆ.

ಅದ್ಭುತವಾದ ಟ್ರೈಲರ್, ಇಡೀ ಚಿತ್ರತಂಡಕ್ಕೆ ಮೆಚ್ಚುಗೆ ಎಂದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಯಶ್ ಅವರ ಹುಟ್ಟುಹಬ್ಬಕ್ಕೆ ಸಹ ವಿಶ್ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.