ಮದಗಜದ ಕಾಳಗ ಆನೆಗೆ ಹೆದರಿ ದೂರ ಓಡಿದ ಮಾವುತ ಶಿವಮೊಗ್ಗ: ಸಕ್ರೇಬೈಲಿನ ಆನೆಬಿಡಾರದಲ್ಲಿ ಆನೆಯೊಂದು ಮದವೇರಿದ ಕಾರಣ ಎರಡು ಆನೆಗಳ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ ಘಟನೆ ನಡೆದಿದೆ.ಶಿವಮೊಗ್ಗ ಗಾಜನೂರು ಸಮೀಪದ ಸಕ್ರೇಬೈಲು ಆನೆಬಿಡಾರದ ಮಣಿಕಂಠ ಎಂಬ ಹೆಸರಿನ ಆನೆಯು ಮದವೇರಿದ ಕಾರಣ ಆಕ್ರಮಣಕಾರಿಯಾಗಿ ವರ್ತನೆ ತೋರಿತ್ತು. ಆನೆಯ ಅತಿಯಾದ ಆರ್ಭಟಕ್ಕೆ ಹೆದರಿ ಕಾವಾಡಿ ಹಾಗೂ ಮಾವುತ ದೂರ ಓಡಬೇಕಾಯಿತು. ನಂತರ ಬಿಡಾರದ ಆನೆಗಳಾದ ಬಾಲಣ್ಣ ಹಾಗೂ ಇನ್ನೊಂದು ಮರಿಯಾನೆಯ ಮೇಲೆ ಮಣಿಕಂಠ ದಾಳಿ ನಡೆಸಿತ್ತು. ಬಾಲಣ್ಣ ಮತ್ತು ಮರಿಯಾನೆ ನೀರಿಗೆ ಹೋದರೂ ಅಲ್ಲೂ ಬೆನ್ನಟ್ಟಿ ದಂತದಿಂದ ದಾಳಿ ನಡೆಸಿತು. ಆನೆ ದಾಳಿಯನ್ನು ನಿಂತ್ರಿಸಲಾಗದೇ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಬಾಲಣ್ಣ ಆನೆಯ ಮಾವುತ ಗೌಸ್ ನೀರಿಗೆ ಹಾರಬೇಕಾಯಿತು. ಆನೆಯ ವರ್ತನೆ ಕಂಡು ಇತರ ಆನೆಗಳನ್ನು ಕ್ರಾಲ್ ಇರುವ ಸ್ಥಳಕ್ಕೆ ಶಿಫ್ಟ್ ಮಾಡಿದರು.ಕೆಲವು ಕಾಲ ಆನೆಗಳ ವೀಕ್ಷಣೆಗೆ ಕ್ರಾಲ್ ಬಳಿಯೇ ಅವಕಾಶ ನೀಡಲಾಯಿತು.
Author: Nammur Express Admin
-ವಾರ್ಡ್ ನಂ 11ಕ್ಕೂ ಅವರಿಗೂ ಏನೂ ಸಂಬಂಧ?-ಇಲ್ಲಿದೆ ಸಂಪೂರ್ಣ ಮಾಹಿತಿ. ಬ್ಯಾಕು ಟು ಬ್ಯಾಕು ಸಿನಿಮಾ ಒಪ್ಪಿಕೊಂಡ ನಟ ರಾಘವೇಂದ್ರ ರಾಜ್‍ಕುಮಾರ್‍ರವರು ರಾಜಕೀಯಕ್ಕೆ ಮುಖ ಮಾಡುತ್ತಿದ್ದರಾ ಎಂಬ ಕೊಂಚ ಅನುಮಾನವು ಶುರುವಾಗಿತ್ತು. ಆದರೆ ಅವರು ರಾಜಕಾರಣಿಯಾಗಿ ಆಖಾಡಕ್ಕಿಳಿದಿರುವು ಪೊಲಿಟಿಕಲ್ ಥ್ರಿಲ್ಲರ್ ಕಥಾನಕ ಹೊಂದಿರುವ ವಾರ್ಡ್ ನಂ 11 ಚಿತ್ರದಲ್ಲಿ. ಯುವ ನಿರ್ದೇಶಕ ಶ್ರೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬ್ಲೂಬೇಲ್ ಎಂಟರ್ಟೈನ್ಮೆಂಟ್ಸ್ ಮೂಲಕ ಸಂದೀಪ್ ಶಿವಮೊಗ್ಗ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎ. ಗುರುರಾಜ್ ಹಾಗೂ ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.ಈಗಾಗಲೇ ಶೇ.80ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಒಂದು ಹಾಡು, ಫೈಟ್ ಹಾಗೂ ಕ್ಲೈಮ್ಯಾಕ್ಸ್ ಭಾಗದ ಶೂಟ್ ಮಾಡಿದರೆ ಶೂಟಿಂಗ್ ಮುಕ್ತಾಯವಾಗುತ್ತದೆ. ಇದೇ ಮೊದಲ ಬಾರಿಗೆ ನಟ ರಾಘವೇಂದ್ರ ರಾಜ್ಕುಮಾರ್ ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದು, ರಾಘಣ್ಣ, ಸುಮನ್ ನಗರಕರ್ ಹಾಗೂ ಕಬೀರ್ ಸಿಂಗ್ ಈ ಮೂರು ಪಾತ್ರಗಳ ಸುತ್ತ ಸುತ್ತುವ ಕಥೆಯೇ ಈ ಚಿತ್ರದ ಪ್ರಮುಖ ಅಂಶ. ಚಿತ್ರದ ಬಹುತೇಕ…
-ಆರೋಗ್ಯ ವೃದ್ಧಿಸೋ ಡ್ರೈಫ್ರೂಟ್-ಪುಟ್ಟ ದ್ರಾಕ್ಷಿಯಲ್ಲಿರೋ ದೊಡ್ಡ ರಹಸ್ಯ ನಮ್ಮ ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡದೊಡ್ಡ ರೋಗಗಳು ಬಾರದಂತೆ ಕಾಪಾಡುವ ಔಷಧ ಗುಣಗಳು ಇವೆ. ಆದರೆ ಇದರ ಬಗ್ಗೆ ನಮಗೆ ಅಸಡ್ಡೆಯೇ ಹೆಚ್ಚು. ಆಯುರ್ವೇದದ ಪ್ರಕಾರ ನಾವು ಬಳಸೋ ಆಹಾರ ಪದಾರ್ಥಗಳು ಔಷಧ ಗುಣಗಳನ್ನು ಹೊಂದಿದ್ದು, ಈ ಪದಾರ್ಥ ಗಳಲ್ಲಿ ಪ್ರಮುಖವಾಗಿ ಒಣದ್ರಾಕ್ಷಿಯು ಒಂದಾಗಿದೆ. ರಾತ್ರಿ ಮಲಗುವ ಮುನ್ನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಈ ನೀರನ್ನು ಕುಡಿಯುವುದರಿಂದ ಕರುಳು ಸ್ವಚ್ಚವಾಗುತ್ತದೆ ಮತ್ತು ರಕ್ತವು ಶುದ್ಧಿಯಾಗುತ್ತದೆ, ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಾಗುತ್ತದೆ. ಒಣದ್ರಾಕ್ಷಿಯಲ್ಲಿ ಅಪಾರ ಪ್ರಮಾಣದ ಕಬ್ಬಿಣಾಂಶವು ಇರುವುದರಿಂದ ರಕ್ತಹೀನತೆ ತೊಂರೆಯಾಗದಂತೆ ಕಾಪಾಡುತ್ತದೆ.ಇದು ಜೀರ್ಣಶಕ್ತಿ,ಹಾಗೂ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುವುದರ ಜೊತೆಗೆ ಮೂತ್ರಪಿಂಡಗಳಲ್ಲಿ ಸಂಗ್ರಹವಾಗುವ ಕಶ್ಮಲಗಳನ್ನು ಇದು ನಿವಾರಿಸುತ್ತದೆ.ನೆನೆಸಿಟ್ಟ ಒಣ ದ್ರಾಕ್ಷಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು, ಬಾಯಿ, ಒಸಡು, ಹಲ್ಲುಗಳಲ್ಲಿರುವಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ದೂರಮಾಡುತ್ತದೆ. ಒಣದ್ರಾಕ್ಷಿಯಲ್ಲಿ ಅತ್ಯಧಿಕ ಪ್ರಮಾಣ ಕ್ಯಾಲ್ಸಿಯಂ ಹಾಗೂ ಹಲವು ಪೋಷಕಾಂಶಗಳಿದ್ದು, ಮೂಳೆಗಳ ಆರೋಗ್ಯಕ್ಕೆ…
ಬಹು ನಿರೀಕ್ಷಿತ ಕೆ.ಜಿ.ಎಫ್ ಚಾಪ್ಟರ್-2 ಚಿತ್ರದ ಹೊಸ ಫೋಟೋ ಬಹಿರಂಗರಗಡ್ ಲುಕ್‍ನಲ್ಲಿ ಮಿಂಚುತ್ತಿರುವ “ಯಶ್”ಬಹು ನಿರೀಕ್ಷಿತ ಕೆ.ಜಿ.ಎಫ್ ಚಾಪ್ಟರ್-2 ಚಿತ್ರಕ್ಕಾಗಿ ಇಡೀ ಯಶ್ ಅಭಿಮಾನಿ ಬಳಗದವರು ಕಾಯುತ್ತಿದ್ದು, ಇದೀಗ ಪ್ರಶಾಂತ್ ನೀಲ್ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ.ಇನ್ನೂ ಕೆಲವೇ ದಿನಗಳಲ್ಲಿ ಯಶ್ ಅವರ ಜನ್ಮದಿನ ಪ್ರಯುಕ್ತ ಜನವರಿ 8 ರಂದು ಟೀಸರ್ ಹೊರ ಬರಲಿದೆ. ಅದಕ್ಕೂ ಮುನ್ನವೇ ಇನ್ನೊಂದು ಸಪ್ರ್ರೈಸ್ ನೀಡಿದ್ದಾರೆ. ಈ ಸಿನಿಮಾದ ಪ್ರತಿಯೊಂದು ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ. ಈ ನಡುವೆ ಮತ್ತೊಂದು ಹೊಸ ಫೋಟೋವನ್ನು ಪ್ರಶಾಂತ್ ನೀಲ್ ಶೇರ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವ ಈ ಫೋಟೋ ಈಗ ವೈರಲ್ ಆಗುತ್ತಿದೆ. ರಗಡ್ ಲುಕ್ನಲ್ಲಿ ಯಶ್ ಮಿಂಚುತ್ತಿದ್ದಾರೆ. ‘ಆ ಸಾಮ್ರಾಜ್ಯದ ಬಾಗಿಲು ತೆರೆಯಲು ಈಗ ಕ್ಷಣಗಣನೆ ಆರಂಭ ಆಗುತ್ತಿದ್ದು ಜ.8ರಂದು ಬೆಳಗ್ಗೆ 10.18ಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ಬರಲಿದೆ’ ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ. ಕಗ್ಗತ್ತಲೆಯ ರೂಮ್ನಲ್ಲಿ ಕುಳಿತಿರುವ ಯಶ್, ಕೈಯಲ್ಲೊಂದು ದೊಣ್ಣೆ ಹಿಡಿದು ವೈರಿಗಾಗಿ…
ಬಿಜೆಪಿ ಕಾರ್ಯಕಾರಣಿಯಲ್ಲಿ ಗೋ ಪೂಜೆಬಿಜೆಪಿ ನಾಯಕರಿಗೆ ಸಿಎಂ ಧೈರ್ಯದ ಟಾನಿಕ್ ಶಿವಮೊಗ್ಗ: ಬಿಜೆಪಿ ಕಾರ್ಯಕಾರಣಿ ವಿಶೇಷ ಸಭೆಯಲ್ಲಿ ಸಿಎಂ ಮತ್ತು ಬಿಜೆಪಿ ನಾಯಕರು ಗೋ ಪೂಜೆ ಮಾಡುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದರು.ಸಿಎಂ ಯಡಿಯೂರಪ್ಪ ಮಾತನಾಡಿ, ಬಿಜೆಪಿ ಹಲವು ನಾಯಕರ ಪರಿಶ್ರಮದಿಂದ ಇಂದು ಅಧಿಕಾರಕ್ಕೆ ಬಂದಿದೆ. ನಾವು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು, ತೃಪ್ತಿ ತಂದಿದೆ. ನಮ್ಮ ಗುರಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲೂ ಗೆಲ್ಲಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲುವುದು ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 43 ಸಾವಿರ ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ 3500ಕ್ಕೂ ಹೆಚ್ಚು ಜನರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ನಮ್ಮ ಮುಂದಿನ ಗುರಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಎಂದಿದ್ದಾರೆ.ಸಿಎಂ ಕುರ್ಚಿ…
ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಸೇರಿ ಎಲ್ಲೆಡೆ ಜಿಟಿಜಿಟಿ ಮಳೆಅಡಿಕೆ, ಭತ್ತದ ಕೊಯ್ಲು: ರೈತರಿಗೆ ಆತಂಕ ತೀರ್ಥಹಳ್ಳಿ/ಕೊಪ್ಪ: ಮಲೆನಾಡಿನ ಬಹುತೇಕ ಕಡೆ ಭಾನುವಾರ ಜಿಟಿ ಜಿಟಿ ಮಳೆ ಶುರುವಾಗಿದ್ದು, ರೈತರಿಗೆ ಆತಂಕ ತಂದಿಟ್ಟಿದೆ.ಅಡಿಕೆ ಮತ್ತು ಭತ್ತದ ಕೊಯ್ಲು ಸಮಯವಾದ್ದರಿಂದ ಅನೇಕ ಕಡೆ ಕೃಷಿ ಚಟುವಟಿಕೆ ಈಗ ಬಿರುಸು ಪಡೆದಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಈಗ ಎಲ್ಲರೂ ಕೃಷಿ ಮೇಲೆ ಗಮನ ಹರಿಸಿದ್ದಾರೆ. ಇಂತಹ ಸಮಯದಲ್ಲಿ ಜಿಟಿಜಿಟಿ ಮಳೆ ಆತಂಕಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ, ಕೊಪ್ಪ,ಶೃಂಗೇರಿ ಭಾಗದಲ್ಲಿ ಮಳೆಯಾಗಿದೆ. ಇನ್ನೂ ಮಳೆಯಾಗುವ ಸಾಧ್ಯತೆ ಇದೆ.
ಪೋಷಕ ನಟನ ಅಂತಿಮ ಯಾತ್ರೆ ಬೆಂಗಳೂರು:ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹದೇವಪ್ಪ ವಿಧಿವಶರಾಗಿದ್ದಾರೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಶನಿ ಮಹದೇವಪ್ಪ ಕೊನೆಯುಸಿರೆಳೆದಿದ್ದಾರೆ ಎಂದು ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.90 ವರ್ಷದ ಹಿರಿಯ ನಟ ಸುಮಾರು 384 ಚಿತ್ರಗಳಲ್ಲಿ ನಟಿಸಿದ್ದರು. ಮೇರು ನಟ ಡಾ ರಾಜ್ಕುಮಾರ್ ಜೊತೆಯಲ್ಲಿಯೇ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟಿಸಿದ್ದರು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಇತರೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು. ಇವರು ಇಂದು ಸಂಜೆ 4 ಗಂಟೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಧಿ ವಶರಾಗಿದ್ದಾರೆ. ನಾಳೆ ಸುಮ್ಮನಹಳ್ಳಿಯ ಚಿತಾಗಾರದಲ್ಲಿ ಮಹದೇವಪ್ಪರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
-ಬಿಸಿಸಿಐ ಅಧ್ಯಕ್ಷರಿಗೆ ಎದೆನೋವು -ತುರ್ತು ವಿಭಾಗದಲ್ಲಿ ಚಿಕಿತ್ಸೆ ಕೋಲ್ಕತ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಗೆ ಶನಿವಾರ ಎದೆನೋವು ಕಾಣಿಸಿಕೊಂಡಿದೆ. ದೈಹಿಕ ಕಸರತ್ತಿನಲ್ಲಿ ತೊಡಗಿದ್ದ ವೇಳೆ ಗಂಗೂಲಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಗಂಗೂಲಿಯವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ, 48 ವರ್ಷದ ಗಂಗೂಲಿ ಆರೋಗ್ಯ ಸ್ಥಿರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯ ತುರ್ತುವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗಂಗೂಲಿ ಕ್ಷೇಮವಾಗಿದ್ದು, ಹೃದಯಾಘಾತದಿಂದ ಅಥವಾ ಇನ್ನಿತರ ಸಮಸ್ಯೆಯಿಂದ ಅವರಿಗೆ ಎದೆ ನೋವು ಕಾಣಿಸಿಕೊಂಡಿರುವ ಕುರಿತು ವಿವಿಧ ಪರೀಕ್ಷೆಗಳ ಮೂಲಕ ತಿಳಿಯಲಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.ಮತ್ತೊಂದು ವರದಿಯ ಪ್ರಕಾರ ಗಂಗೂಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಶನಿವಾರ ಸಂಜೆ ಆಂಜಿಯೋಪ್ಲಾಸ್ಟಿಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. ಸೌರವ್ ಗಂಗೂಲಿ ಬೇಗ ಗುಣಮುಖರಾಗಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
-ರೋಗಾಣುಗಳಿಗೆ ಮುಕ್ತ ಮಾರ್ಗ ನೀಡದಿರಿ ಹೊಸ ಬಟ್ಟೆ ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಹೊಸ ನಮೂನೆಯ ಬಟ್ಟೆಗಳು ಬಂದರೆ ಆದಷ್ಟೂ ಬೇಗನೇ ಇವನ್ನು ತೊಟ್ಟು ಸಂಭ್ರಮಿಸುವ ಅವಕಾಶವನ್ನು ಬಿಡಲು ಯಾರೂ ಸಿದ್ಧರಿರುವುದಿಲ್ಲ. ಆದರೆ ಹೊಸ ಬಟ್ಟೆ ಕೊಂಡ ಬಳಿಕ ಒಗೆಯದೇ ನೇರವಾಗಿ ತೊಟ್ಟುಕೊಂಡರೆ ಕೆಲವಾರು ತೊಂದರೆಗಳು ಎದುರಾಗಬಹುದು .ಹಲವಾರು ಹೊಸ ಬಟ್ಟೆ ಸಾಮಾನ್ಯವಾಗಿ ಸ್ವಚ್ಛ ಸ್ಥಿತಿಯಲ್ಲಿಯೇ ಇರುತ್ತದೆ. ನಯವಾದ ಇಸ್ತ್ರಿ, ಹೊಳಪಿನ ಮೇಲ್ಮೆ, ಗಮನ ಸೆಳೆಯುವ ಪ್ಯಾಕಿಂಗ್ ಇವೆಲ್ಲಾ ಒಗೆಯುವುದೇಕೆ ಎಂಬ ಪ್ರಶ್ನೆಯನ್ನು ಒಡ್ಡಬಹುದು. ಆದರೆ ವಾಸ್ತವದಲ್ಲಿ ಈ ಅಭ್ಯಾಸದಿಂದ ಕೆಲವು ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು. ಮಾರುಕಟ್ಟೆಯಿಂದ ಬಟ್ಟೆಗಳನ್ನು ತಂದ ನಂತರ, ಅವುಗಳನ್ನು ಒಗೆಯದೇ, ಹಾಗೇ ನೇರವಾಗಿ ಧರಿಸುವುದು ಸುರಕ್ಷಿತವಲ್ಲ.ಹೊಸ ಬಟ್ಟೆಯಲ್ಲಿಯೂ ಸೂಕ್ಷ್ಮಜೀವಿಗಳು ಇರಬಹುದು, ಬಟ್ಟೆಗಳನ್ನು ತಯಾರಿಸಿದಾಗ, ಆ ಬಟ್ಟೆಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಎಲ್ಲಿ ಸಂಗ್ರಹಿಸಲಾಗುತ್ತದೆ, ಸಾಗಾಣಿಕಾ ಸಮಯದಲ್ಲಿ ಯಾವ ಬಗೆಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಎಂಬ ಅರಿವು ನಿಮಗಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ, ಪ್ರತಿಯೊಬ್ಬರೂ ಖರೀದಿಸುವ ಮೊದಲು…
-ಬಾಯಾರಿಕೆಯಲ್ಲಿದೆ ಆರೋಗ್ಯದ ಸತ್ಯ -ಬಾಯಿ ಒಣಗುತ್ತಿದ್ದರೆ ಇರಲಿ ಗಮನ ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ, ಅತಿಸಾರ, ವಾಂತಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರಿನಾಂಶ ಖಾಲಿಯಾದಾಗ ಅತಿಯಾಗಿ ಬಾಯಾರಿಕೆಯಾಗುತ್ತದೆ. ಈ ಅತಿಯಾದ ಬಾಯಾರಿಕೆ ಕೂಡ ಕೆಲವು ರೋಗಗಳ ಲಕ್ಷಣವಾಗಿದೆ.ಮಧುಮೇಹ ರೋಗದಿಂದ ಬಳಲುತ್ತಿರುವವರ ದೇಹದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದಾಗ ಮೂತ್ರಪಿಂಡಗಳು ಸಕ್ಕರೆ ಮಟ್ಟವನ್ನು ನಿಭಾಯಿಸಲಾಗದೆ ಅದು ಮೂತ್ರದಲ್ಲಿ ಸೇರಿಕೊಂಡು ದೇಹದ ನೀರನ್ನು ಹೊರಹಾಕುತ್ತದೆ.ಅತಿಸಾರ, ಶಾಖ, ಜ್ವರದಿಂದ ದೇಹದಲ್ಲಿನ ನೀರಿನಾಂಶ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಅತಿ ಹೆಚ್ಚು ಬಾಯಾರಿಕೆಯಾಗುವ ಸಾಧ್ಯತೆ ಇದೆ.ನೀವು ಅತಿಯಾದ ಚಿಂತೆ ಮಾಡುತ್ತಿದ್ದಾಗ ಲಾಲಾರಸವು ನಷ್ಟವಾಗುತ್ತದೆ. ಇದರಿಂದ ಬಾಯಿ ಒಣಗಿದಂತೆ ಭಾಸವಾಗುತ್ತದೆ.ಮಸಾಲೆ ಮತ್ತು ಎಣ್ಣೆ ಪದಾರ್ಥಗಳನ್ನು ಸೇವಿಸಿದಾಗ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಆ ವೇಳೆ ಆಹಾರ ಜೀರ್ಣವಾಗಲು ದ್ರವ ಸಾಕಾಗದಿದ್ದಾಗ ಅತಿಯಾಗಿ ಬಾಯಾರಿಕೆ ಉಂಟಾಗುತ್ತದೆ.ದೇಹದಲ್ಲಿ ರಕ್ತಹೀನತೆ ಸಮಸ್ಯೆ ಇದ್ದಾಗ, ಕೆಂಪು ರಕ್ತದ ಕಣ ಕಡಿಮೆ ಇದ್ದಾಗ ಆರೋಗ್ಯ ಸಮಸ್ಯೆ ಎದುರಾಗಿ ಅತಿಯಾಗಿ ಬಾಯಾರಿಕೆ ಉಂಟಾಗಬಹುದು.